ನಿಜ ಜೀವನದ ಅಪರಾಧಗಳು,ಅಂತರ್ಜಾಲ ಹಾಗೂ ಚಲನ ಚಿತ್ರದಲ್ಲಿ ಮಾನ್ಯವಾದಾಗ..…

ProfileImg
18 Mar '24
7 min read


image

ನಿಜ ಜೀವನದ ಅಪರಾಧಗಳು,ಅಂತರ್ಜಾಲ ಹಾಗೂ ಚಲನ ಚಿತ್ರದಲ್ಲಿ ಮಾನ್ಯವಾದಾಗ..…                           

start camera...... rolling...... action......cut...cut...cut...sir. ಸ್ವಲ್ಪ ಜಾಸ್ತಿ ಹೊಗೆ ಎಳೆದುಕೊಳ್ಳತ್ತಾ,ಸ್ಟೈಲ್ ಆಗಿ look ಕೊಡ್ತಾ, ಹೊಗೆ ಬಿಡುತ್ತಾ ನಡೆದುಕೊಂಡು ಬನ್ನಿ sir..style ಆಗಿ ಇರುತ್ತೆ..madam... ಎಷ್ಟು sexy ಆಗಿ ಕಾಣುತ್ತೀರೋ ಅಷ್ಟು fame and name ಬರುತ್ತೇ..ಬಟ್ಟೆ ಕಡ್ಮೆ ಇದ್ದಷ್ಟು value ಜಾಸ್ತಿ.... Hey.. writer... ಅಕ್ಕನ್, ಅಮ್ಮ ನ್ ಅಂತ diloug ಇರ್ಲಿ.ಇಲ್ಲ ಅಂದ್ರೆ ಜನಕ್ಕೆ ಖುಷಿ ಕೊಡಲ್ಲ.ಸ್ವಲ್ಪ adjust ಮಾಡ್ಕೊಳಿ ಮೇಡಮ್.ಆವಾಗ ನಿಮ್ಮ ಭವಿಷ್ಯ ಕೂಡ ಚನ್ನಾಗಿ ಇರುತ್ತೆ.ಈ ನ್ಯೂಸ್ ಅವ್ರ ಬಗ್ಗೆ ತಲೆ ಕೆಡ್ಸ್ಕೊಬೇಡಿ.2 ದಿನ ಮಾತಾಡ್ತಾರೆ.ಆಮೇಲೆ ಅವ್ರಿಗೆ ಬೇರೆ ವಿಷಯ ಸಿಕ್ಕಿದ್ರೆ ಇದ್ನ ಮರಿತಾರೆ.ಆಮೇಲೆ ನಿಮ್ಮನ್ನೇ ಕರೆದು ಹೊಸ ಆಫೀಸ್ನ ಓಪನ್ ಮಾಡಿಸುತ್ತಾರೆ..dont worry about this media. social media is little bit problem..but ಅದ್ರಲ್ಲೂ ಅಷ್ಟೆ...ಈಗ ಎಲ್ಲಾ ಕಮರ್ಷಿಯಲ್...ಅಸ್ಟೇ......

ಮನೆಯಲ್ಲಿ ಕುಳಿತಿದ್ದ ಅಜ್ಜ... ಮಗು... ಸಿಗರೇಟ್ ಸೇದಬಾರದು..ಮದ್ಯಪಾನ ಒಳ್ಳೆಯದಲ್ಲ.ಎಂದು ಭಾಷಣ ಬಿಗಿದು ಕೊನೆಯಲ್ಲಿ ಯಾವುದೋ ಮೂಲೆಯ ಮರದ ಬಳಿ ಮೂತ್ರ ವಿಸರ್ಜನೆ ಮಾಡುವಾಗ ಕೈಯಲ್ಲಿ ಬೀಡಿ ಹಿಡಿದುಕೊಂಡ ಅಜ್ಜನ ಮಾತನ್ನು ಅಂದಿನಿಂದ ಮೊಮ್ಮಗ ಕೇಳಲೇ ಇಲ್ಲ. ಅಜ್ಜನನ್ನೇ ನೋಡುತ್ತಾ ಬೆಳೆದ ಮಗು 9 ನೇ ತರಗತಿಗೆ ಹೋಗುವಾಗ ಬೀಡಿ,ಕಾಲೇಜ್ ನಲ್ಲಿ ಸಿಗರೇಟ್ ಸೇದಿದ.ಅಜ್ಜ ಉಪದೇಶ ಮಾತ್ರ ಮಾಡಿದ.ಅದನ್ನು ಅನುಸರಿಸಿ ನಡೆಯಲಿಲ್ಲ. ಹೀಗೇ ಆಗಿ ಹೋಗಿದೆ ನಮ್ಮ ಈ ಸಂಪೂರ್ಣ ಪ್ರಪಂಚ.

