ವ್ಯಕ್ತಿತ್ವ

ವ್ಯಕ್ತಿಯ ವ್ಯಕ್ತಿತ್ವವು ಕನ್ನಡಿಯೊಳಗಿನ ಗಂಟು ಇದ್ದಂತೆ

ProfileImg
30 Jun '24
1 min read


image

ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಕನ್ನಡಿಯಲ್ಲಿನ ಗಂಟಿಗೆ ಹೋಲಿಸಲ್ಪಟ್ಟರೆ, ಅದು ಅವನ ಬಗ್ಗೆ ಬೆಳಕನ್ನು ಹರಿಸುವುದು ಮತ್ತು ಅವನ ಸ್ವಭಾವವನ್ನು ಬೆಳಗಿಸುವುದು ಎಂದರ್ಥ. 

ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಅಂಶಗಳು ಅವನ ಸಂದೇಶಗಳನ್ನು ರವಾನಿಸಲು ಅಥವಾ ಇತರರಿಗೆ ಪ್ರಭಾವ ಬೀರಲು ಬಳಸಲ್ಪಡುತ್ತದೆ.

ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಣ ವ್ಯತ್ಯಾಸವನ್ನು ವಿವರಿಸುವುದು ಮುಖ್ಯವಾಗಿ ವ್ಯಕ್ತಿಯ ಅಂತರ್ಮುಖ ಮತ್ತು ಬಹಿರ್ಮುಖ ಅಂಶಗಳ ಮೇಲೆ ನಿರ್ಧಾರವಾಗಿರುತ್ತೆ.

ವ್ಯಕ್ತಿ ಎಂದರೆ, ಒಬ್ಬ ವ್ಯಕ್ತಿಯ ಶಾರೀರಿಕ ಮುಖಗಳು, ಜೀವನದ ಹಾಗೂ ಅವನ ಸಾಮಾಜಿಕ ಪರಿಸರ, ಜೀವನ ಅನುಭವಗಳು ಇತ್ಯಾದಿಗಳು ಒಳಗೊಂಡಿರುತ್ತವೆ.

 ವ್ಯಕ್ತಿತ್ವ ಎಂದರೆ ಅವನ ಮನಸ್ಸಿನ ಅಂತರಾಳದಲ್ಲಿರುವ ಭಾವನೆಗಳು, ಆಂಗಿಕ ಶೈಲಿ, ಜೀವನದಲ್ಲಿನ ನೈತಿಕ ಪ್ರತಿಪಾದನೆ ಮತ್ತು ಸಿದ್ಧಾಂತಗಳು ಇತ್ಯಾದಿ ವಿಷಯಗಳಿಂದ ವ್ಯಕ್ತಿಯ ವ್ಯಕ್ತಿತ್ವವು , ಆಕರ್ಷಕವನ್ನಾಗಿ ಮಾಡುತ್ತದೆ ಮತ್ತು ಅವನ ಬದುಕಿನ ಪ್ರತಿಕ್ಷಣದ ಪ್ರತಿಕ್ರಿಯೆಗಳನ್ನು ಹೇಗೆ ನಿರ್ದೇಶಿಸಬೇಕು ಎಂಬುದನ್ನು ತಿಳಿಸುತ್ತದೆ. 

ಹಾಗೂ ಉತ್ತಮರ ಸಹವಾಸ ಕೂಡ , ವ್ಯಕ್ತಿಗೆ ಒಳ್ಳೆಯ ಸನ್ನಡತೆಯನ್ನು ಬೆಳೆಸಬಲ್ಲದು. ಸಹವಾಸದಲ್ಲಿ ಉತ್ತಮರು ತಮ್ಮ ನಡವಳಿಕೆಯ ಮೂಲಕ ಅವರ ಸಂಗಡಿಗರನ್ನು ಪ್ರೇರೇಪಿಸುತ್ತಾರೆ ಮತ್ತು ಅವರ ಮೇಲೆ ಉತ್ತಮ ಅನುಭವಗಳನ್ನು ಬೋಧಿಸುತ್ತಾರೆ. ಹೀಗೆಯೇ ಅವನ ಸನ್ನಡತೆ ಮತ್ತು ಸತ್ಯದ ಸರಳತೆಯಿಂದ ಆ ವ್ಯಕ್ತಿಯ ಜೀವನವು ಉತ್ತಮವಾಗುತ್ತದೆ .

ವ್ಯಕ್ತಿತ್ವ ಎಂದರೆ ಒಬ್ಬ ವ್ಯಕ್ತಿಯ ಸಾಮಾಜಿಕ, ಮಾನಸಿಕ ಹಾಗೂ ನೈತಿಕ ಅಂಶಗಳ ಸಮೃದ್ಧ ಸಂಗ್ರಹ. ಇದು ಅವನ ನಡವಳಿಕೆಯ ಮೂಲಕ ಹೊರಬರುವ ವೈಯಕ್ತಿಕ ಸ್ವಭಾವ, ಕ್ರಿಯಾಶೀಲತೆ, ಭಾವನೆಗಳ ಸಮ್ಮಿಶ್ರಣಗಳ ಮೇಳವು ಅವನಲ್ಲಿ ಮೇಳೈಸಿ, ಆತ್ಮಜ್ಞಾನದ ಬೆಳಕು ಅವನಲ್ಲಿ ಮೂಡುತ್ತದೆ . ಆಗ ವ್ಯಕ್ತಿಯ ವ್ಯಕ್ತಿತ್ವದ ಪ್ರಭೆಯು ಎಲ್ಲೆಡೆ ಶ್ರೀಗಂಧದಂತೆ ಪಸರಿಸುತ್ತದೆ .

Category:Personal Development



ProfileImg

Written by BHUSHAN BM

Director

0 Followers

0 Following