ಅರ್ಜುನ್ ಆಮ್ ಪ್ರೆಗ್ನೆಂಟ್, ಅರ್ಜುನ್ ಆಮ್ ಪ್ರೆಗ್ನೆಂಟ್.!!!! ಎಂದು ಅವನ ಕಿವಿಯಲ್ಲಿ ಜೋರಾಗಿ ಹೇಳಿ ಅಳುತ್ತಲೇ ಅವನನ್ನು ಹತ್ತಿರಕ್ಕೆ ಎಳೆದು ಆ ಕೆನ್ನೆಯ ಎರಡು ಸೈಡ್ ಹೊಡೆಯುತ್ತಲೇ ಹೇಳುತ್ತಿದ್ದ ಕೀರ್ತನಾಳನ್ನು ತಡೆಯದೇ ತಬ್ಬಿ ಹೇಳಿದ
"ನೋಡು ಪ್ಲೀಸ್ ಅಳಬೇಡ, ಇನ್ನು ನಿನ್ನ ಬಿಟ್ಟು ನಾನೆಲ್ಲೂ ಹೋಗಲ್ಲ....ಮಗು ಯಾರದ್ದೇ ಇರಲಿ ಅದಕ್ಕೆ ಹೆಸರು ನನ್ನದೆ" ಎಂದವನಿಗೆ ಮತ್ತೆ ಹೊಡೆದಳು ಕೀರ್ತನಾ.
ಮತ್ತೆ ತಪ್ಪು ಮಾತನಾಡಿದ ಅರ್ಜುನನಿಗೆ ಅವಳು ಹೊಡೆಯುವುದನ್ನು ನಿಲ್ಲಿಸಲೇ ಇಲ್ಲ. ಇವನು ತಡೆಯಲಿಲ್ಲ....ಅವನ ಕೆನ್ನೆಗಳು ಟೊಮೆಟೊ ಹಣ್ಣಿನಂತೆ ಕೆಂಪಾಗಿದ್ದವು. ಕುಸಿದು ಕುಳಿತು ಹೇಳಿದಳು ಕಿರ್ತನ..
"ಅರ್ಜುನ್, ಈ ಮಗು ನಿನ್ನದೇ ಆರು ತಿಂಗಳಿನಿಂದ ಕಾಯುತ್ತಿದ್ದೇನೆ ಕಣೋ, ನಿನ್ನದೇಈ ಮಗು" ಬಿಕ್ಕಿ ಬಿಕ್ಕಿ ಅಳುತ್ತಿದ್ದವಳನ್ನು ಎಳೆದುಕೊಂಡು ಎದೆಗವಚಿಕೊಂಡ. ಆಗ ಅಳುತ್ತಲೇ ಹೇಳಿದಳು, "ಏನೆಂದೇ ನೀನು ಅವತ್ತು, ಆರು ಗಂಟೆ ಟೈಂ ಕೊಟ್ಟು ಬರೊದಾದರೇ ಕಾಲ್ ಮಾಡು ಹೇಳಿ ಹೋದೆ....ನಿನಗೆ ಹೆಣ್ಣು ಮಕ್ಕಳ ಬವಣೆ ಗೊತ್ತಾ ? ಹೇಳು ಅರ್ಜುನ್. ಆಗ ಗುರು ಆದಂತಹ ಘಟನೆಗಳನ್ನು ಕೀರ್ತನಾಳಿಗೆ ವಿವರಿಸಿದ…