ಯಾವುದು ಈ ಸತ್ಯವಾದ ಪ್ರಪಂಚದಲ್ಲಿ ತಪ್ಪೋ,ಯಾವುದು ಈ ಪ್ರಪಂಚದಲ್ಲಿ ಮಾಡಿದರೆ ಶಿಕ್ಷೆಯೋ,ಯಾವುದು ಅಪರಾಧ ಎಂದು ಕರೆಸಿಕೊಳ್ಳುವುದೋ,ಯಾವುದನ್ನು ಈ ಸತ್ಯವಾದ ಪ್ರಪಂಚದಲ್ಲಿ ಮಾಡಿದರೆ ಪೊಲೀಸ್ ಅಧಿಕಾರಿಗಳು ಹಿಡಿಯುವರೋ,ಯಾವುದು ಸತ್ಯವಾದ ಪ್ರಪಂಚದಲ್ಲಿ ಹಾನಿಕಾರಕ ಎಂದು ತಿಳಿದಿದೆಯೋ,,...ಅದೆಲ್ಲವೂ ಸರಿ ಎಂದು ತಿಳಿಸುವ, ಆ ಸುಳ್ಳಿನ ಪ್ರಪಂಚವೇ ಉತ್ತಮ ಎಂದು ಸಾರುವ,ತಾನು ಮಾಡಿದ್ದೇ ಸರಿ ಎನ್ನುವ ಒಂದು ಲೋಕ ಚಿತ್ರಮಂದಿರದಲ್ಲಿ ಹಾಗೂ ಮೊಬೈಲ್ ಫೋನ್,ಅಂತರ್ಜಾಲದಲ್ಲಿ ತಲೆ ಎತ್ತಿ ನಿಂತಿದೆ.ಯಾವುದು ತಪ್ಪು ಎಂದು ಸಮಾಜಕ್ಕೆ ತಿಳಿದಿದೆಯೋ,ಯಾವುದರಿಂದ ಒಬ್ಬ ಮನುಷ್ಯ ಜೀವನ ಹಾಳಾಗುವುದು,ಯಾವುದನ್ನು ಪ್ರತ್ಯಕ್ಷವಾಗಿ ಕಂಡು ಅನೇಕ ರಾಜಕೀಯ ಪಕ್ಷಗಳು ಅನೇಕಾನೇಕ ಮಹನೀಯರು ಹೇಳಿದ್ದಾರೋ,ಯಾವುದು ತಪ್ಪು ಎಂದು ಕೆಲವು ನಾಯಕ ನಟರು ಚಿತ್ರಗಳಲ್ಲಿ ತಿಳಿಸಿದ್ದಾರೆಯೋ,ಅದೆಲ್ಲವೂ ಅವರಿಗೆ ಹಾಗೂ ನಮಗೂ ಗೊತ್ತಾಗದ ರೀತಿಯಲ್ಲಿ ಸರಿ ಆಗಿಬಿಟ್ಟಿದೆ.ಮಾನ್ಯವಾಗಿ ಬಿಟ್ಟಿದೆ.

ಹೌದು ಸ್ವಾಮಿ.. ಇದೇ ನಮ್ಮ ಪ್ರಪಂಚ. ಇಷ್ಟೇ ನಮ್ಮ ಜನರ ಪಾಡು.ಈ ಸಮಸ್ತ ಪ್ರಪಂಚದಲ್ಲಿ ಹಣವಿದ್ದರೆ ಸತ್ಯ ಸುಳ್ಳಾಗುವುದು.ಸುಳ್ಳು ಸತ್ಯವಾಗಿ ಮೆರೆಯುವುದು.ಚಿತ್ರ ಮಂದಿರದಲ್ಲಿ ಗೆಳೆಯರ ಜೊತೆ ಕುಳಿತು ಚಿತ್ರ ವೀಕ್ಷಿಸುವ ಸಮಯದಲ್ಲಿ ಚಿತ್ರದ ಪ್ರಾರಂಭದಲ್ಲಿ "ನಾನು ಮುಖೇಶ್......ಧೂಮಪಾನ,ಮದ್ಯಪಾನ ಆರೋಗ್ಯಕ್ಕೆ ಹಾನಿಕರ.ಎಂದು ರಾಹುಲ್ ದ್ರಾವಿಡ್ ರಿಂದ ಹೇಳಿಸಿ,ನಮ್ಮ ದೇಶದ ರಾಷ್ಟ್ರಗೀತೆಯನ್ನು ಕೇಳಿ ಗೌರವದಿಂದ ಎದ್ದು ನಿಂತು,(ಕೆಲವರು ಅಹಂಕಾರದಿಂದ ಕುಳಿತು) ಆನಂತರ ಪ್ರಾರಂಭವಾಗುವ ಸಿನಿಮಾದಲ್ಲಿ ಸಿಗರೇಟ್ ಹಾಗೂ ಮದ್ಯದ ಬಾಟಲಿಯ ಜೊತೆ ಎದುರು ಬರುವ ಸಿಗರೇಟ್ ಹಾಗೂ ಮದ್ಯದ ದಾಸ ನಮ್ಮ ನಾಯಕ.ಜೀವವೇ ಇಲ್ಲದೇ ಇರುವ ದುಶ್ಚಟ ಕ್ಕೆ ದಾಸನಾದವ, ಆ ಕೆಟ್ಟ ಚಟದಿಂದ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಸಾಧ್ಯವೇ ಇಲ್ಲದ ಒಬ್ಬ ವ್ಯಸನಿ ನಮಗೆ ಅದೆಷ್ಟು ಪ್ರಿಯ ಎಂದರೆ,ನಮ್ಮ ಮೊಬೈಲ್ ನಲ್ಲಿ ನಮ್ಮ ಚಿತ್ರಗಳಿಗಿಂತ ಅವರ ಫೋಟೋಗಳನ್ನು ತುಂಬಿಸಿಕೊಂಡು ಅವರಂತೆ ವ್ಯಸನಿ ಆಗುವ ಲಕ್ಷಣಕ್ಕೆ ನಮ್ಮ ಯುವ ಜನತೆ ಧುಮುಕುತ್ತದೆ.ಹಾಗಂತ ಕೇವಲ ಭಾರತ ಚಿತ್ರರಂಗ ಅಷ್ಟೆ ಅಲ್ಲ.ಎಲ್ಲಾ ಚಿತ್ರರಂಗದ ಕರ್ಮ ಇಷ್ಟೆ.ಕಡಿಮೆ ಹಣ ಇರುವ ಚಿತ್ರದಲ್ಲಿ ಬೀಡಿ,ಸಿಗರೇಟ್ ಇದ್ದರೆ,ಹೆಚ್ಚು ಹಣದ ಚಿತ್ರದಲ್ಲಿ ಚುಟ್ಟ,ಮೊದಲಾದ ಬ್ರಾಂಡೆಡ್ ಸಿಗಾರ್ಗಳು ಬರುತ್ತವೆ.ಹಣದಲ್ಲಿ ವ್ಯತ್ಯಾಸ ಇರಬಹುದು.ಆದರೆ ಯೋಚನೆಯಲ್ಲಿ ಅಲ್ಲ.ಚಿತ್ರದಲ್ಲಿ ಬರುವ ಕುಡುಕನ ಹಾಡು ಪ್ರಖ್ಯಾತಿ , ಹಣ ಹಾಗೂ ಜನರ ಬಾಯಲ್ಲಿ ಬಾಯಿ ಪಾಠವಾಗಿ ಹೆಸರು ಪಡೆದಷ್ಟು,ಒಳ್ಳೆಯ ಹಾಡು ಅಥವಾ ಪ್ರೀತಿಯ ಹಾಡುಗಳು ಯೋಚನೆಗೆ ಹಾಗೂ ನೆನಪಿಗೆ ಕೂಡ ಬರುವುದಿಲ್ಲ.

