ಕ್ರಾಂತಿಕಾರಿಗಳ ಪ್ರೇರಣಾಶಕ್ತಿ

ಸ್ವತಂತ್ರ ಸಂಗ್ರಾಮದ ಯುವಶಕ್ತಿ

ProfileImg
26 Mar '24
4 min read


image
ಜಲಿಯಾನ್ ವಾಲಾಬಾಗ್ ಹತ್ಯಾಕಾಂಡ
ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ್

ಹುತಾತ್ಮರ ದಿನ ಪ್ರತಿ ವರ್ಷ ಮಾರ್ಚ್ 23 ರಂದು ಆಚರಿಸಲಾಗುತ್ತದೆ. ಭಾರತವನ್ನು ಸ್ವತಂತ್ರಗೊಳಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ನೆನಪಿಗಾಗಿ ದೇಶಾದ್ಯಂತ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.

ಭಾರತದ ಇತಿಹಾಸದ ಚರಿತ್ರೆಯಲ್ಲಿ ಇನ್ನೂ ಅಚ್ಚಯಳಿದೇ ಉಳಿದಿರುವ ನಾಯಕ ಅಂದರೆ ಅದು ಭಗತ್ ಸಿಂಗ್ ಮಾತ್ರ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಭಗತ್ ಸಿಂಗ್, ರಾಜಗುರು, ಸುಖದೇವ್ ಹೆಸರುಗಳು ಇನ್ನೂ ಭಾರತೀಯರ ಹೃದಯದಲ್ಲಿ ಇರುವುದನ್ನು ನಾವು ಈಗಲೂ ಕಾಣುತ್ತೇವೆ. ಅದರಲ್ಲೂ ಮುಖ್ಯವಾಗಿ ಭಗತ್ ಸಿಂಗ್ ಹೆಸರು ಭಾರತದ ಹಲವು ಹಳ್ಳಿಗಳ ರಸ್ತೆಗಳಿಗೆ, ನಗರಗಳಿಗೆ ಅವರ ಹೆಸರನ್ನು ಇಟ್ಟಿರುವುದು ನಾವು ಕಾಣುತ್ತೇವೆ.

 ಲಕ್ಷಾಂತರ ಕ್ರಾಂತಿಕಾರಿಗಳನ್ನು ರಾಷ್ಟ್ರಕಾರ್ಯಕ್ಕಾಗಿ ಸಜ್ಜುಗೊಳಿಸಿದವರು ಭಗತ್ ಸಿಂಗ್ ರಾಜಗುರು, ಸುಖದೇವ್ ಮತ್ತು ಚಂದ್ರಶೇಖರ ಅಜಾದ್ ಹೆಸರುಗಳು ಕೇಳಿ ಬರುತ್ತದೆ. ಪಂಜಾಬಿನ ಸಣ್ಣ ಹಳ್ಳಿಯ ಭಗತ್ ಪ್ರೇರಣೆ ಪಡೆಯಲು ಸಾಕಷ್ಟು ಸಂಗತಿಗಳಿದ್ದವು. ಬ್ರಿಟಿಷರ ವಿರುದ್ದ ಹೋರಾಟ ಗಡಿಪಾರಾದ ಚಿಕ್ಕಪ್ಪ ಅಜಿತ್ ಸಿಂಗ್, ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಬ್ರಿಟಿಷರ ವಿರುದ್ದ ತೊಡೆತಟ್ಟಿದ್ದ ಗದರ್ ಕ್ರಾಂತಿಕಾರಿಗಳು, ಕೊನೆಗೆ ಸೋತಂತೆನಿಸಿದ ಗಾಂಧಿಯ ಅಹಿಂಸಾತ್ಮಕ ಚಳುವಳಿಗಳು ಇವೆಲ್ಲಗಳಿಂದಲೂ ಪ್ರೇರಣೆ ಪಡೆದ ಆತ ಹಿರಿಯರು ಹಾಕಿಕೊಟ್ಟ ಇದೇ ಕ್ರಾಂತಿಕಾರ್ಯದ ದಾರಿಯಲ್ಲಿ ಹೆಜ್ಜೆ ಹಾಕುತ್ತ ರಾಷ್ಟ್ರಕ್ಕಾಗಿ ಪ್ರಾಣಗೈದರು...!

