ಸನ್ಮತಿ ❤️

ProfileImg
11 Jul '24
9 min read


image

ಮಳೆಗಾಲ ಎಲ್ಲೆಲ್ಲೂ ಪ್ರವಾಸದ್ದೆ ಸುದ್ದಿ, ಆಗಾಗ ಪ್ರವಾಸದ ಯೋಜನೆಗಳು ಕೆಲವೊಂದಿಷ್ಟು ಕೊನೆಯ ಕ್ಷಣಕ್ಕೆ ಕಳೆತ್ತುಕೊಂಡರೆ ಇನ್ನು ಕೆಲವು ಸಂಪೂರ್ಣ ಯಶಸ್ವಿಗೊಂಡು ಮನಸ್ಸಿಗೆ ಖುಷಿ ಕೊಡುತ್ತವೆ,  ಹೀಗೆ ಒಂದು ಒಳ್ಳೆ ಜಲಪಾತ ಕಣ್ತುಂಬಿಕೊಳ್ಳಲು  ನಮ್ಮ ಕಥಾ ನಾಯಕ "ಅಭಯ್"  ಹಾಗೂ ಅವನ ಸ್ನೇಹಿತರ ಗುಂಪು ಪ್ರವಾಸಕ್ಕೆ ತೆರಳಲು ಸಿದ್ದವಾಗಿದೆ,
ಚಿರು :- ಮಗ ನಾಳೆ ಪಕ್ಕನಾ
ಕಿರಣ್ ( ಗೆಳೆಯ ) :- ಹೂ ಎಂಟು ಗಂಟೆಗೆ ಹೊರಡೋದು
ಅಭಯ್ :- ಆದರೆ ರೈಲು ಇರುವುದು ಏಳು ಗಂಟೆಗೆ ತಾನೇ?
ಕಿರಣ್ :- ರೈಲಿಗೆ ಯಾವನು ಹೋಗ್ತಾಯಿರೋದು? ಫ್ರೀ ಬಸ್ ಆದಾಗಿಂದ ಬಸ್ಸ್ ಅಲ್ಲೇ ಹುಡ್ಗಿರ್ ಜಾಸ್ತಿ, ಮೊದಲೇ ನಮ್ಮ ಜೊತೆ ಯಾವ್ ಹುಡ್ಗಿನು ಬರ್ತಾ ಇಲ್ಲಾ ಬಸ್ಸ್ ಅಲ್ಲಿ ಹುಡ್ಗಿರ್ ನ್ನಾದರೂ ನೋಡಿಕೊಂಡು ಹೋಗೋಣ,
ಅಭಯ್ :- ಬರಿ ಇದೆ ಆಯ್ತು ನಿಂದು
                      ಅಂತೂ ಇಂತೂ ಇವರ ಪ್ರವಾಸದ ಪ್ರಯಾಣ ಶುರುವಾಯಿತು ಬಸ್ಸಿನಲ್ಲಿ ಕಥಾನಾಯಕಿ ಇರುತ್ತಾಳೆ ಅನ್ಕೊಂಡ್ರಾ ಇಲ್ಲ ಇಲ್ಲ ನಾಯಕಿ ಕಣ್ರೀ ಅವಳು, ಅಷ್ಟು ಸುಲಭವಾಗಿ ಪರಿಚಯ ಆಗುತ್ತಾ? ಅಭಯ್ ಮತ್ತು ಸ್ನೇಹಿತರು ಬಸ್ ನಿಲ್ದಾಣದಲ್ಲಿ ಇಳಿದು ಕೊಳ್ಳುತ್ತಾರೆ ಅಲ್ಲಿಂದ ಜಲಪಾತ ನಾಲ್ಕು ಕಿಲೋಮೀಟರ್ ಸರಿ ಅಂತ ಎಲ್ಲರೂ ನಡೆದುಕೊಂಡು ಹೋಗಲು ಮುಂದಾಗುತ್ತಾರೆ, ಪಕ್ಕದಲ್ಲಿ ಹಚ್ಚ ಹಸಿರು ಗುಡ್ಡ, ಸೂರ್ಯ ಕಾಣದೆ ಇದ್ದರೂ ವಾತಾವರಣ ಕಂಡು ನಗುತ್ತಿರುವಾ ಆಗಸ, ಇದರ ಜೊತೆಗೆ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್  ಅವರ ಹಾಡುಗಳು ಎಲ್ಲಾ ಒಂದು ಕ್ಷಣ ಮೈಮರೆಸಿ ಬಿಡುತ್ತಿದ್ದವು, ಪಕ್ಕದಲ್ಲಿ ಹುಡುಗಿ ಇದ್ದಿದ್ದರೆ ಇನ್ನೂ ಚೆಂದ ಅಂತ ಮನಸು ತೊಸು ಜಾಸ್ತಿ ಆಸೆ ಪಡುತ್ತಿತ್ತು ನಿಸರ್ಗದ ಸೊಬಗಿನಲ್ಲಿ ಹೆಜ್ಜೆ ಸಾಗುತ್ತಿದ್ದವು ಇದೇ ಸಮಯದಲ್ಲಿ ನಮ್ಮ ಅಭಯ್ ಕಣ್ಣು ಒಂದು ಹುಡುಗಿ ಕಡೆಗೆ ಹೋಗುತ್ತವೆ ಅವಳೇ ನಮ್ಮ ಕಥಾನಾಯಕಿ " ಅಭಿಜ್ಞ್ಯಾ"
             
