ಕ್ಷಮಿಸು ಗೆಳತಿ

ಮನದ ಜೊತೆಗಾತಿ

ProfileImg
18 May '24
1 min read


image

ಭಾಗ ೧

ಒಮ್ಮೆ ಬಿಗಿದಪ್ಪಿಕೊಳ್ಳ

ಬೇಕೆನಿಸಿದೆ ಗೆಳತಿ…

ಆಕಾಶದಗಲ ರೆಕ್ಕೆಬಿಚ್ಚಿ

ಕಂದಕಗಳನ್ನೆಲ್ಲ ದಾಟಿ

ಒಂದೇ ಹಾರಿನಲ್ಲಿ 

ನಿನ್ನೆದುರು ನಿಂತು

ಒಮ್ಮೆ ಬಿಗಿದಪ್ಪಿ

ಕೊಳ್ಳಬೇಕೆನಿಸಿದೆ…

ಬರಲೇನೆ ಗೆಳತಿ

ಒಂದೇ ಉಸಿರಿನಲ್ಲಿ

ನನ್ನೆಲ್ಲ ನೋವ ತೊರೆದು

ನಿನ್ನ ತೋಳಿನಾಸರೆಗೆ?

ಜಗವ ಮರೆತು

ಒಂದರೆಘಳಿಗೆ…

ಭಾಗ ೨

ಆ ನಿಶಬ್ದ ರಾತ್ರಿಯಲಿ

ನೀನಿಟ್ಟ ಕಣ್ಣೀರು

ನನ್ನೊಳಗಿಳಿದಿದೆ ಗೆಳತಿ

ಕಣ್ಣೊರೆಸಲೂ ಬಾರದ

ಅಸಹಾಯಕ ನಾನು

ಆಕಾಶದಗಲ ರೆಕ್ಕೆಬಿಚ್ಚಿ

ಕಂದಕಗಳನ್ನೆಲ್ಲ ದಾಟಿ

ನಿನ್ನೆದುರು ನಿಂತರೂ

ಅಪ್ಪಿಕೊಳ್ಳದಾದೆ…

ಕ್ಷಮಿಸು ಗೆಳತಿ

ಕಾಣದ ಬೇಲಿಯ 

ದಾಟಲು ರೆಕ್ಕೆಗಳೂ

ನಿಶಕ್ತವಾಗಿವೆ…

 

Category:PoetryProfileImg

Written by Madhu Sagar