ಅರ್ಜುನ್ ತಂದೆ ವಿಶ್ವನಾಥ, ಅಜ್ಜಿ ಸರಸ್ವತಿ, ಚಿಕ್ಕಪ್ಪ ವಿಶ್ವಾಮಿತ್ರ, ಚಿಕ್ಕಮ್ಮ ವಸುಮತಿ, ಇವನನ್ನು ಹೆತ್ತು ತೀರಿಹೋದ ತಾಯಿ ವಸುಧಾ, ಆದರೇ ಅವಳ ನೆನಪು ಆಗದಂತೆ ನೋಡಿಕೊಂಡಿದ್ದರೂ, ಆದರೇ ಅಜ್ಜಿಯ ನೆರಳಿನಿಂದ ಸ್ವಲ್ಪ ಉಡಾಳನಾಗಿ, ಲೇಜಿಯಾಗಿ, ಈಗಿನ ಜನರೇಷನ್ ಹೇಗೆ ಇರುತ್ತದೊ ಹಾಗೆ ಬೆಳೆದ,
ಕೆಲವೊಮ್ಮೆ ಅಪ್ಪನಿಗೆ ಕೇರ್ ಮಾಡುತ್ತಿರಲಿಲ್ಲ. ಆದರೇ ಮೆಡಿಕಲ್ ಕಿಟ್ ಅವನ ಕೈಲಿ ಪಳಗಿದ ವಿದ್ಯೆ, ಎಮ್.ಎಸ್. ಮಾಡಿ ನೇತ್ರಾವತಿ ಆಸ್ಪತ್ರೆಯಲ್ಲಿ ಸರ್ಜನ್ ಆಗಿದ್ದ. ದೊಡ್ಡ ಹೆಸರು ಗಳಿಸಿದ್ದ. ಆದರೇ ಒಂದೇ ಕೆಟ್ಟ ಗುಣ ಅಂದರೇ ಮೂಗಿನ ತುದಿಯಲ್ಲಿ ಕೋಪ ಅದರಿಂದ ವಿವೇಚನೆ ಕಳೆದುಕೊಂಡು ಬಿಡುತ್ತಿದ್ದ.ಕೋಪದಿಂದಲೇ ಅವನನ್ನು ಬಿಟ್ಟು ಹೋದ ಪ್ರೆಂಡ್ಸ್ ಲೆಕ್ಕಕ್ಕೆ ಇಲ್ಲ. ಹುಡುಗಿಯರು ಅಷ್ಟೇ, ಜಸ್ಟ್ ಫ್ರೆಂಡ್ ಲೆವಲ್ಲಿಗೆ ಇರುತ್ತಿದ್ದರು.
ಅಂತಹ ಅರ್ಜುನ್ ಕೀರ್ತನಾಳನ್ನು ನೋಡಿದಾಗ ತನ್ನವಳೇ ಅನಿಸಿ ಆಗಲೇ ಪ್ರಪೋಸ್ ಮಾಡಿದ್ದ ಹೇಳುವುದಕ್ಕಿಂತ "ನೀನು ನನ್ನವಳು" ಅನೌನ್ಸ್ ಮಾಡಿದ್ದ ಎನ್ನಬಹುದು. ಇತರ ವಿದ್ಯಾರ್ಥಿಗಳು ಆಶ್ಚರ್ಯ ಮತ್ತು ಅಸೂಯೆಯಿಂದ ಅವನನ್ನು ನೋಡಿದರೆ ಕೀರ್ತನಾ ತಲೆಕೆಳಗೆ ಹಾಕಿದ್ದಳು.
ಅವತ್ತಿನಿಂದ ಅವರಿಬ್ಬರೂ ಕಳೆಯದ ಸಮಯವೇ ಇಲ್ಲ, ಆಗಾಗ ಅವನ ಡ್ರಿಂಕ್ಸ್ ಬಗಗೆ ದೂರುವುದೊಂದು ಬಿಟ್ಟರೇ ಮತ್ತೇನೂ ಅವರಲ್ಲಿ ಭಿನ್ನಾಭಿಪ್ರಾಯ ಇರಲಿಲ್ಲ.
ಕೆಲವೊಮ್ಮೆ ಜಗಳ ಆದರೂ ಮತ್ತೆ ಅವಳ ಕಾಲ ಮೇಲೆ ತಲೆಯಿಟ್ಟು ಮಲಗಿಬಿಡುವ ಅವನನ್ನು ಮುದ್ದಿಸದೇ ಬಿಡಲು ಅವಳಿಗೆ ಮನಸಾಗುತ್ತಿರಲಿಲ್ಲ.
