ಮೈಗೆ ಬಿದ್ದ ಏಟಿಗೆ ಮೆಣಸಿಕಾಯಿ ಹೊಲಕ್ಕೆ ಚಟ್ಟಕಟ್ಟಿದ್ದು

ಲಲಿತ ಪ್ರಬಂಧ

ProfileImg
11 May '24
5 min read


image

ಮೈಗೆ ಬಿದ್ದ ಏಟಿಗೆ ಮೆಣಸಿಕಾಯಿ ಹೊಲಕ್ಕೆ ಚಟ್ಟಕಟ್ಟಿದ್ದು
********
    “ಶಾಲೆ” ಒಂದು ಪದ, ಎರಡು ಅಕ್ಷರಗಳು, ಲಕ್ಷಾಂತರ ನೆನಪುಗಳು, ಸಾವಿರಾರು ತಪ್ಪುಗಳು, ನೂರಾರು ಕಥೆಗಳು, ಸಾವಿರ ಶ್ಲಾಘನೆಗಳು, ಅನಂತ ಪ್ರೀತಿ, ಕಾಳಜಿ ಮತ್ತು ಸಂತೋಷ. ತಮಗೆಲ್ಲರಿಗೂ ಮರಳಿ ಶಾಲೆಯ ನೆನಪುಗಳಿಗೆ  ಸುಸ್ವಾಗತ. ನನಗೆ ಪ್ರಾಥಮಿಕ ಶಾಲೆ ಅಂದಾಕ್ಷಣ ಜಾಸ್ತಿ ನೆನಪಾಗುವುದು ಆಟದಲ್ಲಿ ಕಳೆದ ಕ್ಷಣಗಳು, ಶಾಲೆಯಲ್ಲಿ ಮಾಡುತ್ತಿದ್ದ ಕೈತೋಟ  ಏಕೋಪಾಧ್ಯಾಯ ಶಾಲೆಯ ಬಹುವರ್ಗ ಬೋಧನೆ ಇವುಗಳೆ ನಮ್ಮ ಪಾಲಿನ ನೆನಪುಗಳು. ಹಳ್ಳಿಯಲಿ ಹುಟ್ಟಿ ಬೆಳೆದ ನಮಗೆ ಪ್ರಕೃತಿ ಬಮ್ಮ ಪಾಲಿಗೆ ಎಲ್ಲವೂ ಆಗಿತ್ತು. ಹಳ್ಳದ ನೀರು ಬಾಯಾರಿಕೆಗೆ ದೊಡ್ಡ ಜೂಸ್ ಕಾರ್ಖಾನೆಯಾಗಿತ್ತು. ಹಳ್ಳದಲಿ ಸಿಗುವ ಮೀನು ಏಡಿ ಸುಟ್ಟು ತಿನ್ನುವ ಮಜ ಈ ಕಾಲಕ್ಕೆ ಬರಿಯ ಗಾಳಿಯಂತ ನೆನಪು ಮಾತ್ರ. ಅನುಭವ ಆಗಿದೆ ಹಿಡಿಯಲಾಗದು ಹೇಳಬಹುದು ಕಾಣಿಸಲು ಅಸಾಧ್ಯವಾಗಿದೆ. ಅವರಿವರ ಹೊಲದಲ್ಲಿ ಬೆಳೆದ ಎಳೆಯ ಸವತೆಕಾಯಿ ಅಲಸಂದೆ ಅವರೆಕಾಯಿ ನಮ್ಮ ಹೊಟ್ಟೆ ತುಂಬಿಸುತ್ತಿತ್ತು. ಹಾಗಂತ ದುರಾಸೆಗಳಿರಲಿಲ್ಲ. ಹಾಳುಮಾಡುವ ಗುಣ ರಕ್ತದಲಿ ಬಂದೆ ಇರಲಿಲ್ಲ. ಇವು ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದ ಜೀವನ ಮೌಲ್ಯ ಅಂದ್ರೆ ತಪ್ಪೇನಿಲ್ಲ. ಸಕಲ ವಿದ್ಯೆಯ ಲ್ಲಿ ಚೋರ ವಿಧ್ಯೆ ಕೂಡ ಒಂದು ಅನ್ನುವಂತೆ. ಈ ಮಾತು ಹೇಳುವಾಗ ಒಂದು ಕರುಣಾಜನಕ ಕಥೆ ಹೇಳಲೇಬೇಕು. ಅಂದು ಕರುನಾಜನಕವಾಗುದ್ದರೆ ಇಂದಿಗದು ವಿನೋದ ಹಾಗೂ ಪಶ್ಚಾತ್ತಾಪ ವೇ ಆಗಿಬಿಡುತ್ತದೆ.
