ತಂಜಾವೂರ್ ವರ್ಣಚಿತ್ರಗಳು: ಭಾರತದ ಪರಂಪರಾಗತ ಮರದ ಹಲಗೆ ಕಲೆ.

ProfileImg
21 Sep '23
4 min read


image

ತಂಜಾವೂರ್‌ ವರ್ಣಚಿತ್ರಗಳು ಕೇವಲ ಕಲಾಕೃತಿಯಲ್ಲ; ಇದು ಕಲಾವಿದನ ಕೌಶಲ್ಯ ಮತ್ತು ಸಾಂಪ್ರದಾಯಿಕ ದೈವತ್ವದ ಚಿತ್ರ ಕಾರಂಜಿ ತರಹದಲ್ಲಿಯ ಚಿಮ್ಮುವ ಹೊಳೆಯುವ ನೋಟ ಕೌಶಲ್ಯದಿಂದ ನಿರ್ಮಾಣವಾಗಿರುತ್ತದೆ. ಈ ಕಲಾ ಪ್ರಕಾರವು ಪವಿತ್ರ ಮತ್ತು ಅದ್ಭುತವಾಗಿದೆ. ತಂಜಾವೂರ್ ವರ್ಣಚಿತ್ರಗಳ ಮೂಲ 16 ನೇ ಶತಮಾನದಲ್ಲಿಯೇ ಚೋಳರಿಂದ ಬಂದಿರುವ ಸುಂದರವಾದ ಕಲಾಕೃತಿಗಳು ವಿಶಿಷ್ಟವಾದ ಪ್ರಾಮುಖ್ಯ ಕೊಡುಗೆ.

ಈ ಕಲಾತ್ಮಕ ಸುವರ್ಣ ವೈಭವಯುತ ಕಾಂತಿ ಇದರ ಮೂಲ ಜೇಡಿಮಣ್ಣಿನ್ನು ಬಳಸಿ ವರ್ಣಚಿತ್ರಗಳ ಉತ್ಪನ್ನಗಳ ರಚನೆ ಮನೋಹರವಾಗಿ ಚಿತ್ರಿಸುತ್ತಾರೆ. ನೈತಿಕ ಕಲಾಕೃತಿಗಳು ವಿಶಿಷ್ಟ ಮತ್ತು ಪ್ರಾಮುಖ್ಯ ಆಕರ್ಷಣೆ. ತಂಜಾವೂರ್‌ ಎಂಬ ಪದ ತಮಿಳುನಾಡಿನ ದೇವಾಲಯದಲ್ಲಿನ ಪಟ್ಟಣವಾಗಿದ್ದು ಕರಕುಶಲತೆ ಇಂದ ನಿರ್ಮಾಣವಾಗಿದೆ. ಕಲಾವಿದನ ಈ ಕಲಾ ಪ್ರಕಾರವು ಪವಿತ್ರ, ಸಮರ್ಪಿತ, ಮತ್ತು ಅದ್ಭುತ. ಇದು ಒಂದು ರೀತಿಯ ಕಲೆಯಾಗಿದ್ದು, ಅಲಂಕೃತದ ವಿಶಿಷ್ಟ ರೂಪ ಕಂಡ ಕ್ಷಣ ಸಂತೋಷ ನೀಡುತ್ತದೆ.

ಈ ವರ್ಣ ಚಿತ್ರಕಲೆಯಲ್ಲಿ ಆಕೃತಿಗೆ ಜೀವ ತುಂಬಲು 24 ಕ್ಯಾರೆಟ್ ಶುದ್ಧ ಚಿನ್ನದ ಹಾಳೆಗಳನ್ನು ಬಳಸಲಾಗುತ್ತದೆ. ಮತ್ತು ಕೆಲವೊಮ್ಮೆ ಶುದ್ಧ ಚಿನ್ನದ ಹಾಲು ಅಥವಾ ಚಿನ್ನದ ಪುಡಿಯನ್ನು ಸಹ ಬಳಸುತ್ತಾರೆ. ಇದಕ್ಕೆ ಶುದ್ಧ ಚಿನ್ನದ ಬಳಕೆ ಮಾಡುವುದರಿಂದ ಭವ್ಯವಾಗಿ ಪೇಂಟಿಂಗ್ ದೃಶ್ಯಾವಳಿಗಳ ಹಾಗೆ ಕಾಣಿಸುವುದು ಮತ್ತು ಚಿನ್ನವನ್ನು ಹೆಚ್ಚು ಬಳಸುವುದರಿಂದ, 80 -100 ವರ್ಷಗಳ ತನಕವೂ ಬಾಳಿಕೆ ಬರುತ್ತದೆ, 100 ವರ್ಷಗಳ ತನಕವೂ ಬಾಳಿಕೆ ಬರುತ್ತದೆ, ಕಾರಣ ಶುದ್ಧ ಚಿನ್ನವು ಎಂದಿಗೂ ಮರೆಯಾಗುವುದಿಲ್ಲ.