ಅವಳ ಅಮ್ಮ ಮಾಲತಿ , ಅಪ್ಪ ಗೋಪಿನಾಥ್ ಗೆ ಮೆಸ್ಕಾಂ ಅಲ್ಲಿ ಉದ್ಯೋಗ, ಕರ್ನಾಟಕ ಅವರ ಉದ್ಯೋಗದ ರಾಜ್ಯವಾದರೂ, ಹುಟ್ಟೂರು ಕೇರಳದ ಅಭಾಮಾನಿ, ಕನ್ನಡ ಬಂದರೂ ಇಂಗ್ಲಿಷ್ ಮಾತಾನಾಡುವ ಮನುಷ್ಯ, ಜೊತೆಗೆ ಒಂದಿಷ್ಟು ಒಣ ಜಂಭ, ಕೀರ್ತಿ ಅಕ್ಕ ಸ್ಪೂರ್ತಿಗೂ ಮದುವೆ ಕೇರಳದಲ್ಲಿಯೆ ಮಾಡಿದ್ದರು, ಸಹೋದ್ಯೊಗಿಗಳಿಗೆ ಪಾರ್ಟಿ ಕೊಟ್ಟಿದ್ದರು. ಇಂತಹ ಈಗೋ ಮನುಷ್ಯನಿಗೆ ಸೇಮ್ ಕ್ಯಾರೆಕ್ಟರ್ ಆದ ಅರ್ಜುನ್ ವಿಷಯ ಗೊತ್ತಾದಾಗ ಕೂಗಾಡಿದ್ದರು,
ಅವರ ಮುಖದ ನೇರಕ್ಕೆ ಅರ್ಜುನ್ ಹೇಳಿದ್ದ..…
“ಪ್ರೀತಿ ನೈತಿಕತೆ ಅಲ್ಲ ಅಂದ್ರೇ ಮತ್ತೆ ಯಾವುದು ?”
"ನೀನು ಯಾರು ಅದನ್ನು ಕೇಳೋಕೆ, ನೋಡು ಕೀರ್ತಿ ಅವನಿಗೆ ಹೇಳು" ಎನ್ನುತ್ತಲೇ ಏರಿ ಹೋದ ಅಪ್ಪನನ್ನು ಸಮಾಧಾನ ಮಾಡುವಷ್ಟರಲ್ಲಿ ಕೀರ್ತಿ ಸುಸ್ತಾಗಿದ್ದಳು.
ಮರುದಿನ ಅರ್ಜುನ್ ಒಂದು ಪೆಗ್ ಹಾಕಿಯೇ ಆಪರೇಷನ್ ಥಿಯೇಟರ್ ಒಳಗೆ ಬಂದಾಗ ಗುರು ಅವಾಜ್ ಹಾಕಿದ್ದು
“ತಲೆ ನೆಟ್ಟಗೆ ಇದೆಯಾ ನಿಂದು ? ಅತಿಯಾಗಿ ಆಡಬೇಡ”
ಒಂದು ಮಾತಾಡದೇ ಆಪರೇಷನ್ ಮಾಡಿ ಹೊರ ಬಂದಿದ್ದ.. ಅವನ ಹಿಂದೆ ಓಡಿ ಬಂದ ಗುರು
ಅರ್ಜುನ್ ಪ್ಲೀಸ್ ಯಾರ್.. ಇನ್ನೊಮ್ಮೆ ಹೀಗೆ ಮಾಡಬೇಡ,
ಈಗ ಏನೋ. ನಿಂದು. ಪೇಷಂಟ್ ಸರಿ ಇದ್ದಾರೆ ಅಲ್ವಾ..ಅವನಜ್ಜಿ ಕೀರ್ತಿ ಅಪ್ಪ ಹೊಡೆಯೋಕೆ ಬರೋದಾ ? ಅರ್ಜುನ್ ಅವಾಜ್ ಹಾಕಿದ್ದ
ಆಗ ಗುರು ಹೇಳಿದ್ದ, “ನೋಡು ಅವರ ಮಗಳು ಅವರಿಗೆ ಹಕ್ಕಿದೆ”
"ಬುಲ್ಶಿಟ್ ಏನ್ ಹಕ್ಕು, ನಾನೇನೂ ಮ.......ಕೆ ಕೇಳಿದ್ನಾ ? ಪ್ರೀತಿಸ್ತಿದ್ದೇನೆ, ಅದು ಕದ್ದು ಮುಚ್ಚಿ ಅಲ್ಲ.ಮದುವೆ ಆಗ್ತೇನೆ ಅಂದ್ರೆ..ಇವರದ್ದೇನು ?
