ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಮ್ಯಾಕ್ಸ್ ವೆಲ್ ಎದುರಿಸಿದ ಮೊದಲ ಎಸೆತದಲ್ಲೇ ದೀಪಕ್ ಚಹಾರ್ ಬೌಲಿಂಗ್ ನಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚ್ ನೀಡಿ ಔಟಾಗಿದ್ದರು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 3 ರನ್ ಗಳಿಸಿ ಹರ್ಪ್ರೀತ್ ಬ್ರಾರ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲೂ 19 ಬಾಲ್ ಗಳಲ್ಲಿ 28 ರನ್ ಗಳಿಸಿದ್ದ ಮ್ಯಾಕ್ಸವೆಲ್ ಸುನೀಲ್ ನರೇನ್ ಬೌಲಿಂಗ್ ನಲ್ಲಿ ರಿಂಕು ಸಿಂಗ್ ಗೆ ಕ್ಯಾಚ್ ಒಪ್ಪಿಸಿ ಅಲ್ಲೂ ನಿರಾಶೆ ಮೂಡಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಆರ್ ಸಿ ಬಿ ಬ್ಯಾಟಿಂಗ್ ಕೋಟ್ ನೀಲ್ ಮೆಕೆಂಝಿ, ನಿಮಗೆಲ್ಲರಿಗೂ ಇದು ಕ್ರಿಕೆಟ್ ಎಂಬುದು ತುಂಬಾ ಚೆನ್ನಾಗಿ ತಿಳಿದಿದೆ. ಇಲ್ಲಿ ಏರಿಳಿತಗಳು ಸರ್ವೇ ಸಾಮಾನ್ಯ. ಈಗಿನ್ನೂ ಎರಡು ಪಂದ್ಯಗಳು ಮಾತ್ರ ಮುಗಿದಿವೆ. ನಮಗೆಲ್ಲಾ ಮ್ಯಾಕ್ಸಿ ಸಾಮರ್ಥ್ಯ ತುಂಬಾ ಚೆನ್ನಾಗಿ ತಿಳಿದಿದೆ. ಆತ ನಮಗೆ ಸಾಕಷ್ಟು ಪಂದ್ಯ ಗೆಲ್ಲಿಸಿಕೊಡುತ್ತಾನೆ. ಆತ ಟೂರ್ನಿಯಲ್ಲಿ ನಿಧಾನಗತಿಯ ಆಟ ಆರಂಭಿಸಿದ್ದಾನೆ. ಆದರೆ ಐಪಿಎಲ್ ಟೂರ್ನಿ ಸಾಗುತ್ತಿದ್ದಂತೆ ತನ್ನ ಎಂದಿನ ಲಯ ಕಂಡುಕೊಂಡು ತಂಡಕ್ಕೆ ಸಾಕಷ್ಟು ಗೆಲುವು ತಂದುಕೊಡುವ ಭರವಸೆ ಇದೆ" ಎಂದು ಮ್ಯಾಕ್ಸವೆಲ್ ಪರ ಬ್ಯಾಟ್ ಬೀಸಿದ್ದರು.
ಅಲ್ಲದೆ, ನೀವು ಆರಂಭಿಕ ಪಂದ್ಯದಲ್ಲಿ ರನ್ ವೈಫಲ್ಯ ಎದುರಿಸಿದರೆ ನಿಮ್ಮ ಫಾರ್ಮ್ ಕಳೆದುಕೊಂಡಿರಿ ಎಂದರ್ಥವಲ್ಲ. ನಾವಿನ್ನೂ ಟಿ20 ಕ್ರಿಕೆಟ್ ನ ಬಹುನಿರೀಕ್ಷಿತ ಐಪಿಎಲ್ ಟೂರ್ನಿಯ ಆರಂಭಿಕ ಹಂತದಲ್ಲಿದ್ದೇವೆ. ನಿಮ್ಮ ಅದೃಷ್ಟ ರಾತ್ರೋರಾತ್ರಿ ಬದಲಾಗುತ್ತದೆ ಎಂದು ಹೇಳಿದ್ದರು. ಆದರೂ ಮರುದಿನ ಪಂದ್ಯದಲ್ಲೇ ಮ್ಯಾಕ್ಸ್ ವೆಲ್ದು ಅದೇ ಕತೆ. 19 ಬೌಲ್ ಗೆ 28 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡಿದ್ದು. ಆರ್ ಸಿ ಬಿ ಅದೃ ಷ್ಟ ಸರಿಯಾಗಲಿಲ್ಲ.
