ಬಲಿದಾನ

ಅಂದು ಅವರು ತಮ್ಮನ್ನˌಸಮರ್ಪಣೆ ಮಾಡಿಕೊಳ್ಳದಿದ್ದರೆˌಇಂದು ನಾವು ಸ್ವಾತಂತ್ರ್ಯರಾಗಿ ಇರುತ್ತಿರಲಿಲ್ಲ

ProfileImg
31 Mar '24
5 min read


image

ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು.ಹೌದು ಅದೆ ಭಗತ್ ಯಾರ ಹೆಸರು ಕೇಳಿದ ಕೂಡಲೇˌನಮ್ಮಂಥ ಯುವಕರ ನರನಾಡಿಗಳು ಎದ್ದುನಿಲ್ಲುತ್ತೊ ಅದೆ ಭಗತ್ˌಅವನು ಹುಟ್ಟಿದ ದಿನವೆ ಆ ಕುಟುಂಬಕ್ಕೆ ಭಾಗ್ಯದ ದಿನ!ಚಿಕ್ಕಪ್ಪ ಅಜಿತನ  ಗಡೀಪಾರು ಶಿಕ್ಷೆ ಮುಗಿದ ಸುದ್ದಿ ಬಂತು, ತಂದೆ ಕಿಶನ್, ಚಿಕ್ಕಪ್ಪ ಸ್ವರ್ಣ ಸಿಂಹ ಜೈಲಿನಿಂದ ಬಿಡುಗಡೆಯಾಗಿದ್ದರು. ಅವನು ಹನ್ನೆರಡು ವರ್ಷವಾಗಿರುವಾಗ ನಡೆದ ಘಟನೆˌಜಲಿಯಾನ್ ವಾಲಬಾಗ್ ಹತ್ಯಾಕಾಂಡ.ಜನರಲ್ ಡಯರ್ ನ ಆದೇಶದಂತೆˌಸಾವಿರಾರು ಜನರ ಹತ್ಯಕಾಂಡ ನಡೆಯಿತು.ಜಲಿಯನ್ ವಾಲಾ ಬಾಗಿಗೆ ಹೋಗಿ ರಕ್ತದಿಂದ ನೆನೆದಿದ್ದ ಮಣ್ಣನ್ನು ಹಣೆಗೆ ಹಚ್ಚಿಕೊಂಡ. ಸ್ವಲ್ಪ ಮಣ್ಣನ್ನು ಶೀಶೆಯಲ್ಲಿ ತುಂಬಿಸಿಕೊಂಡು ಮನೆಗೆ ಬಂದ. ಆ ಶೀಶೆಯ ನಾಲ್ಕೂ ಕಡೆ ಹೂವುಗಳನ್ನಿರಿಸಿ ಭಕ್ತಿಯಿಂದ ನಮಿಸಿದ. ಅದು ದಿನನಿತ್ಯದ ಪೂಜೆಯಾಯಿತುˌಸೈಮನ್ ಕಮಿಷನ್’ ವಿರುದ್ಧ ಗುಡುಗಿದ ಲಾಲ ಲಜಪತ ರಾಯ್ ಅವರನ್ನ ಪೊಲೀಸರು ಹೊಡೆದು ಕೊಂದಾಗ, ಅವರ ಜೊತೆಗಿದ್ದ ಭಗತ್ ಮತ್ತು ಸಂಗಡಿಗರು ಪ್ರತೀಕಾರ ತೆಗೆದುಕೊಳ್ಳಲು ಶಪತ ಮಾಡಿದರು ಮತ್ತು ಅದರಂತೆ ಕಾರ್ಯ ರೂಪಕ್ಕೆ ತರಲು ಭಗತ್ನೊಂದಿಗೆ ಕೈ ಜೋಡಿಸಿದವರು ರಾಜಗುರು,ಸುಖದೇವ್ ಮತ್ತು ಜೈ ಗೋಪಾಲ್. ಅವರು ಬಲಿತೆಗೆದು ಕೊಳ್ಳಬೇಕಿದ್ದಿದ್ದು  ಪೋಲಿಸ್ ಮುಖ್ಯಸ್ಥ ಸ್ಕಾಟ್ ಅನ್ನು,ಆದರೆ ಜೈ ಗೋಪಾಲ್ ಗುರುತು ಮಾಡುವಾಗ ತಪ್ಪಿ ತೋರಿಸಿದ್ದು ಅವನ ಕೆಳಗಿನ ಅಧಿಕಾರಿ ಸ್ಯಾಂಡರ್ಸ್ನನ್ನ.ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’.ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ ಅವನು ಹೇಳಿದ್ದು “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಅವಿಸ್ಸಿನಿಂದ ಬಡಿದ್ದೆಬ್ಬಿಸಬೇಕು”.ಹಾಗೆ ಭಗತ್ನೊಂದಿಗೆ ಅಲ್ಲಿ ಶರಣಾದ ಮತ್ತೊಬ್ಬ ಕ್ರಾಂತಿಕಾರಿ ಭಟುಕೇಶ್ವರ್ ದತ್ತ.ಆ ನಂತರ ಬ್ರಿಟಿಶ್ ಸರ್ಕಾರಕ್ಕೆ  ಸ್ಯಾನ್ದರ್ಸ್ನ ಹತ್ಯೆಯ ರೂವಾರಿ ಭಗತ್ ಅನ್ನುವುದು ತಿಳಿಯಿತು ಉಳಿದ ಎಲ್ಲ ಸಂಗಡಿಗರ ಬಂಧನವೂ ಆಯಿತು.
ಭಗತ್ ತಾನು ಬಲಿದಾನಿಯಾಗಲೆ ಬೇಕು ಅಂತ ನಿರ್ಧಾರ ಮಾಡಿಯಾಗಿತ್ತುˌಯಾವ ಮಟ್ಟದಲ್ಲಿ ಅಂದರೆ ಅವನ ತಂದೆ ಕಿಶನ್ ಸಿಂಗರುˌಬ್ರಿಟಿಷರಿಗೆ  ಗಲ್ಲುಶಿಕ್ಷೆ  ಹಿಂಪಡೆಯಿರಿ ಎಂದು ಮನವಿ ಮಾಡಿದಾಗ ಬದುಕುವುದಕ್ಕಿಂತ ನನ್ನ ಬಲಿದಾನವಾದರೆˌಬ್ರಿಟಿಷ್ ಸಾಮ್ರಾಜ್ಯ ಪತನವಾಗುತ್ತೆ ಅಂತ ಹೇಳಿˌಮನವಿ ಪತ್ರವನ್ನ ಹಿಂಪಡೆಯುವಂತೆ ಮಾಡ್ತಾನೆˌಅಷ್ಟು ಮಾತ್ರವಲ್ಲˌನಾಳೆ ಗಲ್ಲಿನ ಶಿಕ್ಷೆಯಾಗುತ್ತೆ ಅನ್ನುವಾಗ ಅವನ ಲಾಯರ್ ಪ್ರಣತ್ ಮೆಹ್ತಾ ಹೇಳ್ತಾನೆˌಭಗತ್ ನಿನ್ನ ನಾನು ಗಲ್ಲಿನಿಂದ ಬಿಡಿಸಿಕೊಂಡು ಬರ್ತಿನಿˌಭಗತ್ ಹೇಳಿದ ಬೇಡ ನಾನು ಗಲ್ಲಿಗೆ ಹೋಗಬೇಕುˌಪ್ರತಿಯೊಬ್ಬ ಭಾರತೀಯನು ನಾನು ಗಲ್ಲಿಗೆ ಹೋಗುವುದನ್ನು ನೋಡಬೇಕುˌದೇಶಭಕ್ತಿ ಅನ್ನುವುದು ಜಾಗೃತಿಯಾಗಬೇಕುˌಪ್ರಣತ್ ಹೋಗಿಬಿಡು.