ಕವನ

ನವ ಭಾವಗಳ ಕೊಳಲು.....



image

ಮುಂಗಾರಿನ ಸೂರ್ಯ 
ಕಿರಣಗಳ ದಳವರಳಿಸಿಕೊಂಡು
ಭೂರಮೆಯ ಹೆಚ್ಚೇ ಸುಡುತ್ತಿದ್ದ...

ಬೀಸುಗಾಳಿಗೆ ಸಿಕ್ಕು, ಹೆರಳಾಗಿತ್ತು ನವಿಲು,
ಬಂಡೆಗಪ್ಪಳಿಸಿ ಭೋರ್ಗರೆಯುತ್ತಿತ್ತು ಕಡಲು,
ಒರಗಿಕೊಳ್ಳಲು ನನ್ನವನ ಹೆಗಲು...

ನೆತ್ತಿ ಬೇಯಿಸಿದರೇನಂತೆ ಬಿಸಿಲು?
ತಂಪನ್ನೀಯುತ್ತಿರಲು ಅವನೊಲವ ನೆಳಲು
ಕೂಡದಿರಲೆನ್ನುವ ಸ್ವಾರ್ಥ, ಆ ಹೊತ್ತು ಮುಗಿಲು..

ಪ್ರೀತಿಯೇ, ಮಳೆಗರೆದು ತೋಯ್ಯಿಸುತ್ತಿರಲು,
ನುಡಿಯುತ್ತಿತ್ತು ನವಭಾವಗಳ ಕೊಳಲು
ನನ್ನೊಳು ಮತ್ತು ಅವನಲ್ಲೂ.‌‌‌‌...

ನಿವೀ 🖋

Category:Poetry



ProfileImg

Written by ನಿವೇದಿತಾ ಅಶ್ವಿನ್

ವೃತ್ತಿಯಲ್ಲಿ ನಾನು ಶಿಕ್ಷಕಿ ಕನ್ನಡದಲ್ಲಿ ಲೇಖನಗಳನ್ನು, ಕವಿತೆಗಳನ್ನು ಬರೆಯುವುದು ನನ್ನ ಅಚ್ಚುಮೆಚ್ಚಿನ ಹವ್ಯಾಸ.