ಕೆಲ ವರ್ಷಗಳ ಹಿಂದೆ ಹಳ್ಳಿಯ ಕಟ್ಟೆಗಳಲ್ಲಿ ನಾಲ್ಕು ಜನ ಒಟ್ಟಿಗೆ ಸೇರಿ ಇಸ್ಪೀಟ್ ಆಡುವ ಸಮಯದಲ್ಲಿ, ಆ ಹಳ್ಳಿಯ ಪೊಲೀಸ್ರು ಹಿಡಿದು,ಬಡಿದು 2 ದಿನ ಜೈಲಿಗೆ ಹಾಕಿ,ಕೆಟ್ಟ ವ್ಯಸನಗಳಿಗೆ ತುತ್ತಾಗಿ ಜೀವನವನ್ನು ಹಾಳು ಮಾಡಿಕೊಳ್ಳಬೇಡ ಎಂದು 4 ಬುದ್ದಿ ಮಾತು ಹೇಳಿ ಬಿಡುತ್ತಿದ್ದರು. ಆದರೆ ಪ್ರಸ್ತುತದಲ್ಲಿ ಕರ್ಮ,ಜೀವನ ಹೇಗೆ ಆಗಿ ಹೋಗಿದೆ ಎಂದರೆ ದೊಡ್ಡ ದೊಡ್ಡ ನಾಯಕ ನಟರುಗಳೇ "ತೀನ್ ಪತ್ತಿ" ಆಡಿ,ಹಣ ಗಳಿಸಿ ಎಂದು ಒಸರುವಾಗ, ಜೂಜಾಟಕ್ಕೆ ಬೆಂಬಲ ನೀಡುವ ನಾಯಕರನ್ನು ಯಾವ ಪೊಲೀಸ್ ಅಧಿಕಾರಿಯೂ ವಿಚಾರಿಸಲು ಹೋಗಲಿಲ್ಲ.ಅಥವಾ ಇಂಟರ್ನೆಟ್ ಮೂಲಕ ಸಾವಿರಾರು ರೂಪಾಯಿ ಹಣವನ್ನು ಕಳೆದುಕೊಂಡು,ಅಥವಾ ಬಾಚಿಕೊಂಡ ಯಾವ ವ್ಯಸನಿಯ ಬಗ್ಗೆಯೂ ಸರಕಾರವಾಗಲೀ,ಪೊಲೀಸ್ ಆಗಲೀ ತಲೆ ಕೆಡಿಸಿಕೊಳ್ಳಲಿಲ್ಲ.ಪ್ರತ್ಯಕ್ಷವಾಗಿ ಅನುಭವಕ್ಕೆ ಬರುವ ಇಸ್ಪೀಟ್ ಕಾರ್ಡ್ ಮೂಲಕ ಆಡುವ ಆಟ ಸಂಪೂರ್ಣ ಪ್ರಪಂಚಕ್ಕೆ ತಪ್ಪಾಗಿ ಕಂಡರೆ,ಅದೇ ತೀನ್ ಪತ್ತಿ ಮೊದಲಾದ application ಮೂಲಕ ಆಡುವ ವ್ಯಸನಿಗಳ ಆಟ ಹೇಗೆ ತಾನೇ ಸರಿ ಆಗಿ ಹೋಯಿತೋ?

