***ಅಂಚೆ ಅಣ್ಣ***
ಆಗೊಂದು ಕಾಲವಿತ್ತು ಸದಾ ಜನರು ಆತುರ,ಕಾತುರ ಇಂದ ಕಾಯುವುದಕ್ಕೆ.ಉದ್ವೇಗ,ಉನ್ಮಾದದಿಂದ ಎದುರು ನೋಡುವುದಕ್ಕೆ.
ಅಂಚೆ ಅಣ್ಣ ತರುವ ಪತ್ರಗಳಿಗಾಗಿ ಕಾತುರತೆ ಇತ್ತು ಸಂತೋಷ ,ನೋವು ,ಸಡಗರದ ಸಂಭ್ರಮ ಅಲ್ಲಿ ಎದ್ದು ಕಾಣುತಲಿತ್ತು, ಪತ್ರ ವಿನಿಮಯಕ್ಕಾಗಿ ಕಾಣುವ ಕೆಂಪು ಡಬ್ಬಿಗಳು ಅಲ್ಲಲ್ಲಿ ಕಾಣುತ್ತಲೇ ಇದ್ದವು.
ಈಗಲೂ ಇವೆ ಆದರೆ ಅಲ್ಲೊಂದು, ಇಲ್ಲೊಂದು ಕಾಣ ಸಿಗುತ್ತವೆ,ಹಾಗೆಯೇ ಮೊದಲಿನಂತೆ ಪತ್ರದ ವಿನಿಮಯ ನಿಂತೆ ಹೋಗಿದೆ.
ಅದೇ ಪೋಸ್ಟ್ ಮ್ಯಾನ್ ಅಂಚೆಯವನು....
ಈಗಿನಂತೆ ಆಗ ಯಾವುದೇ ಮೊಬೈಲ್ ಇರಲಿಲ್ಲ ಕರೆ ಮಾಡಿ ವಿಷಯ ತಿಳಿಸಲು ಹಾಗು ತಿಳಿಯಲು.
ಜನಗಳ ಮನಸಲ್ಲಿ ಹಾಗೂ ಕಣ್ಣಿನಲ್ಲಿ ವಿಶ್ವಾಸದ ಛಾಯೆ ಕಾಣುತಿತ್ತು ಪೋಸ್ಟ ಮ್ಯಾನ್ ಅವರ ಮೇಲೆ,ಯಾಕ್ ಅಂದ್ರೆ ಅವರು ವಿಷಯಗಳನ್ನು ಹೊತ್ತು ತರುತ್ತಾರೆ ಅನ್ನುವ ಭರವಸೆ,ಭಾವನೆಯಲ್ಲಿ.
(ಅದೇ ಈಗ ಎಲ್ಲವೂ ನಮ್ಮ ಕೈಗೆ ಅರಾಮದಾಯಕವಾಗಿ ಕೈಗೆ ಎಟುಕುತ್ತಿದೆ,ಅದರಿಂದ ಧನ್ಯತೆಯ ಭಾವವೆ ಇಲ್ಲವಾಗಿದೆ ಜನರ ಮನಸ್ಸಲ್ಲಿ).
"ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ" ಅಂತ ಒಬ್ಬ ಗರತಿಯ ಜನಪದ ಗೀತೆ ಎಲ್ಲೆಡೆ ಕೇಳುತ್ತೆ.ಹಾಗೆಯೇ ಅಂಚೆಯವನಿಂದ ಎಲ್ಲರಿಗೂ ನಮ್ಮ, ನಮ್ಮ ಭಾವನೆಗಳನ್ನು ಪತ್ರದ ಮುಖಾಂತರ ವಿನಿಮಯ ಮಾಡಿಕೊಳ್ಳುವ ಕಾಲವಿತ್ತು.
ಒಳ್ಳೆಯ ವಿಚಾರ ಇರಲಿ ಅಥವಾ ಕೆಟ್ಟದ್ದು, ದುಃಖದ್ದು,ನೋವಿನ ವಿಷಯ ಯಾವುದೇ ಇರಲಿ ತಮ್ಮ ಆಪ್ತರಿಗೆ ಹಾಗೂ ಬಂಧು-ಬಾಂಧವರಿಗೆ ತಮ್ಮ ಸ್ನೇಹಿತರಿಗೆ ಸಂಗತಿ ಮುಟ್ಟಿಸುವುದು ಬಹಳ ಕಷ್ಟ ಇತ್ತು.
