ಜೀವನದಲಿ ಒಳ್ಳೆಯ ದಿನ
ಬಂದೇ ಬರುವದು
ಕಾಯುವ ತಾಳ್ಮೆ ನಮಗಿರಬೇಕು
ಯಾರಿಗೂ ಬೇಡದಕಲ್ಲನು
ಸುಂದರ ಶಿಲೆಯನ್ನಾಗಿ ಪರಿವರ್ತಿಸಲು ಅದರ ಮಹತ್ವ
ಅರಿಯಬೇಕು
ಕೋಪ ಬಂದಾಗ ಒಂದು ಕ್ಷಣ
ತಾಳ್ಮೆವಹಿಸು ಮನುಜ
ಅದು ದುಃಖದ ನೂರುದಿನಗಳಿಂದ
ನಿನ್ನನು ಪಾರುಮಾಡುವದಲ್ಲವೇ?
ತಾಳ್ಮೆ ಮೌನ ಅತ್ಯಂತ ಶಕ್ತಿಶಾಲಿ
ತಾಳ್ಮೆ ಮಾನಸಿಕತೆಯಿಂದ ಗಟ್ಟಿ
ಗೊಳಿಸಿದರೆ ಮೌನ ಭಾವನಾತ್ಮಕವಾಗಿ ಗಟ್ಟಿಗೊಳಿಸುವದಲ್ಲವೇ?
ನಿನ್ನೆಯ ಬಗ್ಗೆ ಯೋಚಿಸಿ
ನಾಳೆಯನ್ನು ಹಾಳುಮಾಡುವದು
ಬೇಕಾ ಇಂದಿನ ದಿನ ಸರಿಯಾಗಿ
ಬಳಕೆಯಾಗಲಿ.
0 Followers
0 Following