ಎಲ್ಲರೂ ನಿಮ್ಮನೆಯಲ್ಲಿ ಇದ್ದ ಹಾಗೆ ಇರುತ್ತಾರ ? ಗುರು ಪ್ರಶ್ನೆಗೆ "ಗುರ್" ಎಂದು ಎದ್ದು ಹೋದ ಫ್ರೆಂಡ್ ನೋಡಿ ಅವನಿಗೆ ತಲೆಬಿಸಿ ಆಯ್ತು. ಯಾವಾಗ ಇವನು ಸಿಟ್ಟು ಕಡಿಮೆ ಮಾಡಿಕೊಳ್ಳೋದು ?
ಆದರೇ ಮರುದಿನ ಗುರುನೇ ಅವನಿಗೆ ಸಿಟ್ಟು ಬರುವ ಸುದ್ದಿ ಹೇಳಿದ್ದ, “ಕೀರ್ತಿಗೆ ಹುಡುಗನನ್ನು ಫಿಕ್ಸ್ ಮಾಡ್ತಾರಂತೆ ಈ ಸಂಡೆ”
ಊರಿದು ಹೋಗಿತ್ತು ಅರ್ಜುನ್ ಗೆ ಸೀದಾ ಕಾರ್ ಕೀರ್ತಿ ಮನೆ ಕಡೆ ತಿರುಗಿತ್ತು. ರಭಸದಿಂದ ಗೇಟ್ ತೆಗೆದು ಒಳ ಹೋದವನೇ.....ಕೂಗಾಡಿದ್ದ.ಗೋಪಿನಾಥ್ ಕೈ ಮೇಲೆ ಹೋಗಿತ್ತು, ಒಟ್ಟಾರೆ ರಂಪ ರಾದ್ದಾಂತ ಆಗಿ, ಕೀರ್ತಿ ಅವನನ್ನು ಎಳೆದುಕೊಂಡು ಹೊರ ಬಂದಿದ್ದಳು.
“ಪ್ಲೀಸ್ ಅರ್ಜುನ್ ಅರ್ಥ ಮಾಡ್ಕೋ.ಹೀಗೆ ಮಾಡುವುದರಿಂದ ಪ್ರಾಬ್ಲಂ ಸಾಲ್ವ ಆಗಲ್ಲ”
"ಮತ್ತೇನೂ ನೀನು ಅವನನ್ನು ಮದುವೆ ಆಗುತ್ತೀಯಾ ?"ಅರ್ಜುನ್ ಮರುಪ್ರಶ್ನೆ ಹಾಕಿದ್ದ.
"ಇಲ್ಲ ಅರ್ಜುನ್ ನಾನು ಹೇಳೋದು ಕೇಳು" ಕೈ ಜೋಡಿಸಿದ್ದಳು.