             ತಂಪಾದ ವಾತಾವರಣದಲ್ಲಿ ಸಿಹಿ ನಗುವ ಹೊತ್ತು, ಮಳೆಯೂ ಸಹ ಯೋಚಿಸುತ್ತಿತ್ತು ಅವಳ ಕುರಿತು, ಕಣ್ಣಿಗೆ ಬಿದ್ದಳು ನೆನೆಯುತ್ತಿರುವ ಅವತಾರದಲ್ಲಿ ಕುಣಿಯುತಿದ್ದಳು ನನ್ನ ಹೃದಯದ ಆವರಣದಲ್ಲಿ ಸೇರಿ ಬಿಡಲೇ, ನಾನು ಅವಳೊಂದಿಗೆ, ಹತ್ತಿ ಬಿಡೋಣ ಈ ನಿಸರ್ಗದೊಂದಿಗೆ.
ಅವಳನ್ನು ನೋಡುತ್ತಾ ಜಲಪಾತ ಬಂದಿದ್ದೆ ಗೊತ್ತಾಗಲಿಲ್ಲ ಜಲಪಾತದ ಪ್ರವೇಶದಲ್ಲಿ ಒಂದು ಚಟುವಟಿಕೆ ನಡೆಯದಿತ್ತು, ಎಲ್ಲಾರು ತಮ್ಮ ಮನಸ್ಸಿನಲ್ಲಿ ಓಡುತ್ತಿರುವ ಒಂದು ಶಬ್ದವನ್ನು ಹಾಳೆಯಲ್ಲಿ ಬರೆದು ಡಬ್ಬಿಯೊಳಗೆ ಹಾಕಬೇಕು, ಇದೇ ರೀತಿ ಎಲ್ಲರೂ ಬರೆಯುತ್ತಾರೆ, ಸ್ವಲ್ಪ ಸಮಯದ ನಂತರ ಆ ಡಬ್ಬಿಯ ಚೀಟಿಗಳನ್ನು ತೆರೆದಾಗ  ಎಲ್ಲಾ ಬೇರೆ ಬೇರೆ ಪದಗಳು ಆದರೆ ಒಂದೇ ಪದ ಮಾತ್ರ ಎರಡು ಬಾರಿ ಬರೆದಿತ್ತು ಅದೇ "ಸನ್ಮತಿ"
ಸಮ್ಮತಿ ಎಂಬ ಒಂದೇ ಪದವನ್ನು ಬರೆದ ಇಬ್ಬರು ಅಭಯ್ ಮತ್ತು ಅಭಿಜ್ಞ್ಯಾ, ಅಭಯ್ ಈಗಷ್ಟೇ ಕಲ್ಪನೆ ಮಾಡಿಕೊಂಡಿದ್ದು ನೆರವೇರಲಿ ಎಂದು ಬೇಡಿಕೊಂಡಿದ್ದಕ್ಕೆ  ದೇವರು ಸಮ್ಮತಿ ನೀಡಲಿ ಎಂದು ಬರೆದಿದ್ದಾನೆ, ಅಭಿಜ್ಞ್ಯಾ ಈ ಪ್ರಕೃತಿ ಯಾವಾಗಲೂ ನಗುತ್ತಿರಲಿ ಎಂದು ಬೇಡಿಕೊಂಡಿದ್ದಕ್ಕೆ ದೇವರು ಸನ್ಮತಿ ನೀಡಲೆಂದು ಆ ಪದವನ್ನು ಬರೆದಿರುತ್ತಾರೆ, ಇಬ್ಬರೂ ಒಂದೇ ಪದ ಬರೆದಿದ್ದಕ್ಕಾಗಿ ಇಬ್ಬರು ಈ ಚಟುವಟಿಕೆಯ ವಿಜೇತರಾಗಿರುತ್ತಾರೆ.
     ಎಲ್ಲರೂ ಜಲಪಾತವನ್ನು ಕಣ್ತುಂಬಿ ಕೊಳ್ಳುತ್ತಾ ಭಾವಚಿತ್ರ ತೆಗೆದುಕೊಳ್ಳುತ್ತಿದ್ದಾರೆ, ಆದ್ರೆ ನಮ್ ಅಭಯ್  ಅಭಿಜ್ಞ್ಯಾಳನ್ನು ನೋಡುವುದರಲ್ಲಿ ಮುಳುಗಿದ್ದಾನೆ, ಇದೇ ಸಮಯಕ್ಕೆ ಜೋರಾಗಿ ಮಳೆ ಬರಲು ಪ್ರಾರಂಭಿಸುತ್ತದೆ ಗಾಳಿಯ ರಬಸಕ್ಕೆ   ಅಭಿಜ್ಞ್ಯಾಳಾ ಕೊಡೆ ಹಾರಿಹೋಗುತ್ತದೆ, ಅಭಿಜ್ಞ್ಯಾ ಅಲ್ಲಿಯೇ ಪಕ್ಕದಲ್ಲಿ ನಿಂತಿದ್ದ ಅಭಯ್ನ ಕೊಡೆಕೆಳಗೆ ಹೋಗಿ ನಿಲ್ಲುತ್ತಾಳೆ.
ಅಭಿಜ್ಞ್ಯಾ :- ನಾ ನಿಂತಿರೋದು ನಿಮಗೆ ತ್ರಾಸ್ ಇಲ್ಲ ಅಲ್ಲ?
ಅಭಯ್:- ಎಂಥ ತ್ರಾಸ್? ಅಂದರೆ
ಅಭಿಜ್ಞ್ಯಾ:- ಅಂದ್ರೆ ನಿಮಗೆ ಏನೂ ತೊಂದರೆ ಇಲ್ಲ ತಾನೆ?
ಅಭಯ್ :- ಎಂಥ ತೊಂದರೆನೂ ಇಲ್ಲ ಆರಾಮಾಗಿ ನಿಂತುಕೊಳ್ಳಿ
ಅಭಿಜ್ಞ್ಯಾ :- ಅವನೌನ ನನ್ನ ಛತ್ರಿ  ( ಕೊಡೆ ) ಇವಾಗ್ಲೇ ಹಾರಿ ಹೋಗ್ಬೇಕಿತ್ತಾ 
ಅಭಯ್  :- ಎಂಥಾ ಮಾತಾಡೋದು ನೀವು?
ಅಭಿಜ್ಞ್ಯಾ :- ಕನ್ನಡ
ಅಭಯ್  :- ಯಾವ ಊರು ನಿಮ್ಮದು?
ಅಭಿಜ್ಞ್ಯಾ :- ಬೆಳಗಾವಿ ನಿಮ್ಮದು?
ಅಭಯ್  :- ಮಂಗಳೂರು
ಅಭಿಜ್ಞ್ಯಾ :- ಓ ಅದಕ್ಕ ಏನ್  ನೀ ಎಂಥ ಪಂಥ ಅನ್ಕೋದು ತಲೆ ತಿನ್ನಾತಿ.
ಅಭಯ್  :- ಬೈಯುತಿದ್ದಿರಾ ನನಗೆ?
ಅಭಿಜ್ಞ್ಯಾ :- ನಾ ಯಾಕ್ ನಿಂಗ  ಬೈಲೋ ಮಾರಾಯ ನ ಗಪ್ಪ ನಿಂದ್ರ ಸ್ವಲ್ಪ,
ಅಭಯ್  :- ಚಟುವಟಿಕೆ ಗೆದ್ದಿದ್ದಕ್ಕೆ ಶುಭಾಶಯಗಳು,
ಅಭಿಜ್ಞ್ಯಾ :- ಧನ್ಯವಾದಗಳು, ನಿಮಗೂ ಶುಭಾಶಯ 
ಅಭಯ್  :- ಧನ್ಯವಾದಗಳು,ಫ್ರೀ ಬಸ್ಸ್ ಅಂತಾ ಕರ್ನಾಟಕದ ತುಂಬಾ ಪ್ರವಾಸನಾ?
ಅಭಿಜ್ಞ್ಯಾ :- ಎಲ್ಲಿ ಫ್ರೀ  ಬಸ್, ಆಧಾರ್ ಕಾರ್ಡ್ ತಂದಿಲ್ಲ ಅಂತ ಕಂಡಕ್ಟರ್ ಹುಸೋ'''' ಗ   ರೊಕ್ಕ ಇಸ್ಕೊಂಡ,
