ರಾಜ್ ಬಿ ಶೆಟ್ಟಿ ಮಲಯಾಳ ಸಿನಿಮಾ ದಲ್ಲಿ ಅಬ್ಬರ

ಟರ್ಬೊ ಮಲಯಾಳ ಸಿನಿಮಾ

ProfileImg
26 May '24
1 min read


image

ಒಂದು ಮೊಟ್ಟೆಯ ಕಥೆ ಎಂಬ ಸಿನಿಮಾ ದ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಕಾಲಿಟ್ಟವರು ರಾಜ್ ಬಿ ಶೆಟ್ಟಿ. ಕನ್ನಡ ವರ ನಟ ರಾಜ್ಕುಮಾರ್ ಅವರ ಅಭಿಮಾನಿಯಾಗಿರುವ ಕೂದಲಿಲ್ಲದ ಯುವಕನ ಕಥೆ ವ್ಯಥೆ ಈ ಸಿನಿಮಾದ ತಿರುಳಾಗಿತ್ತು. ಈ ಸಿನಿಮಾ ರಾಜ್ ಬಿ ಶೆಟ್ಟಿ ಗೆ ಹೊಸ ಬದುಕನ್ನು ನೀಡಿತ್ತು..

ಮುಂದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು ಶೆಟ್ಟಿ. ಆದರೆ  ಅವರ ದೈತ್ಯ ಪ್ರತಿಭೆ ಯಾನ್ನ ಜನರ ಮುಂದೆ ತೆರದಿಟ್ಟದ್ದು  ಗರುಡ  ಗಮನ  ವೃಷಭ ವಾಹನ ಎಂಬ ಸಿನಿಮಾ. ಈ ಸಿನಿಮದಲ್ಲಿ      ರಿಷಬ್  ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರ ಜೋಡಿ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ನೀಡಿತ್ತು.

ಇದೀಗ ಶೆಟ್ರು ಮಲೆಯಾಳ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.ಮೇಗಾ ಸ್ಟಾರ್ ಮಮ್ಮುಟ್ಟಿ ಅಭಿನಯ ದ ಟರ್ಬೊ ಸಿನಿಮಾ ದ ವಿಲನ್  ನಮ್ಮ ರಾಜ್ ಬಿ ಶೆಟ್ಟಿ. ಈ ಸಿನಿಮಾ ಈಗಾಲೇ ಸೂಪರ್ ಹಿಟ್ ಸಾಲಿಗೆ ಸೇರಿದೆ.

ಇದರಲ್ಲಿ ವಿಲನ್ ಆಗಿ ಅಭಿನಯಿಸಿದ ರಾಜ್ ಬಿ ಶೆಟ್ಟಿ ತನ್ನ ವಿಶ್ವ ರೂಪವನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ತನ್ನ ಎಂದಿನ ಶೈಲಿಯಲ್ಲಿ ಯೇ ಉಡುಪು ದರಿಸಿರುವ ರಾಜ್  ಪಂಚೆ ಮತ್ತು ಶಾಲಿನಲ್ಲಿ ಅಬ್ಬರಿಸಿದ್ದಾರೆ. ಟರ್ಬೊ ಸಿನಿಮಾ ಈಗಾಗಲೇ ಸಿನಿಮಾ ಮಂದಿರ ಗಳಲ್ಲಿ ಪ್ರದರ್ಶನ ಆಗುತ್ತಿದೆ.

ಕಳೆದ 4 ತಿಂಗಳಿನಲ್ಲಿ 5 ಹಿಟ್ ಸಿನಿಮಾ ವನ್ನ ಮಲೆಯಾಳಂ ಚಿತ್ರರಂಗ ನೀಡಿದೆ. ಆದರೆ ಕನ್ನಡ ಚಿತ್ರರಂಗದ ಸ್ಥಿತಿ ಬಿನ್ನವಾಗಿದೆ. ಕನ್ನಡ ಸಿನಿಮಾ ಗಳು ಜನರನ್ನು ತಲುಪುತ್ತಿಲ್ಲ ಮಾತ್ರವಲ್ಲ ಕನ್ನಡ ನಟ ರು ಕೂಡಾ ಪರ ಭಾಷೆ ಯತ್ತ ಹೋಗುತ್ತಿದ್ದಾರೆ.

ಇದರ ಬಗ್ಗೆ ಕನ್ನಡ ಚಿತ್ರರಂಗ ದ ಹಿರಿಯರು ಗಂಬೀರ ವಾಗಿ ಚಿಂತಿಸ ಬೆೇಕಿದೆ 

Category:Movies and TV Shows



ProfileImg

Written by ವೈಮ ರೈ

0 Followers

0 Following