ಕಲೆಯ ಅವನತಿ

ProfileImg
11 Jul '24
2 min read


image

ನಾವು ಈಗೀಗ ನೋಡುತ್ತಿರುವ ಹಾಗೆ ಭಾರತದ ಕಲೆಯು ಅವನತಿಯ ಹಾದಿ ಹಿಡಿಯುತ್ತಿದೆ. ಅದಕ್ಕೆ ಕಾರಣ ಕಲೆಗೆ ಪ್ರೋತ್ಸಾಹ ಇಂದಿನ ಜಗತ್ತಿನಲ್ಲಿ ಬಹಳ ಕಡಿಮೆ. ಈಗ ಏನಿದ್ದರೂ ನೀನು ಎಷ್ಟು ಸಂಪಾದಿಸುತ್ತೀಯ ಅಂತ ಜನರು ಕೇಳುತ್ತಾರೆ ಹೊರತು ನೀನು ಏನೆಲ್ಲ ಬಲ್ಲೆ ಅಂತ ಕೇಳುವುದು ನಿಂತು ಹೋಗಿದೆ.  ಮೊದಲಿನ ದಿನಗಳಲ್ಲಿ ವಂಶ ಪರಂಪರೆಯಾಗಿ ಮುಂದೆ ಸಾಗುತ್ತಿತ್ತು ಆದರೆ ಅದು ಈಗ ನಿಂತು ಹೋಗಿದೆ. ಕಲೆಗಳ ಅವನತಿಗೆ ಕಾರಣ ಹುಡುಕುವುದು ಬಹಳ ಕಷ್ಟ. ಅವಾಗಿದ್ದ ಶಿಕ್ಷಣ ವ್ಯವಸ್ಥೆ ಈಗ ನಿಂತು ಹೋಗಿದೆ. ಅದು ಅವನತಿಯ ಮೊದಲ ಹೆಜ್ಜೆ. ಮೊದಲಿದ್ದ ಗುರುಕುಲ ಪದ್ಧತಿ ಈಗಿಲ್ಲ. ಗುರುಕುಲ ಪದ್ಧತಿಯಲ್ಲಿ ಗುರುಗಳ ಮನೆಗೆ ವಿದ್ಯಾರ್ಥಿಯಾದವನು ಹೋಗಿ ಸತತ ಅಭ್ಯಾಸದಲ್ಲಿ ಮುಳುಗಿ ಆ ಕಲೆಯಲ್ಲಿ ನಿಪುಣನಾಗುತ್ತಿದ್ದನು. ಅಂದರೆ ಮನೆಗೆಲಸವನ್ನು ಬಿಟ್ಟರೆ ಆ ವಿದ್ಯಾರ್ಥಿಗೆ ಕಲೋಪಾಸನೆ ಅಷ್ಟೇ ಇರುತ್ತಿತ್ತು. ಆದರೆ ಈಗ? ಕಲೆಯನ್ನು ಜ್ಞಾನದ ಎರಡನೆಯ ಅಂಗವನ್ನಾಗಿ ಕಾಣುತ್ತಾರೆ. ಮೊದಲನೆಯದು ಕೇವಲ ಓದು, ಡಿಗ್ರಿ ತದನಂತರ ಒಳ್ಳೆಯ ಸಂಪಾದನೆ. ಮೊದಲಿನ ದಿನಗಳಲ್ಲಿ ಪದವಿ ಇರದಿದ್ದರೂ ವ್ಯಕ್ತಿಗೆ ಕಲೆಯಲ್ಲಿ ನಿಪುಣತೆ ಇರುತ್ತಿತ್ತು. ಅದಕ್ಕಾಗಿ ಆ ವ್ಯಕ್ತಿಯು ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಿರುತ್ತಿದ್ದ ಆದರೆ ಈಗ ಕೇವಲ ಒಂದು ಪದವಿ, ಅದೂ ಒಂದು ಹಾಳೆಯ ಮೇಲೆ ನಮೂದಿಸಿರುವಂತಹ ಪದವಿಗೆ ಮಹತ್ವ. ವಂಶ ಪಾರಂಪರಿಕವಾಗಿ ಬಂದಂತಹ ಕಲೆಗಳು ಇಂದು ನಾಶವಾಗುತ್ತಿವೆ. ಸಂಗೀತ , ನಾಟ್ಯ, ಚಿತ್ರಗಾರಿಕೆ ಇತ್ಯಾದಿ ಕಲೆಗಳು ಇಂದಿನ ದಿನಗಳಲ್ಲಿ ಹವ್ಯಾಸವಾಗಿವೆಯೆ ಹೊರತು ಒಬ್ಬ ಮನುಷ್ಯ ಆ ಕಲೆಯನ್ನು ತನ್ನ ಪ್ರಧಾನವೃತ್ತಿಯನ್ನಾಗಿ ಮಾಡಿಕೊಂಡಿಲ್ಲ.