ಇದರಲ್ಲಿಅಲಂಕಾರಿಕ ವಸ್ತುಗಳು ಮುತ್ತು, ವಜ್ರ, ಮಾಣಿಕ್ಯ ಮತ್ತು ನೀಲಮಣಿಗಳು ಅಂತಹ ಅಮೂಲ್ಯ ಹರಳಿನ ಜೊತೆಯಲ್ಲಿ ಅಲಂಕಾರಿಕವಾಗಿ ಉಪಯೋಗಿಸುತ್ತಾರೆ. ಗಮನಾರ್ಹ, ಮತ್ತು ಇದೆಲ್ಲದರ ನಡುವೆ ನೈಸರ್ಗಿಕವಾದ ತರಕಾರಿಗಳಿಂದ ತಯಾರಿಸುವ ಬಣ್ಣಗಳ ಬಳಕೆಯಿಂದಾಗಿ, ರೋಮಾಂಚಕಾರಿ ಕಣ್ಸೆಳೆಯುತ್ತದೆ.

ಇದು 6 ಇಂಚುಗಳಷ್ಟು ಚೌಕಗಳು ಹೊಂದಿದ್ದು ನಾವು ಪ್ರಮುಖವಾಗಿ ಕಾರ್ಪೊರೇಟ್ ಕಚೇರಿ, ಮುಖ ಮಂಟಪ, ಹೋಟೆಲ್ ಗಳ ಪ್ರವೇಶ ದ್ವಾರಗಳಲ್ಲಿ ಮತ್ತು ಮನೆಯ ಪೂಜಾ ಕೊಠಡಿಗಳಲ್ಲಿ ಅಲಂಕರಿಸಿವುದನ್ನು ನೋಡಬಹುದು. ಸಾಂಪ್ರದಾಯಿಕವಾದ ತಂಜಾವೂರ್‌ ವರ್ಣಚಿತ್ರಗಳ ಹೆಚ್ಚಿನ ವಿಷಯವು ದೇವರು ಮತ್ತು ದೇವತೆಗಳ ಚಿತ್ರ ಅದರಲ್ಲಿ ಚಿನ್ನದ ಆಭರಣಗಳ ಮೇಲೆ ಹೆಚ್ಚು ಸುಂದರವಾಗಿ ಆಕರ್ಷಕವಾಗಿ ಗಮನ ಸೆಳೆಯುವುದು. ಇವು ಅಲಂಕೃತವಾಗಿ ಜನರಿಗೆ ಹೆಚ್ಚು ಧರ್ಮದೊಂದಿಗೆ ಬೇರೂರಿದೆ.

ಪರಿಣಾಮವಾಗಿ ಇದರಲ್ಲಿನ ಪೌರಾಣಿಕಯುಕ್ತ ಪೂಜಿಸುವ ಹೆಚ್ಚಾಗಿ ಭಗವಾನ್ ಶ್ರೀ ಕೃಷ್ಣನ ವಿವಿಧ ಭಂಗಿಯಲ್ಲಿ ಚಿತ್ರಿಸಿರುವ ವರ್ಣಚಿತ್ರಗಳು ಕಣ್ಸೆಳೆಯುತ್ತದೆ. ಭಗವಾನ್ ಶ್ರೀ ಕೃಷ್ಣನ ಜೀವನದ ವಿವಿಧ ಹಂತಗಳು ಅತ್ಯಂತ ಹೆಚ್ಚು ಬಾರಿ ಚಿತ್ರಿಸಲಾಗಿದೆ. ಈ ವರ್ಣಚಿತ್ರಗಳಲ್ಲಿ ರತ್ನಾಭರಣಗಳ ಅಲಂಕೃತವಾಗಿ ಚಿನ್ನದ ಲೇಪನ ಹೊಸ ರೂಪ ಪಡೆದಿದೆ, ವರ್ಣಚಿತ್ರಗಳು. ಹೆಚ್ಚು ಗಮನ ಸೆಳೆಯುತ್ತಿದೆ.