ವಿಶ್ವಕಪ್ ಏಕದಿನ ಪಂದ್ಯಾವಳಿಯಲ್ಲಿ ದೈತ್ಯ ಆಸ್ಟ್ರೇಲಿಯಾ ತಂಡ ಅಪಘಾನಿಸ್ತಾನ ವಿರುದ್ಧದ ಪಂದ್ಯ ಮರೆಯಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಷ್ಟೊಂದು ರೋಚಕವಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಅಸ್ಟೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ ಇಬ್ರಾಹಿಂ ಜದರನ್ ಆಕರ್ಷಕ 129 ರನ್ ಗಳ ಸಹಾಯದಿಂದ 291 ರನ್ ಕಲೆಹಾಕಿ ಸವಾಲು ಒಡ್ಡಿತ್ತು. ಒಂದು ಹಂತದಲ್ಲಿ ಪಂದ್ಯ ಆಪಘಾನಿಸ್ತಾನ ಗೆದ್ದಂತೆ ಅಂದುಕೊಂಡವರೇ ಹೆಚ್ಚು ಯಾಕೆಂದರೆ, ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸಮನ್ ಗಳು ಆಗಲೇ ಪೆವಿಲಿಯನ್ ಪರೇಡ್ ನಡೆಸಿ ಆಗಿತ್ತು. 69ರನ್ ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ಇಳಿದ ಗ್ಲೆನ್ ಮ್ಯಾಕ್ಸವೆಲ್ ಅಂದು ಮಾಡಿದ್ದು ಚಮತ್ಕಾರವೇ ಸರಿ. ಎದ್ದು, ಬಿದ್ದು, ಮಲಗಿ ಬೀಸಿದ ಬ್ಯಾಟ್ ಗೆ ತಗುಲಿದ ಬಾಲ್ ಬೌಂಡರಿ ಗೆರೆ ದಾಟುತಿತ್ತು. ಅಂದು ಗಾಯಗೊಂಡು ಆಟವಾಡಿದ ಮ್ಯಾಕ್ಸ್ ವೆಲ್ ಮಾಡಿದ್ದು ಡ್ರಾಮಾಕ್ಕಿಂತ ಹೆಚ್ಚು ರೋಚಕವಾಗಿತ್ತು.
ಹೌದು, ಅಂದು ಆತ ಮಾಡಿದ್ದು, ಡ್ರಾಮಾ ಅಲ್ಲದೇ ಮತ್ತಿನ್ನೇನು? ರನ್ ಓಡಲೂ ಆಗದೆ ಇದ್ದರೂ ಪಂದ್ಯ ಮುಗಿಯುವವರೆಗೆ ಕ್ರೀಸ್ ನಲ್ಲಿ ನಿಂತು 201 ರನ್ ಸಿಡಿಸಿದ್ದು ಡ್ರಾಮಾದಂತೆ ಭಾಸವಾಗಿತ್ತು. ಅದು ಅಫಘಾನಿಸ್ತಾನದಂತಹ ತಂಡದ ಎದುರು.
ಹಾಂ, ಈಗ ಅಸಲಿ ವಿಚಾರಕ್ಕೆ ಬರೋಣ, ಹೀಗೆಲ್ಲ ಎದ್ದು, ಬಿದ್ದು, ಮಲಗಿ ಬ್ಯಾಟ್ ಮಾಡುವ ಮ್ಯಾಕ್ಸವೆಲ್ ಗೆ ಐಪಿಎಲ್ ನಲ್ಲಿ ಆಡಲು ಏನು ದಾಡಿ?
