ಯಾವುದೆ ಒಂದು ಸಂಬಂಧ ಶುರುವಾದಾಗ ಮೊದಲಿದ್ದಷ್ಟೆ ಕಾತುರ, ಹಂಬಲ, ಚಡಪಡಿಕೆ, ಮಿಸ್ಸ್ ಮಾಡಿಕೊಳ್ಳುವ ಪರಿ ಎಲ್ಲವು ಸಂಬಂಧ ಬಲಿತು ಒಬ್ಬರಿಗೊಬ್ಬರು ಬಿಟ್ಟು ಹೋಗಲಾರೆವು ಅಂತ ಇಬ್ಬರಿಗು ಖಚಿತವಾದ ಮೇಲೆ ಯಾಕೋ ತನ್ನ ಲವಲವಿಕೆಯನ್ನ ಕಳೆದು ಕೊಳ್ಳುತ್ತ ಹೋಗುತ್ತದೆ. ಇಲ್ಲಿ ತಪ್ಪು ಒಬ್ಬರದೆ ಇರಬಹುದು ಇಲ್ಲ ಇಬ್ಬರದು ಆಗಿರಬಹುದು. ಬದುಕಿನ ಚಲನಶೀಲತೆ ಮೊದಲಿದ್ದವುಗಳೆಲ್ಲವನ್ನು ನುಂಗಿಯು ಹಾಕಿರಬಹುದು, ಆದರೆ ಸಂಬಂಧ ಅನ್ನುವುದು ಶುರುವಾದಗ ಇದ್ದಂತಹ ತೀವ್ರತೆಯನ್ನ ಕೊನೆಯವರೆಗು ಹಿಡಿದಿಡುವುದು ಅದರೊಳಗಿನ ಪ್ರತಿಯೊಂದನ್ನು ಮೊದ ಮೊದಲು ಎನ್ನುವಂತೆ ಅನುಭವಿಸುವುದು ಎಲ್ಲರಿಂದಲು ಸಾಧ್ಯವಿಲ್ಲ. ಪರಿಸ್ಥಿತಿ ಸಂದರ್ಭಗಳು ಎಷ್ಟೆ ಒತ್ತಡ ಹೇರಲಿ, ಅಡೆತಡೆಗಳೆಲ್ಲವನ್ನು ದಾಟಿ ಮನಸ್ತಾಪಗಳ ನಡುವೆಯು “ಮಿಸ್ಸ್ಯು” ಅನ್ನುವ ಒಂದು ಪದ ಮನದ ಅದೇಷ್ಟೊ ವಿರಹಗಳನ್ನ ಹೊಡೆದೊಡಿಸಿ ಹೊಸ ಆಹ್ಲಾದದ ಸವಿಯನ್ನ ಮುದವಾಗಿ ನೀಡುತ್ತದೆ. ಒಮ್ಮೊಮ್ಮೆ ಇಬ್ಬರಲ್ಲಿ ಒಬ್ಬರು ಗೊತ್ತೊ ಗೊತ್ತಿಲ್ಲದಯೋ ಇನ್ನೊಬ್ಬರನ್ನ ಕಡೆಗಣಿಸಲು ಪ್ರಾರಂಭಿಸಿರುತ್ತಾರೆ. ಮೊದಲಿನ ಆ ಆತ್ಮೀಯತೆಯಲ್ಲಿ ಕೊಂಚ ಎರುಪೇರು ಆಗಿ ಹೋಗಿರುತ್ತದೆ. ಬರು ಬರುತ್ತ ಅದು ಅತೀಯಾಗಲು ಬಹುದು. ಅಗ ಇಬ್ಬರು ಕುಂತು ಮಾತನಾಡುವುದು ಒಳಿತು. ಹಾಗಂತ ತಪ್ಪು ನಂದೆ, ನನ್ನ ಮೇಲೆಯೆ ತಪ್ಪು ಹೊರಿಸುತ್ತಾರೆ.. ನಾ ಮಾಡುವುದು ಇವರಿಗೆ ಇಷ್ಟವಿಲ್ಲ ಅಂತ ಅಂದುಕೋಳ್ಳುವುದು