ಅಂದಿನ ಕಾಲದಲ್ಲಿ ಹಳ್ಳಿಯಲ್ಲಿ ಸೊಪ್ಪು ಮದ್ದನ್ನು ಕೊಡುವವರಿದ್ದರು. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಪ್ರಯತ್ನವೂ ನಡೆಯಿತು. ಆದರೆ ಈಗ... ನೂರಕ್ಕೊಬ್ಬರಂತೆ ಮಾತ್ರ ಇಂಥವರು ಇದ್ದು ಅಳಿವಿನ ಅಂಚನ್ನು ತಲಪಿದೆ.
"ಹಿತ್ತಿಲಗಿಡ ಮದ್ದಲ್ಲ" ಎನ್ನುವಂತೆ ಕಣ್ಣಮುಂದೆ ಅದೆಷ್ಟೋ ಔಷಧಿಗಳಿದ್ದರೂ ನಮ್ಮಲ್ಲಿ ಅಜ್ಞಾನವು ಕಾಡುತ್ತಿದೆ.
ಅರಿಶಿನ, ಶುಂಠಿ, ಲಿಂಬೆ, ಕಾಳುಮೆಣಸು, ಜೇನುತುಪ್ಪ, ತುಪ್ಪ, ತುಳಸಿ, ಬಿಲ್ವಪತ್ರೆ, ಗರಿಕೆ ಹುಲ್ಲು, ಭದ್ರಮುಷ್ಟಿ....
ಕೆಮ್ಮು, ಶೀತ, ಜ್ವರ... ಏನೇ ಬಂದರೂ ರೋಗಿಗೆ ಸೊಪ್ಪನ್ನೋ, ಬೇರನ್ನೋ ಜಜ್ಜಿ, ಕಷಾಯ ಮಾಡಿ ಕೊಡುತ್ತಿದ್ದರು. ಜನರಿಗೆ ಅದೆಷ್ಟೋ ಔಷಧಿಗಳ ಪರಿಚಯ ಇರುತ್ತಿತ್ತು. ಈಗಿನಂತೆ ಆಸ್ಪತ್ರೆಗೋ, ವೈದ್ಯರ ಬಳಿಗೋ ಹೋಗುವ ಪ್ರಮೇಯವೇ ಇರಲಿಲ್ಲ. ಅಷ್ಟೇ ಅಲ್ಲ.. ಗರ್ಭಿಣಿಯರ ಕಾರ್ಯವೂ ಮನೆಯಲ್ಲೇ ನಡೆಯುತ್ತಿತ್ತು.
"ವೈದ್ಯೋ ನಾರಾಯಣೋ ಹರಿಃ" ಎನ್ನುವಂತೆ ಇಂದು ಹಗಲು, ಇರುಳೆನ್ನದೆ ೨೪ ಗಂಟೆಗಳ ಕಾಲ ನಿರಂತರ ಸೇವೆಯಲ್ಲಿ ರೋಗಿಯ ಜೀವವನ್ನು ಉಳಿಸುವ ಮಹತ್ಕಾರ್ಯವನ್ನು ಮಾಡುವಲ್ಲಿ ವೈದ್ಯರು ನಿರತರಾಗಿದ್ದಾರೆ. ಅವರನ್ನು ದೇವರಿಗೆ ಹೋಲಿಸುತ್ತಾರೆ. ದೇಹದೊಳಗೆ ಹೋದ ವಿಷದ ಕೊಳೆಯನ್ನು ತೊಳೆದು, ಅವನ ಮುಖದಲಿ ಹೊಸ ಕಳೆಯು ಮೂಡುವಂತೆ ಮಾಡುತ್ತಾರೆ. ರೋಗಿಗೆ ಪುನರ್ಜನ್ಮವನ್ನು ನೀಡಿ ಅಪಾಯದಿಂದ ರಕ್ಷಿಸುತ್ತಾರೆ. ಕಷ್ಟದ ಕಾಲದಲ್ಲಿ ನೆರವಾಗುವವನೇ ನಿಜವಾದ ಸ್ನೇಹಿತ. ವೈದ್ಯರನ್ನು ಸ್ನೇಹಿತ ಎಂದರೆ ತಪ್ಪಿಲ್ಲ.
ಈಗ ಮೊದಲಿನಂತಲ್ಲ. ಯಾವುದೇ ಸಮಸ್ಯೆಗೂ ಪರಿಹಾರವಿದೆ. ಆದರೆ ನಾವು ಎಚ್ಚಿತ್ತುಕೊಳ್ಳಬೇಕಷ್ಟೇ. ಯಾವುದನ್ನೂ ನಿರ್ಲಕ್ಷ್ಯಿಸದೆ ಔಷಧಿಯನ್ನು ಸಮಯಕ್ಕೆ ಸರಿಯಾಗಿ ಮಾಡಿದರೆ ರೋಗದಿಂದ ಗುಣಮುಖರಾಗಬಹುದು. ನಮ್ಮ ಪ್ರತಿಯೊಂದು ಅಂಗಗಳಿಗೆ ಒಬ್ಬರಂತೆ ಈಗ ವೈದ್ಯರಿದ್ದಾರೆ. ಅದನ್ನು ಸದುಪಯೋಗ ಪಡಿಸುವುದು ನಮ್ಮ ಕೈಯಲ್ಲಿದೆ.
ಹೋಮಿಯೋ, ಆಯುರ್ವೇದ, ಇಂಗ್ಲಿಷ್, ಅಲೋಪತಿ.. ಹೀಗೆ ಅನೇಕ ನಮೂನೆಯ ಔಷಧಿಗಳಿವೆ. ಉತ್ತಮವಾದುದರ ಆಯ್ಕೆ ನಮ್ಮದು. ಆಸ್ಪತ್ರೆಗಳಿಗೇನೂ ಕೊರತೆಯಿಲ್ಲ. ಕೊರತೆ ಇರುವುದು ನಮ್ಮಲ್ಲಿ..!!
"ಕೊರೋನಾ" ಎಂಬ ಮಹಾಮಾರಿಯು ದೇಶಕ್ಕೆ ಅಪ್ಪಳಿಸಿದಾಗ ತಮ್ಮನ್ನೇ ಪಣಕ್ಕಿಟ್ಟು ಅನೇಕರ ಜೀವವನ್ನು ಉಳಿಸುವಲ್ಲಿ ಅವರ ಪಾತ್ರ ಹಿರಿದು. ಎಲ್ಲೆಡೆ ಜುಲೈ ೧ ನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಅವರಿಗೊಂದು ಸಲಾಮ್...🙏
"ರೋಗವನ್ನು ದೂರ ಅಟ್ಟಿ ಆರೋಗ್ಯವಾಗಿರೋಣ... "
✍ ಮುರಳಿಕೃಷ್ಣ ಕಜೆಹಿತ್ತಿಲು
DTP Worker, Vittal, Mangalore
0 Followers
0 Following