ಹಳ್ಳದಲಿ ಈಚುವ ನಾವು ಸವತೆಕಾಯಿ ಕದಿಯುವ ವಿಚಾರದಂತೆ ಕಾರ್ಯ ಸಾಧನೆಯನ್ನು ಮಾಡಿದೆವು.ಅದರಲಿ ಯಾವ ಭಯ ಆತಂಕ ಇರಲಿಲ್ಲ ಮಾಮೂಲು ಹೊಲದಲಿ ಹಾದು ಹೋಗುವಂತೆ ನಟನೆಯ ನಡಿಗೆ ಕಾಲು ಅಡ್ಡಾದಿಡ್ಡಿ ಹೊರಳಿಸುವುದು.ಕಾಲಿಗೆ ಎಡವಿದ್ದನ್ನು ಎಗರಿಸಿಕೊಂಡು ಮುಂದೆ ಹೋಗುವುದು. ನಾಲ್ಕುಜನ್ ತಿನ್ನುವ ಗಾತ್ರದ್ದನ್ನು ಮಾತ್ರ ಕೀಳುವುದು ಸಣ್ಣದರ ಬಗ್ಗೆಯಾಗಿ ಅತಿ ದೊಡ್ಡದಾಗಲಿ ನಾವು ಕಣ್ಣೆತ್ತಿ ನೋಡುವವರಲ್ಲ. ಒಂದಕ್ಕಿಂತ ಹೆಚ್ಚು ಕೀಳಬಾರದೆಂಬ ಆದರ್ಶ ಪಾಲಕರು ನಾವು.ಬಾಯಿ ಚಪಲ ಹುಡುಗರು ಈ ಸಲ ಉಪ್ಪು ಕಾರ ಹಾಕಿದ್ರೆ ಹೇಗೆ ಅನ್ನುವ ಹೊಸ ಚಿಂತನೆ.ಹಿಂದಿನ ದಿನ  ಹಳ್ಳದಲಿ ಈಚುವಾಗ ಮಾಡಿದ ಮೀಟಿಂಗ್ನಲ್ಲಿ ನಿರ್ಣಯ ಅಂಗೀಕಾರವಾಯ್ತು.ಈ ಸಲ ಉಪ್ಪು ಕಾಗದಲಿ ಮನೆಯಿಂದ ದಾರಾಳವಾಗಿ ಬಂತು. ಅದ್ರೆ ಹಸಿಮೆಣಸಿನಾಕಾಯಿ ಅಜ್ಜಪ್ಪ ಅನ್ನುವ ನಮ್ಮೂರಿನ ದೊಡ್ಡಜ್ಜನ ಹೊಲದಲಿ ಅದನ್ನು ಕಿತ್ತು ತರಲುವ  ಸಮಯಸಾಧಕ ಕಿಂಕರರು  ಕಿತ್ತು ಬೇಲಿಯಿಂದ ಹೊರಬೀಳುವ ಕಾಲಕ್ಕೆ ಗ್ರಹಣ ಹಿಡಿದೆ ಬಿಟ್ಟಿತ್ತು. ಹೊಲದ ಬದುವಿನ ಮೇಲೆ ಆ ದಿನ ಮಲಗಿದ್ದ ದೊಡ್ಡಜ್ಜ ಅವರಲೊಬ್ಬನ್ನನ್ನು  ಹರಣಿಯನು ಜಿರತೆ ಹಿಡಿವಂತೆ ಬೆನ್ನಹ್ಹತ್ತಿ ಹಿಡೆಇದೆ ಬಿಟ್ಟ. ರಟ್ಟೆ ಸೋಲುವಷ್ಟು ಗೂಸ ಇಕ್ಕಿದ. ಅಷ್ಟು ಸಾಲದು ಎಂದು ಊರಲ್ಲಿ ಎಳೆತಂದು ಪಂಚಾಯಿತಿ ಇರಿಸಿದ. ಕದ್ದು ಸಿಕ್ಕಿ ಬಿದ್ದದ್ದು ಒದೆ ತಿಂದ್ದು ಏನು ಅನಿಸಲಿಲ್ಲ ಅದ್ರೆ ಪಂಚಾಯಿತಿ ಕಟ್ಟೆ ಹತ್ತಿಸಿದ್ದು ಮಾತ್ರ ಬಾರಿ ಅವಮಾನದ ಪ್ರಸಂಗವಾಯ್ತು .