‘ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುವಷ್ಟು ಚೆಲುವು ಅವನದು, ಅವನ ಕಣ್ಣಿನ ಮೋಡಿಯಲ್ಲಿ ಕಳೆದುಹೋದ ನನ್ನ ನಾನು ಹುಡುಕುವಲ್ಲಿ ಸೋತಿರುವೆ ದಿನವೂ ಗಂಟೆಯೂ ಕ್ಷಣವೂ ಪ್ರತಿಕ್ಷಣವೂ ಅವನ ಒಲವಿನ ಹೊಸ ಪರಿಗೆ ಸೋಲುತ್ತಿರುವ ನನ್ನ ಹೃದಯಕ್ಕೆ ಅವನು ಬೇಕೇ ಬೇಕು ಅವನು ಸನಿಹದಲ್ಲಿರುವ ಅಷ್ಟು ಹೊತ್ತು ನಾನು ಅವನ ಜೊತೆಯಲ್ಲಿ ಇರಬೇಕು ಎಂಬ ಹುಚ್ಚು ಆಸೆ ಕೇಳಿ ಒಮ್ಮೊಮ್ಮೆ ಅವನು ಕೂಡ ನಕ್ಕಿದ್ದುಂಟು…’
“ಅದೊಂದು ದಿನ ಮಳೆಗಾಲದ ಸಮಯ ಆಫೀಸಿಗೆ ತುಂಬಾ ತಡ ಆಗಿದುಂಟು ಮನದಲ್ಲಿ ಏನನ್ನ ಬಾಸಿಗೆ ಮಣಮಣ ಎಂದು ಬೈದು ಮಕ್ಕಳಿಗೆ ಬೇಸಿಗೆ ಕಾಲದಲ್ಲಿ ರಜಾ ಕೊಡುವ ಹಾಗೆ ನಮಗೂ ಮಳೆಗಾಲದಲ್ಲಿ ರಜಾ ಕೊಟ್ಟಿದ್ದರೆ ಎಷ್ಟು ಚೆನ್ನಾಗಿತ್ತು,”ಎಂದು ಮನದಲ್ಲಿಯೇ ಚಂದದ ಕನಸು ಅನ್ನು ಕಾಣುತ್ತಾ ಆಫೀಸಿನ ಕಡೆ ಹೆಜ್ಜೆ ಹಾಕುತ್ತಿದ್ದೆ. ನನ್ನ ಮನೆಯೇನು ಆಫೀಸಿನಿಂದ ಅಷ್ಟಾಗಿ ದೂರವಿರಲಿಲ್ಲ. ಒಂದು ಕಿಲೋಮೀಟರ್ ಅಷ್ಟೇ, ಬಸ್ಸಿಗಾಗಿ ಕಾಯುತ್ತಾ ನಿಂತರೆ, ಮತ್ತಷ್ಟು ತಡವಾಗುವುದು ಎಂದು ಅರಿತು ಕಾಲ್ನಡಿಗೆಯಲ್ಲಿಯೇ ಜೋರಾಗಿ ಹೆಜ್ಜೆಹಾಕುತ್ತಾ ನಡೆದೆ. ಇದ್ದಕ್ಕಿದ್ದ ಹಾಗೆ ಎಲ್ಲಿತ್ತೋ ಏನೋ ಗೊತ್ತಿಲ್ಲ ನನ್ ಮಗನ್ ಕಾರು ಏಕಾಏಕಿ ಬಂದು ನನ್ ಮುಂದೇನೆ ನಿಲ್ಲಿಸಿ ಬಿಡುವುದಾ ಅಯ್ಯೋ ಪರಮಾತ್ಮ ಅಲ್ಲಿ ಬೇರೆ ಕೊಚ್ಚೆ ನೀರು ಕೊಚ್ಚೆ ನೀರೇನು ನನಗೆ ಹಾರಲಿಲ್ಲ ಅದು ಬೇರೆ ವಿಷಯ ಬಿಡಿ ಆದರೂ ನಮ್ಮ ಹೆಣ್ಣುಮಕ್ಕಳ ಬುದ್ಧಿ ಸ್ವಲ್ಪ ಓವರ್ ಆಕ್ಟಿಂಗ್ ಮಾಡುವುದು ಅಲ್ವಾ ಹಾಗೆಯೇ ನಾನು ಕೂಡ ನನ್ನ ಮುಖವನ್ನು ಸ್ವಲ್ಪ ಕೆಂಪು ಮಾಡಿಕೊಂಡು ಕೋಪದಿಂದ ಕಾರಿನಿಂದ ಕೆಳಗಿಳಿಯುವ ಅವರನ್ನು ದಿಟ್ಟಿಸುತ್ತ ನಿಂತಿದ್ದೆ. ಅವರು ಕೆಳಗಿಳಿದ ಕೂಡಲೇ ಕೋಪವನ್ನು ಮರೆತು ಅವರನ್ನೇ ಕೋತಿ ನೋಡುವಹಾಗೆ ನೋಡುವ ಹಾಗೆ ಆಯಿತು ಎಷ್ಟು ಚಂದ ಇದ್ರು ಗೊತ್ತಾ…