ನನ್ನ ಕೈಯಲೊಂದು ಪುಸ್ತಕವಿದೆ ಇದನ್ನ ಓದಿ ಮುಗಿಸಬೇಕು ಹೋಗು ಅಂತ ಅಂದ.ಹೌದು ನಿಜವಾದ ಬಲಿದಾನವೆಂದರೆ ಇದು ಯಾರು ನನ್ನನ್ನೂ ಉಳಿಸಿದು ಬೇಡˌಈ ಜೀವ ಇರುವುದೇ ತಾಯಿ ಭಾರತೀಯ ಸೇವೆಗಾಗಿ ಅಂತ ತನ್ನನ್ನೆ ಸಮರ್ಪಣೆ ಮಾಡಿಕೊಳ್ಳುವುದು.ಭಗತ್ ಅದನ್ನೆ ಮಾಡಿದˌ ಮತ್ತೊಬ್ಬನಿದ್ದ ಅವನು ತನ್ನ ಸೇಡನ್ನ ತೀರಿಸಿಕೊಳ್ಳಲು 21ವರ್ಷ ಕಾದಿದ್ದˌ ಅವನೆ ಉಧಮ್ ಸಿಂಗ್ˌ1919 ಏಪ್ರಿಲ್ 13ರಂದು ನಡೆದ ಘಟನೆˌಜನರಲ್ ಡಯರ್ ನ ಹತ್ಯೆ ಮಾಡಬೇಕು ಅಂತˌನಿರ್ಧಾರ ಮಾಡುವಂತೆ ಮಾಡಿತು   ಆ ದಿನ ಬಂದೆ ಬಿಟ್ಟಿತು 1940 ಮಾರ್ಚ್ 10 ಡಯರ್ ಯಾವುದೋ ಒಂದು ಕಾರ್ಯಕ್ರಮದಲ್ಲಿˌಭಾಗವಹಿಸುವವನಿದ್ದ.ಉಧಮ್ ಸಿಂಗ್ ಸಕಲ ಸಿದ್ದತೆ ಮಾಡಿಕೊಂಡು ಸಭೆಗೆ ಬಂದ. ಸಭೆಯಲ್ಲಿ ಮಾತನಾಡಿದ ಮೈಕೇಲ್ ಓಡ್ವಯರ್ ಜಲಿಯನ್ ವಾಲಾಬಾಗ್ ಘಟನೆಯನ್ನು ನೆನೆದು ತನ್ನ ಜಂಭ ಕೊಚ್ಚಿಕೊಂಡನು. ಸಭೆ ಮುಕ್ತಾಯವಾದ ಮೇಲೆ ಉಧಮ್ ಸಿಂಗ್ ವೇದಿಕೆಯ ಬಳಿ ಬಂದು ಗುಂಡು ಹಾರಿಸಿದ. ಅವು ಗುರಿ ತಪ್ಪದೇ ಮೈಕೇಲ್ ಓಡ್ವಯರನಿಗೆ ತಗುಲಿದವು. ನೆಲಕ್ಕೆ ಉರುಳಿದ ಅವನು ಮತ್ತೆ ಏಳಲೇ ಇಲ್ಲ.ಹೀಗೆ 21ವರ್ಷ ಕಾದ ಹಿಂದೆ ಇದ್ದˌವಿಷಯ ಮತ್ತೆನೂ ಅಲ್ಲ ದೇಶಭಕ್ತಿ ಅದು ಇಲ್ಲದೆ ಹೋಗಿದ್ರೆˌಅವನು ಆ ವಿಷಯವನ್ನು ಯಾವತ್ತೊ ಮರೆಯುತ್ತಿದ್ದ  ಉಧಮ್ ಸಿಂಗನಿಗೆ ಗಲ್ಲು ಶಿಕ್ಷೆ ವಿಧಿಸಿದರು. ದೇಶಕ್ಕಾಗಿ ಸಂತೋಷದಿಂದ ಸಾಯುತ್ತೇನೆ ಎಂದ ಉಧಮ್ ಸಿಂಗ್ 1940 ಜುಲೈ 31ರಂದು ತನ್ನ ಪ್ರಾಣವನ್ನು ಅರ್ಪಿಸಿದನು. ಈಗ ಯೋಚನೆ ಮಾಡಿˌಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರುˌಯಾವ ಕಾರಣಕ್ಕಾಗಿˌಮಾಡಿದರು. ಆ ಹುಡುಗ ಬಲಿದಾನ ಮಾಡಿದಾಗˌಅವನಿಗಿನ್ನು 18 ಕಂಡ್ರಿˌಬ್ರಿಟಿಷ್ ಸಾಮ್ರಾಜ್ಯದ ಸೊಕ್ಕು ಮುರುಯುವುದಕ್ಕೆˌಮೊದಲ ಸಲ ಬಾಂಬ್ ಪ್ರಯೋಗ ಮಾಡಿದವನು ಅವನು.