Robotics ಒಂದು ಈ ಕಾಲದ ಅದ್ಭುತ ಅನ್ವೇಷಣೆ. ಎಷ್ಟೋ ಕಲಾಕಾರರ ಜೀವನವನ್ನು ನಾಶ ಮಾಡಿರುವಂತಹದು. ಅದರ ಆವಿಷ್ಕಾರ ಊಹಿಸಲು ಸಾಧ್ಯವಾಗಲ್ಲದ್ದು ಆದರೂ ಅದು ಬಂದ ನಂತರ ಜನರ ಕೆಲಸವೇ ನಿಂತಂತಿದೆ. ಸಾವಿರಾರು ಜನರು ಮಾಡುವ ಕೆಲಸವನ್ನು ಈ ಯಂತ್ರ ಕೇವಲ ಕ್ಷಣಗಳಲ್ಲಿ ಮಾಡುವುದುಂಟು. ಹಾಗೆಯೇ ಜನರಿಗೆ ಆಗಾಗ ಸಂಬಳ ನೀಡಬೇಕು ಆದರೆ ಯಂತ್ರಕ್ಕೆ? ಒಂದು ಸಲ ದುಡ್ಡು ಹೂಡಿ ತಂದರೆ ಕೇವಲ ವಿದ್ಯುತ್ ಅಥವಾ ಇಂಧನಗಳಿಂದ ಅದನ್ನು ಕಾರ್ಯರೂಪಕ್ಕೆ ತರಬಹುದು. ಆದರೆ ಮನುಷ್ಯರಿಗೆ ಸಂಬಳ ನೀಡದಿದ್ದರೆ ಕೆಲಸ ನಡದೀತೇ ? ಆದರೂ Robiticsನ್ನು ಪಕ್ಕಕ್ಕಿಟ್ಟು ಜನರಿಂದಲೇ ಅವರ ಕಲೆಗೆ ಪ್ರೋತ್ಸಾಹ ಕೊಡಬಹುದು ಆದರೆ ಅದರಿಂದ ಲಾಭ ಬಹುಕಮ್ಮಿ. ಮತ್ತೆ ದುಡ್ಡಿನ ವಿಷಯ ಬಂದೇ ಬಿಟ್ಟಿತು ನೋಡಿದಿರಾ? ಅಂದರೆ ದುಡ್ಡಿಗೋಸ್ಕರ ನಮ್ಮ ಕಲೆಗಳು ನಶಿಸಿ ಹೋಗ್ತಿವೆ ಅಂತ ಒಂದು ಕಾರಣ ನಾವು ಕಂಡುಕೊಂಡೆವು. Robotics ಈ ಲಾಭಕ್ಕೆ ಮನುಷ್ಯ ಕಂಡುಕೊಂಡ ಉಪಾಯವಷ್ಟೇ ಆದರೆ ಮೂಲದಲ್ಲಿ ಅದರ ಹಿಂದಿನ ಉದ್ದೇಶ ಲಾಭ, ದುಡ್ಡು!

Category:Verse



ProfileImg

Written by Sushant

0 Followers

0 Following