ದೇವರ ಸ್ತುತಿ

ಭಕ್ತಿಗೀತೆ

ProfileImg
26 Jun '24
1 min read


image

ಶಾರದೆಗೆ ಮೊರೆ 

ಜಗನ್ಮಾತೆಯ ಚರಣ ಕಮಲಗಳಲಿ ಭಕ್ತಿಯಿಂದ ನಮಿಸುವೆನು ಅಕ್ಷರಗಳ ಕೂಡಿಸಿ ಪದಗಳನು ಪೊೋಣಿಸಿ ಗೀತಮಾಲೆಯ ಅರ್ಪಿಸುವೆನು ಶ್ರಧ್ಧಾ  ಭಕ್ತಿಯಿಂದ ಅರಿವಿದ್ದಷ್ಟು ಸ್ತೋತ್ರ ಮಂತ್ರಗಳ ಪಠಿಸುವೆನು 

ಬ್ರಹ್ಮನ ರಾಣಿಯೇ ಕರುಣೆಯನು ತೋರಮ್ಮ 
ನಿನ್ನ ಚರಣದಿ ಶಿರವ ಬಾಗುತ ನಮಿಸುವೆನಮ್ಮ‌
ವೀಣಾಪಾಣಿಯೆ ಆದಿಶಂಕರರ ಶೃಂಗೇರಿಯಲಿ ನೆಲೆಸಿಹೆಯಮ್ಮ 
ಶಾರದೆಯೆ ಅಭಯ ನೀಡುತ ಒಲಿದು ಸಲಹಮ್ಮ

ಕನ್ನಡಾಂಬೆಯ ಸೇವೆಗೈಯಲು ನಿನ್ನ ಭಜಿಸಿ ಸ್ತುತಿಸುವೆನು
ಮೂಢಳು ನಿನ್ನ ದಯೆಯಿಂದ ಪ್ರೌಢರ ಕೂಡಿಹೆನು
ತಪ್ಪುಒಪ್ಪುಗಳ ತಿದ್ದಿಕೊಳುತ ನೋಡಿ ಕಲಿವೆನು
ತಾಯೆ ಸರಸ್ವತಿಯೆ ನಿನ್ನ ಕೃಪೆಗಾಗಿ ನಮ್ರತೆಯಲಿ ಬೇಡಿಹೆನು

ಪಾಮರಳು ನಾನು ಪೂಜೆಯ ಸ್ವೀಕರಿಸಿ ಉದ್ಧರಿಸಮ್ಮ 
ಪುಸ್ತಕಪಾಣಿಯೆ ವಿದ್ಯಾದೇವಿಯೆ ಆಡಂಬರವ ಅರಿಯೆನಮ್ಮ
ಅಕ್ಷರ ಪುಷ್ಪಗಳ ಅರ್ಚಿಸಿ ಪದಗಳ ಮಾಲೆ ಅರ್ಪಿಸುವೆನಮ್ಮ
ಅಜ್ಞಾನದ ತಿಮಿರನು ತೊಡೆಯಲು ಜ್ಞಾನ ಜ್ಯೋತಿಯ ದಯಪಾಲಿಸಮ್ಮ

ಹರಿ ನೀ ಹರಿ

ಮನದೊಳೆನ್ನ ಮನೆ ಮಾಡಿ ನೀ ದುಃಖ ದುರಿತಗಳ ದೂರ ಮಾಡೋ ಮಾಧವ
ಕೃಪೆಯ ತೋರಿ ಕೈಹಿಡಿದೆನ್ನ ಕಾಪಾಡೋ ಕರುಣಾಳು ಗಿರಿಧಾರಿ

ಭಜಿಸುವೆನು ನಿನ್ನ ಅನವರತ ನೀನೆನ್ನ ಕಾಯೋ ಅನುಕ್ಷಣವೂ ಅನಿರುದ್ದನೇ
ಜಗದೆಲ್ಲಾ ಕ್ಲೇಷ ಕಳೆದು ಅಭಯವನ್ನಿತ್ತು ಉದ್ದರಿಸೆನ್ನ  ವಾಸುದೇವನೇ

ಸ್ತೋತ್ರ ಮಂತ್ರಗಳ ಅರಿಯದ ಪಾಮರಳು ನಾನು ಪಾಲಿಸೆನ್ನ ಶ್ರೀ ಹರಿಯೇ
ಕೈಮುಗಿದು ಬೇಡುವೆ  ಮನ್ನಿಸೆನ್ನ ತಪ್ಪುಗಳ ನೀ ನಾರಾಯಣನೇ

ಕಷ್ಣಗಳ ಕಳೆದು  ಭವರೋಗದಿಂದೆನ್ನ ಬಿಡಿಸೊ ಮೋಕ್ಷಕಾರಕ ಗಜೇಂದ್ರನೇ
ನಷ್ಣಗಳ ಭರಿಸಿ ಬದುಕಲಿ ನೆಮ್ಮದಿಯ ನೀಡಿ ಹರಸೆನ್ನನು ಶ್ರೀ ಕ್ರಿಷ್ಣನೇ

ಅಚ್ಚುತಮ್ ಕೆೇಶವಮ್ ಕ್ರಿಷ್ಣ ದಾಮೋದರಾಮ್ ಶ್ರೀಧರಮ್ ಮಾಧವಮ್ ರಾಮನಾರಾಯಣಂ ಜಾನಕೀವಲ್ಲಭಮ್ ನಮಃ 

ರಚನೆ 👉 🖌 ಅರುಲಿಕೆ
ProfileImg

Written by Anupama Arulike