ಅವದಪುರಿ ರಾಮ

ರಾಮ ರಾಮ ಶ್ರೀ ರಾಮ

ProfileImg
16 Apr '24
1 min read


image

Il ರಾಮಾ ಶ್ರೀ ರಾಮ ರಾಮಾ ll

ಎರಡಕ್ಷರದಲಿ ಏನಿದೆ ಶಕ್ತಿ
ರಾಮಾ ರಾಮಾ ಎಂದರೆ ಮುಕ್ತಿ
ಸಂಕಟ ಮೋಚನ ತಾರಕ ಶಕ್ತಿ
ಅಮಿತಾನಂದ ಮೋಹಕ ಭಕ್ತಿ 
ರಾಮಾ ಶ್ರೀ ರಾಮ ರಾಮಾ  (ನಾಮಾ)

Il ರಾಮಾ ಶ್ರೀ ರಾಮ ರಾಮಾ ll
Il ರಾಮಾ ಶ್ರೀ ರಾಮ ರಾಮಾ ll

ತ್ರೇತಾಯುಗದ  ಸೀತಾರಾಘವ
ದ್ವಾಪರದಲ್ಲಿ  ರಾದಮಾಧವ
ಕಲಿಯುಗದಲಿ ಬಂದೆಯ ಕೇಶವ
ಕರುನಾಡಲೊಲಿದು  ಬಂದಾ ದೈವ
ರಾಮಾ ಶ್ರೀ ರಾಮ ರಾಮಾ   (ನಾಮಾ)

Il ರಾಮಾ ಶ್ರೀ ರಾಮ ರಾಮಾ ll
Il ರಾಮಾ ಶ್ರೀ ರಾಮ ರಾಮಾ ll

ಅರುಣ ಯೋಗಿ ಕೆತ್ತಿದ ಶಿಲ್ಪವ
ಮೈತಾಳಿ ನಿಂದೆ ನೀ ಬಲು ಚೆಲುವ
ನಗುಮೊಗದಲಿ  ಬಗೆ ಬಗೆ ಭಾವ
ಹೇಗೆ ಅರಿಯಲೋ ನಾ ಹುಲು ಮಾನವ
ರಾಮಾ ಶ್ರೀ ರಾಮ ರಾಮಾ (ನಾಮಾ )

Il ರಾಮಾ ಶ್ರೀ ರಾಮ ರಾಮಾ ll
Il ರಾಮಾ ಶ್ರೀ ರಾಮ ರಾಮಾ ll

ಬಾಲಕ ನೀನು ಭೂಮಿಗೆ ಬಂದೆ
ಸಂಕಟ ಹರೆಯಲು ಜಗದೊಳು ನಿಂದೆ
ಅವಧಪುರಿಯೊಳು  ನೀ ನೆಲೆಯಾದೆ
ಕೋದಂಡಪಾಣಿ ಸಂತಸ ತಂದೆ
ರಾಮಾ ಶ್ರೀ ರಾಮ ರಾಮಾ (ನಾಮಾ)

Il ರಾಮಾ ಶ್ರೀ ರಾಮ ರಾಮಾ ll
Il ರಾಮಾ ಶ್ರೀ ರಾಮ ರಾಮಾ ll

ಸಾರ್ಥಕಾವಾಯಿತೋ ನನ್ನೀ ಜನುಮ
ತೇಲಿ ಬರುತಿದೆ ನಿನ್ನಯ ನಾಮ
ಹೃದಯದಿ ನೆಲಸೊ ಪ್ರಭು ಶ್ರೀ ರಾಮ
ನಿನ್ನ ಬಂಟ ನಾನು ಅಲ್ಲವೊ ಹನುಮ

✍️ ವಿಜಯ ಲಕ್ಷ್ಮಿ  ನಾಡಿಗ್  ಮಂಜುನಾಥ್ ಕಡೂರು

Category:Poem



ProfileImg

Written by Vijayalakshmi Nadig B K