' ಸಾಗರದ ಸಂಜೆಯಲಿ,
ಮುಗಿಯದ ಮೂಕ ಯಾನದಲಿ ,
ಅವಳಿರುವಳು ಎನ್ನದೆಯ ಏಕಾಂತದಲಿ…,"
ಎದೆಗಂತು ತಪ್ಪದು ನೆನಪಿನ ಹಾವಳಿ,
ನಿನ್ನೆನಪೇ ನಾ ನನಗೇ ಸುತ್ತಿಕೊಂಡ ಸರಪಳಿ,
ಮೇಲೆರಗಿವೆ ಅಲೆಗಳು ಬೇಡುತ ಅವಳ,
ಅದಕ್ಕೇನೂ ಗೊತ್ತು ಅವಳು ಆಳದಲ್ಲಿ ಅವಿತ ಹವಳ…"
ಇಂದ್ರನು ಕಾದಿಹನು ಅವಳ ಕಾಣಲು,
ಚಂದ್ರಮನು ಬಂದಿಹನು ಅವಳ ಸನಿಹ ಸೇರಲು,
ನನಗಂತೂ ಹೇಳ್ಮುಗಿಯದ ವಿರಹ,
ಅವಳೋ ನನ್ಹಣೆಯಲ್ಲಿರದ ಬರಹ…!
ದಿಕ್ಕಿರದ ಪ್ರಯಾಣವಿದು ,
ಸುಳ್ಳಿರದ ಸುಳಿಯಲಿ ಸಿಕ್ಕ ಯಾನವಿದು ,
ಎಂದೂ ಅರಿಯದೆ ಅವಳ ಮನಸು ನನ್ನ,
ಅವಳಿದ್ದರೆ ಬದುಕಂತು ಇನ್ನೂ ಚೆನ್ನ ..
ಉಸಿರಿಗೆ ನಿನ್ನಿಂದ ಬೀಳ್ಕೊಡುಗೆ ಬೇಕಿದೆ,
ಗೊಂದಲಕ್ಕೆ ನನ್ನ ನಿನ್ನ ನೋವೇ ನೂಕಿದೆ,
ಬಾ ಒಮ್ಮೆ ಎನ್ನ ಮನದರಸಿ..,
ಹೆಣಗಾಡದೆ ಹೆಣವಾಗಿ ಹೋಗುವೆ ನಿನ್ನ
ಕಣ್ ಒರೆಸಿ..."
ರಚನೆ : ಅರುಣಾ ಪ್ರೀತು.
Writer
0 Followers
0 Following