ಆದರೇ ಅರ್ಜುನ್ ಕೋಪದಿಂದ "ನೀವು ಹುಡುಗಿಯರೇ ಹೀಗೆ, ಪ್ರೀತಿ ಪ್ರೇಮ ಮಾಡುವಾಗ ಅಪ್ಪ ಅಮ್ಮನ ಕೇಳಲ್ಲ, ಮದುವೆ ವಿಷ್ಯ ಬಂದ್ರೆ ಅಪ್ಪ ಅಮ್ಮನ ವಿರುದ್ಧ ಹೋಗಲ್ಲ, ಆಗಲೇ ಹೇಳಿದ್ದರೇ" ಮಾತಿನ್ನು ಅರ್ಧದಲ್ಲಿ ನಿಲ್ಲಿಸಿದವನೇ ಅಲ್ಲೆ ಇದ್ದ ಒಂದು ಕಲ್ಲನ್ನು ಎತ್ತಿ ಅವಳಪ್ಪನ ಕಾರಿನ ಗಾಜಿನ ಮೇಲೆ ಎಸೆದು ಪುಡಿ ಮಾಡಿ ರೋಷ ಹೊರಹಾಕಿದ್ದ. ಮತ್ತೆ ಹೊರ ಬಂದ ಗೋಪಿನಾಥ್ ಕೀರ್ತಿಯನ್ನು ಎಳೆದು ಮನೆಗೆ ಕಳಿಸಿ "ಇನ್ನೊಮ್ಮೆ ನಮ್ಮನೆ ವಿಷಯಕ್ಕೆ ಬಂದರೇ ಎನ್ನುತ್ತಿರುವಾಗಲೇ ಅವರ ಕೊರಳಪಟ್ಟಿ ಹಿಡಿದು ಕೇಳಿದ್ದ...."ನೀನು ಯಾರು ? ಅವಳು ಮೇಜರ್, ಅವಳೇ ಡಿಸೈಡ್ ಮಾಡಲಿ"...ಇನ್ನೇನೂ ಗಲಾಟೆ ಆಗುತ್ತಿತ್ತೊ ಏನೋ ಆಗಲೇ ಗುರು ಅನುರಾಗ್ ಬಂದು ಅವನನ್ನು ಕಾರಿನೊಳಕ್ಕೆ ತಳ್ಳಿ ಕೀರ್ತಿ ತಂದೆಯ ಕ್ಷಮೆ ಹೊರಟಿದ್ದ.
ಕಿರುಚಿ ಹೇಳಿದ್ದ ಅರ್ಜುನ್ “ನೋಡು ಸಿಕ್ಸ್ ಅವರ್ಸ ಟೈಂ ಕೊಡುತ್ತೇನೆ,ಅಷ್ಟರಲ್ಲಿ ನಿನ್ನ ನಿರ್ಧಾರ ತಿಳಿಸು”
ಮನೆಗೆ ಬಂದವನ ಕೋಪ ಕಂಟ್ರೋಲ್ ಗೆ ಬಂದಿರಲಿಲ್ಲ. ಅಜ್ಜಿ ತಿಳಿಸಿ ಹೇಳಲು ಹೊರಟಾಗ ಗೆಟ್ ಔಟ್ ಎಂದಿದ್ದ.
ಅಪ್ಪನಿಗೂ ಅಷ್ಟೇ......ಪ್ರತಿ ನಿಮಿಷಕ್ಕೊಮ್ಮೆ ಮೊಬೈಲ್ ನೋಡುವುದು ಇಡುವುದು ಒಂದು ಪೆಗ್ ಹಾಕೋದು ಆ ಆರು ಗಂಟೆಗಳು ಅವನನ್ನು ಅಮಲಲ್ಲಿ ಮುಳುಗಿಸಿತ್ತು. ಕೀರ್ತಿಯಿಂದ ಯಾವುದೇ ಕಾಲ್ ಬಂದಿರಲಿಲ್ಲ.
ನಂತರದ ಅವನ ಜೀವನದಲ್ಲಿ ಆದ ಘಟನೆಗಳು ಅವನ ಡಾಕ್ಟರ್ ಪದವಿಯನ್ನು ಕಿತ್ತು ಹಾಕಿತ್ತು. ಅವತ್ತೇ ಅವನಪ್ಪ ಹೊರಹಾಕಿದ್ದ. "ನಮ್ಮ ಮನೆಯ ಹೊಸ್ತಿಲು ತುಳಿಯಬೇಡ, ನಿನ್ನ ಹಠ, ಕೋಪ, ಚಟ, ಎಲ್ಲವೂ ನಿನ್ನೊಳಗಿನ ಅರ್ಜುನನನ್ನು ತಿಂದಿದೆ,ಎಂದಿದ್ದರು.
ಮಾಧ್ಯಮದವರು ಈ ವಿಷಯವನ್ನು ಇಂಟರ್ನ್ಯಾಷನಲ್ ವಿಷಯದಂತೆ ವರದಿ ಮಾಡಿದ್ದರು.
