ನೆನಪು

ProfileImg
18 Apr '24
1 min read


ಮುನ್ನುಡಿ : 
ದ್ವಾ ಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ ।
ತಯೋರನ್ಯಃ  ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ ॥ 1॥ 
ಅದರ ಅರ್ಥ ಒಂದೇ ಮರದಲ್ಲಿ ಎರಡು ಹಕ್ಕಿಗಳಿವೆ ಒಂದು ಹಕ್ಕಿ ಹಣ್ಣನ್ನು ತಿಂದು ತಿಂದು ಹಸಿವೆ ತೀರದಾಗಿದೆ ಮತ್ತೊಂದು ಹಕ್ಕಿ ಹಣ್ಣನ್ನು  ತಿನ್ನದೆ ನೋಡುತ್ತಾ ಸುಮ್ಮನೆ ಕುಳಿತಿದೆ.  ಇದರ ಅಧ್ಯಾತ್ಮಿಕ ಅರ್ಥ, ಮರವೆಂದರೆ ಮನುಷ್ಯನ ದೇಹ ಆ ದೇಹದಲ್ಲಿ ಎರಡು ಹಕ್ಕಿಗಳಿಗವೆ ಒಂದು ಜೀವಾತ್ಮ ಮತ್ತೊಂದು ಪರಮಾತ್ಮ.  ಜೀವಾತ್ಮ ತಾನು ಮಾಡಿದ ಕರ್ಮದ ಹಣ್ಣನ್ನು ತಿನ್ನುತ್ತಾ ತಿನ್ನುತ್ತಾ ಎಷ್ಟು ತಿಂದರೂ ಹಸಿವು ತೀರದಾಗಿದೆ, ಜೀವಾತ್ಮನಿಗೆ ಅತ್ಯಂತ ಆತ್ಮೀಯ ಗೆಳೆಯನಾದ ಪರಮಾತ್ಮಅದನ್ನು ನೋಡುತ್ತಾ ಸುಮ್ಮನೆ ಕುತ್ತಿದ್ದಾನೆ.

ಇದು ಮಂಡೂಕ ಉಪನಿಷತ್ತಿನ ಒಂದು ಶ್ಲೋಕ,
ಇದನ್ನೇ ಆಧಾರವಾಗಿಸಿ ರಚಿಸಿದ ಕವಿತೆ.

ಶೀರ್ಷಿಕೆ: ನೆನಪು

ನಡುಗುವ ಚಳಿಯಲಿ 
ಅಡಗಿದೆ ಹಕ್ಕಿ
ಮಂಜಿನ ಹನಿಗಳ 
ಹೊದಿಕೆಯ ಮಾಡಿ
ಗಳೆಯನ ಮರೆತು, 
ಮರೆಯಲಿ ಅವಿತು

ಸಕ್ಕರೆ ಬಾಯಲಿ
ಸವಿಯುತ ಹಣ್ಣನು
ಮರೆತಳು ಪ್ರೀತಿಯ 
ಕಾರುವ ಕಣ್ಣನು

ಗೆಳತಿಯ ಹೃದಯ, 
ಕರಗದು ಕಲ್ಲು
ಕರೆಯುವಳು ಎಂದು 
ಬೆಣ್ಣೆಯ ಮೆಲ್ಲಲು?

ಹೃದಯದ ಚಿತ್ತಕೆ 
ಮರೆವು ಕವಿಯಿತೆ?
ನೆನಪದು ಮರಳಲು 
ಹಾಡುವೆ ಈ ಕವಿತೆ.
      - ಅಂಜನ್  ಪ್ರಸಾದ್. ಎಸ್

Category:Poem



ProfileImg

Written by Anjan Prasad

0 Followers

0 Following