ಇಲ್ಲಿವರೆಗಿನ ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳನ್ನು ಗಮನಿಸಿದರೆ ಆಗೊಂದು ಈಗೊಂದು ಪಂದ್ಯದಲ್ಲಿ ಉತ್ತಮ ಆಟವಾಡಿದ್ದು ಬಿಟ್ಟರೆ ಮತ್ತೇನು ಹೇಳಿಕೊಳ್ಳುವಂತ ಆಟ ಮ್ಯಾಕ್ಸ್ ವೆಲ್ ಅವರಿಂದ ಬಂದಿಲ್ಲ. ಹಿಂದಿನ ವರ್ಷದ ಐಪಿಎಲ್ ನಲ್ಲಿ ಮ್ಯಾಕ್ಸವೆಲ್ 14 ಪಂದ್ಯಗಳನ್ನು ಆಡಿ ಪೇರಿಸಿದ್ದು ಕೇವಲ 400 ರನ್. ಅದನ್ನು 14 ಪಂದ್ಯಗಳ ಸರಾಸರಿ ತೆಗೆದಾಗ 28 ರನ್ ಆಗುತ್ತದೆ. ಅದೇ ತಮ್ಮ ದೇಶದ ಪರ ಆಡುವಾಗ ತೋರುವ ಆರ್ಭಟ ಐಪಿಎಲ್ ನಲ್ಲಿ ಯಾಕೆ ಆಗುತ್ತಿಲ್ಲ. ಇದು ಆರ್ ಸಿಬಿಗೆ ಮತ್ತು ಆರ್ ಸಿ ಬಿ ಅಭಿಮಾನಿಗಳಿಗೆ ಆಗುತ್ತಿರುವ ಮೋಸವಲ್ಲವೇ?
ಆಸ್ಟ್ರೇಲಿಯಾ ಪರ ಕುಳಿತು, ನಿಂತು, ಮಲಗಿ, ಎದ್ದು-ಬಿದ್ದು ಬ್ಯಾಟ್ ಮಾಡಿ ಶತಕ ದಾಖಲಿಸುವುದಾದರೆ ಆರ್ ಸಿಬಿ ಪರ ನಿಂತುಕೊಂಡೇ ಅಷ್ಟು ಮಾಡಲಾಗದಿದ್ದರೆ ಹೇಗೆ?
ಮಾಕ್ಸವೆಲ್ ಇಲ್ಲಿ ವರೆಗೆ 12 ಐಪಿಎಲ್ ಪಂದ್ಯ ಆಡಿದ್ದು ಅದರಲ್ಲಿ 400ರನ್ ಗಳ ಅಂಕಿ ದಾಟಿದ್ದು ಕೇವಲ 3 ಬಾರಿ, 2023ರಲ್ಲಿ 400, 2021ರಲ್ಲಿ 513 ಮತ್ತು 2014ರಲ್ಲಿ 552 ರನ್. ದೇಶದ ಪರ ಒಂದೇ ಪಂದ್ಯದಲ್ಲಿ 200 ರನ್ ಗಳಿಸುವ ಆಟಗಾರ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದು ಏಕೆ?
2021ರ ಸೀಜನ್ ನಲ್ಲಿ 15 ಪಂದ್ಯಗಳಲ್ಲಿ 513 ರನ್ ಕಲೆಹಾಕಿದ್ದು, ಅದರಲ್ಲಿ 78 ರನ್ ಅತ್ಯಧಿಕ ಇವರ ಕೊಡುಗೆ. 2022ರಲ್ಲಿ 13 ಪಂದ್ಯಗಳಲ್ಲಿ ಕಲೆ ಹಾಕಿದ್ದು ಬರೀ 301 ರನ್. ಆಗ ಅವರು ಒಂದೇ ಬಾರಿ 50 ಗಡಿ ದಾಟಿದ್ದು, 55 ಅವರ ಅತ್ಯಧಿಕ ರನ್. 2023ರಲ್ಲಿ 14 ಪಂದ್ಯದಲ್ಲಿ 400 ರನ್ ಕಲೆ ಹಾಕಿದ್ದು 6 ಅರ್ಧ ಶತಕ ಬಾರಿಸಿದ್ದಾರೆ. ಇದರಲ್ಲಿ 77 ಅವರ ಅತ್ಯಧಿಕ ರನ್. ಇನ್ನು ಈ ಬಾರಿಯ ಪಂದ್ಯಾವಳಿಯಲ್ಲಿ 3 ಪಂದ್ಯ ಆಡಿ 31 ರನ್ ಗಳಿಸಿದ್ದಾರೆ. ದೇಶದ ಪರ ಆಡುವಾಗ ಇರುವ ರೋಷಾವೇಶ ಆರ್ ಸಿ ಬಿ ಪರವಿಲ್ಲ ಯಾಕೆ?
