ಮೊಲ ಸಿಂಹವನ್ನು ಕೊಂದ ಕತೆ

ಮೊಲದ ಕತೆ

ProfileImg
31 Jan '24
2 min read


image

9. ಮೊಲ ಸಿಂಹವನ್ನು ಕೊಂದ ಕಥೆ:

  ಅತ್ಯಂತ ಸುಂದರವಾದಮಹೀದೇಶದಲ್ಲಿ ದಟ್ಟವಾದ ಒಂದು ಅರಣ್ಯ.ಆ ಅರಣ್ಯದಲ್ಲಿ ಮೃಗರಾಜ ಸಿಂಹವೊಂದು ವಾಸವಾಗಿತ್ತು. ಆ ಸಿಂಹಮೊದಲು ತನ್ನ ಕೈಗೆ ಸಿಕ್ಕಆನೆಗಳನ್ನು ತಿಂದು, ಬಳಿಕಮಹಾರಣ್ಯದ ಮೃಗಗಳೆಲ್ಲವನ್ನು ತಿನ್ನುತ್ತಿದ್ದಿತು. ಅರಣ್ಯದಸುತ್ತಮುತ್ತ ವಾಸಿಸುತ್ತಿದ್ದ ಮುಸಿಯ, ಕಡವೆ, ಜಿಂಕೆ,ಗೋರೆಲ್ಲ, ಹುಲಿ, ಚಿರತೆ,ಸೊಕ್ಕಾನೆ- ಈ ಮೊದಲಾದ ಪ್ರಾಣಿಗಳೆಲ್ಲವೂ ಸಿಂಹರಾಜನ ಕಾಟಕ್ಕೆ ತಡೆಯದಾದವು.

ಹೀಗಿರಲು ಒಂದು ದಿನ ಎಲ್ಲ ಮೃಗಗಳೂ ಗುಟ್ಟಾಗಿ ಸಭೆ ಸೇರಿ ತಮ್ಮ ತಮ್ಮಲ್ಲೇ ಸಮಾಲೋಚಿಸಿ ಸಿಂಹನಲ್ಲಿಗೆ ಬಂದು,ನಮಸ್ಕರಿಸಿ, ತಮ್ಮ ಕಷ್ಟವನ್ನು ಭಿನ್ನವಹಿಸಿಕೊಂಡವು:

  "ದೇವಾ ! ನೀವು ಇಲ್ಲಿಯ ತನಕ ನಮ್ಮೆಲ್ಲರನ್ನು ರಕ್ಷಿಸಿದ್ದಾಯಿತು. ಈಗ ನಾವು ನಿಮಗೆ ಎದುರಾದರೆ ಉಳಿಯಲು ಸಾಧ್ಯವೇ ? ನಿನ್ನಾಜ್ಞೆಯನ್ನು ಮೀರಲು ಸಾಮಾನ್ಯರಾದ ನಮಗೆ ಯಾವ ಕಾಲಕ್ಕೂ ಸಾಧ್ಯವಿಲ್ಲ. ಹೋಗಲಿ, ನಿಮಗೆ ಎದುರಾಗಿ ನಾವು ಬಾಳುವುದಾದರೂ ಏತಕ್ಕೆ ? ನೀನೇ ನಮ್ಮನ್ನು ಕಾಯಬೇಕು. ನಿಮಗೆ ಆನೆಗಳು ಸಿಕ್ಕದಿದ್ದರೆ ನಾವು ನಿತ್ಯವೂ ಒಂದೊಂದು ಮೃಗವನ್ನು ಕಳಿಸುತ್ತೇವೆ. ನೀವು ಅದನ್ನು ಸ್ವೀಕರಿಸಿದರೆ ಮಾತ್ರ ನಾವು ಇಲ್ಲೇ ಇರುತ್ತೇವೆ. ಇಲ್ಲದಿದ್ದರೆ ಈಗಲೇ ಇಲ್ಲಿಂದ ಹೊರಟು ಹೋಗುತ್ತೇವೆ". 