“ಮೇಡಂ ಸಾರಿ ನನ್ನ ಉದ್ದೇಶ ನಿಮಗೆ ಗಾಬರಿ ಮಾಡುವುದು ಅಲ್ಲ ಅದು ನೀವೊಬ್ಬರೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ರೀ ಅಲ್ವಾ ನನಗೆ ಬೇಸರವಾಯಿತು…”
ಅವನನ್ನೇ ಮೈಮರೆತು ನೋಡುತ್ತಾ ನಿಂತಿದ್ದ ನನಗೆ ಅವನ ಮಾತನ್ನು ಕೇಳಿ ಉರಿದು ಹೋಯಿತು,' ಅಯ್ಯೋ ಇವನು ಜಂಟಲ್ಮ್ಯಾನ್ ಅಲ್ಲ ಇವನು ರೋಡ್ ರೋಮಿಯೋ ಜೊತೆಗೆ ಒಂದು ಕಾರು ಅಷ್ಟೇ ನಿಮಗೇನು ಕಷ್ಟ ರೋಡಿನಲ್ಲಿ ಹುಡುಗಿ ನಿಂತಿರುವುದನ್ನು ಕಂಡ ರೀತಿ ಬಂದುಬಿಡುತ್ತೀರ ಅಲ್ವಾ ನಿಮ್ಮಂತವರು," ಕೋಪದಿಂದ ಎಂದೆ..
“ಅಯ್ಯೋ ಮೇಡಂ ನನಗೇನು ಕಷ್ಟ ಇಲ್ಲ ಆದರೆ ನಮ್ಮ ಆಫೀಸಿನವರು ಹೀಗೆ ನಡೆದುಕೊಂಡು ಬರುವುದನ್ನು ಕಂಡು ನನಗೆ ನೋಡಿಯೂ ನೋಡದಂತೆ ಹೋಗಲು ಮನಸ್ಸು ಬರಲಿಲ್ಲ ಅದಕ್ಕೆ ಹೇಳಿದ್ದು ಕೇಳಿದೆ ಅಷ್ಟೇ ನೀವು ನನ್ನ ಬಗ್ಗೆ ತಪ್ಪು ಅರ್ಥ ಭಾವಿಸಬೇಡಿ,”ಮೃದುವಾಗಿ ಹೇಳಿದ…
ಅಯ್ಯೋ ನನ್ನ ನಡೆ ನನಗೆ ಬೇಸರವಾಯಿತು ಇಲ್ಲ ಸಲ್ಲದ್ದು ಯೋಚನೆ ಮಾಡಿ ಅವನ ಮೇಲೆ ಕಿಡಿಕಾರಿ ಬಿಟ್ಟೆ ಆದರೆ ನಾನಂತೂ ಅವನನ್ನು ನನ್ನ ಆಫೀಸಿನಲ್ಲಿ ಇಲ್ಲಿಯವರೆಗೂ ನೋಡೇ ಇಲ್ಲ ಅವನೇನಾದರೂ ಸುಳ್ಳು ಹೇಳುತ್ತಿರಬಹುದು ನನ್ನ ಸೂಕ್ಷ್ಮ ಮನ ಎಚ್ಚರಿಸಿತ್ತು ಎಂದು ಯಾರನ್ನು ನಂಬಬಾರದು…