ಬೌಲಿಂಗ್ ನಲ್ಲೂ ಮ್ಯಾಕ್ ಪೇನ್
2021ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಗ್ಲೆನ್ ಮ್ಯಾಕ್ಸವೆಲ್ ಬ್ಯಾಟಿಂಗ್ ನಲ್ಲಿ ಅಲ್ಲದಿದ್ದರೂ ಬೌಲಿಂಗ್ ನಲ್ಲೂ ಅಂತಹ ಉತ್ತಮ ಗುಣಮಟ್ಟದ ಆಟ ಪ್ರದರ್ಶಿಸಿಲ್ಲ. ಬೆಂಗಳೂರಿನಿಂದ 4 ಸೀಜನ್ ಆಡಿರುವ ಅವರು ಪಡೆದಿದ್ದು ಬೆರೆಳೆಣಿಕೆಯಷ್ಟು ವಿಕೆಟ್ ಮಾತ್ರ ಅಂದರೆ 2021ರಲ್ಲಿ 15 ಪಂದ್ಯ ಆಡಿ 3 ವಿಕೆಟ್, 2022ರಲ್ಲಿ 13 ಪಂದ್ಯ ಆಡಿ 16 ವಿಕೆಟ್, 2023ರಲ್ಲಿ 14 ಪಂದ್ಯ ಆಡಿ 4 ವಿಕೆಟ್ ಕಬಳಿಸಿದ್ದಾರೆ.
ಫ್ಲಾಫ್ ಫ್ಲೆಸಿಸ್
ಇನ್ನು ಡು ಫ್ಲೆಸಿಸ್ ಆರ್ ಸಿ ಬಿ ತಂಡದ ಕ್ಯಾಫ್ಟನ್ ಆಗಿ ಬಂದ 2022ರಲ್ಲಿ 468 ರನ್ ಮತ್ತು 2023ರಲ್ಲಿ ಉತ್ತಮ ಅಂದರೆ 730 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಇಲ್ಲಿ ವರೆಗೆ 3 ಪಂದ್ಯ ಆಡಿರುವ ಪ್ಲೆಸಿಸ್ ಬ್ಯಾಟ್ ಇನ್ನೂ ಕಮಾಲ್ ಮಾಡಿಲ್ಲ. 3 ಪಂದ್ಯಗಳಲ್ಲಿ ಗಳಿಸಿದ್ದು 46 ರನ್ ಮಾತ್ರ. ಡುಪ್ಲೆಸಿಸ್ ಸಹ ಆರ್ ಸಿ ಬಿ ನಿರೀಕ್ಷೆ ತಕ್ಕಂತೆ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ ಎಂದೆನಿಸುತ್ತಿಲ್ಲವೇ?
ನಮ್ಮ ಕೆಜಿಎಫ್ ನಲ್ಲಿ ಕೆ ಮಾತ್ರ ಕೆಲಸ ಮಾಡಿ ಜಿ ಮತ್ತು ಎಫ್ ಸೈಲೆಂಟ್ ಆಗಿದ್ದರೆ ಈ ಸಲಾನೂ ಕಪ್ ನಮ್ದಲ್ಲ, ಹಾಗಾಗದಿರಲಿ ಅನ್ನೋದು ಎಲ್ಲರ ಆಶಯ.
0 Followers
0 Following