ಕಾರಣ ನಾನಂತು ಪಂಚಾಯಿತಿ ಮಾಡುವ ಮುಖ್ಯಸ್ಥನ ಮೊಮ್ಮಕ್ಕಳಾಗಿದ್ದೆನು. ಜೊತೆಗೆ ನಮ್ಮನೆಯಲಿ ತಪ್ಪು ಮಾಡಿದ್ರೆ ಮೊದಲು ಏಳು ಜನ ಕಾಕ ನಾಲ್ಕು ಜನ ಅತ್ತೆಯರು ಹುಣಸೆಬರಲು ತಂದು ಬಡಿತ್ತಿದ್ದರು. ಸಂಜೆ ನೌಕರಿ ಮಾಡಿ ಮನೆಗೆ ಬರುವ ಅಪ್ಪ  ಬಾರಿಕೋಲು ಪ್ರಯೋಗ ಮಾಡ್ತಾ ಇದ್ರೆ ಅಮ್ಮನದು ಕೈಗದೆಯಲ್ಲಿ ಅಳಿದುಳಿದ ಜಾಗದ ಮೇಲೆ ದಗಾಪ್ರಹಾರ ಜೊತೆಗೆ ಸುಪ್ರಭಾತ ಕಣ್ಈರ ಜೊತೆಯಲಿ ಅಭಿಷೇಕವಾಗುತ್ತಿತ್ತು.

 ಇನ್ನು ಪಂಚಾಯಿತಿಗೆ ವಿಚಾರ ಬಂದ್ರೆ ಹೇಗೆ ಈಗ ನೀವುಗಳೇ ಸ್ವಲ್ಪ ಕಲ್ಪನೆ ಮಾಡಿ ಮುಂದೇನಾಗಬಹುದು ಅಂತ.ಹಲಸಿನ ಮರಕ್ಕೆ ನಮ್ಮನ್ನ ಕಟ್ಟಿದರು. ಕದ್ದದ್ದು ಮೂರೇಮೂರು ಹಸೆಮೆಣಸು. ಅಪವಾದ ಮಾತ್ರ ಮೂರು ಕೆಜಿಯಷ್ಟು. ಜೊತೆಗೆ ಗಿಡವನ್ನೇ ಮುರಿದ ಅಪವಾದ ಸತ್ಯ ಪರೀಕ್ಷೆ ಮಾಡದೆ ಸಥಳವೀಕ್ಷಣೆಯಾಗದೆ ಶಿಕ್ಷೆ ಪ್ರಟಣೆಯಾಯ್ತು. ಕದ್ದ ಐದಾರು ಜನರಿಗೆ  ಬಾರಿಕೋಲಿನಿಂದ ಐದು ಚಡಿಏಟು ಬಿದ್ದವು. ಮೈಮೇಲೆ ಆದ ಗಾಯಕ್ಕಿಂತ ಮನಸಿಗಾದ ಗಾಯ ದೊಡ್ಡದಾಗಿತ್ತು ನಮಗೆ. ದ್ವೇಷವೆಂಬ ನಂಜಿರದ ದೇಹದೊಳಗೆ ಅ ಕ್ಷಣ ದ್ವೇಷ ಉಕ್ಕೇರಿ ಬಂತು. ಬಾರಿಕೋಲಿನ ಗಾಯ ಮಾಸುವುದರೊಳಗೆ ದೊಡ್ಡಜ್ಜನಿಗೆ ತಕ್ಕ  ಶಾಸ್ತಿ ಮಾಡಲೇಬೇಕೆಂಬ ಹಠ ಛಲ ಅಲ್ಲೆ ಹುಟ್ಟಿತು. ತಕ್ಕ ಸಮಯಕ್ಕಾಗಿ. ಗಾಯಗೊಂಡ ಹುಲಿಗಳು ಕಾಯತೊಡಗಿದವು.