ಅಭಯ್  :- ನಿಧಾನವಾಗಿ ಮಾತಾಡ್ರಿ ಯಾರಾದರೂ ಕೇಳಿಸಿಕೊಂಡರೆ ಕಷ್ಟ,
ಅಭಿಜ್ಞ್ಯಾ :- ನೀ ಎಲ್ಲಿ ಮಬ್ಬ ಗಂಟು ಬಿದ್ದೀಯೋ ನಂಗ, ಮಳೆ ನಿಂತೈತೆ ನಾ ಹೋಗ್ತೀನಿ, ಧನ್ಯವಾದಗಳು
ಅಭಯ್  :- ನಿಮ್ಮ ಭಾಷೆ ನನಗ್ ಅರ್ಥ ಆಗ್ತಿಲ್ಲ, ನನ್ನ ಹೃದಯದ ಭಾಷೆ ನಿಮಗ ಅರ್ಥ ಆಗ್ತಿಲ್ಲ, ದೇವರೇ ಸಮ್ಮತಿಯ ಹಾಗೆ ಈ ಕಿವಿಗಳಿಗೆ ಶಾಂತಿ ಎರಡು ಕೊಡು,
ಸ್ವಲ್ಪ ಸಮಯದ ನಂತರ 
ಅಭಿಜ್ಞ್ಯಾ :- ಓ ಅಭಯ್  ನಿಂದ್ರಿ,
ಅಭಯ್  :- ಹೇಳಿ
ಅಭಿಜ್ಞ್ಯಾ :- ತಗೋಳಿ ಕುಂದ ನಮ್ಮೂರಿನ ವಿಶೇಷ ತಿನಿಸು,
ಅಭಯ್  :- ಓ ಧನ್ಯವಾದಗಳು, ಈ ಕುಂದಾ ನೋಡಿದ್ರೆ ಇಷ್ಟೊಂದು ಸಿಹಿಯಾಗಿದೆ ನೀವು ನೋಡಿದ್ರೆ ಇಷ್ಟೊಂದು ರಗಡ್, ಮನಸ್ಸಿನಿಂದ ಒಳ್ಳೆಯವರು ಅನಿಸ್ತೀರಾ, 
ನಮ್ಮ ಅಭಯ್  ಅಭಿಜ್ಞ್ಯಾ ಜೊತೆ ಮಾತನಾಡುತ್ತಾ ನಿಂತಿದ್ದಾನೆ ಮೊದಲೇ ಗುಡ್ಡಗಾಡು ಪ್ರದೇಶ ಮೊದಲನೇ ನೆಟ್ವರ್ಕ್ ಬರೋದಿಲ್ಲ ಬಸ್ ಬರುತ್ತೆ ಅಂತ ಅಭಯನ ಸ್ನೇಹಿತರು ಅವನನ್ನು ಅಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ,
ಸ್ವಲ್ಪ ಸಮಯದ ನಂತರ ಅಭಯ್ ತನ್ನ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ ಪಾಪ ಯಾರು ಸಿಗುತ್ತಿಲ್ಲ ನೆಟ್ವರ್ಕ್ ಬರುವ ಸ್ಥಳಕ್ಕೆ ಹೋಗಿ ಕರೆ ಮಾಡುತ್ತಾನೆ,
ಅಭಯ್ :- ಹಲೋ ಎಲ್ರೋ ಇದ್ದೀರಾ?
ಕಿರಣ್  :- ಬಸ್ಸಿನಲ್ಲಿ ಇದೀವಿ,
ಅಭಯ್  :- ನನ್ನ ಯಾಕೆ ಬಿಟ್ಟು ಹೋದ್ರಿ?
ಕಿರಣ್  :- ನಿಂಗೆ ಒಬ್ಬಳು ಹುಡುಗಿ ಸಿಕ್ಕಿದ್ದಾಳೆ ಆರಾಮಾಗಿ ಇದ್ದೀಯ ಪಾ  ನಮಗೆ ಬೇಕಲ್ವಾ? ನಮ್ಮ ಹುಡುಗಿಯರು ಇದೇ ಬಸ್ಸಿನಲ್ಲಿ ಹೋಗ್ತಾ ಇದ್ದಾರೆ, ತಾವು ಏಕಾಂಗಿಯಾಗಿ ಏಕಾಂತದಲ್ಲಿ ಒಬ್ಬರೇ ಬನ್ನಿ, ಹೇ ಮುಚ್ಕೊಂಡು ಕರೆ ಕಟ್ ಮಾಡು ಇಲ್ಲಿ ನಿಂದ್ರೋಕೆ ಜಾಗ ಇಲ್ಲ ಕಂಡಕ್ಟರ್ ತೊಡೆ ಮೇಲೆ ಕುಳಿತುಕೊಂಡಿದ್ದೇನಿ,
ಅಭಿಜ್ಞ್ಯಾ :- ಓ ಅಭಯ್  ಯಾಕ್ರೀ ಒಬ್ಬರೇ ನಿಂತೀರಿ, ನಿಮ್ಮ ಸ್ನೇಹಿತರು ಎಲ್ರಿ?
ಅಭಯ್  :- ಅವರಿಗೆ ಮೂಲವ್ಯಾದಿ  ಅದಕ್ಕೆ ನನ್ನ ಬಿಟ್ಟು ಬೇಗ ಓಡಿ ಹೋದರು, ಪಾಪ ನಮ್ ಹೀರೊಗೆ ಕೋಪ ಬಂದಿದೆ....
ಅಭಿಜ್ಞ್ಯಾ :- ಅಯ್ಯೋ ಪಾಪ ಮೊದಲ ನೀವು ಬಹಳ ಅಮಾಯಕರು ನಿಮ್ಮ ಬಿಟ್ ಹೋಗ್ಯರೇನ್ ಆ ಮಬ್ಬುಗಳು
ಅಭಯ್  :- ಹೋಗಲಿ ಬಿಡಿ,
ಅಭಿಜ್ಞ್ಯಾ :- ಬರ್ರಿ ಚಹಾ ಕುಡಿಯೋಣ,
ಅಭಯ್  :- ನಾನು ಬೆಳಗ್ಗೆ ಕುಡಿದಿದ್ದೇನೆ,
ಅಭಿಜ್ಞ್ಯಾ :- ನಾನು ತಾಸಿಗೊಮ್ಮೆ ಕುಡಿತಿನ್ರೀ ಏನಾಗೋದಿಲ್ಲ ಬರ್ರಿ, ಚಾ ಕುಡುದ್ರ ಮೈಯಾಗ ಏನೋ ಏನರ್ಜಿ ಬರ್ತೈತಿ,
ಅಭಯ್ :- ಸರಿ
ಅಭಿಜ್ಞ್ಯಾ :- ಮತ್ತು ಹೆಂಗ್ ಹೋಗವ್ರಿಗ ನಿಮ್ಮ ಊರಿಗೆ ಒಬ್ಬರು ಹೋಗ್ತೇರಿ?
ಅಭಯ್  :- ಬೇರೆ ದಾರಿ ಇಲ್ಲ ಒಬ್ಬನೇ ಹೋಗ್ಬೇಕು
ಚಹಾ ಸೇವಿಸಿದ ನಂತರ
ಅಭಿಜ್ಞ್ಯಾ :- ನಡೀರಿ ಹೋಗೋಣ ಸಂಜೆಗೆ ಬಂತು
ಅಭಯ್  :-  ಹೂ ನಿಮ್ಮ ಜೊತೆ ಕಳೆದ ಸಮಯ ಖುಷಿ ಕೊಟ್ಟಿತು
ಅಭಿಜ್ಞ್ಯಾ :- ನನಗೂ ರೀ,
