ರಾಮ ಎನ್ನಲು ಮನವು
ಖುಷಿಯಾಗುವುದು ನೋಡಾ..
ರಾಮ ನಾಮ ಜಪಿಸುತ ಮನೋಕಾಮನೇ
ನೀಗುವುದು ನೋಡಾ..
ರಾಮನೆಂದರೆ ಅವ
ಅವತಾರಿ ಪುರುಷ...
ನಿಜ ಮನುಜ ರೂಪ
ತಾಳಿದ ಸತ್ಪುರುಷ....
ತಂದೆಯ ವಾಕ್ಯವೇ
ವೇದೋಪದೇಶ..
ಅದಕಾಗಿ ಹದಿನಾಲ್ಕು
ವರುಷ ವನವಾಸ..
ರಾಮ ಕಾಲಿಟ್ಟ ಭೂಮಿ
ಆಯ್ತು ಪುಣ್ಯ ಪಾವನಾ..
ರಾಮ ನಾಮವೇ ಅಳಿಸುವುದು
ಅಂಧಕಾರದ ಭಾವನಾ..
ರಾಮನ ನಿಜಭಂಟ ಆ
ಪವನಸುತ ಹನುಮ..
ಜಗಕೆ ತೋರಿದ ಆ
ಸ್ವಾಮಿನಿಷ್ಠೆಯ ಮಹಿಮ...
ಮತ್ತೆ ಬರಲಿದೆ ಆ
ಗತವೈಭವದ ರಾಮರಾಜ್ಯ..
ಅಳಿಯುವುದು ದಶಕಂಟ
ರಾವಣನ ಸಾಮ್ರಾಜ್ಯ.. . . . . . . . . . . . . .. . . . . . . . . . . . . . .ಕಿರಣ್ 🙈🙉🙊
I am Kiran
0 Followers
0 Following