“ಮೇಡಂ ನಿಮ್ಮ ಭಾವನೆ ನನಗೆ ಅರ್ಥವಾಗುತ್ತದೆ ಯಾವನು ಬಂದು ನಿಮ್ಮನ್ನು ಈ ರೀತಿ ಅರ್ಥ ರೋಡಿನಲ್ಲಿ ನಿಲ್ಲಿಸಿಕೊಂಡು ಮಾತನಾಡುತ್ತಿದ್ದರೆ ನಿಮಗೂ ನಂಬಿಕೆ ಬರುವುದಿಲ್ಲ ನಾನೇನು ನನ್ನನ್ನು ನಂಬಿ ಎಂದು ಕೇಳುತ್ತಿಲ್ಲ ಆದರೆ ನಾನು ಕೇಳಿದ್ದು ಅಷ್ಟೇ ಬಾಯ್,” ಎಂದು ಹೊರಟೆ ಬಿಟ್ಟ ಮನುಷ್ಯ…
ಸದ್ಯ ಹೋದ್ನಲ್ಲ ಎಂದು ಒಂದು ಮನಸ್ಸು ಹೇಳಿದರು ಕೂಡ ಮತ್ತೊಂದು ಮನಸ್ಸು ಹೋಗಿ ಬಿಟ್ನಲ್ಲ ಎಂದು ಬೆಸರಿಸಿಕೊಂಡಿತ್ತು ದ್ವಂದ್ವ ಮನಸುಗಳ ಹೋರಾಟದ ನಡುವೆ ಆಫೀಸನ್ನು ತಲುಪಿದೆ..
ನಾನು ಅಷ್ಟು ಮಾತಾಡುವುದಿಲ್ಲ ಆಫೀಸಿನಲ್ಲಿ ಅಷ್ಟೇ ನನಗೆ ಒಬ್ಬಳೇ ಗೆಳತಿ ನಾನು ಆಫೀಸಿಗೆ ಹೋದ ಕೂಡಲೇ ಓಡಿ ಬಂದಳು ನನ್ನ ಬಳಿ…
“ಏನಾಯ್ತು ಯಾಕೆ ಈ ರೀತಿ ಹೊಡಿ ಬರುತ್ತಿದೆಯಾ?” ಆಶ್ಚರ್ಯದಿಂದ ಕೇಳಿದೆ…
“ಲೇ ಅದು ಇನ್ನು ಮುಂದೆ ನಮ್ಮ ಹಳೆಯ ಬಾಸ್ ಇರುವುದಿಲ್ಲವಂತೆ ಕಣೆ ಆಫೀಸನ್ನು ಹೊಸಬರು ಕೊಂಡುಕೊಂಡಿದ್ದಾರೆ…”ಎದುಸಿರು ಬಿಡುತ್ತಾ ಹೇಳಿದಳು.
“ಯಾರಾದರೂ ತೆಗೆದುಕೊಳ್ಳಲಿ ಬಿಡಿ ನಮಗೆ ಸರಿಯಾಗಿ ಸಂಬಳ ಕೊಟ್ಟರೆ ಸಾಕು, ಅದು ಅಲ್ಲದೆ ಹಳೆಯ ಬಾಸ್ ಯಾವಾಗ ನೋಡಿದರೂ ಬೈಯ್ಯುತ್ತಿದ್ದ ನಮಗೇನು ಯಾವ ಬಾಸ್ ಆದರೆ..”
“ಹಾಗಲ್ಲ ಕಣೆ ಬಿಡು ನಿನಗೆ ನನ್ನ ಮಾತು ಅರ್ಥವಾಗುವುದಿಲ್ಲ…”
'ಇವಳು ಸರಿಯಾಗಿ ಅರ್ಥ ಮಾಡಿಸಿದರೆ ತಾನೆ ನನಗೆ ಅರ್ಥ ಆಗುವುದು,' ಎಂದು ನನ್ನಲ್ಲಿ ಏನಕ್ಕು ,"ಸರಿ ನಡಿ," ಎಂದು ಮುಂದೆ ನಡೆದೆ…
ನನ್ನ ಕ್ಯಾಬೀನ್ ಗೆ ಹೋದ ಕೂಡಲೇ ಪೀವನ್ ಬಂದು ಹೊಸ ಬಾಸ್ ಕರೆಯುತ್ತಿದ್ದಾರೆ ಎಂದು ಕರೆದ ಅಲ್ಲ ಬಂದು ಒಂದು ಗಂಟೆ ಆಗಿಲ್ಲ ಆಗಲೇ ನನ್ನನ್ನು ಯಾಕಪ್ಪ ಕರೆಯುತ್ತಿದ್ದಾರೆ ನಾನು ಲೇಟಾಗಿ ಬಂದಿರುವುದಕ್ಕೆ ಬರುವುದಕ್ಕೆ ಇರಬಹುದು ಎಂದು ನನ್ನಲ್ಲಿಯೇ ಅಂದುಕೊಂಡು ಬಾಸ್ ಚೇಂಬರ್ ಗೆ ಹೋದೆ..