  ಮೃಗರಾಜನಿಗೆ ಪ್ರಾಣಿಗಳ ಮಾತು ಸರಿಯೆನ್ನಿಸಿತು. 'ಹಾಗೆ ಆಗಲಿ' ಎಂದು ಒಡಂಬಟ್ಟು, 'ಬಾಯಾಳು' ಎಂಬ ನರಿಯನ್ನು ಪ್ರಾಣಿಗಳನ್ನು ಸರದಿ ಪ್ರಕಾರ ತನ್ನ ಬಳಿಗೆ ಕಳಿಸುವ ಮುಖ್ಯಸ್ಥನನ್ನಾಗಿ -ನೇಮಿಸಿತು. ಅಂದಿನಿಂದ ಎಲ್ಲ ಪ್ರಾಣಿಗಳು ಆ ಮಹಾ ರಣ್ಯದಲ್ಲಿ ಯಾವ ಭಯ-ಭೀತಿಗಳಿಲ್ಲದೆ ಸ್ವತಂತ್ರವಾಗಿ ಓಡಾಡತೊಡಗಿದವು. ಪ್ರತಿದಿನ ಮೃಗರಾಜನಲ್ಲಿಗೆ ಆಹಾರವಾಗಿ ಕಳಿಸುವ ಪ್ರಾಣಿಯ ತಂಡವನ್ನು ಮೊದಲು ಗೊತ್ತು ಮಾಡಲಾಯಿತು, ಬಾಯಾಳು ಪ್ರತಿನಿತ್ಯ ಒಂದೊಂದು ಪ್ರಾಣಿಯನ್ನು ಸಿಂಹನಲ್ಲಿಗೆ ಕಳಿಸತೊಡಗಿತು. ಆ ಸಿಂಹ ತನ್ನ ಬಳಿಗೆ ಬಂದ ಪ್ರಾಣಿಗಳನ್ನು ಕೊಂದು ಸುಖದಿಂದ ಕಾಲ ಕಳೆಯತೊಡಗಿತು.

  ಹೀಗಿರಲು ಒಂದು ದಿನ ಸಿಂಹಕ್ಕೆ ಮಾರಿ ಬರುವಂತೆ ದೀರ್ಘಕರ್ಣನೆಂಬ ಮೊಲದ ಸರದಿ ಬಂದಿತು. ದೀರ್ಘಕರ್ಣ ಉಪಾಯ ಕುಶಲಿಯಾಗಿದ್ದ ಪ್ರಾಣಿ. ಅದು ಕಾಲ ಜ್ಞಾನವನ್ನೂ, ಕಾಲಜಯವನ್ನೂ ಬಲ್ಲ ಪರಮಯೋಗಿಯಂತೆ, ತನ್ನ ಆಸನ್ನ ಕಾಲ ಅಪಾಯಕ್ಕೆ ಜಯೋಪಾಯವನ್ನು ಮನದಲ್ಲಿ ವಿಚಾರಿಸಿಕೊಂಡಿದ್ದಿತು. 'ಬುದ್ಧಿವಂತರಿಗೆ ಕೇಡಿಲ್ಲ' ಎಂದು ನಿಶ್ಚಯಿಸಿಕೊಂಡ ದೀರ್ಘಕರ್ಣ ಮೊಲವು ತನ್ನ ಸರದಿ ಬರುವ ತನಕ ಕಾಯ್ದಿದ್ದು, ತನ್ನ ಸರದಿ ಬಂದ ದಿನ ನಿಲ್ಲದೆ ಭಯಾತುರನಂತೆ ಸಿಂಹರಾಜ ಗುಹೆಯತ್ತ ಹೊರಟಿತು. "ಸಾಯುವವನಿಗೆ ಸಮುದ್ರವಾದರೂ ಮೊಣಕಾಲುದ್ದ ;ಬೆಂಕಿಯಲ್ಲಿ ಬಿದ್ದವನಿಗೆ ಸಾವು ತಪ್ಪದು ಎಂಬಂತೆ ನನಗೆ ಸಾವು ತಪ್ಪದು. ಇನ್ನು ಯೋಜಿಸಿ ಫಲವಿಲ್ಲ. ನನಗಿನ್ನು ಭಯವಾದರೂ ಏಕೆ ? ಅಲ್ಪಕಾಲದಲ್ಲಿಯೇ ಈ ದೇಹ ನಾಶವಾಗುವಂಥದ್ದು.ಮರಣಕ್ಕಾಗಲಿ, ಇನ್ನಾವುದಕ್ಕಾಗಲಿ ಅಂಜಬೇಕಾಗಿಲ್ಲ'' ಎಂದುಮುಂತಾಗಿ ವಿಚಾರಿಸುತ್ತ ಬರುತ್ತಿದ್ದ ದೀರ್ಘಕರ್ಣಮೊಲಕ್ಕೆ ಥಟ್ಟನೆ ಮುಂದಿದ್ದ ಹಳೆಯ ಬಾವಿಯೊಂದು ಕಾಣಿಸಿತು. ಬಾಯಾರಿದ ಮೊಲಕ್ಕೆ ನೀರು ಕುಡಿಯ ಬೇಕೆನ್ನಿಸಿತು. ನೀರು ಕುಡಿಯಲೆಂದು ಆ ಬಾವಿಯನ್ನು ಇಣುಕಿ ನೋಡಿತು. ಇಳಿದು ಹತ್ತಲು ಬಾರದ ಆ ಬಾವಿಯಲ್ಲಿದ್ದ ಸ್ವಚ್ಛ ಜಲದಲ್ಲಿ ಮೊಲದ ಪ್ರತಿಬಿಂಬ ಕಾಣಿಸಿತು. ಆಗದಕ್ಕೆ ಏನೋ ಒಂದು ಆಲೋಚನೆ ಥಟ್ಟನೆ ಹೊಳೆಯಿತು ಈ ಸಿಂಹವನ್ನು ಇಲ್ಲಿಯೇ ಕೊಲ್ಲಲೂ, ಗೆಲ್ಲಲೂ ಸಾಧ್ಯ' ಎಂದು ತನ್ನಲ್ಲೇ ನಿರ್ಧರಿಸಿ ಸಿಂಹನ ಗುಹೆಯತ್ತ ಬೇಗ ಬೇಗನೆ ನಡೆಯ ತೊಡಗಿತು. 