ಸಂಸತ್ತಿನಲ್ಲಿ ಏನಾಯಿತು ? : 1929 ಏಪ್ರಿಲ್ 8 ರಂದು ಭಗತ್ ಮತ್ತು ಬಟುಕೇಶ್ವರ ದತ್ತರು ಸಂಸತ್ತಿನ ವೀಕ್ಷಕರ ಆಸನದಲ್ಲಿ ಕುಳಿತಿದ್ದರು. ಅಧಿವೇಶನದಲ್ಲಿ ಭಾಷಣ ನಡೆಯುತ್ತಿದ್ದಂತೆಯೇ ಸ್ಪೀಕರ್ ಸ್ಥಾನದ ಹಿಂದಿನ ಗೋಡೆಗೆ ಗುರಿಯಿಟ್ಟು ಬಾಂಬ್ ಎಸೆದರು. ಸ್ಪೋಟದಿಂದ ಗಾಬರಿಗೊಂಡ ಬ್ರಿಟಿಷರು ಎಲ್ಲರೂ ಹೊರಗೋಡಿದರು. ಆದರೆ ಬಾಂಬ್ ದಾಳಿಯಿಂದ ಯಾವುದೇ ಸಾವು – ನೋವು ಸಂಭವಿಸಲಿಲ್ಲ. ರಿವಾಲ್ವಾರ್ ಎಸೆದು ತಪ್ಪಿಸಿಕೊಳ್ಳುವ ಯತ್ನವನ್ನೂ ಮಾಡದೇ “ಇಂಕ್ವಿಲಾಬ್ ಜಿಂದಾಬಾದ್” ಎಂದು ಕೂಗುತ್ತಲೇ ಸೆರೆಯಾದರು. ಅವರನ್ನು ಬಂಧಿಸಿ ಸೆಂಟ್ರಲ್ ಜೈಲಿನಲ್ಲಿರಿಸಲಾಯಿತು.

****

ಯುವಶಕ್ತಿಯ ಗರ್ಜನೆ : ನ್ಯಾಯಾಲಯದಲ್ಲಿ ಭಗತ್ ಮತ್ತು ಬಟುಕೇಶ್ವರ ದತ್ತರ ವಿಚಾರಣೆ ಆರಂಭವಾಯಿತು. ತನ್ನ ಪರ ತಾನೇ ವಾದಿಸಲು ಭಗತ್ ನಿರ್ಧರಿಸಿದರು. ಅವರ ವಾದ, ವಿಚಾರ ಸರಣಿ ಎಲ್ಲರನ್ನೂ ಆಕರ್ಷಿಸಿತು. ತನ್ನ ಹೋರಾಟ ಸ್ವಾತಂತ್ರ್ಯ ಸಂಗ್ರಾಮದ ಸಂಕೇತವೆಂದೂ, ಬ್ರಿಟಿಷರು ಭಾರತೀಯರ ಮೇಲೆ ಮತ್ತು ಚುನಾಯಿತ ಭಾರತೀಯ ಪ್ರತಿನಿಧಿಗಳ ಮೇಲೆ ಬ್ರಿಟಿಷರು ನಡೆಸಿದ್ದ ದಬ್ಬಾಳಿಕೆಗೆ ಪ್ರತ್ಯುತ್ತರವೆಂದೂ ಭಗತ್ ವಾದಿಸಿದ. ಅಷ್ಟೋತ್ತಿಗಾಗಲೇ ದೇಶದೆಲ್ಲೆಡೆ ವ್ಯಾಪಿಸಿ, ಭಗತ್ ಗುಣಗಾನ ನಡೆಯುತ್ತಿತ್ತು, ಅದೇ ಸಮಯಕ್ಕೆ ಭಗತ್ ಸಂಘಟನೆಯ ಸಹಚರರನ್ನು ಲಾಹೋರಿನಲ್ಲಿ ಬಂಧಿಸಿ, ಸ್ಯಾಂಡರ್ಸ್ ಕೊಲೆ ಹಾಗೂ ಕಾನೂನು ವಿರೋಧಿ ಕಾರ್ಯಾಚರಣೆಯ ಅಪಾದನೆ ಹೊರಿಸಲಾಗಿತ್ತು. ಇತ್ತ ನ್ಯಾಯಾಲಯದಲ್ಲಿ ಭಗತ್ ಸಿಂಗ್ ವಾದಗಳೆಲ್ಲ ತಿರಸ್ಕೃತಗೊಂಡು, ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು 1931ರ ಮಾರ್ಚ್ 23 ರಂದು ಗಲ್ಲಿಗೇರಿಸಬೇಕೆಂದು ತೀರ್ಪು ಬಂತು. ಸಂಗಡಿಗರ ಜತೆ ನೇಣುಗಂಬವೇರಿದ ಭಗತ್ ಲಕ್ಷಾಂತರ ಯುವಕರು ತಾಯಿನಾಡಿನ ಮುಕ್ತಿಗಾಗಿ ಹೋರಾಡಲು ಪ್ರೇರಣೆಯಾದ ಎಂದೂ ದೇಶಭಕ್ತಿಯ ಕಿಡಿಯನ್ನು ಹೊತ್ತಿಸಿದ.