ತಿಂಗಳು ಕಳೆದವು ಗಾಯಗಳು ಮಾಸಿಹೋದವು ಆಡುವ ಬರದಲಿ ಶಾಲೆಯ ಪಾಠ ಕೈತೋಟದ ಆರೈಕೆಯಲಿ ಮಾಡಿದ ಶಪತ ಮರೆತೆ ಹೋಯ್ತ. ಬೇಸಿಗೆ ಬಂತು ಹಳಕ್ಕೆ ಕಟ್ಟು ಬಿತ್ತು ಕಾರುಭತ್ತದ ಬೆಳೆಯವ ಸಿದ್ದತೆ ಆಯ್ತು ನಮಗೂ ಬೇಸಿಗೆ ರಜೆ ಮತ್ತೆ ನಮ್ಮ ಪ್ರಾಯಾಣ ಹಳ್ಳದ ಕಡೆ ಏಡಿ ಹಿಡಿವ ಮೀನು ಸುಡುವ ಮಡಿಕೆಯಲಿ ಅನ್ನ ಮಾಡಿ ಹೊಳೆದಡೆಯಲಿ ಸಾಗವಾನೆ ಎಲೆಯಲಿ ಉಣ್ಣುವ ಆಟ.  ಬೆಳಗ್ಗೆ ಎದ್ದು ಕೊಟ್ಟಿಗೆ ಕೆಲಸ ಮಾಡುವುದು.ತಿಂಡಿತಿಂದು ದನ ಕಾಯಲು ಹಳ್ಳದ ಕಡೆ ಹೋಗುವುದು. ಹನ್ನೊಂದು ಗಂಟೆಗೆ ನಾವೇಲ್ಲ ಎಮ್ಮೆಯನ್ನು ಹೊಳೆಗೆ ಹಾರಿ ಅವುಗಳ ಬಾಲ ಹಿಡಿದು ಮನಸೋ ಇಚ್ಚೆ ಈಜುವುದು. ಮಧ್ಯಾಹ್ನ ಎರಡು ಗಂಟೆ ಮನೆಗೆ ಬಂದು ಇದ್ದಷ್ಟನ್ನು ಉಂಡು  ಮಲಗುವುದು. ನಾಲ್ಕು ಗಂಟೆಗೆ ನಮ್ಮದು ಲಗೋರಿ, ಚಿನ್ನಿದಾಂಡು,ಗೂಡ ಕುಕ್ಕುವುದು, ಮರಕೋತಿ,ಸುಳ್ಳಿಪಟ್ಟೆ,ಕೂಲು ಜೀಗಿ ಕುಂಟುವುದು. ಹೀಗೆ ಹಲವಾರು ಆಟಗಳು ದಿನದ ಸಂಖ್ಯಾಬಲನೋಡಿ ನಿರ್ಧಾರ ಮಾಡುತ್ತಿದ್ದೆವು. ಆ ದಿನ ಕೋಲು ಜೀಗುವ ಆಟಕ್ಕೆ ಸಜ್ಜಾದೆವು ನಾಲ್ಕು ಅಡಿ ಉದ್ದನೆಯ ಸಣ್ಣಗಾತ್ರದ ಕೋಲು ಇದಕ್ಕೆ ಪ್ರಮುಖ ಸಾಧನ. ಎಲ್ಲರು ಅವಲಕ್ಕು ಪವಲ್ಕ್ಕಿ ಕಾಜನ ಮಿಣಮಿಣ ದಾಮ್ ಡುಸುಕ್ ಅಂತ ಹೇಳಿ ಒಬ್ಬಬ್ಬರಂತೆ ಡುಸುಕ್ ಹೇಳಿದವರು ಹೊರಕ್ಕೆ ಹೋಗಬೇಕು ಕಡೆಯಲಿ ಒಳಿದನು ಸೋತ ಹಾಗೆ ಆತನನ್ನು ದೊಡ್ಡ ವೃತ್ತಬರೆದು