ಅಭಯ್ :- ನಿಮ್ಮ ದೂರವಾಣಿ ಸಂಖ್ಯೆ ಸಿಗಬಹುದ?
ಅಭಿಜ್ಞ್ಯಾ :- ಯಾಕೆ?
ಅಭಯ್  :- ಸುಮ್ಮನೆ ಹಾಗೆ
ಅಭಿಜ್ಞ್ಯಾ :- ಬೇಡ ಪ್ರವಾಸದ ಸ್ನೇಹ ಪ್ರವಾಸದೊಂದಿಗೆ ಮುಗಿಯಲಿ ನೀವು ಮಂಗಳೂರು ಬಸ್ ಹತ್ತಿ ನಾನು ಬೆಳಗಾವಿ ಬಸ್ ಹತ್ತೇನಿ  ಸಾಧ್ಯ ಆದ್ರೆ ಮತ್ತೆ ಈ ಪ್ರಕೃತಿ ಮಡಿಲಲ್ಲೇ ಸಿಗೋಣ,
ಅಭಯ್  :- ಸರಿ ಬೈ,
ಪ್ರವಾಸ ಒಂದು ಮುಗಿದಿತ್ತು ಆದರೂ ಮನಸ್ಸು ಅವಳ ಮಾತಿನ ಜಲಪಾತದಲ್ಲೇ ಮುಳಗಿ ಹೋಗಿತ್ತು ತುಸು ಖುಷಿ ತುಸು ಬೇಜಾರಲ್ಲಿ ಇಬ್ಬರು ತಮ್ಮ ತಮ್ಮ ಊರಿನತ್ತ ಹೆಜ್ಜೆ ಹಾಕಿದರು,
ಅಭಯ್  :- ದೇವರೇ ಮತ್ತೆ ಅವಳು ನನ್ನ ಕಣ್ಮುಂದೆ ಬರೋಕೆ ಸನ್ಮತಿ ನೀಡು,
ಅಭಿಜ್ಞ್ಯಾ :- ದೂರವಾಣಿ ಸಂಖ್ಯೆ ಕೊಡಬೇಕಿತ್ತ ? 🤔
ಇಬ್ಬರು ತಮ್ಮ ತಮ್ಮ ಮನೆಗೆ ವಾಪಸಾಗುತ್ತಾರೆ ಆದರೂ ಮನಸಲ್ಲಿ ಏನೋ ಸಂಚಲನ ಅಭಯ್  ಎಲ್ಲಿಯಾದರೂ ಅಭಿಜ್ಞ್ಯಾ ಎಂಬ ಹೆಸರು ಕೇಳಿದರೆ ಅಥವಾ ನೋಡಿದರೆ ಅವಳೇನಾ ಎಂದು ಒಮ್ಮೆ ಪರಿಶೀಲಿಸಿ ನೋಡುತ್ತಿದ್ದ ಆದರೆ ಪ್ರತಿ ಬಾರಿಯೂ ನಿರಾಸೆ,
ಹೀಗೆ ದಿನಗಳು ಕಳೆಯುತ್ತಿದ್ದವು ಆಗ ಕಾಲೇಜಿನ ರಜಾವದಿಯಲ್ಲಿ ಅಭಯ ತನ್ನ ಊರು ಮಂಗಳೂರು ನಲ್ಲಿ  ಹೊಸದಾಗಿ ಶುರುವಾಗಿದ್ದ ಲೆನ್ಸ್ಕಾರ್ಟ್ ಘಟಕದಲ್ಲಿ ಕೆಲಸಕ್ಕೆ ಸೇರಿಕೊಂಡ ದೆಹಲಿಯಿಂದ ಇಲ್ಲಿಗೆ ಬರುವ ಕರ್ನಾಟಕದ ಆರ್ಡರ್ಗಳನ್ನು ವಿವಿಧ ಸ್ಥಳಗಳಿಗೆ ವರ್ಗಾಯಿಸುವುದೇ ಈ ಘಟಕದ ಕೆಲಸ, ಅಭಯ್ ಕೆಲಸಕ್ಕೆ ಸೇರಿದ 15 ದಿನಗಳ ನಂತರ ರಾಶಿಗಟ್ಟಲೆ ಆರ್ಡರ್ ಗಳು ಬಂದು ಬಿದ್ದಿವೆ, ಅಭಯ್ ಅವುಗಳನ್ನು ಆಯಾ ಜಿಲ್ಲೆಗಳ ಅನುಸಾರ ಬೇರ್ಪಡಿಸಿಡುತ್ತಿದ್ದಾನೆ ಇದೇ ಸಮಯಕ್ಕೆ ಆತನ ಕಣ್ಣಿಗೆ ಬಿದ್ದದ್ದು ಬೆಳಗಾವಿ ಜಿಲ್ಲೆ ಬೆಳಗಾವಿ ಅಂತ ನೋಡಿದ ತಕ್ಷಣ ಅವನ ಮುಖದಲ್ಲೇನೋ ಮುಗುಳುನಗೆ, ಹಾಗೆ ಹೆಸರನ್ನು ನೋಡುತ್ತಾನೆ, ಹೆಸರು  ಅಭಿಜ್ಞ್ಯಾ ಈಗ ಅವನ ಮುಗುಳುನಗೆ ಮೊಗದ ತುಂಬಾ ನಗೆಯಾಗಿ ಹರಡಿತ್ತು, ಊರು ಅದೇ ಹೆಸರು ಅದೇ ಆದರೆ ಅದು ಅವಳೇನ ಅನ್ನುವ ಚಿಕ್ಕ ಗೊಂದಲ ಒಂದು ಮನೆ ಮಾಡಿತ್ತು, ಆದರೂ ಆ ಪ್ಯಾಕೆಟ್ ಮೇಲೆ ಇದ್ದ ದೂರವಾಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡು ತನ್ನ ಕೆಲಸ ಮುಂದುವರಿಸುತ್ತಾನೆ,
ಮರುದಿನ ಆ ದೂರವಾಣಿ ಸಂಖ್ಯೆಗೆ ಕರೆ ಮಾಡುತ್ತಾನೆ 
ಅಭಯ್  :- ನಮಸ್ಕಾರ ಮೇಡಂ ನಾವು ಲೆನ್ಸ್ಕಾರ್ಟ್ ಇಂದ ಮಾತನಾಡುತ್ತಿದ್ದೇವೆ,
ಅಭಿಜ್ಞ್ಯಾ :- ನಮಸ್ತೆ ಹೇಳಿ
ಅಭಯ್  :- ನಿಮ್ಮ ಕನ್ನಡಕ ನಿಮಗೆ ತಲುಪಿತ
ಅಭಿಜ್ಞ್ಯಾ :- ಹಾ ತಲುಪೈತ್ರಿ ( ಧ್ವನಿ ಕೇಳಿ ಅವಳೇ ಅಂತ ಅವನ ಮನಸ್ಸು ಹೇಳತೊಡಗಿತು )
ಅಭಯ್  :- ಅದರಲ್ಲೇನೋ ಲೋಪದೋಷಗಳು ಇಲ್ಲ ತಾನೆ?
ಅಭಿಜ್ಞ್ಯಾ :- ಇಲ್ರಿ ಸರ್ ಎಲ್ಲಾ ಬರೋಬ್ಬರ ಬಂದೈತ್ರಿ,
ಅಭಯ್  :- ಏನ್ರೀ  ಅಭಿಜ್ಞ್ಯಾ ಅವರೇ ಕನ್ನಡಕ ಹಾಕೊಂಡ್ರೆ ಪ್ರಕೃತಿ ಇನ್ನಷ್ಟು ಚಲೋ ಕಾಣ್ತೈತಿ ಅನ್ಕೊಂಡಿರೇನ?
ಅಭಿಜ್ಞ್ಯಾ :- ಯಾರ್ರೀ ನೀವು?
ಅಭಯ್  :- ನಾನ್ ರೀ "ಸನ್ಮತಿ"