ಸಂಬಂಧವನ್ನ ಇನ್ನಷ್ಟು ಹದಗೆಡಿಸುವುದರಲ್ಲಿ ಅನುಮಾನವಿಲ್ಲ. ಸಂಬಂಧದಲ್ಲಿ ಹೊಂದಾಣಿಕೆ ಅತ್ಯಗತ್ಯ. ಸಂಬಂಧವಿದೆ ಅಂದಮೇಲೆ ಎಲ್ಲ ನಿರ್ಧಾರಗಳನ್ನ ಒಬ್ಬರೆ ತೆಗೆದುಕೊಳ್ಳುವುದು ತರವಲ್ಲ. ಇಲ್ಲಿ ನನ್ನಿಷ್ಟ ನಿನ್ನಿಷ್ಟ ಅನ್ನುವ ಅಹ್ಂ ನ ಮಾತುಗಳೆ ತರವಲ್ಲ. ಒಬ್ಬರ ಇಷ್ಟ ಕಷ್ಟಗಳನ್ನ ಅರಿತುಕೊಂಡು ಹೋಗುವುದರಲ್ಲಿ ಇದರ ನೆಮ್ಮದಿ ನಿಂತಿರುತ್ತದೆ. “ನಾ ಹೇಗಾದರು ಇರುತ್ತಿನಿ ನೀನು ಹೀಗೆ ಇರು ಅನ್ನುವುದು ತರವಲ್ಲ..” ಹಾಗೇಯೇ “ನಾ ನಿನಗೇನು ಅನ್ನಲಾರೆ, ನಿನ್ನಿಷ್ಟಕ್ಕೆ ಅಡ್ಡಿ ಬರಲಾರೆ, ನನ್ನಿಷ್ಟದಂತೆ ಬಿಟ್ಟುಬಿಡು” ಎನ್ನುವುದು ಕೂಡು ಸಂಬಂಧದ ನಡುವಿನ ಅಂತರ ಹೇಚ್ಚಲು ಕಾರಣವಾಗಬಹುದು. ಒಂದು ಸಂಬಂಧದ ಸೂಕ್ಷ್ಮತೆಯೊಳಗೆ “ಒಬ್ಬರನ್ನೊಬ್ಬರು ಕಳೆದುಕೊಳ್ಳುತ್ತಿವಿ ಅನ್ನುವ ಭಯ ಇಬ್ಬರಲ್ಲು ಇದ್ದಗಾ ಮಾತ್ರ ಆ ಸಂಬಂಧಕ್ಕೊಂದು ಅರ್ಥವಿರುತ್ತದೆ. ಜೊತೆಗೆ “ನಿನಗಾಗಿ ನಾ ಬದಲಾಗುತ್ತೆನೆ ಅಥವಾ, ನಿನ್ನಿಷ್ಟದಂತೆ ನಾನಿರ ಬಯಸುತ್ತೆನೆ ಅನ್ನುವುದರಲ್ಲಿ ಸಂತೋಷ, ಆತ್ಮ ತೃಪ್ತಿ ಸಿಗುತ್ತದಲ್ಲ ಅದು ಒಂದು ಸಂಬಂಧದ ಆತ್ಮ ಬೇಸುಗೆಯಂತೆ.”. ಇಲ್ಲಿ ಒಬ್ಬರು ಇನ್ನೊಬ್ಬರ ಸಲುವಾಗಿ ಬದಲಾಗುವಾಗ ತೃಪ್ತಿ ಇರಬೇಕೆ ಹೊರತು ಕೊರಗಲ್ಲ. ನನಗೆ ನನ್ನಿಷ್ಟದ ಪ್ರಕಾರ ಇರಲಾಗಲಿಲ್ಲವಲ್ಲ, ಎಲ್ಲರು ಬರಿ ಹಿಂಗೆ ಅನ್ನುವ ಒಂದೇ ಒಂದು ಸಣ್ಣ ಅಸಮಾಧಾನ ಬಂದರು ಆ ಸಂಬಧಕ್ಕೆ ಹಾಗು ಅದರ ಆಂತರ್ಯಕ್ಕೆ ಅರ್ಥವಿರುವುದಿಲ್ಲ..
