ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ಮೇ 22 ರಿಂದ ಪ್ರಾರಂಭವಾಗುವ 4 ಪಂದ್ಯಗಳ ಟಿ 20 ಐ ಸರಣಿಯಲ್ಲಿ ಪಾಕಿಸ್ತಾನವು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಬಾಬರ್ ಅಜಮ್ ಹೆಚ್ಚು ಆಟದತ್ತ ಗಮನ ಹರಿಸಲಿದ್ದಾರೆ. ಎಡ್ಜ್ ಬಸ್ಟನ್, ಸೋಫಿಯಾ ಗಾರ್ಡನ್ಸ್ ಮತ್ತು ಕೆನ್ನಿಂಗ್ಟನ್ ಓವಲ್ ಕ್ರಮವಾಗಿ ಮೇ 25, 28 ಮತ್ತು 30 ರಂದು ಇತರ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.
ಪಾಕಿಸ್ತಾನ ಪರ ಅತಿ ಹೆಚ್ಚು ರನ್ ಗಳಿಸಿರುವ ಬಾಬರ್, ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಆಡುವ ಮುನ್ನ ಫಾರ್ಮ್ ನಲ್ಲೇ ಉಳಿಯಲು ಬಯಸಿದ್ದಾರೆ. ಇತ್ತೀಚೆಗೆ, ಅವರು ಉಗಾಂಡಾದ ಬ್ರಿಯಾನ್ ಮಸಾಬಾ ಅವರನ್ನು ಹಿಂದಿಕ್ಕಿದ ನಂತರ ಟಿ 20 ಪಂದ್ಯಗಳಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಟಿ20ಐನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು (38) ಗಳಿಸಿದ ಆಟಗಾರನಾಗಿದ್ದು, ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.
ಪಾಕಿಸ್ತಾನ ಇತ್ತೀಚೆಗೆ ಐರ್ಲೆಂಡ್ ತಂಡವನ್ನು 3 ಪಂದ್ಯಗಳ ಟಿ 20 ಐ ಸರಣಿಯನ್ನು 2-1 ಅಂತರದಿಂದ ಸೋಲಿಸುವಲ್ಲಿ ಬಾಬರ್ ನಿರ್ಣಾಯಕ ಪಾತ್ರ ವಹಿಸಿದ್ದರು. ಅವರು ಎರಡನೇ ಪಂದ್ಯದಲ್ಲಿ ಡಕ್ ಪಡೆದರೂ, ಅವರು ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ಜಂಟಿಯಾಗಿ ಅತಿ ಹೆಚ್ಚು ರನ್ ಗಳಿಸಿದವರಾಗಿ ಸರಣಿಯನ್ನು ಮುಗಿಸಿದರು. ಬಾಬರ್ 44ರ ಸರಾಸರಿಯಲ್ಲಿ 132 ರನ್ ಗಳಿಸಿದ್ದು, 148.31ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಸೋಲಿಸಬೇಕಾದರೆ, ಬ್ಯಾಟ್ ನೊಂದಿಗೆ ಬಾಬರ್ ಅವರ ಫಾರ್ಮ್ ಸಾಕಷ್ಟು ಮಹತ್ವವನ್ನು ಹೊಂದಿರುತ್ತದೆ. 117 ಪಂದ್ಯಗಳಿಂದ 3955 ರನ್ ಗಳಿಸಿರುವ ಅನುಭವಿ ಆಟಗಾರ ಪಾಕಿಸ್ತಾನ ಪರ ಚುಟುಕು ಕ್ರಿಕೆಟ್ ನಲ್ಲಿ ಮಿಂಚಿದ್ದಾರೆ.
ಟಿ20 ಕ್ರಿಕೆಟ್ ನಲ್ಲಿ 4000 ರನ್ ಪೂರೈಸಿದ ಮೂರನೇ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಬಾಬರ್ ಅಝಾಮ್ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸುಜಿ ಬೇಟ್ಸ್ ಈ ಸಾಧನೆ ಮಾಡಿದ ಇತರ ಬ್ಯಾಟ್ಸ್‌ಮನ್ ಗಳು.
ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಲು ಬಾಬರ್ ಅಜಮ್ಗೆ 20 ರನ್ ಗಳ ಅಗತ್ಯವಿದೆ. ರೋಹಿತ್ 151 ಪಂದ್ಯಗಳಿಂದ 3974 ರನ್ ಗಳಿಸಿದ್ದಾರೆ.
ಪುರುಷರ ಟಿ 20 ಪಂದ್ಯಗಳಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಬಾಬರ್ ಅಜಮ್ ಗೆ 83 ರನ್‌ಗಳ ಅಗತ್ಯವಿದೆ. ಕೊಹ್ಲಿ 117 ಪಂದ್ಯಗಳಿಂದ 4037 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಬಾಬರ್ ಅಜಮ್ ಗೆ 48 ರನ್‌ಗಳ ಅಗತ್ಯವಿದೆ. ವಿರಾಟ್ ಕೊಹ್ಲಿ 20 ಪಂದ್ಯಗಳಿಂದ 639 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ನೆಲದಲ್ಲಿ ಟಿ20ಐನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮ್ಯಾನ್ ಎಂಬ ಹೆಗ್ಗಳಿಕೆಗೆ ಬಾಬರ್ ಅಜಮ್ ಗೆ ಕೇವಲ 95 ರನ್‌ಗಳ ಅಗತ್ಯವಿದೆ. ಆಸ್ಟ್ರೇಲಿಯಾದ ಆರೋನ್ ಫಿಂಚ್ 6 ಪಂದ್ಯಗಳಿಂದ 61.66 ಸರಾಸರಿಯಲ್ಲಿ 370 ರನ್ ಗಳಿಸಿದ್ದಾರೆ.
- ಶಂಶೀರ್ ಬುಡೋಳಿ
Author, Journalist, Poet, Anchor, PhD Scholar