ಮಳೆ

ProfileImg
12 Jun '24
1 min read


image

ಸುರಿದ ಮಳೆಯ ಖುಷಿಗೆ ಅರಳಿ ‌ಹೊಲಕೆ ನಡೆದೆ ನೀನು
ಉರಿವ ಬಿಸಿಲ ಸಹಿಸಲು ಆಗದೆ ಮನದಿ ಕಡೆದೆ ನೀನು

ದೂರಕೆ ತಾಪವ ಸರಿಸಿ ಇಂದು ನೆಮ್ಮದಿ ಕಂಡೆಯಲ್ಲ ಹೇಳು
ದ್ವಾರವ ತೆರೆದು ಸನಿಹ ಕರೆಯಲು ಸುಖವ ಪಡೆದೆ ನೀನು

ನೀರಿಲ್ಲದ ಸ್ಥಿತಿಗೆ ಬಾನಿಂದ ಬುವಿಗೆ ಇಳಿದು ಬಂದ ಇಂದ್ರ
ನಾರಿಯರ ನಿರಂತರ ದುಡಿಮೆಯ ಇಳಿಸಲು ಹೊಸತನು ಹೆಡೆದೆ ನೀನು

ವರುಷವು ತಂಪನು ಎರೆಯಲು ಜನರ ಮೊಗದಲಿ ಮೂಡಿತು ಸಂತಸ
ಮರಗಳು ಹಸಿರಾಗಿ ಚಿಗುರಲು ನಿತ್ಯದ ಕಾರ್ಯವ ತಡೆದೆ ನೀನು

ಕರಿದ ತಿಂಡಿಯ ಇಷ್ಟಕೆ ಒಂದುಕ್ಷಣ ಸೇವನೆಗೆ ಮುರಳಿ ನೋಡಿದ
ಹೃದಯದ ಸಮಸ್ಯೆ ಇದ್ದರೂ ಆಹಾರದ ಮಿತಿಯನು ಒಡೆದೆ ನೀನು

✍ ಮುರಳಿಕೃಷ್ಣ ಕಜೆಹಿತ್ತಿಲು

Category:Poem



ProfileImg

Written by Murali Krishna

DTP Worker, Vittal, Mangalore