ಅದರಲಿ ನಿಲ್ಲಿಸಬೇಕು. ಆಯ್ಕೆಯಾದವನು ತನ್ನೆರಡು ಕೈಗಳನ್ನು ಮೇಲಕ್ಕೆತ್ತಿ ಅದಲಿ ಅವನ ಕೋಲು ಹಿಡಿಯಬೇಕು. ಬೆನ್ನ ಹಿಂದೆ ನಿಂತವನೊಬ್ಬ ಉಳಿದವರ ಕಡೆ  ಆತನ ಕೋಲು ತಳ್ಳಬೇಕು. ಕೋಲು ಹಾರಿಸಿದವನ್ನು ತನ್ನ ಕೋಲಿನ ತುದಿಯನ್ನು ಕಲ್ಲಿನ ಮೇಲೋ ದಾರಿಯಲಿ ಬಿದ್ದ ಹಸಿ ಒಣ ಸೆಗಣಿಯ ಮೇಲೆ ಇಟ್ಟರೆ ಆತ ಔಟ್ ಆಗುವುದಿಲ್ಲ. ಕಲ್ಲಿನ ಮೇಲೋ ಸೆಗಣಿಯ ಮೇಲೋ ಒಡುವಷ್ಟರಲ್ಲಿ ವೃತ್ತದೊಳಗೆ ನಿಂತವನು ಬಂದು ಉಳಿದವರನ್ನ ಮುಟ್ಟಬೇಕು. ಹಾಗೆ ಮುಟ್ಟಿದ ಜಾಗದಿಂದ ವೃತ್ತದ ವರೆಗೆ  ಒಂಟಿಕಾಲಿನಲ್ಲಿ ಕುಂಟುತ್ತಾ ಬರಬೇಕು. ಹಾಗೆ ಕುಂಟುವಾಗ ಕುಂಟಕುಂಟ ಕೂರ್ಗೆ ನೆಂಟ್ರಮನೆ ಹೋಳಿಗೆ ಅತ್ತೆಮನೆಗೆ ಬಂದಾ ನಮ್ಮಬಾವ ಕುಂಟಪ್ಪ ಕುಂಟ ಅಂತ ಎಲ್ಲರೂ ಪದ್ಯ ಹಾಡಬೇಕು. ದೂರ ಹೊದಷ್ಟು ಹಾಡುವವರಿಗೆ ಮಜ ಕುಟುವವನಿಗೆ ಸಜ. ಕಾಲು ಬಿಟ್ಟ ಜಾಗದಿಂದ ಮತ್ತೆ ಕೋಲು ಹಾರಿಸುವ ಆಟ ಆರಂಭ. ಹುಡುಗಾಟದ ದಿನಗಳು ತಿಳಿವಳಿಕೆ ಜೊತೆಗೆ ಸಣ್ಣಗೆ ವಂಚನೆ ಮೋಸ ಮಾಡುವ ಸ್ವಭಾವ ಚಿಗುರುವ ಕಾಲವದು. ನಮ್ಮ ಜಡ್ಡಿಜೋಬಿನಲ್ಲಿ ಒಣಗಿದ ಸೆಗಣಿ ಕುಳ್ಲಿನ ಒಂದು ಚೂರು, ಮತ್ತೊಂದು ಜೋಬಿನಲ್ಲಿ ಒಂದು ಮುಷ್ಟಿಗಾತ್ರದ ಕಲ್ಲು ಇಡುತ್ತಿದ್ದೆವು. ಕಾರಣ ನಾವೆಂದೂ ಕುಂಟುವುದಕ್ಕೆ ಕುಂಟಪ್ಪಗಳಾಗಬಾರದೆಂಬ ಕಾರಣಕ್ಕೆ. ಅದನ್ನ ಕಿಸಿಯಿಂದ ಕಾಣದ ಹಾಗೆ ನೆಲಕ್ಕೆ ಹಾಕಿ ಕೋಲಿನಲಿ ಮುಟ್ಟುವಷ್ಟರಲಿ ಔಟಾಗಿದ್ದೆ ಜಾಸ್ತಿ. ಎಲ್ಲರೂ ಒಂದೆ ದೋಣಿಕಳ್ಳು ಅದ್ರೆ ಯಾರು ಗುಟ್ಟುರಟ್ಟಾಗದ ಹಾಗೆ ಜೋಪಾನ ಮಾಡುತ್ರಿದ್ದೆವು. 