ಒಬ್ಬ ಪೋಸ್ಟ್ ಮ್ಯಾನ್ ಮಾತ್ರ ಈ ಕೆಲಸ ಮಾಡುವರು ಇದ್ದರು.
ಎಷ್ಟೋ ಬಾರಿ ತಮ್ಮ ಮನೇಲಿ ಯಾರಾದರೂ ಸತ್ತರೆ ಆ ವಿಷಯವನ್ನು ಅಂಚೆ ಮೂಲಕ ತಿಳಿಸಿದರೆ,ಅವರ ಪುಣ್ಯ ಇದ್ದರೆ ಅವರಿಗೆ ಅಂತ್ಯ ಸಂಸ್ಕಾರ ಸಿಗುತ್ತಾ ಇತ್ತು ಇಲ್ಲವೇ ಎಲ್ಲವೂ ಮುಗಿದ ನಂತರ ಅವರ ಕೈಗೆ ಪತ್ರ ಸಿಗುತ್ತಾ ಇತ್ತು.
ವಿಷಯಗಳನ್ನು ಬಹಳ ಜರೂರಾಗಿ ತಿಳಿಸಬೇಕೆಂದೇರೆ ಟೆಲಿಗ್ರಾಂ ವ್ಯವಸ್ಥೆ ಇತ್ತು.
ಆಗ ಟೆಲಿಗ್ರಾಂ ಬಂತು ಮನೆಗೆ ಅಂದ್ರೆ ಜನಗಳ ಮನಸಲ್ಲಿ ಒಂದು ಆತಂಕದ ಛಾಯೆ,ವಾತಾವರಣ ಎದ್ದು ಕಾಣುತ್ತಿತ್ತು.
ಅಂದ್ರೆ "ಯಾರಾದರೂ ಸತ್ತಾಗ ಟೆಲಿಗ್ರಾಂ ಕಳಿಸುತ್ತಾ ಇದ್ದರು".
ಮದುವೆಗೆ ಬರಲು ಆಗದೆ ಇದ್ದರೆ ನವ ದಂಪತಿಗಳಿಗೆ "ಹಾರೈಸಲು" ಟೆಲಿಗ್ರಾಂ ಮುಖಾಂತರ ಕಳಿಸುತ್ತಿದ್ದರು.
ಹಳ್ಳಿಗಳಲ್ಲಿ ಪೋಸ್ಟ್ ಮ್ಯಾನ್ ನ ಕಾಯುವುದೇ ಒಂದು ಸಡಗರ.
ಅವನು ಇನ್ನೂ ಅಲ್ಲಿ ಬರುತ್ತಿದ್ದ ಅಂದರೆ ಇವರು ಅಣ್ಣ, ಅಣ್ಣ ಅಂತ ಓಡಿ ಹೋಗಿ ಅವನನ್ನು ಕೇಳುವರು ನಮಗೆ ಯಾವುದರ ಪತ್ರ ಇದೆಯಾ? ಅಂತ.
"ಕಾಯುವ ಮನಸಿಗೆ ಮುದ ನೀಡುತ್ತಿದ್ದ ಇದೆ ಪೋಸ್ಟ್ ಮ್ಯಾನ್".
ತಾಯಿ ತನ್ನ ಮಗನ ಪತ್ರಕ್ಕಾಗಿ ಕಾಯುತ್ತ ಕುಳಿತಿದ್ದ ಕಾಲ ಒಂದಿತ್ತು.
