ಪ್ರಾರ್ಥನೆ

ದೇವರ ಮೊರೆ

ProfileImg
25 Jun '24
1 min read


image

ವಿನಾಯಕನೆ ಕರವೆರಡು ಜೋಡಿಸಿ ಶಿರವನು ಬಾಗಿಸಿ ನಮಿಸುವೆನಿದೋ ಗಣನಾಥ ಅಡೆತಡೆಗಳ ನಿವಾರಿಸೋ ವಿಘ್ನೇಶ್ವರ ಗೌರಿತನಯ ಶಿವಸುತನೆ

ನಾರಾಯಣ ಶ್ರೀಹರಿಯೇ ನಿನ್ನ ನಾಮ ಜಪ ಮಾಡುವೆ ಧರೆಯಲಿ ಕರೆಯಾಲಿಸಿ ಕಾಪಾಡೋ ಶ್ರೀಹರಿ ಆದಿದೇವನೆ ಅನಂತಶಯನ ಶ್ರೀ ಲಕ್ಷ್ಮಿರಮಣನೆ

ಕೃಷ್ಣನೆ ಕರುಣಾಳು ಗಿರಿಧಾರಿ ಕಡುಕಷ್ಟಗಳ ಪರಿಹರಿಸಿ  ಉದ್ದರಿಸೊ ಮಾಧವ ಗೋಪಾಲಬಾಲ ಮುರಳಿಲೋಲ ಯಶೋದಾತನಯ ವಸುದೇವ ಸುತನೆ

ರಘುಕುಲ ನಂದನ ರಾಮ ಮೊರೆ ಕೇಳಿ ಪೊರೆಯೊ ಮೋಕ್ಷಕಾರಕನೆ ದೊರೆಯೆ ರಕ್ಷಿಸೊ ಕಲಿಯುಗ ದೈವವೆ ಕೌಸಲ್ಯತನಯ ದಶರಥ ಸುತನೆ

ಕಾರ್ತಿಕೇಯನೆ ಸ್ವಾಮಿ ಸುಬ್ರಹ್ಮಣ್ಯ ಭಜಿಸುವೆ ಭವರೋಗಹರನೆ ಸ್ಕಂದನೆ ದುರಿತಗಳ ದೂರ ಮಾಡೋ ಗಣೇಶಗ್ರಜನೆ ಉಮಾಪತಿ ಸುತನೆ

ಗುರುರಾಯ ಪಾದಕೆರಗುವೆ
ಮಂತ್ರಾಲಯವಾಸಿ ಸ್ವೀಕರಿಸಿ ಮಾನಸಪೂಜೆಯ ಅಭಯವನಿತ್ತು ಸಲಹು ತಂದೆ  ಕರುಣಾಳು ರಾಘವೇಂದ್ರನೆ

ಪಾಮರಳ ಪ್ರಾರ್ಥಾನೆ

ಓಂ‌ ಶ್ರೀ ಗಣೇಶಾಯ ನಮಃ 
ಓಂ ಗಂ ಗಣಪತಯೇ ನಮಃ
ವಿಘ್ನಹರ್ತನ ಚರಣಕೆರಗಿ ಬಾಗಿ ನಮಿಸಿ ಭಕ್ತಿಯಿಂದ ಬೇಡಿಕೊಳ್ಳಿರೋ

ಓಂ ನಮೋ ಭಗವತೆ ವಾಸುದೇವಾಯ 
ಹರಿನಾಮ‌ ಸ್ಮರಣೆ ಮಾಡಿ ನರ ಜನ್ಮ‌ದ ಪಾಪ‌ ಕಳೆದು ಇಳೆಯಲಿ ಅನುದಿನ ನೆಮ್ಮದಿ ಕಾಣಿರೋ

ಓಂ ಹರ ನಮಃ ಪಾರ್ವತಿ ಪತಯೆ ಶಿವಾಯ ನಮಃ ಹರಹರನೆಂದು ಸ್ತುತಿಸಿ ಹರಣವಾಗಲಿ ಎಲ್ಲಾ ಕ್ಲೇಷ ಸದ್ಗತಿಯ ಪಡೆಯಿರೋ

ಓಂ ಜಗದೀಶ್ವರಿಯೇ ನಮೋಸ್ತುತೆ
ಜಗದಂಬೆಯ ನಂಬಿ ಭಜಿಸಿ ದಮನವಾಗಲಿ ಎಲ್ಲಾ ಕಷ್ಟ ಸುಖವ ಹೊಂದಿರೋ

ಓಂ ಶ್ರೀ ಶಾರದಾಯೆ ನಮೋಸ್ತುತೆ
ಶಾರದೆಯ ದಯೆಯ ಬೇಡಿ ನಮಿಸಿ ವಿದ್ಯಾಬುದ್ದಿಯ ಹೊಂದಿ ಬಾಳಿರೋ

ಓಂ ಶ್ರೀ ಮಹಾಲಕ್ಷ್ಮೈ ನಮಃ
ಮಹಾಲಕುಮಿ ಪಾದಕೆರಗಿ ಬೇಡಿರಿ ದಾರಿದ್ರ್ಯ ನಾಶವಾಗಲಿ ಸಿರಿಯ ಪಡೆಯಿರೋ

ಓಂ ಶ್ರೀ ಆಂಜನೇಯಾಯ ನಮಃ 
ರಾಮದೂತನ ಮರೆಯದಲೆ ಪೊಗಳಿ ಆಪತ್ಕಾಲದೆ ನಮ್ಮ ಕಾಯ್ವನೋ
 

 




ProfileImg

Written by Anupama Arulike

0 Followers

0 Following