ನಗುತಲಿ ನಗಿಸುವ ಈ ಧರೆ
ಇಂದೇಕೋ ಧಗಿಸುತಿದೆ ಈ ಬಗೆ!
ಕಾಲಿಟ್ಟರೆ ಸುಟ್ಟಾವು, ನೆತ್ತಿ ಗಿರಗಿಟ್ಲೆ ಹಾಕ್ಯಾವು,
ಮಂದಿ ಮಕ್ಕಳು ಬೇಡ್ಯಾರು!
ಜೀವಸಂಕುಲ ಮರುಗ್ಯಾವು ,ಓ ರವಿಯೇ,
ಧರೆಇಂಗಿ ಹೋಗುತ್ತಿದೆ,ಸುಮರಾಶಿ ಬಾಡುತ್ತಿದೆ,
ನೀರಿಲ್ಲದ ಹಾಹಾಕಾರ ಹೈರಣವ ಸೃಷ್ಟಿಸಿದೆ.
ಗಿಡಮರಗಳ ಕಡಿದವರು ಮನಸಾರೆ ಮರಗುತಿಹರು.
ಬಾ ಒಮ್ಮೆ ಸಂತೈಸು, ವರ್ಷಧಾರೆ ಸಿಂಪಡಿಸು
ಧಗಧಗಿಸುವ ಧರೆಯಾ ತಂಪೆರೆದು ಹಾರೈಸು.
ಧರೆ ತುಂಬಾ ನೀರು, ಹೊಲದ ತುಂಬಾ ಹಸಿರು
ಉಂಡು ತೇಗಲಿ ನಿನ್ನಾ ನಂಬೀದ ಮಕ್ಕಳು.
ಮರುಕಳಿಸದಿರಲಿ ಧರೆಯಲ್ಲಿ ಈ ಧಗೆಯು
ಇದು ತಿಳಿದು ನಡೆದರೆ ಮನುಜನಿಗೆ ಉಳಿವು!.
ಅಪರಿಚಿತರ ನಡುವೆ ಪರಿಚಿತರ ಇರುವಿಕೆಯ ಹುಡುಕಾಟ
0 Followers
0 Following