 ಇದೆ ಗುಟ್ಟಿನ ಒಕ್ಕೊರಲಿನಿಂದ ಬೆಳಗ್ಗೆಯೆ ಕೋಲುಜೀಗುವಾಟ ಆಡುತ್ತ ದಣಿದೆವು. ಕೋಲುಗಳ ಹೆಗಲ ಮೇಲೆ ಹೊತ್ತು ಹೊಳೆಗಡೆ ಸಾಗಿದೆವು. ದಾರಿಯಲ್ಲಿ ದೊಡ್ಡಜ್ಜನ ಹೊಲವನ್ನು ಕಾಣುತ್ತಲೆ ಜ್ಞಾತಸ್ಮರಣೆಯಾಯ್ತು. ಮಾಡಿದ ಹಿಂದಿನ  ಮಳೆಗಾಲದ ಶಪತ ಅಲ್ಲೆ ಸುತ್ತಮುತ್ತ ನೋಡಿದೆವು ಗಾವುದಗಾವುದ ದೂರ ಕಣ್ಣು ಹಾಯಿಸಿದೆವು ಮಟಮಟ ಮಧ್ಯಾಹ್ನ ಯಾರು ಇಲ್ಲ. ಸೇಡಿಗಾಗಿ ಹವಣಿಸಿದ ಜೀವಗಳು ರೊಚ್ಚಿಗೆದ್ದವು ಹೆಣಸಿನ ಗಿಡದ ಮೇಲೆ ಕತ್ತಿಯಂತೆ ಕೋಲಿನ ಪ್ರಹಾರ ಮಾಡಿದೆವು ಒಂದು ಎಕರೆ ಮೆಣಸಿನ ಹೊಳದ ಎಳೆಯ ಸಸಿಗಳನ್ನ ಶತ್ರುಗಳಂತೆ ಸದೆಬಡಿದೆವು.ಹೋಳೆಯಲ್ಲಿ ಮುಂದೆದ್ದು ಪುನೀತರಾದೆವು. ಅದ್ರೆ ಈ ಸುದ್ದಿ ಬೆಳಗಾಗುತಲೆ ಊರಲ್ಲಿ ಕಾಗ್ಚಿನಂತೆ ಹಬ್ಬಿತು. ಎಲ್ಲರ ಬಾಯಲ್ಲಿ ಅಯ್ಯೋ ಪಾಪವೆಂಬ ಅನುಕಂಪದ ನುಡಿ ಮುಂದಿನದ್ದು ಹಿಡಿ ಶಾಪ. ಆದೆ ದಿನ ಶಾಲೆ ಆರಂಭ ಊರಲ್ಲಿ ಅನುಕಂಪ ಕೇಳುತ್ತ ಹಿಡಿಶಾಪ ಹಾಕಿಸಿಕೊಡು  ಶಾಲೆ ಮುಟ್ಟಿದ ನಮಗೆ ಸೇಡು ಗೆದ್ದ ಆನಂದವೋ ಆನಂದ. ವಿಜಯೋತ್ಸವದ ಸಂಭ್ರಮ ಮಾತ್ರ ಬಹಳ ಸಮಯ ನಮ್ಮಗಳ ಪಾಲಿಗೆ ಇರಲಿಲ್ಲ  ಊರವರು ಶಾಲೆ ಬಂದರು ಎಲ್ಲರ ವಿಚಾರಿಸಿದರು . ಹಿಂದಿನ ಸಲ ಒದೆ ತಿಂದ ನಾವೇ ತಪ್ಪು ಮಾಡಿದಾಗಿ ಆಪಾದನೆ ಮಾಡಿದರು ಅದ್ರೆ ಒಗ್ಗಟ್ಟಿನ ಮಂತ್ರ ಜಪಿಸಿದ ನಾವು ಸುಕ್ಕಿಬೀಳಲಿಲ್ಲ ಅದ್ರೆ. ದೇವರ ಮೇಲೆ ಆಣೆ ಮಾಡುವ ಪ್ರಸಂಗ ಬಂದಾಗ ಅಳುಕಿದೆವು ಹೊಂಜರಿದೆವು. ತಪ್ಪು  ಒಪ್ಪಿಕೊಂಡೆವು. ಅದ್ರೆ ನಮ್ಮ ಶಿಕ್ಷಕರ ಮದ್ಯಸ್ಥಿಕೆಯಲಿ ಈ ಸಲ ನಮಗೆ ಬಾರಿಕೋಲಿನ ಎಟು ಬೀಳಲಿಲ್ಲ. ಎಲ್ಲರೂ ಸೇರಿ ಒಂದು ಸಾವಿರ ಹಣ ಆಗಿನ ಕಾಲಕ್ಕೆ ದಂಡ ತೆತ್ತುವ ಒಪ್ಪಂದವಾಯ್ರು ಕೊಡುವ ಸಮಯ ನಿರ್ದಾರವಾಯ್ತು. ನಾವು ಮಾಡಿದ ತಪ್ಪಿಗೆ ಪಾಲಕರು ದಂಡವೇನೋ ಕಟ್ಟಿದರು. ಅದ್ರೆ ಸಂಜೆ ಮನೆಗೆ ಬಂದಾಗ ಕೆನ್ನೆ ಬೆನ್ನು ಕಾಲುಗಳ ಮೇಲೆ ಅಷ್ಟೆ ಬಾಸುಂಡೆಗಳು ನಮಗೆ ಉಡುಗೊರೆಯಾಗಿ ಸಿಕ್ಕವು.
ವಾರದ ನಂತ್ರ ನಮ್ಮ ಮಸ್ಟರ್ ಶಾಲೆಯ ಕೈತೋಟದಲಿ ಮೆಣಸಿನ ಬೀಜದ ಹತ್ತು ಮಡಿ ಮಾಡಿಸಿದರು. ತಿಂಗಳ ನಂತ್ರ ಬೆಳೆದ ಗಿಡವನ್ನು ದೊಡ್ಡಜ್ಜನ ಹೊಲದಲ್ಲಿ ನಮ್ಮ ಕೈಯಾರೆ ನಾವು ನಾಟಿ ಮಾಡಿಸಿದರು. ವಾರಕ್ಕೊಮ್ಮೆ ಅಲ್ಲಿಗೆ ಎಲ್ಲರ ತಂದು ಕಳೆಕೀಳಿಸಿದರು. ಊರುಣಿಸಿ ಆರೈಕೆ ಮಾಡಿಸಿದರು.ಹೂವು ಬಿಟ್ಟಾಗ ನೋಡಿ ಆನಂದ ಪಟ್ಟವು.ಕಾಯಿ ಕೀಳುವ ಹಂತದಲಿ ನೋಡಿ ಮಕ್ಕಳೆ ರೈತ ಒಂದು ಬೆಳೆ ತೆಗೆಯಲು ಎಷ್ಟೊಂದು ಸಮಯ ಶ್ರಮ ಬೇಕು ಅನ್ನುವ ದುಡಿಮೆಯ ಮತ್ತು ಶ್ರಮದ ಜೀವನ ಪಾಠ ಈ ಮೂಲಕ ನಮಗೆ ತಿಳಿಸಿದರು. ಊರಲ್ಲಿ ಕೇವಲ ಶಿಕ್ಷೆಯಿಂದ ಏನು ಮಾಡಲಾಗದು ಶಿಕ್ಷಣವೂ ಜೊತೆಗೆ ಬೇಕು. ಎನ್ನುವ ಸಂದೇಶ ಸಾರಿದರು. ಹಾಗಾಗಿ ಪ್ರಾಥಮಿಕ ಶಾಲೆಯ ಗುರುಗಳು ನಮಗೆ ಇಂದಿಗೂ ಆದರ್ಶಪ್ರಾಯರು.