ಮಳೆ ಮಲ್ಲಿಗೆ

ಮಲ್ಲಿಗೆಯ ಕಂಪೂ, ಮಳೆಯ ತಂಪು .

ProfileImg
21 May '24
1 min read


image

ನಿನ್ನೆ ಸಂಜೆ…

ಗಾಳಿ - ಮಳೆಯ ರಭಸದ
ಜಗ್ಗಾಟದ ಆಟವು ಮುಗಿದು,
ಬಾಗಿ ಬೆಂಡಾಗಿದ್ದ ಹೂ ಬಳ್ಳಿ 
ನಸುಕಿನಲಿ‌ ಸುಧಾರಿಸಿಕೊಂಡು
ಮಾಗಿದ ಹೂವ ಹೊತ್ತಿತ್ತು...

ಸಿಡಿಲ್ಮಿಂಚಿನೊಡಗೂಡಿ
ಬೋರ್ಗರೆದು ಧರೆಗಿಳಿದ,
ಮಳೆ, ತಂದ ಮರಗಟ್ಟುವ ಚಳಿ ,
ಬೆಳಗಾಗುವಾಗಲೇ ಹಂಚಿನ ಮೇಲೆ,
ಹೂ ಕಂಪಿನೊಡಗೂಡಿ 
ಬೆಚ್ಚಗೆ ಹಬೆಯಾಡುತ್ತಿತ್ತು...

ಸಂಜೆಯೇ ಬಾಳೆನಾರಿನ
ಬಿಗಿ ಉಸ್ತುವಾರಿಗೆ ಸಿಕ್ಕಿ,
ಈ ನಲ್ಬೆಳಗಲಿ ಪಸೆಯಾರದ ನಿನ್ನ
ತುರುಬನೇರಿ ಮಂದಹಾಸ ಬೀರುವ
ಕನಸನು ಹೊತ್ತ ಮೊಗ್ಗು...
ಅರಳಿಯೂ ಅಳುತ್ತಿತ್ತು.💞

Category:PoetryProfileImg

Written by Rakshith Kumar Acharya