ಅತ್ಯಂತ ಪ್ರಸಿದ್ಧಿ ಪಡೆದಿರುವ ಮತ್ತು ವಿಭಿನ್ನತೆಯ ಹೆಚ್ಚು ಮೆಚ್ಚುಗೆ ಪಡೆದಿರುವ ವರ್ಣಚಿತ್ರಗಳು ಭಗವಾನ್ ಶ್ರೀ ಕೃಷ್ಣನದು ತನ್ನ ವಿವಿಧ ರೂಪಗಳು ಭಗವಾನ್ ಮಹಾ ವಿಷ್ಣುವಿನ ರೂಪ ಹೊಂದುವುದರ ಜೊತೆಯಲ್ಲಿ ವಿಶ್ವದಲ್ಲಿ ನೀರಿನಿಂದ ಆಗು, ಹೋಗಿರುವ ವಿನಾಶದ ಬಗೆಗಿನ ಮತ್ತು ನೀರಿನಲ್ಲಿ ಮೇಲ್ಮೈ ಅರಳಿ ಮರ, ಮತ್ತು ಹಲಸಿನ ಮರದ ಎಲೆಯ ಮೇಲೆ ಮಗುವಾಗಿ ಶ್ರೀ ಕೃಷ್ಣನು ಮಲಗಿ ಇರುವಂತೆ, ತೇಲುವಂತಹ ಚಿತ್ರ ಹಾಗೂ ಇನ್ನಿತರ ಚಿತ್ರಗಳು ಸಹ ಲಭ್ಯ.

ಇನ್ನೂ ಜನಪ್ರಿಯ ಸುಂದರವಾದ ವರ್ಣಚಿತ್ರಗಳ ವಿಷಯಗಳೆಂದರೆ ಭಗವಾನ್ ರಾಮ, ಮಹಾ ವಿಷ್ಣುವಿನ ಕಿರೀಟಗಳು, ಸಹಸ್ರಾರು ಸರ್ಪದ ಮೇಲೆ ಮಲಗಿರುವ ಶ್ರೀ ಆನಂತ ಪದ್ಮನಾಭ ಸ್ವಾಮಿ, ರಾಧಾ ಕೃಷ್ಣ ಮತ್ತು ಶ್ರೀಕೃಷ್ಣನು ಕೊಳಲು ನುಡಿಸುವಂತಹ ಕುತೂಹಲಕಾರಿ ಚಿತ್ರ ಗಮನ ಸೆಳೆಯುತ್ತಿದೆ. ಆಧುನಿಕ ಯುಗದಲ್ಲಿ ಕಲಾವಿದರು ಶ್ರೀ ಗಣೇಶನ ವಿವಿಧ ಭಂಗಿಗಳು ಮತ್ತು ಆಸಕ್ತಿಯುಳ್ಳ ಇತರೆ ವಿಷಯಗಳು ಸೇರಿಸುವ ಮೂಲಕ ತಂಜಾವೂರಿನ ವರ್ಣಚಿತ್ರಗಳ ಸಂಗ್ರಹಗಳು ಉದ್ಯಮಶೀಲವಾಗಿ ಬೆಳೆದಿದೆ. ಇನ್ನೂ ಕೆಲವು ಕಲಾವಿದರು ಪ್ರಾಣಿಗಳ, ಪಕ್ಷಿಗಳ, ಕಟ್ಟಡದ ರಚನೆಗಳನ್ನು ಮತ್ತು ಇತರೆ ವಿಷಯದಲ್ಲಿ ಪ್ರಯೋಗವು ಸಹ ಒಳಗೊಂಡಿದೆ.

ಇತಿಹಾಸದ ಪರಂಪರೆ

ತಂಜಾವೂರ್‌ ವರ್ಣಚಿತ್ರಗಳು ಅತ್ಯಂತ ಪುರಾತನವಾದುದು ಶ್ರೀಮಂತರ ಪರಂಪರೆಯಲ್ಲಿ ಹೆಚ್ಚುಆಕರ್ಷಕವಾಗಿದೆ,ಇದು16 ರಿಂದ18 ನೇ ಶತಮಾನಕ್ಕೂ ಹಿಂದಿನದು ಎಂದು ಹೇಳಲಾಗುತ್ತಿದೆ. ಈ ಶೈಲಿಯ ವರ್ಣಚಿತ್ರಗಳು ಸ್ಪೂರ್ತಿದಾಯಕ ಮೂಲ ಪುರಾಣಗಳನ್ನು ಕಾಣಬಹುದು ಹಾಗೂ ದಕ್ಷಿಣ ತಮಿಳುನಾಡಿನ ಜನರು ಕಳೆದ 2 ಶತಮಾನಗಳಿಂದ ಚೋಳರ ಶೈಲಿಯಲ್ಲಿ ಹೆಚ್ಚಿನವರು ಅನುಸರಿಸುತ್ತಿದ್ದು, ಭವ್ಯವಾದ ದೇವಾಲಯ ನಿರ್ಮಾಣದ ಒಳಗೊಂಡಂತೆ ವಿಶಿಷ್ಟವಾಗಿ ಈ ಕಲೆಯು ಹೆಚ್ಚು ವಿಶೇಷ ಎನ್ನಿಸಿದೆ. ವಿವಿಧ ಸುಂದರ ಅಲಂಕೃತವಾದ ಕಲಾಕೃತಿಗಳ ಕೆಲಸವೂ ವಿಜಯನಗರದ ರಾಜ ವಂಶಸ್ಥರ ಬಳುವಳಿ ತಂಜಾವೂರಿನಲ್ಲಿ ರಾಜುಸ್ ಸಮುದಾಯದವರು ಮರಾಠ ರಾಜಕುಮಾರ ನಾಯಕ್ ಮತ್ತು ಮಧುರೈನ ನಾಯ್ಡು ಅವರಿಂದ ಬಂದಿರುವುದು ಎಂದು ತಿಳಿದು ಬರುತ್ತದೆ.

18 ನೇ ಶತಮಾನದಲ್ಲಿ ತಂಜಾವೂರ್‌ ಸುಂದರ ವರ್ಣಚಿತ್ರಗಳನ್ನು ಕಲೆಯೆಂದು ಘೋಷಿಸಿದ್ದು. ಇಂದು ಸಂಪ್ರದಾಯಿಕವಾಗಿ ಶೈಲಿಯಲ್ಲಿ ವರ್ಣಚಿತ್ರಗಳು ಆಳವಾಗಿ ಬೇರೂರಿದೆ ಮತ್ತು ಐತಿಹಾಸಿಕ ತಂಜಾವೂರಿನ ಚಿನ್ನದ ಕಲಾಕೃತಿಗಳು ಇಂದಿಗೂ ಹೊಸತನವನ್ನು ಪಡೆದಿದೆ ಎಂದು ಹೇಳಬಹುದು. ಇದು ಮೊದಲು ಹುಟ್ಟಿದ್ದು, ಚೆನ್ನೈನಿಂದ ಸುಮಾರು 300 ಕಿಲೋಮೀಟರ್ ದೂರದ ತಂಜಾವೂರಿನಲ್ಲಿ, ಮತ್ತು ಅಂದಿನ ಗುಪ್ತ ಸಾಮ್ರಾಜ್ಯದ ಅವಧಿಗೆ ರಾಜಧಾನಿಯಲ್ಲಿ ಈ ಕಲೆಯ ಸಾಂಸ್ಕೃತಿಕ ಕ್ರಾಂತಿ ಅತಿ ಎತ್ತರದ ಸ್ಥಾನವನ್ನು ಸಾಧಿಸಿತ್ತು.