ಆಗಿದ್ದಿಷ್ಟು,
ಕೀರ್ತಿ ಕಾಲ್ ಬರದೇ ಇದ್ದಾಗ ಕುಡಿತಕ್ಕೆ ಮೋರೆ ಹೋದರೂ ಅರ್ಜುನ್ ಒಳ್ಳೆಯ ಡಾಕ್ಟರ್. ಆದರೇ ಒಂದು ದಿನ ಎರಡು ಕ್ರಿಟಿಕಲ್ ಅಪರೇಷನ್ ಮುಗಿಸಿ ಬಂದವನೇ ಒಂದರ ಮೇಲೊಂದು ಪೆಗ್ ಹಾಕಿದ್ದ, ಆಗಲೇ ಆಸ್ಪತ್ರೆಯಿಂದ ಕಾಲ್ ಬಂದಿತ್ತು.
ಆಗಲ್ಲ ಅಂದರೂ ಸಿಸ್ಟರ್ ದೇವಿಕಾ "ಬನ್ನಿ ಸರ್ ಯಾರು ಇಲ್ಲ" ಅಂದಿದ್ದರಿಂದ ಬಂದಿದ್ದ, ಪೇಷಂಟ್ ಮೊದಲೇ ಡಯಾಬಿಟಿಕ್, ಆಕ್ಸಿಡೆಂಟ್ ಕೇಸ್, ನರ ಕಟ್ ಆಗಿ ರಕ್ತ ವಸರುತ್ತಿತ್ತು, ಆದರೂ ಪ್ರಯತ್ನ ಪಟ್ಟಿದ್ದ.ಆದರೇ ಇವನ ಡ್ರಿಂಕ್ಸ್ ಇವನ ಕೈಗಳಿಗೆ ಬಲ ಕೊಡಲಿಲ್ಲ. ಆಪರೇಶನ್ ನೆಡೆಯುತ್ತಿರುವಾಗಲೆ ಅವನು ಮೃತ ಪಟ್ಟಿದ್ದ. ಕೇಸ್ ಆಯ್ತು, ಒಪ್ಪಿಕೊಂಡಿದ್ದ, ಐದು ವರ್ಷಗಳ ಕಾಲ ಸರ್ವಿಸ್ ಮಾಡುವಂತಿಲ್ಲ ಎಂದು ಕೋರ್ಟ್ ಆರ್ಡರ್ ಕೊಟ್ಟಿತ್ತು.
ಹೀಗೆ ದಾರಿಗೆ ಬಿದ್ದವನಿಗೆ ಸ್ವಲ್ಪ ಹಣ ಬಿಟ್ಟರೇ ಏನು ಇರಲಿಲ್ಲ. ಗುರು, ಚಿಕ್ಕಪ್ಪ, ಚಿಕ್ಕಮ್ಮ, ಯಾರು ಹೇಳಿದರೂ...... ಅರ್ಜುನ್ ಮೊದಲಿನ ಅರ್ಜುನ್ ಆಗಲೇ ಇಲ್ಲ.ಒಂದೊಳ್ಳೆ ಡಾಕ್ಟರ್ ಎಂಬ ಮರ ಒಣಗತೊಡಗಿತ್ತು . ಬೆಳೆದ ತಲೆಗೂದಲು, ಬಿಟ್ಟ ಗಡ್ಡ ಅವನನ್ನು ಡಾಕ್ಟರ್ ಅನ್ನುವ ಹಾಗೇ ಇರಲಿಲ್ಲ.
ಗುರು ಒಂದಿನ ಹೇಳಿದ್ದು ಇಷ್ಟೇ..."ನೋಡು ಲೈಪ್ ನಿನ್ನದು ಯಾಕೆ ಈ ರೀತಿ ಹಾಳು ಮಾಡಿಕೊಳ್ಳುತ್ತಿ ?
ಅವನನ್ನೇ ಹೊರದೂಡಿದ ಅರ್ಜುನ್ "ಬರಬೇಡ ಇನ್ನು ಎಂದಿದ್ದ,
ಹೋಟೇಲ್ ಬಿಲ್ ಪಾವತಿಸದ ಸ್ಥಿತಿಗೆ ಬಂದರೂ ಅವನು ಮನೆಗೆ ಒಂದು ಕಾಲ್ ಮಾಡಿರಲಿಲ್ಲ.