ಹೀಗೆ ಮೊನ್ನೆ ಒಮ್ಮೆ ಅಂಗಡಿಗೆ ಸ್ವಲ್ಪ ಮನೆಗೆ ಅವಶ್ಯಕತೆ ಇದ್ದ ಸಾಮನು ತರಲು ಅಂಗಡಿಗೆ ತೆರಳಿದ್ದೆ.ಮದ್ಯದಲ್ಲಿ ಒಂದು ಬೈಕ್ ನಲ್ಲಿ ಬಂದ 2 ಜನ ಹುಡುಗರು (ಸುಮಾರು 2 puc ) ನಾ ಇದ್ದ ಅಂಗಡಿಗೆ ಬಂದು 2 king's,2 small ಕೊಡಿ ಎಂದ.ಕೊನೆಯಲ್ಲಿ ಎಷ್ಟು ಎಂದು ಅಂಗಡಿಯವನ ಬಳಿ ಕೇಳಿದಾಗ ಅವ ಹೇಳಿದ.68 ರೂಪಾಯಿ.2 ರೂಪಾಯಿ ಚಿಲ್ಲರೆ ಕೊಡಲು ಹೋದಾಗ 2 ರೂಪಾಯಿಗೆ ಚಾಕಲೇಟ್ ಕೊಡಿ ಎಂದು ಹೇಳಿ ತೆಗೆದುಕೊಂಡು ಹೋದ.ಅವತ್ತೇ ತಿಳಿದಿದ್ದು. ಸಿಗರೇಟಗೆ ಅಷ್ಟು ಹಣ ಇದೆ ಎಂದು.ಅಂಗಡಿಯ ಮಾಲೀಕ ಹೇಳಿದ."ನೋಡಿ.ಭಟ್ಟರೇ.ಎಲ್ಲಾ ಎಷ್ಟು ಚಿಕ್ಕ ಮಕ್ಕಳು.ಈಗಲೇ ಸಿಗರೇಟ್ ಅನ್ನುವ ಚಟ.ಅವರ ಅಪ್ಪ ಅಮ್ಮ ಕೂಲಿ ಕೆಲಸಕ್ಕೆ,ದಿನ ಸಂಬಳ ಕೆಲಸಕ್ಕೆ ಹೋಗುವ ಜನ.ಇವರಿಗೆ ದಿನಕ್ಕೆ ಸಿಗರೇಟ್ ಸೇದಲು ಕಡಿಮೆ ಎಂದರೂ 200 ರೂಪಾಯಿ ಬೇಕು.ಇನ್ನೂ ಮದ್ಯದಲ್ಲಿ ಸಿನಿಮಾ,ಅದು ಇದು ಅನ್ನುವ ಶೋಕಿ ಬೇರೆ.ಒಳ್ಳೆ ಹುಡುಗರು.ಆದರೆ ಸಹವಾಸದಿಂದ ಕೆಟ್ಟವರಾದರು ಅಷ್ಟೆ"ಎಂದ.ನಾನು ಕೇಳಬೇಕು ಎಂದಿದ್ದೆ.ನೀವೇಕೆ ಇದು ಕೆಟ್ಟದ್ದು ಎಂದು ತಿಳಿದರೂ ಮಾರುತ್ತಾ ಇದ್ದೀರಿ ಎಂದು. ಕೇಳಿದ್ದರೆ ಅವನು ವ್ಯಾಪಾರ ಎಂದು ಹೇಳುತ್ತಿದ್ದ.ಅಷ್ಟೆ..ಹಾಗಾದರೆ ಅದ್ಹೇಗೆ ಮಕ್ಕಳು ಅಷ್ಟು ಬೇಗ ಕೆಟ್ಟದರಲ್ಲಿ ಆಸಕ್ತರಾಗುತ್ತಾರೆ??ಅದು ತಪ್ಪು ಎಂದು ತಿಳಿದಿದ್ದರೂ ಅದು ಹೇಗೆ ಸರಿ ಎಂದು ಸಮರ್ಥಿಸುತ್ತಾರೆ??ಸಿನಿಮಾ ಅನೇಕ ವ್ಯಕ್ತಿಗಳಿಗೆ ಜೀವನ ನೀಡಿರಬಹುದು. ಹಾಗೇ ಅದೆಷ್ಟು ಜನರ ಜೀವನವನ್ನು ಹಾಳು ಮಾಡಿದೆಯೋ?ಅದು ಆ ದೇವರೇ ಬಲ್ಲ.