ಗಲ್ಲಿಗೇರುವ ಮುನ್ನ ದಿನ : 1931ರ ಮಾರ್ಚ್ 23 ಅಂದರೆ ಗಲ್ಲಿಗೇರುವ ಹಿಂದಿನ ದಿನ ಭಗತ್ ರನ್ನು ಕಾಣಲು ವಕೀಲ ಪ್ರಾಣ್ ನಾಥ್ ಮೆಹ್ತಾ ಭಗತ್ ರನ್ನು ಕೊನೆಯದಾಗಿ ಭೇಟಿಯಾದ ಸಂದರ್ಭ. ಮೆಹ್ತಾರನ್ನು ನೋಡುತ್ತಿದ್ದಂತೆ ಭಗತ್ ಮಂದಹಾಸದೊಂದಿಗೆ ನಮಸ್ಕರಿಸುತ್ತ, “ನಾನು ಹೇಳಿದ್ದ “ದಿ ರೆವಲೂಷನರಿ ಲೆನಿನ್” ಪುಸ್ತಕ ತಂದಿದ್ದೀರಾ ?” ಎಂದು ಕೇಳಿದ. ಪುಸ್ತಕ ಕೈಗೆ ಬರುತ್ತಿದ್ದಂತೆ ಧನ್ಯವಾದ ಹೇಳಿ ಉಲ್ಲಾಸದಿಂದ ಪುಸ್ತಕ ಓದಲು ಶುರು ಮಾಡಿಯೇಬಿಟ್ಟರು..!

ನಾಳೆ ಗಲ್ಲಿಗೇರುವ ವ್ಯಕ್ತಿ ಹೀಗೆ ಇರಲು ಸಾಧ್ಯನಾ..? ಎಂದು ರೋಮಾಂಚನಗೊಂಡ ಮೆಹ್ತಾ, ದೇಶಕ್ಕೆ ಏನಾದರೂ ಸಂದೇಶವನ್ನು ನೀಡುತ್ತೀರಾ..? ಎಂದಾಗು ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ “ಸಾಮ್ರಾಜ್ಯಶಾಹಿಗೆ ಧಿಕ್ಕಾರ”, “ಕ್ರಾಂತಿಗೆ ಚಿರಾಯುವಾಗಲಿ” ಈ ಘೋಷಣೆಗಳನ್ನು ತಿಳಿಸಿ ಎಂದ. “ನಿನಗೇನಾದರೂ ಆಸೆ ಇದೆಯಾ ?’ ಎಂಬ ಮೆಹ್ತಾರ ಪ್ರಶ್ನೆಗೆ, ಹೌದು, ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆಯಿದೆ; ಮತ್ತೆ ಹುಟ್ಟಿದರೆ ಈ ದೇಶದ ಸೇವೆ ಮಾಡಬಹುದು” ಎಂದು ಉತ್ತರಿಸಿದ..!