ಯಾವತ್ತು ಒಂದೆ ಕೈಯಿಂದ ಚಪ್ಪಾಳೆ ಆಗದು ಹಾಗೆಯೆ ಇಲ್ಲಿ ಒಬ್ಬರಿಂದಲೇ ಸಂಬಂಧ ಪರಿಪೂರ್ಣಗೊಳ್ಳದು. ಸುಮಧುರ ಸಂಬಂಧದೊಳಗೆ “ನಾವು” ಅನ್ನುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ “ನಾನು” ಕೂಡ. ಅದನ್ನ ಅಹಂ ಅಂದುಕೊಳ್ಳುವುದು ತಪ್ಪು. ಹಾಗಂತ ಎಲ್ಲದಕ್ಕು ನಾನೇ ಅನ್ನುವುದು ಒಳಿತಲ್ಲ. ಸಂಬಂಧ ಅಡಿಪಾಯ ನಿಂತಿರುವುದೆ ನಾವು ಎನ್ನುವುದರ ಮೇಲೆ.. “ಇಬ್ಬರ ಅಭಿಪ್ರಾಯಗಳು, ಅಭಿರುಚಿಗಳು ಒಂದೇ ಆಗಿದ್ದು ಕೂಡಿ ಇರುವುದರಲ್ಲಿ ಮಹತ್ವವಿಲ್ಲ. ಆದರೆ ಇಬ್ಬರ ಆಲೊಚನೆಗಳು ಅಭಿರುಚಿಗಳು ಬೇರೆ ಬೇರೆಯಾಗಿದ್ದು ಒಂದೇ ವಿಚಾರ ಅಭಿಪ್ರಾಯದಲ್ಲಿ ಬಂದು ಕೂಡುತ್ತವೆಯಲ್ಲ ಅ ಸಂಬಂಧ ಮಹತ್ವವಾದುದು.” ಇಲ್ಲಿ ಪರಫೆಕ್ಷನ್ ಅಂತ ಇರೋದಿಲ್ಲ. ಹಾಗ ಒಂದ್ವೆಳೆ ಇದ್ರೆ ಅದು ಬೋರ ಹೋಡಿಸೊಕೆ ಶುರು ಮಾಡುತ್ತೆ. ಇಲ್ಲಿ ಒಬ್ಬರಿಗೊಬ್ಬರಿಗು ಇರುವ ಭಿನ್ನಾಭಿಪ್ರಾಯಗಳನ್ನ ಸೆಲೆಬ್ರೆಟ ಮಾಡಬೇಕು. ಗೌರವಿಸಬೇಕು. ಒಬ್ಬರ ಸ್ವಾತಂತ್ರ್ಯನ ಇನ್ನೊಬ್ಬರು ಅತೀಕ್ರಮಣ ಮಾಡಬಾರದು. ಸಂಬಂಧಕ್ಕೊಂದು ಗಂಟು ಹಾಕ್ಕೊಂಡು ಅದಿಕ್ಕೊಂದು ಯಾವುದೋ ಹೆಸರು ಕಟ್ಕೊಂಡು ಇರೊದೆಲ್ಲ ಅವರವರ ಭಯಕ್ಕೆ ಇನ್ ಸೆಕ್ಯುರಿಟಿಗೆ ಅನ್ನಿಸಿಬಿಡುತ್ತೆ. ನಿಜವಾದ ಸಂಬಂಧದ ಜೀವಾಳವೇ ಪ್ರೀತಿ . “ಪ್ರೀತಿ ಅನ್ನೋದು ಕೊಟ್ಟು ಸಂತೋಷ ಪಡಿಯುತ್ತೆ. ನಿಜವಾದ ಪ್ರೀತಿಲಿ ಪ್ರತಿಫಲದ ಅಪೇಕ್ಷೆ ಇರೋದಿಲ್ಲ. ಪ್ರೀತಿ ಅಂದರೆ ವಿಶ್ವಾಸ ಒಂದು ಸ್ವಾತಂತ್ರ್ಯ. ಮನುಷ್ಯನಿಗೆ ಬಂಧನಗಳೆ ಇರಬಾರದು. ದಿನವು ಹುಸಿಮುನಿಸಿನಲ್ಲೆ ಜಗಳಾಡುವ ಅದೇಷ್ಟೊ ಜೀವಗಳಿಗೆ ಈ ಒಳಗುಟ್ಟು ತಿಳಿಯಬೇಕಷ್ಟೆ. ಆಗಲೇ ಸಂಬಂಧ ಚಿರಕಾಲ ಉಳಿಯಲು ಸಾಧ್ಯ..
0 Followers
0 Following