1.
ಪ್ರೀತಿ
ನಮ್ಮೊಳಗಿನ ಮನುಷ್ಯತ್ವದ
ಮೊದಲ
ಚಿಲುಮೆ
****
2.
ಬಂದೇ ಬರುತ್ತೆ..!
ಬದುಕೇ ಶಾಶ್ವತವಲ್ಲ, ಅಂದಮೇಲೆ..?
ಕಷ್ಟದ ಕಾಲ ಎಂದಿಗೂ ಶಾಶ್ವತವಲ್ಲ
ಕಷ್ಟವೆನ್ನುವುದು ಸುಖವ ತೋರಿಸುವ ಮುನ್ಸೂಚನೆ
***
3.
ವಿಶ್ವಾಸ
ಸರಿ ಹಾದಿಯಲಿ ಹೋಗ್ತಾ ಇರು ಮನುಜ...
ನಿನಗೆ ಬೇಕಾಗಿರುವುದು
ಸರಿಯಾದ ಸಮಯದಲ್ಲಿ ಸಿಕ್ಕೇ ಸಿಗುತ್ತದೆ..!
****
4.
ಪ್ರಬಲ
ದುರ್ಬಲತೆ
ಆದಾಗ ಎದೆಗುಂದದೀರಿ..
ನಿಮ್ಮ ಮನಸ್ಸು ಆಗಿರಲಿ ಪ್ರಬಲ..!
****
5.
ತಾಳ್ಮೆ
ಎಂದಿಗೂ ಕಳೆದುಕೊಳ್ಳಬೇಡಿ ಸಹನೆ
ಒಳ್ಳೆಯ ದಿನಗಳಿಗೆ ಬೇಕಾಗುತ್ತೆ ಸಮಯ
ದೀರ್ಘ ಸಹನೆ, ತಾಳ್ಮೆಗೂ ಸಿಗುತ್ತೆ ಸಿಹಿ ಫಲ..!
****
7.
ನಿಧಾನ
ನಡಿಗೆ ನಿಧಾನ ಎಂಬುದು ಮುಖ್ಯವಲ್ಲ
ಆದರೆ
ಗುರಿ ಮುಟ್ಟುವ ನಡಿಗೆ ಮುಖ್ಯ ಓ ಗೆಳೆಯ..!
***
8.
ಧೈರ್ಯ
ಧೈರ್ಯ ಎನ್ನುವುದು
ಭಯಕ್ಕಿಂತ ಒಂದು ಹೆಜ್ಜೆ
ಸದಾ ಮುಂದಿರುತ್ತೆ..!
***
9.
ಕನ್ನಡಿ
ಕನ್ನಡಿಯೊಳಗಿನ ಮುಖವ ನೋಡಬೇಡಿ
ಎಂದೆಂದಿಗೂ
ಜಗತ್ತು ನೋಡೋದು ನಿಮ್ಮ ಆಂತರಿಕ ಮುಖವನ್ನು..!
***
10.
ಮಳೆ
ವರ್ಷಕ್ಕೊಮ್ಮೆ
ಭೂಮಿಗೆ
ಬರುವ ವಿಶೇಷ ಅತಿಥಿ..!
******
11. ಕನ್ನಡಿ
ಕನ್ನಡಿಯೊಳಗಿನ
ಮುಖ ಎನ್ನುವುದು ಭ್ರಮೆ
ಮನಸ್ಸಿನೊಳಗಿನ ಮುಖ ವಾಸ್ತವ
ಜಗವ ನೋಡೋದು ಇದನ್ನೇ..!
Author, Journalist, Poet, Anchor, PhD Scholar