ಅಭಿಜ್ಞ್ಯಾ :- ಓ ನೀವ್ ಏನ್ರೀ ಹೆಂಗದಿರಿ, ನಿಮಗೆ ನನ್ ನಂಬರ್ ಹೆಂಗ್ ಸಿಕ್ಕಿತ? ಅದು ಅಲ್ದಾ ನಮ್ ಭಾಷೆ ಮಾತಾಡಕತ್ತೆರಿಯಲಾ?
ಅಭಯ್  :- ಸಾವಕಾಸ  ರೀ ಪಾ, ನಾನು ಲೆನ್ಸ್ಕಾರ್ಟ್  ಅಲ್ಲಿ ಕೆಲಸ ಮಾಡುತ್ತೇನ್ರೀ, ನಿನ್ನೆ ನಿಮ್ ಹೆಸರು ಊರು ನೋಡಿದೆ ನೀವೇ ಇರಬಹುದು ಅನ್ಕೊಂಡೆ ನಿಮ್ಮ ಧ್ವನಿ ಕೇಳಿದ್ಮೇಲ್ ನೀವೇ ಅಂತ ನಿಶ್ಚಿತನಾದೆ, ನಿಮ್ ಜೊತೆ ಮಾತಾಡ್ಬೇಕಂತ ಮತ್ತು ನೀವು ಮಾತಾಡೋದೆಲ್ಲ ಅರ್ಥ ಆಗ್ಲಿ ಅಂತ ಯೂಟ್ಯೂಬ್ ನೋಡಿ ನಿಮ್ಮ ಭಾಷೆ ಸ್ವಲ್ಪ ಕಲ್ತೇನ್ರೀ,
ಅಭಿಜ್ಞ್ಯಾ :- ಓ ನಾನು ಮತ್ತೆ ಸಿಕ್ತೀನಿ ಅಂತ ಅಂದುಕೊಂಡಿದ್ರಿಯೆನ್,
ಅಭಯ್  :- ನನ್ನ ಮನಸ್ಸಿಗೆ ಯಾಕೋ ಹಂಗ ಅನ್ಸಾಕತ್ತಿತ್ತ ನೋಡ್ರಿ. ಇವತ್ತು ಅದ ಖರೇನ ಆಯ್ತು
ಅಭಿಜ್ಞ್ಯಾ :- ಓಹೋ, ನೀವು ಮತ್ತು ಸಿಕ್ಕಿದ್ದು ಖುಷಿಯಾಯಿತು ರೀ,
ಅಭಯ್  :- ಚಾ ಪಾ ಅಯ್ತಿಲ್ರಿ?
ಅಭಿಜ್ಞ್ಯಾ :- ಆಯ್ತು ರೀ ನಿಮ್ದು?
ಅಭಯ್  :- ಆಯ್ತು, ಸರಿ ಬಾಸ ಬಂದ್ರು ಆಮೇಲೆ ಮಾಡ್ತೀನಿ,
       ಮರುದಿನ ಬೆಳಗ್ಗೆ ನಮ್ಮ ಹೀರೋ ನಮ್ಮ ಹುಡುಗಿಗೆ ಕರೆ ಮಾಡುತ್ತಾನೆ
ಅಭಯ್  :- ಏನ್ ಮಾಡ್ತಾ ಇದ್ದೀರಾ?
ಅಭಿಜ್ಞ್ಯಾ :- ಏನಿಲ್ಲ ಸುಮ್ನೆ ಕುಳಿತಿದ್ದೆ ನೀವು?
ಅಭಯ್  :- ಏನಿಲ್ಲ ಮತ್ತೆ ಏನ್ ಸಮಾಚಾರ?
ಅಭಿಜ್ಞ್ಯಾ :- ನಿಮ್ಮ ಮಂಗಳೂರ ಒಳಗೆ ಬಹಳಷ್ಟು ಬೀಚ್ಇದಾವ ಅಂತ ಅಲ್ಲಾ ನಂಗೂ ಬೀಚ್ಗಳನ್ನು ನೋಡುವ ಆಸೆ
ಅಭಯ್  :- ಓ ಹೌದಾ ಮತ್ತೆ ಯಾಕ್ರೀ ತಡ ಬಸ್ ಹತ್ತಿ ಬಂದುಬಿಡಿ
ಅಭಿಜ್ಞ್ಯಾ :- ಒಬ್ಬಕಿನ ಬರಲೇನು ಅಥವಾ ನನ್ನ ಸ್ನೇಹಿತರ ಜೊತೆಗೆ ಬರ್ಲಿ
ಅಭಯ್  :- ಒಬ್ಬರೇ ಬರ್ರಿ,
ಅಭಿಜ್ಞ್ಯಾ :- ನೀವು ಕೆಲಸಕ್ಕೆ ಹೊಂಟಿರೀ ಒಬ್ಬಕಿನ ಬಂದು ಏನ್ ಮಾಡ್ಲಿ?
ಅಭಯ್ :- ಅಯ್ಯೋ ನಿಮಗೋಸ್ಕರ ಒಂದು ದಿನ ರಜೆ ಹಾಕಿದ್ರೆ ಆಯ್ತು ಬನ್ನಿ,
ಅಭಿಜ್ಞ್ಯಾ :- ಸರಿ ಮುಂದಿನ ವಾರ ಬರ್ತೀನಿ
ಹಾಗೆ ಹೀಗೆ ಒಂದು ವಾರ ಕಳೆದೆ ಬಿಟ್ಟಿತ್ತು ಬೆಳಗಾವಿಯ ಕೋರಿ ಮಂಗಳೂರಿನ ಪ್ರಯಾಣ ಶುರು ಮಾಡಿದಳು ಅವಳ ಬರುವುವಿಕೆಗಾಗಿ ನಮ್ಮ ಹುಡುಗ ಕೆಲಸ ಬಿಟ್ಟು ಅವಳ ಭೇಟಿಗಾಗಿ ಕಾಯುತ್ತಿದ್ದ, ಮನೆಯಲ್ಲಿ ಸ್ನೇಹಿತರ ಜೊತೆ ಅಂತ ಹೇಳಿ ಅಭಿಜ್ಞ್ಯಾ ಒಬ್ಬಂಟಿಯಾಗಿ  ಮಂಗಳೂರಿಗೆ ಬಂದು ಇಳಿದಳು,
ಅಭಯ್  :- ನಮ್ಮ ಊರಿಗೆ ಸ್ವಾಗತ 
ಅಭಿಜ್ಞ್ಯಾ :- ಉಣ್ಣಾಕ ಏನರ ಇದ್ರೆ ಕೊಡ್ರಿ ಪ್ರಯಾಣ ಮಾಡಿ ಸುಸ್ತಾಗೈತಿ
ಅಭಯ್ :- ಓ ಬರ್ರಿ ಮಂಗಳೂರು ಮೀನ್ ತಿನ್ನೋಣ
ಅಭಿಜ್ಞ್ಯಾ :- ನಡೀರಿ ಲಘು
          ಇಬ್ಬರು ಒಂದು ಹೋಟೆಲ್ ಗೆ ಹೋಗಿ ಊಟ ಮಾಡುತ್ತಾರೆ
ಅಭಯ್ :- ಹೆಂಗ್ ಇತ್ರಿ ನಮ್ಮೂರು ಊಟ
ಅಭಿಜ್ಞ್ಯಾ :- ಭಾಳ ಚಲೋ ಇತ್ರೀ  ಹೊಟ್ಟೆ ತುಂಬಿತ್ತು ನೋಡಿ
ಅಭಯ್ :- ಹಂಗಾರ್ ಬೀಚ್ ನೋಡಕ್ ಹೋಗನ್ರೀ?
ಅಭಿಜ್ಞ್ಯಾ :- ಇನ್ನಾ ತಡ ನಡೆಯಿ ಪಟ್ನ ( ಬೇಗ) ಹೋಗೋಣ