  ಮೊಲವು ಸಿಂಹದ ಬಳಿಗೆ ಬರುವಷ್ಟೊತ್ತಿಗಾಗಲೇ ಸಿಂಹದ ಊಟದ ಹೊತ್ತು ಮೀರಿ ಹೋಗಿತ್ತು. ಅದರ ಹೊಟ್ಟೆ ಹಸಿದು ತಾಳಹಾಕುತ್ತಿತ್ತು. ಮೊಲದ ಮೇಲೆ ಅದಕ್ಕೆ ವಿಪರೀತ ಕೋಪ ಬಂದಿತ್ತು. ಮೊಲವು ಕಾಣುವುದೊಂದೆ ತಡ ಕೋಪಾಟೋಪದಿಂದ ಕಟಕಟ ಹಲ್ಲು ಕಡೆಯುತ್ತ,"ಎಲವೋ ಬೋಟುದ್ಧದ ಮೊಲವೆ! ನೀನು ಇಷ್ಟೊಂದು ತಡಮಾಡಿ ಬರಲು ಕಾರಣವೇನು ? ಈಗಲಾದರೂ ಅಡಿಗಡಿಗೆ ಹಿಂದೆ ನೋಡುತ್ತ ಭಯಾತುರನಾಗಿ ಬಂದ ನಿನ್ನನ್ನು ಕಾಪಾಡುವವನು ಯಾವನಾದರೂ ಇದ್ದರೆ ನನಗೆ ತೋರು, ಆತನನ್ನು ಮೊದಲು ಆಪೋಶನಗೊಂಡು ಬಳಿಕ ನಿನ್ನ ಪ್ರಾಣಾಹುತಿ ತೆಗೆದುಕೊಳ್ಳುತ್ತೇನೆ''ಎಂದು ಅಬ್ಬರಿಸಿತು. ಆಗ ಮೊಲವುಭಯದಿಂದ ಗಡಗಡ ನಡುಗುತ್ತ ಹೀಗೆ ಹೇಳಿತು :

  

 

  

  

  

 

 

 

 

Category:Stories



ProfileImg

Written by LS KADADEVARMATH

Lokayya Shivalingayya Kadadevarmath Education: M.A.In Kannada [1984-85] Karnataka University Dharwad Experience: Writing & DTP Published: Publication of about 60-70 works.