ಅಂದದ ಮಂಜಿನ ಹಿಂಪಾದ ಗಾಳಿ ನೀ ನನ್ನೊಳಗಿನ ಪ್ರೇಮದ ಉಸಿರು ನೀ ಗಗನ ಆವರಿಸಿದ ಜಗವು, ಅದರಲಿ ಇರುವುದು ನನ್ನೀ ಒಲವು. ಕಾದೋಟದ ಅಂಚಿನಲಿ ಸಾಗಲಿ ಬದುಕು ನಂಬಿಕೆಯಲಿ.
ನಂಬಿಕೆವಿಲ್ಲದೆ ನಿಜವಿಲ್ಲ…ನಂಬಿಕೆ ಬಿಟ್ಟು ಬಾಳುವುದು ಮಿತವಲ್ಲ ನಂಬಿಕೆಯಲಿ ನಂಬಿಸಿ ಕೈ ಬಿಟ್ಟು ಹೋದವಳೇ. ನಂಬಿಕೆ ಇರುವುದು ಹೀಗೆ ನೀ ನನ್ನೀ ನಂಬಿರುವ ತನಕ……
ಮುಸಂಜೆಯ ಮೋಡಕ್ಕೆ ಸೂರ್ಯನ ಅಂಜಿಕೆ ಕಡಲಿನ ಸದ್ದಿಗೆ ಗಾಳಿಯ ಜಾಗರಣೆ. ನದಿ ಇಲ್ಲದೇ ಸಮುದ್ರವಿರದು, ನಂಬಿಕೆವಿರದೆ ಜಗವೇ ಇರದು. ಮರೆತುಹೋದ ಮನಸಿಗೆ ಮರೆಸುವವವರ ಮರೆಸುವಿಕೆಯ ಯಾತನೆ