ಹಳ್ಳಿ ಊರಿನಲ್ಲಿ ಹೊಲ ಗದ್ದೆಗಳಲ್ಲಿ ದುಡಿಯುತ್ತಾ ದೂರದ ಊರಿನಲ್ಲಿ ತನ್ನ ಮಗನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಅವನು ತನ್ನ ಸಮಾಚಾರವನ್ನು ಪತ್ರದ ಮುಖಾಂತರ ಕಳಿಸುವಾಗ ಆ ತಂದೆ, ತಾಯಿ,ಅಕ್ಕ,ತಮ್ಮ,ತಂಗಿಯರಲ್ಲಿ ಅದೆಂಥ ಕಾಳಜಿ,ಪ್ರೀತಿ, ಪ್ರೇಮ , ಅನುರಾಗ ಕಾಣುತ್ತ ಇತ್ತು, ಪೋಸ್ಟ್ ಮ್ಯಾನ್ ಯಾವಾಗ ಬರುವನೋ ಎಂದು ಮಗನ ಪತ್ರಕ್ಕಾಗಿ ಸದಾ ತನ್ನ ಎರಡು ಕಣ್ಣುಗಳನ್ನು ಹೊಸ್ತಿಲ ಕಡೆ ಇರುತ್ತಾ ಇತ್ತು .
ತನ್ನ ಗಂಡ ದೂರದ ಊರಿನಲ್ಲಿ ದುಡಿಯಲು ಹೋದರೆ ಹೆಂಡತಿ ಅದವಳು ತನ್ನೆಲ್ಲ ಪ್ರೀತಿ ತುಂಬಿದ ಆಸೆ,ಕನಸುಗಳನ್ನು ಪತ್ರದ ತುಂಬೆಲ್ಲ ಬಣ್ಣ ಬಣ್ಣವಾಗಿ ತುಂಬಿಸಿದಾಗ ಅದನ್ನ ಓದಲು ಉದ್ವಿಗ್ನ ನಾಗಿ ಕಾಯುವ ಆ ಯುವಕ.
ಗರ್ಭಿಣಿ ಆದಾಗ ಮಗು ತನ್ನ ಗರ್ಭದಲ್ಲಿ ಮಾಡುವ ಆಟಗಳನ್ನು,ಚೇಷ್ಟೆಗಳನ್ನು ತನ್ನ ಗಂಡನಿಗೆ ಬಣ್ಣಿಸುವ ಪರಿ ಅವೆಲ್ಲ ತುಂಬಿರುತಿದ್ದವು ಪತ್ರದಲ್ಲಿ.
ಆಗ ವಿದ್ಯಾಭ್ಯಾಸ ಒಂದು ವರವೇ ಆಗಿತ್ತು,ಓದಿದವರು ಅಲ್ಪ,ಸ್ವಲ್ಪ ಪ್ರಮಾಣದ ಜನರು,ಹೆಚ್ಚಾಗಿ ಜನರು ಓದಿದವರು ಅಲ್ಲ ಹಳ್ಳಿಗಳಲ್ಲಿ.
ಅಂಥ ಸಮಯದಲ್ಲಿ ಪೋಸ್ಟ್ ಮ್ಯಾನ್ ಬಂದು ಪತ್ರ ಕೊಟ್ಟಾಗ,ನೀನೇ ಓದಿ ಹೇಳಪ್ಪ ಬವು ಖುಷಿ ಆಗುತ್ತೆ ಅಂತ ಹೇಳಿ ಅವನನ್ನು ಉಬ್ಬಿಸಿ ಅವನಿಂದ ಪತ್ರವನ್ನು ಒದಿಸಿಕೊಂಡವರು ಇದಾರೆ.
ಹೊಸದಾಗಿ ಮದುವೆ ಆದ ಹೆಂಡತಿಗೆ ಗಂಡನ ಪತ್ರ ಬಂದಾಗ ಅಂಚೆ ಅವನಿಗೆ ಓದಲು ಹೇಳಿದರೆ ಅವನು ಇವಳನ್ನು ಕಾಡಿಸಿ,ಪೀಡಿಸಿ ಅವಳ ಗಲ್ಲ ಕೆಂಪು ಮಾಡುವಂತೆ ಮಾಡುತಿದ್ದ.
ಪತ್ರ ಓದಿದ ಕಾರಣಕ್ಕೆ ಅವರ ಅನುಕೂಲಕ್ಕೆ ತಕ್ಕಂತೆ ಮನೇಲಿ ತಿಂಡಿ-ತಿನಿಸುಗಳ ಇದ್ದರೆ ಕೊಡುವುದು ಇಲ್ಲ ಗೌಡರು ಮನೆ,ಜಾಗಿರ್ದಾರ್ ಮನೆ ಆದರೆ ಜೋಳ,ಗೋದಿ ಕೊಟ್ಟು ಕಳಿಸುವರು.
