RCB

ProfileImg
08 Jun '24
1 min read


image

ಹೊಸ ಅಧ್ಯಾಯದ ಭರವಸೆ

ಮತ್ತೆ ಮೂಡಿತು ಅಭಿಮಾನಿಗಳಿಗೆ ನಿರಾಸೆ.

ಮುಂದಿನ ಸಲ ಗೆಲ್ಲುವರೆಂಬ ಆಸೆ 

ಗೆದ್ದು ಬೀಗುವೆಯಾ... ಒಮ್ಮೆ ಓ ಕೂಸೇ ?

 

ಬೌಲಿಂಗ್ ನಲ್ಲಿ ಇಲ್ಲ ಸ್ಥಿರತೆ 

ರನ್ ಮಾಡುವುದನ್ನು ಮರೆತೆ.

ಕಾಣುತ್ತಿತ್ತು ಎಲ್ಲರಲ್ಲೂ ಉತ್ಸಾಹದ ಕೊರತೆ

ಮತ್ತೆ ಮತ್ತೆ ಕಂಡಿತು ಅದೇ ವೈಫಲ್ಯತೆ.

 

ಎಣಿಸಿದಿರು ಗರಿಗರಿಯ ನೋಟಿನ ಕಂತೆ 

ಪ್ರಶಸ್ತಿ ಗೆಲ್ಲುವ ಬಗ್ಗೆ ಇಲ್ಲವಾಯ್ತು ಚಿಂತೆ.

ಸೋಲುಗಳು ಸಲಿಸಾಗಿ ಮೊದಲಿನಂತೆ 

ಕೊನೆಗೂ ಮುಕ್ತಾಯವಾಯ್ತು ಈ ಐಪಿಎಲ್ ಸಂತೆ.

 

ವಿಮೆನ್ ಗೆದ್ದು ಸಾಧಿಸಿ ಪಡೆದರು ಪ್ರಶಸ್ತಿ 

ಮೆನ್ ಗೆ  ಯಾಕೋ ಆಲಸ್ಯದ ನಿರಾಸಕ್ತಿ.

ಆರ್.ಸಿ.ಬಿ ಮೇಲೆ ಇರುವುದು ಭಕ್ತಿ 

ಕಪ್ ಗೆಲ್ಲದೆ ಜೀವಕ್ಕಿಲ್ಲ ಮುಕ್ತಿ (ಹುಡುಗರು ಕಪ್).

 

 

 

Category:Poem



ProfileImg

Written by Praveen M

0 Followers

0 Following