ಹೆಸರು ಹೇಳಲು ನಮಗೇನು ಭಯ.ಒಬ್ಬ ಸ್ವಾತಂತ್ರ ಹೋರಾಟಗಾರನ ಪಾತ್ರ.ಭಗತ್ ಸಿಂಗ್ ಎಂದು ಚಿತ್ರದಲ್ಲಿ ನಾಯಕನ ಹೆಸರು.ಕ್ರಾಂತಿಕಾರಿ.ಅಂತಹ ಪಾತ್ರ ಮಾಡುವುದು ಕಷ್ಟ.ಅಷ್ಟು ಒಳ್ಳೆಯ ಅಭಿನಯ.ಅಂತಹ ಅಭಿನಯ ನೋಡಿ ಆ ಚಿತ್ರದ ನಾಯಕನಾದ ಅಜಯ್ ದೇವಗನ್ ಅವರನ್ನು ಅನೇಕ ಜನ ಅನುಸರಿಸಿದ್ದು ಇದೆ.ಆನಂತರ ಬರುವ ಯಾವುದೋ ಕೇಸರಿಯ ವಿಮಲ್ ಪ್ರಾಯೋಜಕತ್ವದಲ್ಲಿ ಈ ನಾಯಕ ಗುಟ್ಕಾ ತಿನ್ನಿ ಎಂದು ಅದು ಹೇಗೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಾನೆ? ಅದೇ ಅವನ ಮಕ್ಕಳಿಗೆ ಗುಟ್ಕಾ ತಿನ್ನಿ ಎಂದು ಬೆಂಬಲ ನೀಡುವನೋ? ಇನ್ನು ಚಿತ್ರದಲ್ಲಿ ಹೆಣ್ಣು ಮಕ್ಕಳ ಮೇಲೆ ಅದೇನೋ ಭಾರಿ ಗೌರವ,ಪ್ರೀತಿ ಇರುವಂತೆ ನಟಿಸುವ ನಟರುಗಳು ತಮ್ಮ ನಿಜ ಜೀವನದಲ್ಲಿ ತಮ್ಮ ಹೆಂಡತಿಯರ ಜೊತೆಯಲ್ಲೇ ಹಳಸಿ ಕೊಂಡಿರುವ ಸಂಬಂಧ ಇರುವ ಇವರುಗಳು,ಚೈನ್ ಸ್ಮೋಕರ್ ಎಂದೇ ಪ್ರಖ್ಯಾತಿ ಪಡೆದ ಸುದೀಪ್,ಕೆಟ್ಟ ಚಟವನ್ನೇ ಬಿಡಲಾಗದ ಈ ನಾಯಕ ನಟರು "play rummy,play ತೀನ್ ಪತ್ತಿ" ಎಂದು ಸಾಮಾನ್ಯ ಜನರ ಜೀವನವನ್ನು ಹಾಳು ಮಾಡಿ ಅದರಿಂದ ಬರುವ ಹಣದಿಂದ,ಹಾಳಾದ ಸಂಸಾರದ ಹೆಣ್ಣು ಮಕ್ಕಳ ಶಾಪವಿದ್ದರೂ ಅದು ಹೇಗೆ ಸುಖವಾಗಿ ನಿದ್ರಿಸುವರೋ?ಅಥವಾ ಅವನೇನು ಆ ಆಟವನ್ನು ಆಡುವನೋ? ಇನ್ನೂ ಚಿತ್ರಗಳಲ್ಲಿ ಸತೀ ಸಾವಿತ್ರೀ ಯ ರೀತಿ ಅಭಿನಯಿಸುವ ಈ ನಾಯಕಿ ಶಿರೋಮಣಿಗಳ ಕರ್ಮ ಕಾಂಡ,ವ್ಯಸನಿಗಳ ಮದ್ಯದ ಬ್ರೋಕರ್ ಕೆಲಸ ಮಾಡಿಕೊಂಡು,ತಾವು ವ್ಯಸನಿ ಆಗಿ ತಮ್ಮ ಜೀವನದ ಗೊತ್ತು ಗುರಿ ಇಲ್ಲದೇ ಇನ್ನೊಬ್ಬರಿಗೆ ಚಿತ್ರದ ಮೂಲಕ ಉಪದೇಶ ಮಾಡುವಾಗ ಮನಸಾಕ್ಷಿ ಎನ್ನುವುದು ಅದೆಷ್ಟು ಸುಖವಾಗಿ ಮಲಗಿರುವುದು??ದೇವನೇ ಬಲ್ಲ.ಮದುವೆ ಆಗಿ 10,12 ವರ್ಷ ಸಂಸಾರ ಮಾಡಿ ಗಂಡನ ಬಿಟ್ಟು  ಕಪೂರ್ ನ ಹಿಂದೆ ಓಡಿ ಹೋಗಿ 12 ವರ್ಷ ಕಡಿಮೆ ವಯಸ್ಸಿನ ಅರ್ಜು ನ್ ನನ್ನು ಒಲಿಸಿಕೊಂಡ ಮಲೈಕಾ ಅರೋರಾ ಕೆಟ್ಟ ಚಟ ಹಾಗೂ ಕ್ಯಾನ್ಸರ್ ರೋಗಕ್ಕೆ ಕಾರಣ ಆಗುವ ಚೈನಿ ಕೈನಿ ಯ ಪ್ರಾಯೋಜಕತ್ವ ನೀಡುವಳು.ಒಂದು ಹುಡುಗಿಯ ವಿಷಯಕ್ಕೆ ಪ್ರೀತಿಯಲ್ಲಿ ಬಿದ್ದು ಹೊಡೆದಾಡುವ,ಅದಕ್ಕಾಗಿ ಯಾವ ರೀತಿ ಕೊಲೆ ಮಾಡಬೇಕು,ಅಪ್ಪ ಅಮ್ಮನಿಗೆ ತಿಳಿಯದಂತೆ ಸಿಗರೇಟ್ ಎಲ್ಲಿ ಇಟ್ಟುಕೊಳ್ಳಬೇಕು,ಯಾವ ರೀತಿಯಾಗಿ ಶಿಕ್ಷಕರನ್ನು ಮೋಸ ಮಾಡಬೇಕು,ಯಾವ ರೀತಿ ಪರೀಕ್ಷೆಯಲ್ಲಿ ನಕಲಿ ಮಾಡಬೇಕು,ಮನೆಯಲ್ಲಿ ಪ್ರೀತಿಗೆ ಒಪ್ಪದೆ ಇದ್ದರೆ ಹೇಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು,ಹೇಗೆ ಓಡಿ ಹೋಗಬೇಕು ಇದೆಲ್ಲವೂ ಸ್ವಲ್ಪವೂ ತೊಂದರೆ ಇಲ್ಲದೇ,ಸರಿಯಾಗಿ ಚಲನ ಚಿತ್ರಗಳಲ್ಲಿ ತೋರಿಸುತ್ತಾರೆ..ಸರಿಯಾಗಿ ಚಲನ ಚಿತ್ರದ ಮೂಲಕ ಈ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಹೊರಟಿದ್ದಾರೆ.ಕೃಷ್ಣ ಮೃಗವನ್ನು ಕೊಂದ,ಕುಡಿದು ಅನೇಕ ಜನರ ಜೀವ ತೆಗೆಯುವ ಸಲ್ಮಾನ್ ಖಾನ್ ಪೊಲೀಸ್ ಅಧಿಕಾರಿಯ ವೇಷದಲ್ಲಿ ಎಲ್ಲಾ ಜನರಿಗೆ ಉಪದೇಶಿಸುತ್ತಾನೆ.ಕೆಟ್ಟ ಚಟಗಳಿಗೆ ಬಲಿಯಾಗಿ ತನ್ನ ಮನೆಯಲ್ಲಿ ದೇಶದ್ರೋಹಿ ಜನರಿಗೆ ಬೆಂಬಲ ನೀಡುವ ವ್ಯಕ್ತಿಗಳು ಚಿತ್ರದಲ್ಲಿ ಪೊಲೀಸ್ ಅಥವಾ ಮಿಲಿಟರಿ ಆಗಿ ನಮಗೆ ಉಪದೇಶ ಮಾಡುತ್ತಾರೆ..ಅದಕ್ಕೆ ಚಿತ್ರಮಂದಿರದಲ್ಲಿ ಕುಳಿತು ಶಬ್ದ ಮಾಡುವ,ಹಾರಾಡುವ,ನಮ್ಮ ನಾಯಕ ಮೇಲೆ,ನಮ್ಮ ನಾಯಕ ಮೇಲೆ ಎಂದು ಕಿರಿಚಾಡುವ ಜನರು ಎಂದು ಕೆಟ್ಟ ವ್ಯಸನಿಯಾದ ನಟನನ್ನು ಪ್ರತ್ಯಕ್ಷವಾಗಿ ನೋಡಲೇ ಇಲ್ಲ.ಅವನಷ್ಟು ಸಂಪಾದನೆ ಮಾಡಲೇ ಇಲ್ಲ. public place ಗಳಲ್ಲಿ ಧೂಮಪಾನ ನಿಷೇಧ..ಇದು ಕಾನೂನಿನ ನಿಯಮ.ಯಾವುದಾದರೂ ಸಾಮಾನ್ಯ ವ್ಯಕ್ತಿಗಳು ಬಸ್ ನಿಲ್ದಾಣ ಅಥವಾ ರೇಲ್ವೆ ನಿಲ್ದಾಣದಲ್ಲಿ ಧೂಮಪಾನ ಮಾಡಿದರೆ ಅದನ್ನು ಅಪರಾಧ ಎಂದು ತಿಳಿಸುವ ವ್ಯವಸ್ಥೆ,ಚಲನ ಚಿತ್ರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ನಾಯಕನ ಬೆನ್ನಿಗೆ ಬೆಂಗಾವಲಾಗಿ ನಿಲ್ಲುವುದು. ದೇವರ ವಿಗ್ರಹಗಳಿಗೆ ಹಾಲನ್ನು ಹಾಕುವಾಗ "ಬಡವರಿಗೆ ನೀಡಬಹುದು ಇದನ್ನು" ಎಂದು ಬೊಬ್ಬಿರಿಯುವ ಎಡಚರರಿಗೆ,ನಾಯಕ ನಟನ ದೊಡ್ಡ ಭಾವಚಿತ್ರಗಳಿಗೆ ಹಾಲು ಸುರಿಯುವುದು ಕಾಣಲೇ ಇಲ್ಲ.ಎಷ್ಟೆಂದರೂ ಬುದ್ದಿ ಜೀವಿಗಳು ಜಾಣ ಕುರುಡರು ಅಲ್ಲವೇ??