ಗಲ್ಲಿಗೇರುವ ಮುನ್ನ ದಿನ : ಭಗತ್ ಸಿಂಗ್ ಅವರಿಗೆ ಪುಸ್ತಕ ಓದೋ ಹವ್ಯಾಸ ಜಾಸ್ತಿನೇ ಇತ್ತು. ಬ್ರಿಟಿಷರಿಂದ ಬಂಧನ ಆಗುವ ಮುಂಚೆ 300 ಕ್ಕೂ ಅಧಿಕ ಪುಸ್ತಕಗಳನ್ನು ಓದಿದ್ದರು. ನಂತರ ಜೈಲುವಾಸದಲ್ಲಿ 250ಕ್ಕೂ ಅಧಿಕ ಪುಸ್ತಕಗಳನ್ನ ಓದಿ ಅದಕ್ಕೆ ವಿಮರ್ಶೆಗಳನ್ನ ಸಹ ಬರೆಯುತ್ತಿದ್ದರು. ಆಗಿನ ಕಾಲದ ಮ್ಯಾಗಸಿನ್ಗಳಾದ “ಕೀರ್ತಿ”, “ವೀರ ಅರ್ಜುನ್”, “ಪ್ರತಾಪ್” ಎಂಬ ಪತ್ರಿಕೆಗಳಲ್ಲಿ ಇವರು ಬರೆದ ಲೇಖನಗಳು ದಿನನಿತ್ಯ ಪ್ರಕಟವಾಗುತ್ತಿತ್ತು. 

1931ರ ಮಾರ್ಚ್ 23 ಅಂದರೆ ಗಲ್ಲಿಗೇರುವ ಹಿಂದಿನ ದಿನ ಭಗತ್ ರನ್ನು ಕಾಣಲು ವಕೀಲ ಪ್ರಾಣ್ ನಾಥ್ ಮೆಹ್ತಾ ಭಗತ್ ರನ್ನು ಕೊನೆಯದಾಗಿ ಭೇಟಿಯಾದ ಸಂದರ್ಭ. ಮೆಹ್ತಾರನ್ನು ನೋಡುತ್ತಿದ್ದಂತೆ ಭಗತ್ ಮಂದಹಾಸದೊಂದಿಗೆ ನಮಸ್ಕರಿಸುತ್ತ, “ನಾನು ಹೇಳಿದ್ದ “ದಿ ರೆವಲೂಷನರಿ ಲೆನಿನ್” ಪುಸ್ತಕ ತಂದಿದ್ದೀರಾ ?” ಎಂದು ಕೇಳಿದ. ಪುಸ್ತಕ ಕೈಗೆ ಬರುತ್ತಿದ್ದಂತೆ ಧನ್ಯವಾದ ಹೇಳಿ ಉಲ್ಲಾಸದಿಂದ ಪುಸ್ತಕ ಓದಲು ಶುರು ಮಾಡಿಯೇಬಿಟ್ಟರು..!

ನಾಳೆ ಗಲ್ಲಿಗೇರುವ ವ್ಯಕ್ತಿ ಹೀಗೆ ಇರಲು ಸಾಧ್ಯನಾ..? ಎಂದು ರೋಮಾಂಚನಗೊಂಡ ಮೆಹ್ತಾ, ದೇಶಕ್ಕೆ ಏನಾದರೂ ಸಂದೇಶವನ್ನು ನೀಡುತ್ತೀರಾ..? ಎಂದಾಗು ಭಗತ್ ಸಿಂಗ್ ಪುಸ್ತಕದಿಂದ ತಲೆಯೆತ್ತದೆ “ಸಾಮ್ರಾಜ್ಯಶಾಹಿಗೆ ಧಿಕ್ಕಾರ”, “ಕ್ರಾಂತಿಗೆ ಚಿರಾಯುವಾಗಲಿ” ಈ ಘೋಷಣೆಗಳನ್ನು ತಿಳಿಸಿ ಎಂದ. “ನಿನಗೇನಾದರೂ ಆಸೆ ಇದೆಯಾ ?’ ಎಂಬ ಮೆಹ್ತಾರ ಪ್ರಶ್ನೆಗೆ, ಹೌದು, ಈ ದೇಶದಲ್ಲಿ ಮತ್ತೆ ಹುಟ್ಟುವ ಆಸೆಯಿದೆ; ಮತ್ತೆ ಹುಟ್ಟಿದರೆ ಈ ದೇಶದ ಸೇವೆ ಮಾಡಬಹುದು” ಎಂದು ಉತ್ತರಿಸಿದ..!