*******
ಎಂದು ಯಾರ ಬಳಿಯು ಮಾತನಾಡದ ಮನಸ್ಸು ಎಂದು ಎಲ್ಲರ ಜೊತೆ ಕೂಗಿ ಕೂಗಿ ಹೇಳಬೇಕು ಎನ್ನಿಸುತ್ತಿದೆ, ಯಾವ ಹುಡುಗಿಯರನ್ನು ಕಂಡರೂ ಮೂಡದ ಈ ಭಾವನೆ ಆ ಹುಡುಗಿಯ ಮೇಲೆ ಮೂಡುತ್ತಿದೆ…
ನಾನು ಒಂದು ತರಹ ವಿಚಿತ್ರ ಕಂಡ್ರಿ ಎಂದು ಸಹ ಯಾವ ಹೆಣ್ಣುಮಕ್ಕಳ ಜೊತೆಯು ಮಾತನಾಡಿರಲಿಲ್ಲ ಯಾಕೋ ಮಾತನಾಡಬೇಕು ಎಂದು ಕೂಡ ಅನ್ನಿಸಿರಲಿಲ್ಲ ಇದನ್ನು ಕಂಡ ನನ್ನ ಗೆಳೆಯರು ಒಮ್ಮೊಮ್ಮೆ ರೇಗಿಸುವುದು ಉಂಟು ಲೋ ಪರಮ್ ನೀನು ಒಂದು ಕೆಲಸ ಮಾಡು ಹುಡುಗನನ್ನೇ ಮದುವೆಯಾಗಿಬಿಡು ಎನ್ನುತ್ತಿದ್ದರು ಹಾಗೆಲ್ಲ ನಾನು ನಕ್ಕು ಸುಮ್ಮನಾಗುತ್ತಿದ್ದೆ ಹೊರತು ಅವರಿಗೆ ತಿರುಗಿಸಿ ಉತ್ತರ ನೀಡುತ್ತಿರಲಿಲ್ಲ ನನ್ನ ಈ ವರ್ತನೆಯ ಅವರು ಮತ್ತಷ್ಟು ರೇಗಿತು ವಂತೆ ಮಾಡುತ್ತಿತ್ತು…
ನಾನು ಈ ಕಂಪನಿಯನ್ನು ತೆಗೆದುಕೊಳ್ಳಲು ತುಂಬಾ ದಿನದಿಂದ ಪ್ರಯತ್ನಿಸುತ್ತಿದ್ದೆ ಕಣ್ಣು ಸೆಳೆಯುತ್ತಿದ್ದುದು ಆ ಮೂಗುತಿ ಸುಂದರಿಯನ್ನು ಅವಳನ್ನು ಮೊದಲನೇ ಬಾರಿ ನೋಡಿದ್ದು ಈ ಎಂಟು ತಿಂಗಳ ಮೊದಲು ಅವತ್ತೇ ನನ್ನ ಮನವನ್ನು ಪೂರ್ತಿಯಾಗಿ ಆವರಿಸಿ ಬಿಟ್ಟಿದ್ದಳು ಆದರೆ ನಾನೇ ಮೊದಲು ಕಂಪನಿಯನ್ನು ತೆಗೆದುಕೊಳ್ಳೋಣ ನಂತರ ಬೇರೆಯವರ ಬಗ್ಗೆ ಯೋಚಿಸಿದರೆ ಆಯ್ತು ಎಂದು ನಿಧಾನಿಸಿದ ಹೀಗೆ ಪ್ರತಿ ಬಾರಿ ಕಂಪನಿಗೆ ಬಂದಾಗಲೆಲ್ಲ ನನ್ನ ಹುಡುಗಿಯ ದರ್ಶನವಾಗುತ್ತಿತ್ತು ಇವತ್ತು ಇಂದಿನ ಸಮಯಕ್ಕೆ ಬಂದೆ ಆದರೆ ನನ್ನ ಹುಡುಗಿ ಇರಲೇಇಲ್ಲ ಯಾಕೋ ಬೇಸರವಾಗಿ ಕಾರು ತೆಗೆದುಕೊಂಡು ರೋಡಿನಲ್ಲಿ ಹೋಗುವಾಗ ಕಣ್ಣಿಗೆ ಕಾಣಿಸಿದಳು ನನ್ನ ಗೊಂಬೆ ಯಾಕೋ ಅವಳು ಆ ರೀತಿ ನಡೆದುಕೊಂಡು ಬರುವುದನ್ನು ನೋಡಲು ಆಗಲಿಲ್ಲ ಹೋಗಿ ಮಾತನಾಡಿಸಿದರೆ ನನ್ನನ್ನೇ ಕಳ್ಳನಂತೆ ಮಾತನಾಡಿಸಿ ಕಳುಹಿಸು ಬಿಟ್ಟಳು..