ಅದ್ದೂರಿ ಶ್ರೀಮಂತಿಕೆ

ತಂಜಾವೂರ್‌ ವರ್ಣಚಿತ್ರಗಳ ಕಲ್ಪನೆಯು ಬಗ್ಗೆ ಸಾಮಾನ್ಯವಾಗಿದ್ದು ಮರದ ,(ಹಲಸು ಅಥವಾ ತೇಗದಮರ) ಹಲಗೆಯಿಂದ ಅದರ ಮೇಲೆ ಬಟ್ಟೆಯ ಪದರವನ್ನು ಇಟ್ಟು ಸುಣ್ಣದ ಪೇಸ್ಟ್ ಇಂದ ಲೇಪಿಸಲಾಗುತ್ತದೆ. ನಯವಾಗಿ ಮತ್ತು ನೆಲಸಮ ಮಾಡಲಾಗುವುದು, ಬಳಿಕವಷ್ಟೇ ನಿರ್ಧರಿಸಿದ ವರ್ಣಚಿತ್ರಗಳ ಸಿದ್ಧತೆ. ತಂಜಾವೂರಿನ ಮೂಲ ವರ್ಣಚಿತ್ರಗಳನ್ನು ಗಾಜು, ಮರ, ರೇಷ್ಮೆ ಮತ್ತು ದಂತವನ್ನು ಆಧಾರವಾಗಿಟ್ಟುಕೊಂಡು ಬಳಸುತ್ತಿದ್ದರು. ಆದರೆ ಕಾಲ ಬದಲಾದಂತೆ ಇಂದು ಹೆಚ್ಚು ಕಲಾವಿದರು ಕೆಲವೊಂದು ಉಪಯೋಗಿಸುತ್ತಿಲ್ಲ ಗಾಜು ಮತ್ತು ಮರದ ಮೇಲಿನ ಭಾಗವನ್ನ ಮಾತ್ರ ಅವಲಂಬಿಸಿದ್ದಾರೆ.

ಮೊದಲ ಮತ್ತು ಮುಖ್ಯವಾದ ಹಂತವೆಂದರೆ ಪೇಂಟಿಂಗ್‌ಗಳಿಗೆ ಹಲಗೆಯ ತಯಾರಿಕೆ, ಬಿಳುಪುಗೊಳಿಸದೇ ಬಟ್ಟೆಯ ಮೇಲೆ ಸೀಮೆ ಸುಣ್ಣದ ಪುಡಿಯಿಂದ ಸಂಸ್ಕರಿಸಿ ಮರದ ಹಲಗೆಯಲ್ಲಿ ಸರಿಪಡಿಸಲಾಗುತ್ತದೆ. ಆ ಬಳಿಕ ಸರಿಯಾಗಿ ರೇಖಾಚಿತ್ರವನ್ನು ಸಂಸ್ಕರಿಸಿ ಬೋರ್ಡ್‌ನಲ್ಲಿ ಗುರುತಿಸಲಾಗುವುದು.

ಈ ಹಂತಗಳನ್ನು ಆಲಂಕಾರಿಕ ವಾಗಿ ಅಮೂಲ್ಯವಾದ ಹರಳುಗಳು ಮತ್ತು ಗಾಜುಗಳನ್ನು ಸೇರಿಸುತ್ತಾರೆ. ಹೂಮಾಲೆ ಆಭರಣಗಳ ತಯಾರಿಕೆಯಲ್ಲಿ ಇತ್ಯಾದಿಗಳನ್ನು ರೂಪಿಸಲು ತುಂಡುಗಳು ಅಂಟಿಕೊಂಡಿರುತ್ತದೆ. ಬಳಿಕ ಹೊರಭಾಗದ ರೇಖೆಯ ಸುತ್ತಲು ಸೀಮೆ ಸುಣ್ಣದ ಪುಡಿಯನ್ನು ಹಾಕಿ ಚಿತ್ರವನ್ನು ಮತ್ತು ಅರೇಬಿಕಾದ ಅಂಟಿನ ಜತೆ ಸೇರಿಸಿ ಮೂರು ಪದರಗಳಲ್ಲಿ ಚಿತ್ರಿಸಲಾಗುವುದು. ತಂಜಾವೂರ್‌ ವರ್ಣಚಿತ್ರಕ್ಕೆ ಹಂತ ಹಂತವಾಗಿ ಪೂರ್ಣಗೊಳ್ಳಲು 3 ರಿಂದ 4 ವಾರಗಳನ್ನು ತೆಗೆದುಕೊಳ್ಳಬಹುದು ಮತ್ತು ದೊಡ್ಡ ಗಾತ್ರದ ವರ್ಣಚಿತ್ರಗಳು ಕೆಲವೊಮ್ಮೆ ತಿಂಗಳುಗಳವರೆಗೆ ಸಮಯ ಬೇಕಾಗುತ್ತದೆ, ಎಂದು ಕಲಾವಿದರ ಹೇಳಿಕೆ.