ಇವರಿಬ್ಬರ ಪ್ರಯಾಣ ಮಂಗಳೂರಿನ ಸುತ್ತಮುತ್ತಲಿನ ಬೀಚ್ ಗಳತ್ತ ಸಾಗುತ್ತದೆ ಮೇಲೆ ಮಳೆ ಕೆಳಗೆ ಒಂದೇ ಕಡೆಗೆ ಇಬ್ಬರೂ ಒಂದೊಂದು ಹೆಜ್ಜೆ ಇಟ್ಟು ನಡೆದು ಹೋಗುತ್ತಿದ್ದಾರೆ  ಅಭಯ್  ಮನದೊಳಗೆ  ಏನೋ ಖುಷಿಯ ಸಂಚನ ಬೀಚ್ಗಳ ಸೌಂದರ್ಯ ಸವಿಯುತ್ತ ಇಬ್ಬರು ಕಣ್ತುಂಬಿ ಕೊಳ್ಳುತ್ತಿದ್ದಾರೆ
ಅಭಯ್ (ಮನಸ್ಸಿನಲ್ಲಿ) ಈಗಲೇ ನನ್ನ ಪ್ರೀತಿಯ ಬಗ್ಗೆ ಇವರಿಗೆ ಹೇಳಿಬಿಡಲಾ ಈಗ ತಪ್ಪಿದ್ರೆ ಮತ್ತೆ ಯಾವಾಗ ಸಿಕ್ತಾರೋ ಗೊತ್ತಿಲ್ಲ
ಅಭಿಜ್ಞ್ಯಾ :- ನಂದೊಂದು ಫೋಟೋ ತೆಗಿರಿ
ಆ ಬೀಚ್ ನೋಡಲು ಜನಸಾಗರವೇ ಬಂದಿತ್ತು ಅಲ್ಲಿ ಇಲ್ಲಿ ಸಿಕ್ಕ ಸ್ವಲ್ಪ ಜಾಗದಲ್ಲಿ ನಿಂತು ಇವರ ಭಾವಚಿತ್ರ ತೆಗೆಯುವ ಕಾರ್ಯಕ್ರಮ ಮುಂದುವರೆಯಿತು. ಆದರೆ ಇದೇ ಸಮಯಕ್ಕೆ ದಂಡೆಯತ್ತ ನೀರು ಜೋರಾಗಿ ಹರಿದು ಬರಲು ಪ್ರಾರಂಭವಾಯಿತು ಅಲೆಗಳು ಬಲು ರಭಸದಿಂದ ಅಪ್ಪಳಿಸತೊಡಗಿದವು ಅಲ್ಲಿದ್ದ ಜನ ಎಲ್ಲಾ ಕಕ್ಕಾಬಿಕ್ಕಿಯಾಗಿ ಓಡಲು ಪ್ರಾರಂಭಿಸಿದರು ಕೆಲ ಜನರು ಕೆಳಗೆ ಬಿದ್ದರೂ ಬಿದ್ದವರನ್ನು ತುಳಿದು ಓಡಲು ಮುಂದಾದರು ಅಭಯನಿಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ ಕೆಲಸಮಯದ ನಂತರ ವಾತಾವರಣವೇನು ಶಾಂತವಾಯಿತು ಆದರೆ ಸುತ್ತಮುತ್ತ ಎಲ್ಲಿಯೂ ಆಕೆ ಕಾಣಲೇ ಇಲ್ಲ ಅವಳಿಗಾಗಿ ಅಭಯ ಹುಡುಕುತ್ತಾ ಇದ್ದರೂ ಅವನಿಗೆ ಅಭಿಜ್ಞ್ಯಾ ಎಲ್ಲಿಯೂ ಕಾಣಲಿಲ್ಲ ಆದರೆ  ಅಭಿಜ್ಞ್ಯಾ ಕಾಣಿಸಿದ್ದು ಅರುಣನಿಗೆ ಆ ಅಲೆಗಳ ರಭಸಕ್ಕೆ  ಅಭಿಜ್ಞ್ಯಾ ನೀರಿನಲ್ಲಿ ತೇಲಿ ಹೋಗುತ್ತಿದ್ದಳು ಬಲು ರಭಸದಿಂದ ಹರಿದ ನೀರಿನೊಂದಿಗೆ ಆಕೆ ದೂರಹರಿದು ಹೋಗುತ್ತಿದ್ದಳು ಇದೇ ಸಮಯಕ್ಕೆ ಆಕೆ ಅಲ್ಲಿಯ ಕಾಸರಗೂಡಿನ ವ್ಯಕ್ತಿಯಾದ ಅರುಣನ ಕಣ್ಣಿಗೆ ಬಿದ್ದಳು ಪುಣ್ಯಕ್ಕೆ ಆಕೆಗೆ ಕೇವಲ ಪ್ರಜ್ಞೆ ಮಾತ್ರ ಹೋಗಿತ್ತು ಅರುಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ,
ಅಭಯ್ ಸಂಜೆವರೆಗೂ ಹುಡುಕಿದರು  ಅಭಿಜ್ಞ್ಯಾ ಅವನ ಕಣ್ಣಿಗೆ ಬೀಳಲೇ ಇಲ್ಲ ರಾತ್ರಿ ಆದ್ರೂ ಅಲ್ಲಿಯೇ ಕುಳಿತುಕೊಂಡು ಆಕೆಯ ಸಿಗುವಿಕೆಗಾಗಿ  ಕಾಯುತ್ತಿರುತ್ತಾನೆ, ಇತ್ತ ಮನೆಯಿಂದ ಹೊರಗೆ ಹೋದ ಮಗಳು ರಾತ್ರಿಯಾದರೂ ಮರಳಲಿಲ್ಲ ಯಾವುದೇ ಕರೆಗೂ ಸಿಗುತ್ತಿಲ್ಲ ಎಲ್ಲಾ ಸ್ನೇಹಿತರನ್ನು ವಿಚಾರಿಸಿದರು ಎಲ್ಲರೂ ಅವಳು ನನ್ನೊಂದಿಗೆ ಬಂದೇ ಇಲ್ಲ ಎಂಬ ಉತ್ತರ ನೀಡಿದರು ಅವರಿಗೂ ಗಾಬರಿ ಆತಂಕ ಇವೆಲ್ಲದರ ಮಧ್ಯೆ ಒಂದು ದಿನ ಕಳೆದೆ ಹೋಯ್ತು
              ಮರುದಿನ
ಅಭಿಜ್ಞ್ಯಾಳಿಗೆ ಪ್ರಜ್ಞೆ ಬಂತು
ಅರುಣ್ :- ನಮಸ್ಕಾರ ನನ್ನ ಹೆಸರು ಅರುಣ್ ಅಂತ ನಿಮ್ಮನ್ನು ಕಾಪಾಡಿ ಆಸ್ಪತ್ರೆಗೆ ಸೇರಿಸಿದ್ದು ನಾನೇ
ಅಭಿಜ್ಞ್ಯಾ :- ಧನ್ಯವಾದಗಳು ಅಭಯ್ ಎಲ್ಲಿ?
ಅರುಣ್ :- ಯಾರು ಅಭಯ್? ನಿಮ್ಮ ಹೆಸರು ಏನು
ಅಭಿಜ್ಞ್ಯಾ :- ನನ್ನ ಹೆಸರು ಅಭಿಜ್ಞ್ಯಾ, ಅಭಯ್ ಅವರು ನನ್ನ ಸ್ನೇಹಿತರು ಅವರು ನನ್ನ ಜೊತೆ ಇದ್ರಿ
ಅರುಣ್ :- ನೀವು ವಿಶ್ರಾಂತಿ ತೆಗೆದುಕೊಳ್ಳಿ ನಂತರ ನಿಮ್ಮನ್ನು ಎಲ್ಲಿಗೆ ಸೇರಿಸಬೇಕು ನಾನು ಸೇರಿಸ್ತೀನಿ ಇವಾಗ ಮದ್ದು (ಇನ್ಫೆಕ್ಷನ್) ಕೊಟ್ಟಿದ್ದಾರೆ ಮಲಗಿಕೊಳ್ಳಿ,
ಅಭಿಜ್ಞ್ಯಾ :- ಸರಿ

