ಪರಶುರಾಮ ಕ್ಷತ್ರಿಯರ ಹತ್ಯೆಯನ್ನು ಮಾಡಿದ ತನ್ನ ಕೊಡಲಿಯನ್ನು ಹಿಡಿದುಕೊಂಡು ಪಶ್ಚಿಮ ಘಟ್ಟದ ಸಹ್ಯಾದ್ರಿ ತಪ್ಪಲಿಗೆ ಬರುತ್ತಾನೆ, ತಾನು ಮಾಡಿದ ಕೊಲೆಗಳಿಗೆ ಬೇಸರಗೊಂಡು ತನ್ನ ಆಯುಧವನ್ನು ತ್ಯಜಿಸಲು ನಿರ್ಧಾರವನ್ನು ತಳೆಯುತ್ತಾನೆ.ಅಂದಿನ ಕಾಲದಲ್ಲಿ ತುಳು ನಾಡು ಸಮುದ್ರದ ತೆಕ್ಕೆಯಲ್ಲಿತ್ತು ಬಯಲುಗಳಲ್ಲಿ ನೀರು ತುಂಬಿಕೊಂಡು ಗುಡ್ಡಗಳು ಅಲ್ಲಲ್ಲಿ ಸಮುದ್ರ ಮಧ್ಯೆ ತಲೆ ಎತ್ತಿ ನಿಂತಿದ್ದವು, ತಾನು ಸಹ್ಯಾದ್ರಿ ಪರ್ವತಗಳಲ್ಲಿ ನಿಂತು ತನ್ನ ಕೊಡಲಿಯನ್ನು ಬೀಸಿ ಎಸೆಯುತ್ತೇನೆ ಕೊಡಲಿ ಎಲ್ಲಿಗೆ ಹೋಗಿ ಬೀಳುತ್ತದೋ ಅಲ್ಲಿಯವರೆಗೆ ಹಿಮ್ಮುಖವಾಗಿ ಚಲಿಸುವಂತೆ ಸಮುದ್ರದ ಒಡೆಯನಾಡ ವರುಣ ದೇವನನ್ನು ಬೇಡುತ್ತಾನೆ ಹೇಳಿ ಕೇಳಿ ಪರಶುರಾಮ ತುಂಬಾ ಕೋಪಿಷ್ಟ ಅವನಿಗೆ ಇಲ್ಲ ಎನ್ನಲೂ ಸಾಧ್ಯವೆ ಅವನು ಹೇಳಿದಂತೆ ಹಿಮ್ಮುಖವಾಗಿ ಚಲಿಸುತ್ತಾದೆ,ಆದರೆ ಹಿಮ್ಮುಖವಾಗಿ ಚಲಿಸಿದರು ಉಪ್ಪು ಮೆತ್ತಿಕೊಂಡ ಜಾಗವು ವಾಸಕ್ಕೆಯೋಗ್ಯವಲ್ಲ ಎಂದು ವರುಣನಿಂದಲೇ ತಿಳಿದುಕೊಂಡ ಪರಶುರಾಮರು ತಪ್ಪಸಿನ ಮೂಲಕ ಸರ್ಪರಾಜನಾದ ವಾಸುಕಿಯನ್ನು ಒಲಿಸಿಕೊಂಡು ತಾನು ಪಡೆದ ಭೂಮಿಗೆ ಸರ್ಪಗಳನು ಕಳುಹಿಸಿಕೊಡುವಂತೆ ಬೇಡಿಕೊಳ್ಳುತ್ತಾನೆ,ವಾಸುಕಿ ಅದಕ್ಕೆ ಒಪ್ಪಿದ ಕೂಡಲೆ ಲಕ್ಷ ಲಕ್ಷ ಸರ್ಪಗಳು ಭೂಮಿಗೆ ಇಳಿಯುತ್ತವೆ ಹೀಗೆ ಇಳಿದ ಸರ್ಪಗಳು ಸುಮ್ಮನಿರುವುದೆ ಇಲ್ಲ ಪಾತಾಳಕ್ಕೆ ರಂದ್ರಕೊರೆದು ಸಿಹಿ ನೀರನ್ನು ಬರಿಸುತ್ತವೆ ಭೂಗರ್ಭವನ್ನು ಬಸಿದು ಮಣ್ಣನ್ನು ತಂದು ಹುತ್ತಕಟ್ಟಿ ಬುಡಮೇಲು ಮಾಡಿಬಿಡುತ್ತವೆ ದಿನೇ ದಿನೇ ಯೋಗ್ಯವಾದ ತುಳುನಾಡು ಸೃಷ್ಟಿಯಾಗುತ್ತದೆ.ಹೌದು ತುಳುನಾಡು ಹೀಗೆ ಸೃಷ್ಟಿಯಾಯಿತು ಅದಕ್ಕೆ ಮೂಲಕಾರಣ ಪರಶುರಾಮರು ಎನ್ನುವುದನ್ನು ಈ ಕಥೆ ಹೇಳುತ್ತದೆ ಇವತ್ತು ದೇಶದದ್ಯಾಂತ ಗೌರವ ಭಾವವಿದೆ ಬದುಕಿದರೆ ತುಳುವರಂತೆ ಸ್ವಾಭಿಮಾನದಲ್ಲಿ ಬದುಕಬೇಕು ಅವರಂತೆ ಕಷ್ಟಪಟ್ಟು ದುಡಿಯಬೇಕು ಎಲ್ಲರನ್ನು ಪ್ರೀತಿಸಬೇಕು,ದೈವಭಕ್ತರಾಗಬೇಕು ಎಂದು ನಾವೆಲ್ಲ ಅಂದುಕೊಳ್ಳುತ್ತ ಇದ್ದರೆ ಅಲ್ಲಿ ಆಗಿರುವುದು ಏನು ಅವರ ಮನೆಯ ಭೂತಗಳಿಗೆ ಸರಿಯಾಗಿ ಪೂಜೆಗಳು ನಡೆಯುತ್ತಿಲ್ಲ ವರ್ಷಕ್ಕೆ ಒಮ್ಮೆಯು ಅದಕ್ಕೆ ಪೂಜೆ ಸಲ್ಲಿಸುವ ಕೆಲಸ ತುಳುವರಿಂದ ಆಗುತ್ತಿಲ್ಲ. ಇವರಿಗೆ ನಮ್ಮನ್ನು ಕಾಯುವುದು ಭೂತಗಳು ಅವುಗಳ ಉಪಾಕರ ತೀರಿಸಬೇಕು ಎಂದು ಯಾವಾಗ ಅರ್ಥವಾಗಬಹುದು ಗೊತ್ತಿಲ್ಲ.ಎಲ್ಲ ತುಳುವರು ಹಾಗೆ ಇದ್ದಾರೆ ಎಂದಲ್ಲ ಹೆಚ್ಚಿನ ಜನ ಹಾಗೆ ಆಗಿದಾರೆ.
0 Followers
0 Following