ಕವನ

ಈ ನೆನಪುಗಳೇ ಹಾಗೆ!!

ProfileImg
06 May '24
1 min read


image

ಈ ನೆನಪುಗಳೇ ಹಾಗೆ!!

 

ಈ ನೆನಪುಗಳೇ ಹಾಗೆ ಕನಸು ಹೊತ್ತ ಕಂಗಳಿಗೆ
ನಿದ್ರೆ ದಯೆಪಾಲಿಸದ ರಾತ್ರಿಗಳಂತೆ !!

ಈ ನೆನಪುಗಳೇ ಹಾಗೆ ಮುಷ್ಠಿ ಬಿಗಿ ಹಿಡಿದಷ್ಟು
ಕೈಯಿಂದ ಜಾರುವ ಮರಳಿನಂತೆ !!

ಈ ನೆನಪುಗಳೇ ಹಾಗೆ ಸದಾ ತನ್ನ ಅಸ್ಮಿತೆಯ
ಹುಡುಕಾಟದಲಿ ಅಲೆಯುವ ಹೆಣ್ಣು-ಹೃದಯದಂತೆ !!

ಈ ನೆನಪುಗಳೇ ಹಾಗೆ ಚಿಟ್ಟೆಗಳಾಗಿ ಹಾರದೆ
ಬರಿ ಬಯಕೆ ಹೊತ್ತೆ ತೆವಳುವ ನತದೃಷ್ಟ ಹುಳುಗಳಂತೆ !!

ಈ ನೆನಪುಗಳೇ ಹಾಗೆ ನೀರೂಣಿಸಿದ ಕೈಗಳಿಂದಲೇ
ಕುತ್ತಿಗೆ ಕುಯ್ಯುವ ಕಟುಕನಂತೆ !!
             *****                          ಶಕೀಲ್ ಉಸ್ತಾದ್, ಹಟ್ಟಿ

Category:PoetryProfileImg

Written by Shakeel Ustad