ಆರು ವರ್ಷ ವಯಸ್ಸಾಗುವ ಹೊತ್ತಿಗೆ ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡ.ಅವನ ಅಕ್ಕ ಭಾವ ಅವನನ್ನ ಸಾಕಿದರುˌಮುಂದೆ ಬಕೀಮರು ಬರೆದ ಅನಂದಮಠವನ್ನ ಓದಿˌತಾನು ದೇಶಕ್ಕಾಗಿ ಬಲಿದಾನ ಮಾಡುತ್ತೇನೆ ಅಂತ ನಿರ್ಧಾರ ಮಾಡಿದˌಅವಕಾಶಕ್ಕಾಗಿˌಕಾಯುತ್ತಿದ ಆ ಹುಡುಗ ಬಂಗಾಳದ ಗುಂಪನ್ನು ಸೇರುತ್ತಾನೆ.ಇದೆ ಸಮಯದಲ್ಲಿ ಕಿಂಗ್ಸ್ ಪರ್ಡ್ ಅನ್ನುವˌಬ್ರಿಟಿಷ್ ನ್ಯಾಯವಾದಿˌಕ್ರಾಂತಿಕಾರಿಗಳಿಗೆ ಚಿತ್ರಹಿಂಸೆ ಕೊಡುತ್ತಿದ್ದ ಅವನನ್ನು ಮುಗಿಸಬೇಕು ಅಂತ ಕ್ರಾಂತಿಕಾರಿಗಳು ನಿರ್ಧಾರ ಮಾಡ್ತಾರೇˌ1908ರ ಏಪ್ರೀಲ್ ನಲ್ಲಿ ನಡೆದ ಕ್ರಾಂತಿಕಾರಿಗಳ ಸಭೆಯಲ್ಲಿˌಅವನನ್ನು    ಗುಂಡು ಹೊಡೆದು ಕೊಲ್ಲುವುದುˌಅಂತ ನಿರ್ಧಾರ ಮಾಡಿದರು.ಅದು  ಏಪ್ರಿಲ್ 30 1908 ರ ರಾತ್ರಿ ಖುದೀರಾಮ ಮತ್ತು ಪ್ರಫುಲ್ಲ ಬಾಂಬ್ ಮತ್ತು ಬಂದೂಕು ಸಿದ್ದ ಮಾಡಿಕೊಂಡು ಕಿಂಗ್ಸ್ ಫರ್ಡ್ ನ ಬಂಗಲೆಯ ಹೊರಗೆ ಕಾಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಂಗಲೆಯಿಂದ ಒಂದು ಕುದರೆ ಗಾಡಿ ಬಂತು. ಕೈಯಲಿದ್ದ ಬಾಂಬನ್ನು ಖುದೀರಾಮ ಗುರಿಯಿಟ್ಟು ಎಸೆದ. ಬ್ರಿಟಿಷರ ವಿರುದ್ದ ಭಾರತ ಎಸೆದ ಮೊದಲ ಬಾಂಬ್ ಅದಾಗಿತ್ತು. ಬಾಂಬ್ ಗಾಡಿಗೆ ತಗುಲಿದ ಮೇಲೆ ಭೀಕರ ಶಬ್ದವಾಯಿತು. ಖುದೀರಾಮ ಮತ್ತು ಪ್ರಫುಲ್ಲ ಬೇರೆ ದಿಕ್ಕುಗಳಲ್ಲಿ ಓಡಿದರು