ಬರೀ ಚಿತ್ರ ರಂಗ ಅಷ್ಟೆ ಏನಲ್ಲ.ನಮ್ಮ ದೇಶದ ಪ್ರಧಾನ ಕ್ರೀಡೆ.ಕ್ರಿಕೆಟ್ ಕೂಡ ಇದಕ್ಕೆ ಜೊತೆ ಆಗಿ ನಿಂತಿದೆ.ಎಷ್ಟೆಂದರೂ ಬಾಲಿವುಡ್ ಹಾಗೂ ಕ್ರಿಕೆಟ್ ಗೆ ಅವಿನಾಭಾವ ಸಂಬಂಧ ಅಲ್ಲವೇ?. cricket betting is affence.ಯಾವುದಾದರೂ ಒಬ್ಬ ಆಟಗಾರ,ಅಥವಾ ಯಾವುದೋ ಬಾರ್ ನಡೆಸುವ ಯಜಮಾನ,ಯಾವುದೋ ಬುಕ್ಕಿ ಒಂದು ಪಂದ್ಯದಲ್ಲಿ ಇವನು ಇಷ್ಟು ರನ್ ಹೊಡೆಯುವನು,ಇವನು ಇಷ್ಟು ವಿಕೆಟ್ ತೆಗೆಯುವನು,ಇವನು ಸೊನ್ನೆ ಗೆ ಹೊರ ಹೋಗುವನು ಎಂದು ಬೆಟ್ಟಿಂಗ್ ಕಟ್ಟುವುದು affence.ಕಾನೂನು ರೀತಿಯಲ್ಲಿ ಅಪರಾಧ.ಭಾರತದಲ್ಲಿ ಬೆಟ್ಟಿಂಗ್ ವಿಷಯಕ್ಕೆ ಅನೇಕಾನೇಕ ಕ್ರೀಡಾ ಪಟುಗಳು ತಮ್ಮ ಜೀವನ ಹಾಳುಮಾಡಿಕೊಂಡು ಹೋಗಿದ್ದಾರೆ.ಅನೇಕ ತಂಡಗಳು ನಿಷೇಧ ಅನುಭವಿಸಿದ್ದಾವೆ.ಪ್ರಪಂಚದ ಶ್ರೀಮಂತ ಕ್ರಿಕೆಟ್ ಸರಣಿ indian premier league ನ ಚೆನೈ,ರಾಜಸ್ತಾನ ತಂಡಗಳು 2 ವರ್ಷ ನಿಷೇಧ ಆಗಿದ್ದವು.ಕಾರಣ ಈ ಬೆಟ್ಟಿಂಗ್..ಆದರೆ ಈ ವರ್ಷದ ipl ನ ವಿಶೇಷ ಏನು ಗೊತ್ತೋ? ಬೆಟ್ಟಿಂಗ್ ಮಾಡುವ ಕಂಪನಿಗಳೇ ಒಡೆಯರಾಗಿದ್ದು.. ಹೌದು ಸ್ವಾಮಿ..ಯಾವ ದೇಶದಲ್ಲಿ ಬೆಟ್ಟಿಂಗ್ ಅನ್ನೋದು ಕಾನೂನು ಬಾಹಿರ ಆಗಿತ್ತೋ ಅಲ್ಲೇ ಬೆಟ್ಟಿಂಗ್ ಲೀಗಲ್ ಆಗಿ ಬದಲಾಗಿದೆ.ಈ ವರ್ಷದ ipl ನಲ್ಲಿ dream eleven,my team eleven,my circle app,mobile premier league, fantasy cricket app,gamezy app. ಒಂದೋ ಎರಡೋ,,ನೂರಾರು application ಗಳು ಕಾನೂನಿನ ಕೆಳಗೆ ನಮಗೇ ಗೊತ್ತಿಲ್ಲದಂತೆ ಬೆಟ್ಟಿಂಗ್ ನಡೆಸುತ್ತಿದೆ.ಇದರ ಜೊತೆ mutual fund ಬೇರೆ.ಅದರಲ್ಲಿ ಮಣ್ಣು ತಿಂದ ಜನಗಳೇ ಹೆಚ್ಚು.ಹಣ ಕಟ್ಟುವಾಗ ದುರ್ಬೀನು ಹಿಡಿದು ಕೊಂಡು ಓದಲೂ ಕಷ್ಟ ಆಗುವ 20 ಪುಟದ ಪುಸ್ತಕದ ನಿಯಮಗಳನ್ನು ಓದುವ ಸಾಹಸಕ್ಕೆ ಯಾವ ಒಬ್ಬ ಮೂರ್ಖ ಕೂಡ ಕೈ ಹಾಕುವುದಿಲ್ಲ.ಅಂತಹ ಕಡೆಗೆ ಹಣ ವಿನಿಯೋಗಿಸಿ ಎಂದು ಹೇಳುವ ಆಟಗಾರರು ನಮ್ಮ ಪ್ರಖ್ಯಾತಿಯ ಸಚಿನ್,ಬಿಸಿಸಿಐ ಅಧ್ಯಕ್ಷ ಗಂಗೂಲಿ,ಧೋನಿ,ವಿರಾಟ್ ಕೊಹ್ಲಿ,ರೋಹಿತ್ ಶರ್ಮಾ,ಹೇಳುತ್ತಾ ಹೋದರೆ ಎಲ್ಲಾ ಕ್ರಿಕೆಟ್ ಆಟಗಾರರ ಹೆಸರು ಹೇಳಬಹುದು.ಹಾಗಾದರೆ ಇವರೆಲ್ಲಾ mutual fund ಅಥವಾ ಈ ಮೇಲೆ ಹೇಳಿರುವ app ಮೂಲಕ ಕೋಟಿಗಟ್ಟಲೆ ಹಣ ಮಾಡುವರೋ?ಅಷ್ಟು ಸುಲಭವಾಗಿ ಹಣ ಮಾಡುವುದಾದರೆ ಇವರೇಕೆ ಕ್ರೀಡಾಂಗಣಕ್ಕೆ ಇಳಿದು ಬೆವರು ಹರಿಸಿ ಕಷ್ಟ ಪಟ್ಟು ಆಡಿ ಹಣ ಸಂಪಾದಿಸಬೇಕು??ಮೊಬೈಲ್ ಹಿಡಿದು ಕೊಂಡರೆ ಸಾಲುವುದಿಲ್ಲವೇ?ಎಲ್ಲಾ ಕ್ರೀಡಾ ಪಟುಗಳು ಸೇರಿ ಬೆಟ್ಟಿಂಗ್ ಅನ್ನು ಕಾನೂನಿನ ಅಡಿಯಲ್ಲಿ ತಂದು ಬಿಟ್ಟರು.waaaw.ಇದೆ ನಮ್ಮ ದೇಶ.ಹಾಗಾದರೆ ಬಹಿರಂಗವಾಗಿ ದುಡ್ಡು ಕಟ್ಟಿ ಬೆಟ್ಟಿಂಗ್ ಮಾಡಿದರೆ ಅಪರಾಧ ಹಾಗೂ ಕೇಸ್ ಆಗುವ ಸಮಯದಲ್ಲಿ,ಮೊಬೈಲ್ ಮೂಲಕ ಬೆಟ್ಟಿಂಗ್ ಮಾಡಿ online fund transfer ಮೂಲಕ ಕಳಿಸುವ ಹಣ ಯಾವುದೇ ಕಾನೂನಿಗೆ ಅಪರಾಧ ಎಂದು ಗೋಚರಿಸುವುದು ಇಲ್ಲ.ಅದರ ಮೇಲೆ ಕೇಸ್ ಕೂಡ ಆಗುವುದಿಲ್ಲ.

