ಕಳೆದು ಹೋಯ್ತು ಬಾಲ್ಯ
ಅರಿವಾಯ್ತು ಜೀವನದ ಮೌಲ್ಯ
ಸಮಯಗಳು ತುಂಬಾ ಅಮೂಲ್ಯ
ಪದೇ ಪದೇ ಆಗದಿರಲಿ ವೈಫಲ್ಯ
ದುಡಿಮೆಗಾಗಿ ಬಿಟ್ಟು ಊರು
ಕಂಡ ಕನಸುಗಳು ನುಚ್ಚುನೂರು
ಹೊತ್ತಿರುವೆ ಸಾಲದ ತೇರು
ಜೀವನದುದ್ದಕ್ಕೂ ಕಷ್ಟಗಳು ಏರುಪೇರು
ಬಡತನ ಬೇಗೆ ಸುಡುತ್ತಿದೆ ಹಾಗೇ,
ಕಷ್ಟಗಳು ಬರುತ್ತಿವೆ ಬಗೆ ಬಗೆ,
ಬಿದ್ದಿರುವೆ ಸವಾಲುಗಳ ಬಲೆಗೆ,
ಎಂದು ಕಾಣುವೆ ಸುಖವು ನಮಗೆ?
ಸಾಲುತ್ತಿಲ್ಲ ಕೈಗೆ ಸಿಗುವ ಸಂಬಳ
ಗೆದ್ದೆ ಗೆಲ್ಲುವೆ ಎಂಬ ಹಂಬಲ
ಒಮ್ಮೆ ಸಿಗುವುದು ಪ್ರತಿಫಲ
ದೇವರು ನೀಡಿದರೆ ಬೆಂಬಲ
0 Followers
0 Following