ನಿನ್ನ ನೋಡಿದ ಆ ಗಳಿಗೆ…
ಗರಿ ಬಿಚ್ಚಿ ಹಾರಿದೆ ಮೆಲ್ಲಗೆ…
ಮನದ ಮೆಟ್ಟಿಲ ಹತ್ತಿ ಬಂದೆ ನೀ
ಹೃದಯವ ಆವರಿಸಿ ಅರಮನೆಯಾಗಿಸಿದೆ
ನೀನು ಇಲ್ಲದ ಬದುಕೆ ಶೂನ್ಯವು
ನಿನ್ನ ಕನವರಿಕೆ ನನಗೆ ಅಮೃತ
ನೀನು ಸೆರೆಯಾಗಲು ನನ್ನ ತೋಳಲ್ಲಿ ಕಳೆದೋದೆನು ಸಿಗುವುದು ಇನ್ನಲ್ಲಿ
ನನ್ನನೇ ಮರೆತು ನಾ
ನೆನಪಲೇ ತೇಲುವೆ
ನೀನಾಗಿರಲು ಇನ್ನೂ ಸನಿಹ..
ನಿನ್ನ ನೋಡಿದ ಆ ಗಳಿಗೆ..
ಗರಿ ಬಿಚ್ಚಿ ಹಾರಿದೆ ಮೆಲ್ಲಗೆ…
ಒಲವಿನ ಸಾಗರ
ಪ್ರೀತಿಯ ಆಗರ
ನಮ್ಮ ಪ್ರೇಮಕೆ ಇಲ್ಲ ಸಾಟಿಯು
ನಿನ್ನ ಅಪ್ಪುಗೆ ಬೇಕಿದೆ ಬೆಚ್ಚಗೆ
ನಿನ್ನ ಉಸಿರಲೆ ಬೆರೆತೆ ಒಮ್ಮೆಗ
ನಿನ್ನ ಮುಂಗುರುಳ ಸರಿಸಲೆ ನಾನೀಗ
ಕಿರುನಗೆಯಲೆ ಸೆಳೆಯುವೆ ನೀನಾಗ
ಪ್ರತಿ ಕ್ಷಣ ಎದುರಿರು
ಜೊತೆಯಲಿ ಬೆರೆತಿರು
ದೂರಾಗಿಸು ಈ ಒಂಟಿ ತನವ….
ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....
0 Followers
0 Following