ಹಾಗಂತ... ವ್ಯಸನಿಗಳು ಇಲ್ಲಿ ಮಾತ್ರ ಅಲ್ಲ.ಪ್ರಪಂಚದ ದೊಡ್ಡ ದೊಡ್ಡ ಕಂಪನಿಗಳಲ್ಲಿ,ದೊಡ್ಡ ದೊಡ್ಡ ಬ್ಯುಸಿನೆಸ್ ಫೀಲ್ಡ್ ಗಳಲ್ಲಿ,ಅಷ್ಟೆ ಏಕೆ...ಬಿಗ್ ಬಾಸ್ ಎನ್ನುವ ದೊಡ್ಡ ಶೋ ನಲ್ಲಿ ಪ್ರತ್ಯೇಕವಾಗಿ ಒಂದು smoke room...ಎಂದರೆ ಧೂಮಪಾನ ಆರಾಮವಾಗಿ ಇಲ್ಲಿ ಮಾಡಬಹುದು ಎಂದು ಜನರನ್ನು ಅಲ್ಲಿಗೆ ತಳ್ಳುತ್ತಾರೆ.ಇವರೆಲ್ಲ ಪ್ರಪಂಚದ ಬುದ್ದಿವಂತರ ಸಾಲಿನಲ್ಲಿ ಬರುವ ದಡ್ಡ ವ್ಯಸನಿಗಳು.MNC ಕಂಪನಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಯಾವುದು ಸರಿ,ಯಾವುದು ತಪ್ಪು ಎಂದು ತಿಳಿದುಕೊಳ್ಳುವ ಸಾಮರ್ಥ್ಯವೇ ಇಲ್ಲವೇ?ಅಷ್ಟು ಕೆಟ್ಟದಾಗಿ ಹೋಯಿತೇ?ಅಥವಾ ಪ್ರತಿಷ್ಠಿತ ಕಂಪನಿಗಳಲ್ಲಿ smoke room ಇದ್ದರೆ ಮಾತ್ರ ಕೆಲಸ ಸರಿಯಾಗಿ ಆಗುತ್ತದೆಯೇ?ಅಥವಾ frustration ಕಡಿಮೆ ಮಾಡಿಕೊಳ್ಳಲು ಧೂಮಪಾನ, ಮಧ್ಯಪಾನ ಮಾತ್ರ ಪರಿಹಾರವೇ? ನೋವಿನಿಂದ ಹೊರಬರಲು,ತಲೆಬಿಸಿ ಕಡಿಮೆ ಮಾಡಿಕೊಳ್ಳಲು ಕೆಟ್ಟ ವ್ಯಸನಕ್ಕೆ ತುತ್ತಾಗಬೇಕೆ?ಪ್ರಪಂಚದ ಜನ ವಿದ್ಯಾವಂತರಾಗಿ ಬದಲಾಗುತ್ತಿದ್ದಾರೆಯೇ?ಅಥವಾ ಬುದ್ಧಿವಂತರಾಗಿ ವ್ಯಸನಿ ಆಗಿ ಬದಲಾಗುತ್ತಿದ್ದಾರೆಯೇ?ಅಥವಾ lockdown ನಂತರ ಕುಡುಕರ ಅಂಗಡಿಯನ್ನೇ ಮೊದಲು ತೆರೆಸಿದ ಸರ್ಕಾರಕ್ಕೂ ಏನೆನ್ನಬೇಕೋ? ಆ ಭಗವಂತನೇ ಬಲ್ಲ.