ನಾವಿಂದು ಜೀವನದ ಸೋಲುಗಳು,ಹತಾಶೆಗಳು, ಅವಮಾನಗಳಿಗೆ ಎದೆಗುಂದದೆ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಯೋಚಿಸದೆ ಕಷ್ಟಗಳನ್ನು ಸುಖಗಳಾಗಿಸಿಕೊಡು ಬಾಳುತ್ತಿದ್ದೇವೆ ಎಂದರೆ ಅದಕ್ಕೆ ಇಂತಹ ಗುರುಗಳೆ ಕಾರಣ.
ದ್ವೇಷದಿಂದ ಏನು ಸಾಧಿಸಲು ಸಾಧ್ಯವಿಲ್ಲ ಪ್ರೀತಿಗೆ ಸೋಲದ ಮನಸುಗಳೆ ಇಲ್ಲ ಎನ್ನುವ ಜೀವನ ಪಾಠ ಕಲಿಸಿದ್ದೆ ಶಾಲೆ. ಹಾಗಾಗಿ ಶಾಲೆ ಎನ್ನುವುದು ಕೇವಲ ಎರಡಕ್ಷರವಲ್ಲ ಅದು ನಮ್ಮ ಬಾಳನ್ನು ಹೇಗೆ ಬದುಕಬೇಕೆಂದು ಕಲಿಸಿದ ಗದ್ದುಗೆ. ಗುರು ಎಂಬ ಎರಡಕ್ಷರ ಅದೊಂದು ವ್ಯಕ್ತಿ ಯಲ್ಲ ಶಕ್ತಿಯೆಂಬುದು ಇಂದಿಗೆ ಸತ್ಯ. ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದಣ್ಣ ಎಂಬ ನಾಣ್ಣುಡಿ ಈ ವಯಸ್ಕನ ವಯಸ್ಸಿನಲ್ಲಿ ಅಂದು ಆಧಾರ ಸ್ಥಂಬದಂತೆ. ಹಾಗಾಗಿ ಶಾಲೆ ಮತ್ತು ಗುರು ಯಾರಿಗೆ ಇಷ್ಟವಾಗುತ್ತಿತ್ತೊ ಅವರೆಲ್ಲ ಜೀವನದಲಿ  ಏನಾದರೊಂದು ಸಾಧನೆ ಮಾಡುತ್ತಾರೆ ಸಾಧಕರಾಗುತ್ತಾರೆ. ಗುರುವನ್ನ ನಂಬಿರಿ ಶಾಲೆಯನ್ನು ಪ್ರೀತಿಸಿರೋ ಹುಚ್ಚಪ್ಪಗಳಿರ  ಏನಾದೊಂದು ಆಗುವಿರಿ ನಮ್ಮಂತೆ.

*********
ಡಾ.ನವೀನ್ ಕುಮಾರ್ ಎ.ಜಿ

ಅಂಗನ
 

 

Category:Stories



ProfileImg

Written by Naveenkumar A G