ಕಿಂಗ್ಸ್ ಫರ್ಡ್ ಅದೃಷ್ಟ ಚೆನ್ನಾಗಿತ್ತು ಖುದೀರಾಮ ಬಾಂಬ್ ಎಸೆದ ಗಾಡಿಯಲ್ಲಿ  ಅವನು ಇರಲಿಲ್ಲ. ಆತನ ಮನೆಗೆ ಅತಿಥಿಗಳಾಗಿ ಬಂದ ಇಬ್ಬರು ಮಹಿಳೆಯರು ಗಾಡಿಯಲ್ಲಿದ್ದರು. ಗಾಡಿಯಲ್ಲಿದ್ದ ಮಹಿಳೆಯರು ಮೃತರಾದರು.ಖುದಿರಾಮ್ ಅಂಗಡಿಯೊಬ್ಬನ ಬಲಿ ಕಿಂಗ್ಸ್ ಬರ್ಡ್ ಸಾಯಲಿಲ್ಲವೇ ಅಂತ ಕೇಳಿದಾಗˌಅವನಿಗೆ ಅನುಮಾನ ಬಂದು ಬ್ರಿಟಿಷರಿಗೆ ಒಪ್ಪಿಸುತ್ತಾನೆ ಮುಂದೆ ವಿಚಾರಣೆ ನಡೆಸಿˌ1908 ಆಗಸ್ಟ್ 11ಕ್ಕೆ ಅವನಿಗೆ ಗಲ್ಲು ಶಿಕ್ಷೆ ವಿಧಿಸಿದರುˌಖುದಿರಾಮ್ ಗಲ್ಲಿಗೆರಿದಾಗ ಅವನಿಗಿನ್ನು 18 ಆ 18ಕ್ಕೆ ನಮಗಿನ್ನು ಬುದ್ಧಿಯೆ ಬೆಳೆದಿರುವುದಿಲ್ಲ ಹೆಚ್ಚಿನ ಜನಕ್ಕೆˌಮತ್ತೆ ದೇಶದ ಬಗ್ಗೆ ಯೋಚಿಸುವುದು ಎಲ್ಲಿಂದ ಬರಬೇಕುˌಮತ್ತೊಬ್ಬ ಭೀಷ್ಮ ಪ್ರತಿಜ್ಞೆ ಮಾಡಿದವನುˌವೈಯಕ್ತಿಕವಾಗಿ ಹೇಳಬೇಕೆಂದರೆ ನಾನು ಬಲಿದಾನಿಗಳ ಬಗ್ಗೆˌಓದುವುದಕ್ಕೆ ಪ್ರೇರಣೆಯಾಗಿದ್ದೆ  ಬಾಬು ಕೃಷ್ಣಮೂರ್ತಿಯವರು ಬರೆದ ಅಜೇಯˌಹೌದು ಅವನೇ ಆಜಾದ್ˌ ದುಷ್ಮನೋಂಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ…ಆಜಾದ್ ಹೀ ರಹೇ ಹೆ ಹಮ್, ಆಜಾದ್ ಹೀ ರಹೇಂಗೆ!”ಎಂದ ಆಜಾದನೆ.ಅದು 1921 ದೇಶದಲ್ಲಿ ಅಸಹಕಾರ ಚಳುವಳಿ ನಡೆಯುತ್ತಿದ್ದ ಸಮಯˌಕಾಶಿಯಲ್ಲಿ ಒಂದು ದಿನ ಲಾಠಿಚಾರ್ಜ್ ಮಾಡಿದ ಪೋಲಿಸ್ ಅಧಿಕಾರಿಗೆˌಚಂದ್ರಶೇಖರ್ ಕಲ್ಲಿನಿಂದ ಹೊಡೆದˌನಿನ್ನ ಹೆಸರು ಎಂದು ಕೇಳಿದಾಗ ನನ್ನ ಹೆಸರು ಆಜಾದ್ ಎಂದು ಘರ್ಜಿಸಿದˌವಿಚಾರಣೆಯ ಸಮಯದಲ್ಲಿˌಆ ಹುಡುಗನಿಗೆ 12 ಛಡಿ ಏಟಿನ ಶಿಕ್ಷೆಕೊಟ್ಟರುˌಅವತ್ತು ಆಜಾದ್ ನಿರ್ಧಾರ ಮಾಡಿದˌಈ ಬ್ರಿಟಿಷರ ಕೈಗೆ ಯಾವತ್ತು ಸಿಗುವುದಿಲ್ಲ ಅಂತˌಹಾಗಂತ ಅವನು ವಿಮುಖನಾಗಲಿಲ್ಲ ಪುರುಷಸಿಂಹ ಅಂತ  ಕರೆಸಿಕೊಂಡ ಭಗತ್ ನ ಗುರು ಎಂದು ಕರೆಸಿಕೊಂಡ.