ಯಾವ ನಾಯಕ ನಟರು,ನಟಿಯರು,ಕ್ರೀಡಾ ಪಟುಗಳು,ರಾಜಕೀಯ ವ್ಯಕ್ತಿಗಳು,ಯಾರು...... ಯಾರೂ ಕೂಡ ನಮ್ಮ ಜೀವನವನ್ನು ಬದಲಾಯಿಸಲು ಸಾಧ್ಯವಿಲ್ಲ.ನಮ್ಮ ಜೀವನ ನಾವೇ ರೂಪಿಸಬೇಕು.ನಾವೇ ತಿಳಿದುಕೊಳ್ಳಬೇಕು.ಒಬ್ಬ ಕೆಟ್ಟ ರಾಜಕೀಯ ವ್ಯಕ್ತಿಯನ್ನು ಜೈಲಿನಿಂದ ಹೊರ ತರಲು ಪ್ರಯತ್ನಿಸುವ ವಕೀಲ,ಅವನಿಗೆ ಬೆಂಬಲ ನೀಡುವ ಜನ ಅದೆಷ್ಟು ವಿದ್ಯೆ ಕಲಿತಿದ್ದರೂ ಕೂಡ ಅದು ದೇಶಕ್ಕೆ ಮಾರಕವೇ.ಕೆಟ್ಟ ವ್ಯಸನಕ್ಕೆ ತುತ್ತಾಗಿರುವ ನಟರಿಗೆ ಬೆಂಬಲ ನೀಡುವ ಜನಗಳು ಯಾವ ವಿಶ್ವ ವಿದ್ಯಾಲಯದಲ್ಲಿ ತೇರ್ಗಡೆ ಹೊಂದಿದ್ದರೂ ಅದು ಮಣ್ಣು ಪಾಲು.ನಮ್ಮ ದೇಶದಲ್ಲಿ ಇರುವ ಯುವ ಜನತೆಯ ಪಾಲಿನಲ್ಲಿ ಸುಮಾರು 30% ಜನರು ಸಿಗರೇಟ್ ಗೆ ಗುರಿ ಆಗಿದ್ದಾರೆ.ದಿನಕ್ಕೆ ಕೋಟಿಗಟ್ಟಲೆ ಬಿಕರಿ ಸಿಗರೇಟ್ ಬಿಕರಿ ಆಗುವ ದೇಶದಲ್ಲಿ ದೀಪಾವಳಿಯ ಸಮಯದಲ್ಲಿ ಹಚ್ಚುವ ಪಟಾಕಿಯ ಕಾರಣದಿಂದ ವಾಯು ಮಾಲಿನ್ಯ ಉಂಟಾಗುವುದು.ರಾಜಕೀಯ ಸಭೆಯಲ್ಲಿ ಬರದೇ ಇರುವ corona ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ಬರುವುದು.

ನಾನು ನೋಡಿದ ಉತ್ತಮ ವಾಕ್ಯಗಳು.
ಶ್ರೀಮಂತನ ಸಹವಾಸದಿಂದ ಶ್ರೀಮಂತನಾಗುವುದಿಲ್ಲ.ಕಷ್ಟ ಪಡಬೇಕು.
ಬುದ್ಧಿವಂತನ ಸಹವಾಸದಿಂದ ಬುದ್ದಿವಂತ ಆಗಲ್ಲ.ಪರಿಶ್ರಮ ಪಟ್ಟು ಓದಬೇಕು.
ಆದರೆ.....ಒಬ್ಬ ಕೆಟ್ಟ ವ್ಯಸನಿಯ ಸಹವಾಸದಿಂದ ಅದೆಷ್ಟು ಬೇಗ ಕೆಟ್ಟ ವ್ಯಸನಕ್ಕೆ ಗುರಿಯಾಗುವರೋ? ಯಾವುದೇ ಪರಿಶ್ರಮ ಇಲ್ಲದೆ.ಕಷ್ಟ ಇಲ್ಲದೇ..

ಇಂತಿ

ಸಹನಾ 

Category:Technology



ProfileImg

Written by Sahana gadagkar

0 Followers

0 Following