ಈ ಎಲ್ಲ ವಿವರಣೆ ವರ್ಣಚಿತ್ರಗಳಲ್ಲಿ ಕಲಾವಿದನು ಮಾಡುವ ಅಲಂಕಾರಿಕ ಆಧಾರಿತವಾಗಿದ್ದು ತಾಳ್ಮೆಯ ಪ್ರದರ್ಶನವು ಅಗತ್ಯವಿದೆ. ಇದರಲ್ಲಿ ಚಿನ್ನದ ಹಾಳೆಗಳ ಬಳಕೆಯಿಂದ ವರ್ಣಚಿತ್ರಗಳ ಅದ್ದೂರಿ ಶ್ರೀಮಂತಿಕೆಯ ವೈಭವ ಮೆರಗು ಹೆಚ್ಚಿಸುತ್ತದೆ. ಅದುವೇ ತಂಜಾವೂರ್ ವರ್ಣಚಿತ್ರಗಳ ಶೈಲಿಯ ಹೆಗ್ಗಳಿಕೆ. ಇದರಲ್ಲಿನ ಬಳಸಿರುವ ಚಿನ್ನದ ಎಲೆಗಳ ಹೊಳೆಯುವಂತೆ ಶಾಶ್ವತವಾಗಿ ಉಳಿಯುವಂತೆ ಮಾಡುವುದು.

ಸಾಂಪ್ರದಾಯಿಕವಾಗಿ ಪ್ರತಿಮೆಗಳ ವರ್ಣಚಿತ್ರದ ನಿರ್ವಹಣೆಯ ಅತ್ಯಂತ ಕಾಳಜಿಯನ್ನು ತೆಗೆದುಕೊಳ್ಳಲಾಗುವುದು. ಸಾಮಾನ್ಯವಾಗಿ ಆಭರಣಗಳೊಂದಿಗೆ ಹೆಚ್ಚು ಅಲಂಕರಿಸಲಾಗುತ್ತದೆ. ಚಿತ್ರಕಲೆಯ ಸೌಂದರ್ಯವನ್ನು ಸಾರಿ ಹೇಳಲು ಮರದ ಉತ್ತಮ ಚೌಕಟ್ಟನ್ನು, ಆಯ್ಕೆ ಮಾಡಲಾಗುತ್ತದೆ.

ನಶಿಸಿತ್ತಿರುವ ಕಲೆಗಳು

ಇಂದು ಅಳಿವಿನಂಚಿನಲ್ಲಿರುವ ಈ ಕಲೆ ಪುನರುಜ್ಜೀವನದ ಹಾದಿಯ ಹೊಸ ಪ್ರಯತ್ನ, ಈ ಕಲಾ ಪ್ರಕಾರದಲ್ಲಿ ಪರಿಣತಿ ಪಡೆದ ಕಲಾವಿದರು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕೆ ಬಹುಮುಖ್ಯವಾಗಿ ಶತಮಾನಗಳಿಂದ ಸುಲಭವಾಗಿ ಸಿಗುವ ಬಳಸುತ್ತಿದ್ದ ವಸ್ತು, ಸೀಮೆಸುಣ್ಣದ ಪುಡಿ ಮತ್ತು ಅಂಟುಗಳು ಬದಲಾಯಿಸಿದ್ದಾರೆ.

ಆಧುನಿಕ ಯುಗದ ಕಲಾವಿದರು ಈ ಕಲಾ ಪ್ರಕಾರ ರೋಮಾಂಚಕ ಮತ್ತು ಜೀವಂತಿಕೆವಾಗಿರಲು ಈ ಕಲೆಯನ್ನು ನಶಿಸದಂತೆ ತಡೆಯಲು ಚಿತ್ರಿಸಿರುವ ತಂಜಾವೂರಿನ ವರ್ಣಚಿತ್ರಗಳನ್ನು ಬಹಳ ಎಚ್ಚರಿಕೆಯಿಂದ ಸಂರಕ್ಷಿಸುತ್ತಿದ್ದಾರೆ. ಅದ್ಭುತವಾದ ತಂಜಾವೂರ್ ವರ್ಣಚಿತ್ರವನ್ನು ರಚಿಸಲು ಅಗತ್ಯವಾದ ಕೌಶಲ್ಯಗಳನ್ನು ಒಂದು ಪೀಳಿಗೆಯಿಂದಮುಂದಿನ ಪೀಳಿಗೆಗೆ ರವಾನಿಸಲಾಗುತ್ತದೆ. ಕೆಲವೊಂದು ರಹಸ್ಯಗಳು ಇದೆ.

ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಕಾರ ತಂಜಾವೂರಿನ ಈ ಕಲೆಗಾರಿಕೆಯ ಪ್ರತಿಯೊಂದು ವರ್ಣಚಿತ್ರಗಳಲ್ಲಿ ಆಳವಾಗಿ ಆಧ್ಯಾತ್ಮಿಕ ಶಕ್ತಿಯ ಅರಿವಿನ ಭಾವನೆ ಹೊಂದಿದೆ ಎಂಬುದು ಗಮನಾರ್ಹ ಬೆಳವಣಿಗೆ.ಇದು ಭಾರತದಾದ್ಯಂತ ಬಹು ಬೇಡಿಕೆಯುಳ್ಳ ಕಲೆ. ಇಂದು ಪ್ರಾಚೀನತೆಯ ಕಲಾ ಪ್ರಕಾರವನ್ನು ಜೀವಂತವಾಗಿ ಇಡಲು ಕಠಿಣ ಪರಿಶ್ರಮದ ಅಗತ್ಯವಿದೆ. ಸುಂದರ, ಶಾಶ್ವತ ವರ್ಣಚಿತ್ರ ಗಳು ಜ್ಞಾನದ ರಹಸ್ಯಗಳಿಗೆ ಸೇರಿದ್ದು. ತಂಜಾವೂರ್ ವರ್ಣಚಿತ್ರಗಳ ಸಾಮ್ರಾಜ್ಯ ಎನ್ನಿಸಿದೆ. ಇನ್ನೂ 2007-2008 ರಲ್ಲಿ, ಭಾರತ ಸರ್ಕಾರ ತಂಜಾವೂರ್ ಚಿತ್ರಕಲೆಯನ್ನು ಭೌಗೋಳಿಕದ ಸೂಚನೆ ಎಂದು ಹೇಳಿದೆ.

ಇಂದು ಆನ್ ಲೈನ್ ಮಾರುಕಟ್ಟೆ ಭರಾಟೆಯ ನಡುವೆ ಕೆಲವು ಬಾರಿ ತಂಜಾವೂರ್ ವರ್ಣಚಿತ್ರಗಳು ನಕಲಿಯಾಗಿರಬಹುದು, ಎಂದು ಸಂಶೋದಕರು ಎಚ್ಚರಿಸಿದ್ದಾರೆ. ಸಿಂಥೆಟಿಕ್ ಗೋಲ್ಡ್ ಮತ್ತು ಪ್ಲಾಸ್ಟಿಕ್ ಕಲ್ಲುಗಳನ್ನು ಬಳಸಿ ವರ್ಣಚಿತ್ರಗಳು ಲಗ್ಗೆಇಟ್ಟಿದೆ.

ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಮನಾಥನ್‌ ಎಂಬ ಸಂಶೋಧಕರು, ಚಿತ್ರಕಲೆಗೆ ಹಾನಿಯಾಗದಂತೆ ಚಿನ್ನದ ಅಂಶವನ್ನು ವಿಶ್ಲೇಷಿಸಲು ನಿಖರತೆಯ ವಿಧಾನ ಸ್ಪೆಕ್ಟ್ರೋಸ್ಕೋಪಿಯ ಮಾರ್ಗವನ್ನು ಸಂಶೋಧನೆ ಮಾಡಿದ್ದಾರೆ. ನೀವು ಕಲಾಕೃತಿಗಳು ತೆಗೆದುಕೊಳ್ಳುವ ಮುನ್ನ ದೃಢೀಕರಣದ ಪ್ರಮಾಣಪತ್ರದೊಂದಿಗೆ ತಂಜಾವೂರ್ ವರ್ಣಚಿತ್ರಗಳನ್ನು ಖರೀದಿಸಿ.

Category:History



ProfileImg

Written by Sushma C Raykar