ಆಗಲೇ ಗುರು ಅವನನ್ನು ಗಲ್ಲಿ ಗಲ್ಲಿ ಹುಡುಕಿದ್ದು, ಗಾರ್ಡನ್ ಏರಿಯಾದಲ್ಲಿ ಬಿದ್ದಿದ್ದ ಅವನಿಗೆ “ನೋಡು ಹೇಳೋದು ಹೇಳ್ತೇನೆ, ಬರುತ್ತೇನೆ ಎಂದರೇ ಕರೆದುಕೊಂಡು ಹೋಗುತ್ತೇನೆ, ಅಜ್ಜಿ ಇನ್ನಿಲ್ಲ.ಕೊನೆಯವರೆಗೂ ನಿನ್ನ ಹೆಸರು ಹೇಳಿ ಪ್ರಾಣ ಬಿಟ್ಟರು”
ಹೋಗಿ ಗಾಡಿಯಲ್ಲಿ ಕುಳಿತಿದ್ದ. "ಅಜ್ಜಿ" ಎಂದೊಡನೆ ಅರ್ಜುನ್ ಮರುಮಾತಾಡದೇ ಮನೆಗೆ ಬಂದಿದ್ದ.
ಅಜ್ಜಿಯನ್ನು ನೋಡಿದವನೇ.... ಅಪ್ಪನನ್ನು ಹುಡುಕಿದ..ಎಲ್ಲೂ ಕಾಣಲಿಲ್ಲ…
ಮನೆಯ ಹಿಂದಿನ ಕಟ್ಟೆಯ ಮೇಲೆ ಅಪ್ಪನ ಪ್ರೀತಿಯ ಸ್ಥಳ ಅದು, ಗೊತ್ತಿತ್ತು ಅವನಿಗೆ, ಸೀದಾ ಹೋದವನೇ....ಅವರ ಕಾಲಿನ ಹತ್ತಿರ ಕುಳಿತು, ಅಪ್ಪಾ ಎಲ್ಲರೂ ನಿನ್ನ ಕಾಯುತ್ತಿದ್ದಾರೆ ಬಾ. ಗೊತ್ತು ನನಗೂ, ತಪ್ಪಿಗೆ ಬೆಲೆ ತೆರಬೇಕಾಯಿತೆಂದು, ಈಗ ಬೇಡ ಬಾ ಎಂದವನೇ ಕರೆದುಕೊಂಡು ಬಂದಿದ್ದ.
ಹೊತ್ತೊಯ್ಯುವಾಗ ಯಾರೋ ಹೆಣ ಅಂದಿದ್ದು ಕೇಳಿ ಎಗರಿ ಬಿದ್ದ. ಯಾರೋ ಅದು ಹೆಣ ಅಂದಿದ್ದು...ಅಜ್ಜಿ ನನ್ನಜ್ಜಿ ಸರಸ್ವತಿ ಅವರು.ಕೋಪವೇನೂ ಕಡಿಮೆಯಾಗಿರಲಿಲ್ಲ.
ಕೊನೆಗೆ ತನ್ನೆಲ್ಲ ತಪ್ಪುಗಳನ್ನು ಅಜ್ಜಿಯ ವೈಕುಂಠದಂದು ತ್ಯಜಿಸಿ, ತಪ್ಪು ಮಾಡಿದೆ ಅಜ್ಜಿ...ಕ್ಷಮಿಸಿಬಿಡು ಎಂದು ಅತ್ತವನನ್ನು ವಿಶ್ವನಾಥ ಹೆಗಲು ಹಿಡಿದು ಎಬ್ಬಿಸಿದ್ದರು.
ವರ್ತಮಾನ.…
ವಾಕಿಂಗ್ ಹೊರಟವನು ಒಂದು ಪಾರ್ಕಿನಲ್ಲಿ ಗುರುವಿನ ಜೊತೆಗೆ ಕುಳಿತಾಗಲೇ ಅವನ ಕಣ್ಣಿಗೆ ಕೀರ್ತನ ಕಂಡಿದ್ದು "ಗುರು ಅಲ್ನೋಡು ಕೀರ್ತನಳನ್ನು" ಮೊದಲ ನೋಟಕ್ಕೆ ಗುರುತಿಸಿದ.
ಅರ್ಜುನ್ ಈಗ ಮತ್ತೆ ಕೀರ್ತನಾ ಬೇಕಾ ? ಅವಳ ಗಂಡ ಇರಬಹುದು ಅಲ್ವಾ ? ಅವಳ ಸಂಸಾರದ ವಿಷಯ ನಮಗೇಕೆ ? ನೋಡಿದರೇ ಪ್ರೆಗ್ನೆಂಟ್ ಅನಿಸುತ್ತೆ" ಗುರು ಹೇಳಿದಾಗ
ಆದರೇ ಅವಳು ಸುಖವಾಗಿಲ್ಲ.ಅರ್ಜುನ್ ಉತ್ತರ
ಇರಬಹುದು, ಹಾಗಂತ ಗಂಡನನ್ನು ಬಿಟ್ಟು ಬರುತ್ತಾಳಾ ? ಗುರುವಿನ ಮಾತಿಗೆ ಏನೂ ಹೇಳದೇ ಕೀರ್ತನಾ ಇರುವಲ್ಲಿಗೆ ಹೋರಟಾಗ ಗುರು ಸಹ ಹೊರಟ.
ಸಾರಿ ಕಣೇ ಕೀರ್ತಿ...ಏನೇನೋ ಅಂದುಬಿಟ್ಟೆ ಎಂದವನೇ" ಅವಳ ನೆತ್ತಿಗೆ ಚುಂಬಿಸಿದ.
"ಗುರು ಹೊಸ ಜೀವನ ಶುರು ಮಾಡಬೇಕು ಕಣೋ" ಎಂದಾಗ…
ಹಾಗಾದರೇ ವಾಲಗ ಊದಿಸಿ ಬಿಡೋದೇ.... ಹೇಳಿದೆ ಗುರು…
ಆಗ ಕೀರ್ತೀ ಹೇಳಿದಳು" ಅರ್ಜುನ್ ಪ್ಲೀಸ್ ಹೈ ಕೋರ್ಟ್ ಬೇಕಾದರೆ ಸುಪ್ರೀಂ ಕೋರ್ಟವರೆಗೂ ಹೋಗೋಣ ಮೊದಲು ಅಪೀಲ್ ಮಾಡು.....ನಿನ್ನಂತಹ ಡಾಕ್ಟರ್ ಅಗತ್ಯತೆ ಆಸ್ಪತ್ರೆಗಳಿಗೆ ಇದೆ, ಒಮ್ಮೆ ಕೇಸ್ ನಾವು ವಿನ್ ಆದರೇ ಹೊಸ ಹಾಸ್ಪಿಟಲ್ ನಾವೇ ಕಟ್ಟಬಹುದು.
ಅವಳ ಹಣೆಯ ಮೇಲಿನ ಬೆವರನ್ನು ಒರೆಸಿ, "ಓಕೆ, ಡನ್" ಎಂದವನೇ ಅವಳನ್ನು ಕಳೆದುಕೊಳ್ಳಲಾರೆ ಎಂಬಂತೆ ನೋಡಿದ್ದ.
ಆರು ತಿಂಗಳ ಸತತ ಪ್ರಯತ್ನದ ನಂತರ ಅರ್ಜುನ್ ಕೇಸ್ ವಿನ್ ಆಗಿತ್ತು, ಅವರಿಬ್ಬರ ಜೀವನದಲ್ಲಿ ಮೊಗ್ಗೊಂದು ಮೆಲ್ಲನೇ ಬಿರಿದಿತ್ತು.
ತನ್ನದೇ ನರ್ಸಿಂಗ್ ಹೋಮ್ ಗೆ ಗುದ್ದಲಿ ಪೂಜೆ ಮೂರು ತಿಂಗಳ ಹೆಣ್ಣು ಮಗು ಖುಷಿಯನ್ನು ತೋಳಿನಲ್ಲಿ ಇಟ್ಟುಕೊಂಡ ಕೀರ್ತನಾಳ ಮುಖದಲ್ಲಿ ಮೊಗ್ಗೊಂದು ಮೆಲ್ಲನೇ ಬಿರಿದಿತ್ತು.
ಶಾರದ ಭಟ್ಟ.
0 Followers
0 Following