ಒಂದು ವೇಳೆ ದುಃಖದ ಸಂಗತಿ ಇದ್ದರೆ ಪತ್ರದಲ್ಲಿ ಅವನ ಮುಖದ ಚರ್ಯೆ ಬದಲಾದಾಗ ಗಮನಿಸಿ ಆಳುವ ಹೆಂಗಸರು ಇದ್ದರು,ಆಗಲು ಇವನೇ ಪೋಸ್ಟ್ ಮ್ಯಾನ ರಮಿಸಿ ಏನೋ ಒಂದು ಹೇಳಿ ಸಮಾಧಾನ ಮಾಡುವನು.
ಸೈನ್ಯದಲ್ಲಿ ಇದ್ದ ಸೈನಿಕರ ತಂದೆ, ತಾಯಿಗಳು ತಮ್ಮ ಮಕ್ಕಳನ್ನು ನೋಡಬೇಕು ಅನ್ನಿಸಿದಾಗ, ಪತ್ರದ ಮುಖಾಂತರ ತಮಗೆ ಸೀರಿಯಸ್ ಆಗಿದೆ ಅಂತ ಹೇಳಿ ಕರೆಸಿಕೊಳ್ಳುತ್ತಿದ್ದರು.ಹಾಗೆ ಬರಿಯದೆ ಇದ್ದರೆ ಸೈನ್ಯದಲ್ಲಿ ಮೇಲಿನ ಅಧಿಕಾರಿಗಳು ಊರಿಗೆ ಕಳಿಸುತ್ತಾ ಇರಲಿಲ್ಲ.
ಹೀಗೆ ಪ್ರತಿಯೊಂದು ಮನುಷ್ಯನಿಗೆ ಅಂಚೆಯವನು ಅವರೆಂದರೆ ಎಲ್ಲರಿಗೂ ಒಂದು ಭಾವ ಇತ್ತು.ಆದೆ ಧನ್ಯತೆಯ ಭಾವ...
ಈಗಲೂ ಪೋಸ್ಟ್ ಮ್ಯಾನ್ ನೋಡುತ್ತೇವೆ ಯಾವಾಗದರು ಒಮ್ಮೆ,ಅವರಿಗೆ ಮೊದಲಿಗೆ ಸಿಗುವ ಮರ್ಯಾದೆ,ಗೌರವ ಈಗ ಅಷ್ಟೊಂದು ಸಿಗುವುದೇ ಇಲ್ಲ.ಹೊರಗಿಂದ ಎಸೆದು ಹೋಗಿ ಬಿಡುತ್ತಾರೆ ಅವರು ಏನಾದರೂ ಇದ್ದರೆ.
ಅಲ್ಲೊಬ್ಬರು ಇಲ್ಲೊಬ್ಬರು ಇದಾರೆ ಅಂಚೆಯವನ್ನು ಬಂದರೆ ಪಾಪ ಬಿಸಿಲಲ್ಲಿ ಬಂದಿದ್ದಾನೆಂದು ಅವನನ್ನು ಆದರಿಸಿ ಒಳಗೆ ಕರೆದು ನೀರು,ಮಜ್ಜಿಗೆ ಕೊಡುವರು ಇದ್ದಾರೆ.
ಪೋಸ್ಟ್ ಮ್ಯಾನ್ ಹಾಗೂ ಜನಗಳ ನಡುವೆ ಆಗ ಒಂದು ಭಾವನಾತ್ಮಕ ಹಾಗೂ ಬಾಂಧವ್ಯವನ್ನು ಕಾಣಬಹುದಿತ್ತು.....
ಅವರು ನಮ್ಮಂತೆ ಮನುಷ್ಯರು ಅವರನ್ನು ಕರುಣೆ, ಅನುಕಂಪ ಇಂದ ಕಂಡು ಆದರೆ ಸತ್ಕರಿಸಿ...
0 Followers
0 Following