ರಣ ಕಲಿಗಳಿಗೆ ವಂದನೆ

ProfileImg
15 May '24
1 min read


🌺ರಣ ಕಲಿಗಳಿಗೆ ವಂದನೆ🌺

ಈ ಭರತ ಮಾತೆಯ ವೀರ (ಹೆಮ್ಮೆಯ) ಪುತ್ರರೇ

ಈ ದೇಶ ಕಾಯುವ ಧೀರಯೋಧರೆ

ಈ ದೇಶದ ಜನರಿಂದ ನಿಮಗಿದೋ ವಂದನೆ

ವಂದನೆ ವಂದನೆ ನಿಮಗೆ ನಮ್ಮ ವಂದನೆ ||೧||

ದೇಶನನ್ನ ಜೀವವೆಂದು ಹೋರಾಡುವಧೀರರೇ

ತಾಯಿನೆಲಕ್ಕೆ ಪ್ರಾಣವನ್ನು ಮೀಸಲಿಟ್ಟ ಕಲಿಗಳೇ

ರಣಚಂಡಿಯ ವೀರ ಪುತ್ರರೇ  ನಿಮಗಿದೋ ವಂದನೆ

ವಂದನೆ ವಂದನೆ ನಿಮಗೆ ನಮ್ಮ ವಂನಿಮಗೆ ||೨||

ಗಿರಿಕಂದರ  ಕಾಡಿನಲ್ಲಿ ಸೇವೆಗೈಯುವ ಜೀವವೇ

ದಣಿವಿಲ್ಲದೆ ದೇಶಕ್ಕಾಗಿ ದೇಹವಿಟ್ಟ ಶೂರರೇ

ಸಿಡಿಲ ಸಿಂಹದ ಮರಿಗಳೇ ನಿಮಗಿದೋ ವಂದನೆ

ವಂದನೆ ವಂದನೆ ನಿಮಗೆ ನಮ್ಮ ವಂದನೆ ||೩||

ದೇಶಜನತೆ ಸುಖದಿಬಾಳಲಿ ಎಂದು ಹರಸಿ ನಡೆದಿರುವ

ನಮಗಾಗಿ ದೇಶವನ್ನು ಹಗಲಿರುಳು ಕಾದಿರುವ

ಭದ್ರಕಾಳಿಯ ವೀರ ಕುಡಿಗಳೇ ನಿಮಗಿದೋ ವಂದನೆ

ವಂದನೆ ವಂದನೆ ನಿಮಗೆ ನಮ್ಮ ವಂದನೆ ||೪||

ರಣರಂಗದ ರಣದಲ್ಲಿ ರಣಕಹಳೆ ಮೊಳಗಿರಲು 

ಶತ್ರುಗಳ ಎದೆಯಲ್ಲಿ ನಡುಕನ್ನು ತಂದಿರಲು

ಎಂಟೆದೆಯ ವೀರ ಯೋಧರೆ  ನಿಮಗಿದೋ ವಂದನೆ

ವಂದನೆ ವಂದನೆ ನಿಮಗೆ ನಮ್ಮ ವಂದನೆ||೫||

                          ✍️ಎಸ್.ಕೆ.ಜಂಬಗಿ

 

 

 

 

 

 

 

 

Category:Verse



ProfileImg

Written by sri Shyla

ಕನ್ನಡ ಭಾಷಾ ಶಿಕ್ಷಕರು

0 Followers

0 Following