ಅಭಿಜ್ಞ್ಯಾಳ ಅಮ್ಮ :- ನೀನು ಅವಳ ಬೆಸ್ಟ್ ಫ್ರೆಂಡ್ ಅವಳು ಎಲ್ಲಿ ಹೋಗ್ಯಾಳ?  ಯಾರ್ ಜೊತೆ ಹೋಗ್ಯಾಳ ಅಂತ ನಿಂಗ ಪಕ್ಕ ಗೊತ್ತ ಇರ್ತೈತಿ  ಹೇಳು
ಕಾವ್ಯ ( ಸ್ನೇಹಿತೆ ) :- ಅದು ಆಂಟಿ ಮೊನ್ನೆ ಅಕಿಗೆ ಅಭಯ್ ಅಂತ ಹೊಸ ಸ್ನೇಹಿತ ಸಿಕ್ಕಾನ್ರಿ ಆಕೀ  ಅವಂಗ ಭೇಟಿ ಆಗಾಕ ಮಂಗಳೂರಿಗೆ ಹೋಗ್ಯಾಳ,
ಅಮ್ಮ :- ಸರಿ
ಅಭಿಜ್ಞ್ಯಾಳ  ತಂದೆ ತಾಯಿ ಮಂಗಳೂರಿನತ್ತಾ ಪ್ರಯಾಣಿಸಿದ್ದಾರೆ  ಅಭಯ್  ಅಭಿಜ್ಞ್ಯಾಳ ಕುರಿತು ಪೊಲೀಸ್ ಠಾಣೆಗೆ ದೂರು ನೀಡಲು ಹೊರಟಿದ್ದಾನೆ ಅರುಣ್  ಅಭಿಜ್ಞ್ಯಾಳ  ಜೊತೆಯಿದ್ದು ಅವಳ ಆರೋಗ್ಯ ನೋಡಿಕೊಳ್ಳುತ್ತಿದ್ದಾನೆ,