ಕಾಕೋರಿ ಡರೋಡೆಯಲ್ಲಿ ಭಾಗವಹಿಸಿದˌಅದರಲ್ಲಿ ಪೋಲಿಸರಿಗೆ ಸಿಗದವನು ಇವನೊಬ್ಬನೆˌ ಮುಂದೆ ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಸೈಮನ್ ಎಂಬ ಆಯೋಗವನ್ನು ರಚಿಸಿತು. ಅದರ ವಿರುದ್ದ ಲಾಹೋರ್’ನಲ್ಲಿ ಪ್ರತಿಭಟನೆ ಮಾಡಬೇಕೆಂದು ಭಗತ್ ಸಿಂಗ್ ಮತ್ತು ಅಜಾದ್ ನಿರ್ಧರಿಸಿದರು. ಕ್ರಾಂತಿಕಾರಿ ನಾಯಕ  ಲಾಲ ಲಜಪತ್ ರಾಯ್ ಶಾಂತಿಯುತ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪೊಲೀಸರು ಅನಾಗರಿಕವಾಗಿ ವರ್ತಿಸಿದರು. ಸ್ಕಾಟ್ ಎಂಬ ಅಧಿಕಾರಿ ಲಾಲ ಲಜಪತ್ ರಾಯ್ ಅವರಿಗೆ ಬಲವಾಗಿ ಹೊಡೆದ. ಲಾಲ ಲಜಪತ್ ರಾಯ್ ಅವರು ನಿಧನರಾದರು. ಈ ಘಟನೆಯಿಂದ ಭಗತ್ ಸಿಂಗ್, ಆಜಾದ್ ಮತ್ತು ಗೆಳೆಯರಿಗೆ ದುಃಖವಾಯಿತು. ಸ್ಕಾಟ್’ನನ್ನು ಕೊಂದು ಸೇಡು ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದರು.ಆದರೆ ಕ್ರಾಂತಿಕಾರಿಗಳು ಸ್ಕಾಟ್’ನನ್ನು ಕೊಲ್ಲುವ ಬದಲಾಗಿˌ ಸ್ಯಾಂಡರ್ಸ್’ನನ್ನು ಕೊಂದು ಪರಾರಿಯಾದರು.ಬ್ರಿಟಿಷ್ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಲು ಪಾರ್ಲಿಮೆಂಟಿನಲ್ಲಿ ಬಾಂಬ್ ಸ್ಪೋಟಿಸಲು ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ ನಿರ್ಧರಿಸಿತು. ಭಗತ್ ಸಿಂಗ್ ಮತ್ತು ಬುಟುಕೇಶ್ವರ ದತ್ತ ಅಸ್ಸೆಂಬ್ಲಿಯಲ್ಲಿ ಬಾಂಬ್ ಸ್ಪೋಟಿಸಿ ಬ್ರಿಟಿಷರ ವಿರುದ್ದ ಪ್ರತಿಭಟಿಸಿ ಪೊಲೀಸರಿಗೆ ಶರಣಾದರು. ಈ ಯೋಜನೆಯ ಅಜಾದ್ ಮಾರ್ಗದರ್ಶನದಲ್ಲಿ ನಡೆಯಿತು. ಆಜಾದನನ್ನು ಹುಡುಕಲು ತೀರ್ವ ಪ್ರಯತ್ನವನ್ನು ಪೊಲೀಸರು ನಡೆಸಿದರು. ಆಜಾದ್ ಪೊಲೀಸರಿಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಕೈಗೆ ಸಿಕ್ಕರೂ ಸಿಗದಂತೆ ತಪ್ಪಿಸಿಕೊಂಡು ಬಿಡುತ್ತಿದ್ದ.ಅದು 1931 ಫೆಬ್ರವರಿ 27 ವೀರಭದ್ರ ತಿವಾರಿ ಎಂಬ ದೇಶದ್ರೋಹಿ ಆಜಾದ್ ನ ಬಗ್ಗೆ ಪೋಲಿಸರಿಗೆ ತಿಳಿಸಿದ.ಎಂಬತ್ತು ಮಂದಿ ಪೊಲೀಸರು ಮತ್ತೂ  ಒಬ್ಬನೆ ಒಬ್ಬ   ಆಜಾದ್ ಅರ್ಧ ಗಂಟೆಗೂ ಹೆಚ್ಚು ಕಾಲ ಯುದ್ದ ಮಾಡಿದ ಆಜಾದ್’ಗೆ ತನ್ನ ಬಳಿಯಿರುವ ಗುಂಡಿನ ಲೆಕ್ಕವಿತ್ತು. ಕೊನೆಯ ಗುಂಡು ಉಳಿದಿತ್ತು. ಜೀವಂತವಾಗಿ  ಪೋಲೀಸರ ಕೈಗೆ ಸಿಗಬಾರದೆಂದು ನಿರ್ಧರಿಸಿದ್ದ ಆಜಾದ್ ಆ ಒಂದು ಗುಂಡನ್ನು ತಲೆಗೆ ಹೊಡೆದುಕೊಂಡು ಸೇನಾನಿಯಂತೆ ತನ್ನ ತಾಯಿ ಭಾರತಿಗೆ ಕುಸುಮದಂತೆ ತನ್ನ ಪ್ರಾಣವನ್ನು ಅರ್ಪಿಸಿದˌನೋಡಿ ಒಬ್ಬ ಅವನಿಗೆ ನಿನ್ನ ಉಳಿಸುವುದಕ್ಕೆˌನಾವು ಸರ್ವಪ್ರಯತ್ನ ಮಾಡುತ್ತೇವೆ ಎಂದಾಗˌಇಲ್ಲ ನಾನು ಬದುಕುವುದಕ್ಕಿಂತ ಬಲಿದಾನ ಮಾಡುವುದೆ ಒಳ್ಳೆಯದುˌ  ಮತ್ತೋಬ್ಬ ಸೇಡು ತೀರಿಸಿಕೊಳ್ಳುವುದಕ್ಕೆ 21ವರ್ಷಕಾದˌ ಇನ್ನೊಬ್ಬ 18ಕ್ಕೆ ಬಲಿದಾನಿಯಾದˌ ಮಗದೊಬ್ಬ ಬಾಲ್ಯದಲ್ಲಿ ಮಾಡಿದ ಪ್ರತಿಜ್ಞೆಯ ಸಲುವಾಗಿˌತನಗೆ ತಾನೆ ಗುಂಡು ಹೊಡೆದುಕೊಂಡು ಹುತಾತ್ಮನಾದˌಆದರೆ ನಾವು ಯೋಚನೆ ಮಾಡುತ್ತೇವೆ ಇವರನ್ನ ನೆನಪು ಮಾಡಿಕೊಳ್ಳಲು ಅಗಸ್ಟ್ 15 ಬರಬೇಕು ಅಂತ.

Category:HistoryProfileImg

Written by Muruli Aldur