ಕೊನೆ ಮಾತು : ನಮ್ಮ ದೇಶದ ಸ್ವಾತಂತ್ರ ಸಮರದಲ್ಲಿ ಲಕ್ಷಾಂತರ ಮಂದಿ ಜೀವ ತೆತ್ತಿದ್ದಾರೆ. ಇಂದು ನಾವು ಅನುಭವಿಸುವ ಸ್ವಾತಂತ್ರದ ಸಿಹಿ ಜೇನಿನ ಸವಿಗಾಗಿ ಕೋಟ್ಯಾಂತರ ಮಂದಿ ನೋವು, ದುಃಖ ದುಮ್ಮಾನ ಮತ್ತು ಕಹಿ ಗಳಿಗೆಗಳನ್ನು ಉಂಡಿದ್ದಾರೆ. ಇವತ್ತಿನ ಈ ಸಂತಸದ ಸುಖ ಜೀವನದ ಸಮಯದಲ್ಲಿ ಈ ದೇಶದ ಒಳಿತಿಗಾಗಿ, ಸ್ವಾತಂತ್ರಕ್ಕಾಗಿ ಬಲಿದಾನಗೈದ ಎಲ್ಲಾ ಯೋಧರನ್ನು, ಸಿಪಾಯಿಗಳನ್ನು, ಸೈನಿಕರುಗಳನ್ನು ಮತ್ತು ಅಪ್ರತಿಮ ಹೋರಾಟಗಾರರನ್ನು ಪ್ರತಿನಿತ್ಯ ನೆನೆಯುವುದು ಅಸಾಧ್ಯವಾದರೂ, ವರ್ಷದಲ್ಲಿ ಒಮ್ಮೆಯಾದರೂ ಅವರನ್ನು ನೆನೆದು ಕಣ್ಣಂಚಿನಲ್ಲಿ ಒಂದೆರಡು ಹನಿ ಕಣ್ಣೀರು ಸುರಿಸುವುದರಲ್ಲಿ ಮತ್ತು ಅವರು ನುಡಿದು ನಡೆದ ಆದರ್ಶದ ಹಾದಿಯಲ್ಲಿ ನಾವು ದಿನ ನಿತ್ಯ ನಡೆದಲ್ಲಿ ಈ ಹುತಾತ್ಮರ ದಿನದ ಆಚರಣೆಗೂ ಹೆಚ್ಚಿನ ಮೌಲ್ಯ ಬಂದಿತು. ಭಗತ್ ಸಿಂಗ್, ರಾಜಗುರು, ಸುಖದೇವ್ ಮುಂತಾದ ಅಪ್ರತಿಮ ದೇಶ ಭಕ್ತರನ್ನು ದಿನಂಪ್ರತಿ ಸ್ಮರಿಸೋಣ ಮತ್ತು ಅವರು ತೋರಿ ಕೊಟ್ಟ ಧೈರ್ಯ, ಸಾಹಸ, ಸತ್ಯ, ಅಹಿಂಸೆ ಮತ್ತು ತ್ಯಾಗದ ದಾರಿಯಲ್ಲಿ ಭಾರತೀಯರಾದ ನಾವೆಲ್ಲರ ಹಾಗೂ ದೇಶದ, ವಿಶ್ವದ ಶಾಂತಿ ಮತ್ತು ಸಾಮರಸ್ಯ ಅಡಗಿದೆ. 

ಧನ್ಯವಾದಗಳು

$$ ಸಂತೋಷ್.ಎಂ $$

Category:History



ProfileImg

Written by santhosh m

ಹವ್ಯಾಸಿ ಬರಹಗಾರ

0 Followers

0 Following