--------------------------------------------------------
ಅಭಿಜ್ಞ್ಯಾಳಿಗೆ ಹುಷರಾಗುತ್ತದೆ ಆಕೆ ಅರುಣ್ ಮೊಬೈಲ್ ನಿಂದ ಅವರ ತಂದೆ ತಾಯಿಗೆ ಕರೆ ಮಾಡಿ ನಡೆದ ಎಲ್ಲವನ್ನು ವಿವರಿಸುತ್ತಾಳೆ ನಂತರ ಆಕೆ ಅಭಯನಿಗೂ ಕರೆ ಮಾಡಿ ಆಸ್ಪತ್ರೆಗೆ ಬರಲು ಹೇಳುತ್ತಾಳೆ ಅಭಯದವಡಾಯಿಸಿ ಬಂದು ಅಭಿಜ್ಞ್ಯಾ ಕ್ಷೇಮವಾಗಿರುವುದನ್ನು ನೋಡಿ ಮನಸ್ಸು ಹಗುರಾಗುತ್ತದೆ ತನ್ನವಳಿಗೆ ಏನಾಯಿತು ಎನ್ನುವ ಆತಂಕ ದೂರವಾಗುತ್ತದೆ,
ನಂತರ ಅರುಣನಿಗೆ ಧನ್ಯವಾದ ತುಂಬಾ ಭಯ ಆಗಿತ್ತು ಅರುಣ್ ಪರ್ವಾಗಿಲ್ಲ ಇದು ನನ್ನ ಕರ್ತವ್ಯ ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವುದು ಮಾನವನ ಕರ್ತವ್ಯ ಅಲ್ಲವೇ  ಅಭಯ್ ಮುಗುಳ್ನಗುತ್ತಾ ಮತ್ತೊಮ್ಮೆ ಧನ್ಯವಾದಗಳು ತಿಳಿಸಿ ಅರುಣ ನನ್ನು ಮನೆಗೆ ಕಳಿಸುತ್ತಾನೆ ಅಭಯ್ ಅಭಿಜ್ಞ್ಯಾಳಿಗೆ ಹೇಗಿದ್ದೀಯಾ ಅಂತಾ ಸೋತು ಹೋದ ಧ್ವನಿಯಲ್ಲಿ ಕೇಳುತ್ತಾನೆ
ಅಭಿಜ್ಞ್ಯಾ :- ನಾ ಈಗ್ ಚಲೋ ಅದೇನಿ, ನೀವೇನ್ ಚಿಂತಿ ಮಾಡ್ಬೇಡಿ ಈಗ ನನ್ನ ತಂದೆ ತಾಯಿ ಬರತಾರ ನಾ  ಊರಿಗೆ ಹೋಗುತ್ತೇನೆ ಮತ್ತೆ ಸಿಗ್ತೀನೋ ಇಲ್ವೋ ಗೊತ್ತಿಲ್ಲ ಹೋಗುವ ಮೊದಲು ಒಂದು ಅನುಮಾನ ನಿಂಗೆ ನಾನು ಕೇವಲ ಸ್ನೇಹಿತೆನಾ? ಅಥವಾ ಪ್ರೀತಿ ಏನಾದರೂ ಇದೆಯಾ?
ಅಭಯ್  :- ಪ್ರೀತಿ ಇದೆ ಅಭಿಜ್ಞ್ಯಾ ಬಿಚ್ ಹತ್ರ ನನ್ನ ಪ್ರೀತಿನ ಹೇಳಿಕೊಳ್ಳೋಣ  ಅನ್ನೋಅಷ್ಟರಲ್ಲಿ ಏನೇನು ಆಗೋಯ್ತು,,, ಅಂತಾ ಅಲ್ಲೇ ಅಭಯ್ ತನ್ನ ಪ್ರೀತಿನ ವ್ಯಕ್ತಪಡಿಸುತ್ತಾನೆ ಅಭಿಜ್ಞ್ಯಾಳಿಗೂ ಪ್ರೀತಿ ಇರುವ ಕಾರಣ ಅವಳು ಖುಷಿಯಿಂದ ಒಪ್ಪಿಕೊಳ್ಳುತ್ತಾಳೆ,
ನಂತರ ಇಬ್ಬರು ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿ ಮನೆಯವರನ್ನು ಒಪ್ಪಿಸಿ ಮದುವೆಯಾಗುತ್ತಾರೆ, ಮದುವೆಯಾಗಿ ಚಂದದ ಸಂಸಾರ ಮಾಡಿ ಬಂದ ವರ್ಷಕ್ಕೆ ಹೆಣ್ಣು ಮಗುಗೆ ಜನ್ಮ ನೀಡ್ತಾಳೆ  ಅಭಿಜ್ಞ್ಯಾ ತಮ್ಮ ಮಗುವಿಗೆ ತಮ್ಮ ಪ್ರೀತಿಯ ಸಂಕೇತವಾದ "ಸನ್ನತಿ " ಎಂದು ನಾಮಕರಣ ಮಾಡಿ ಪ್ರವಾಸದ ಪ್ರೇಮ ಸುಖ ಸಂಸಾರ ನಡೆಸುತ್ತಾರೆ

 

ಮುಕ್ತಾಯ

ಹೇಗಿತ್ತು ಕಥೆ ಅಂತ ಅಭಿಪ್ರಾಯ ತಿಳಿಸಿ ಪ್ರೋತ್ಸಾಹಿಸಿ ಧನ್ಯವಾದಗಳು 
 


 

Category:Nature



ProfileImg

Written by Sahana gadagkar

0 Followers

0 Following