ಬಿಡಿ ಆದರೆ ಇವತ್ತು ಯಾಕೋ ಅವಳ ಬಳಿ ನನ್ನ ಮನಸ್ಸಿನಲ್ಲಿ ಇರುವ ವಿಷಯವನ್ನು ಹೇಳಿಕೊಳ್ಳಬೇಕು ಎನ್ನಿಸುತ್ತಿದೆ ಅದಕ್ಕೆ ಅವಳನ್ನು ನನ್ನ ಚೇಂಬರ್ ಗೆ ಬರಲು ಹೇಳಿದ್ದೇನೆ ಬಂದಳು ನನ್ನ ಹುಡುಗಿ…
******
ಎಕ್ಸ್ಕ್ಯೂಸ್ಮಿ ಎಂದು ಕೇಳಿ ಒಳಗೆ ಹೋದರೆ ಆಗಲೇ ನಾನು ಮಾತನಾಡಿಸಿದ ಹುಡುಗ ಅಯ್ಯೋ ಇವನೇ ನನ್ನ ಬಾಸ್ ಅಂದರೆ ಇವನು ಸುಳ್ಳು ಹೇಳಲಿಲ್ಲ ನಾನೇ ತುಸು ಜಾಸ್ತಿ ಯೋಚಿಸಿ ಬಿಟ್ಟೆ ಈಗ ನಾನು ಬಂದಿದ್ದಕ್ಕೆ ಏನಾದರೂ ನನ್ನನ್ನು ಕೆಲಸದಿಂದ ತೆಗೆದು ಬಿಟ್ಟರೆ ಏನು ಮಾಡುವುದು ತೆಗೆದುಹಾಕಿದರೆ ತೆಗೆದು ಹಾಕಲಿ ನನಗೇನು ಬೇರೆ ಕಡೆ ಕೆಲಸ ಸಿಗುವುದಿಲ್ಲವೇ…
“ಮೇಡಂ ಜಾಸ್ತಿ ಯೋಚಿಸಬೇಡಿ ನಾನ್ ಏನು ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲು ಕರೆದಿಲ್ಲ…”
ನಾನು ಮನದಲ್ಲಿ ಅಂದುಕೊಂಡಿದ್ದನ್ನು ಹಾಗೆಯೇ ಹೇಳಿಬಿಟ್ಟ ಬೂಪ…
ಪಾಪ ನನ್ನ ಹುಡುಗಿ ಏನೇನು ಯೋಚಿಸಿ ಡ್ರೆಸ್ ಮಾಡಿಕೊಳ್ಳುವುದು ಬೇಡ ಎಂದು ನಾನೇ ನೇರವಾಗಿ ಅವಳ ಮುಂದೆ ನಿಂತು “ಮೇಡಮ್ ನನಗೆ ನೀವು ಎಂದರೆ ತುಂಬಾ ಇಷ್ಟ ನಿಮ್ಮನ್ನು ಎಂಟು ತಿಂಗಳಿನಿಂದ ಗಮನಿಸುತ್ತಿದ್ದೇನೆ ನಿಮಗೂ ನನ್ನ ಮೇಲೆ ಇಷ್ಟ ಎಂದರೆ ನಮ್ಮ ಮನೆಯವರನ್ನು ನಿಮ್ಮ ಮನೆಗೆ ಮಾತನಾಡಿಸಲು ಕಳುಹಿಸುತ್ತೇನೆ ಎಂದು ನೇರವಾಗಿಯೇ ಕೇಳಿದೆ ಏಕೆಂದರೆ ಈಗ ನಾನು ಇನ್ನೊಂದು ಸ್ವಲ್ಪ ದಿನ ಹೋಗಲಿ ನನ್ನ ಆಫೀಸಿನಲ್ಲಿಯೇ ಇರುತ್ತಾಳೆ ಎಂದು ಬಿಟ್ಟರೆ ಅವರ ಮನೆಯಲ್ಲಿ ಅವರಿಗೆ ಬೇರೆ ಸಂಬಂಧ ವನ್ನು ನೋಡಬಹುದು ಅಥವಾ ನನ್ನ ಮತ್ತು ಇವರ ಬಗ್ಗೆ ನಮ್ಮ ಆಫೀಸಿನಲ್ಲಿ ಕೆಟ್ಟದಾಗಿ ಮಾತನಾಡಬಹುದು ಅದು ನನಗೆ ಇಷ್ಟವಿಲ್ಲ ಅದಕ್ಕೆ ನೇರವಾಗಿಯೇ ನನ್ನ ಪ್ರೀತಿಯ ಬಗ್ಗೆ ಹೇಳಿ ಬಿಟ್ಟೆ…”
ಅವರು ಈ ರೀತಿ ಪ್ರಪೋಸ್ ಮಾಡುತ್ತಾರೆ ಎಂದು ನಾನು ಎಣಿಸಿ ಇರಲಿಲ್ಲ ಮೊದಲು ಸ್ವಲ್ಪ ಅಗತ್ಯವಾದರೂ ಮನದಲಿ ಖುಷಿಯಾಯಿತು ಹೇಗೋ ಮನೆಯಲ್ಲಿಯೂ ಕೂಡ ಹುಡುಗನನ್ನು ನೋಡುತ್ತಿದ್ದರು ಇವರು ಹೇಗೋ ಮನಸ್ಸಿಗೆ ಇಷ್ಟವಾಗಿದ್ದಾರೆ ಮತ್ತು ತುಂಬಾ ಒಳ್ಳೆಯವರಂತೆ ಕಾಣಿಸುತ್ತಿದ್ದಾರೆ ಅದು ಅಲ್ಲದೆ ನನ್ನ ಮನಸ್ಸಿಗೆ ಇಷ್ಟವಾಗಿದ್ದಾರೆ ಎಂದು ಅಂದುಕೊಂಡು ,"ಸರಿ ಸರ್ ಮನೆಯಲ್ಲಿ ಬಂದು ಮಾತನಾಡಿ," ಎಂದು ನಾಚಿಕೆಯಿಂದ ಅಲ್ಲಿಂದ ಬಂದುಬಿಟ್ಟೆ…
ಮೊದಲು ಅವರು ಹೇಳಿದ್ದನ್ನು ನನಗೆ ಅರಗಿಸಿಕೊಳ್ಳಲು ಆಗಲಿಲ್ಲ ಅವಳು ಇಷ್ಟು ಬೇಗ ಒಪ್ಪುತ್ತಾಳೆ ಎಂದು ನನಗೆ ತಿಳಿದಿರಲಿಲ್ಲ ಆದರೆ ಆಕಾಶವೇ ಕೈಗೆ ಸಿಕ್ಕಷ್ಟು ಖುಷಿಯಾಯಿತು ಮಾರನೇ ದಿನವೇ ನನ್ನ ತಂದೆ ತಾಯಿಯನ್ನು ಅವರ ಮನೆಗೆ ಕರೆದುಕೊಂಡು ಹೋದೆ ಜಾತಿ ಒಂದೇ ಆದಕಾರಣ ಹೆಚ್ ಏನು ಹೇಳದೆ ಅವರ ತಂದೆ ಕೂಡ ಒಪ್ಪಿ ಬಿಟ್ಟರು ಒಟ್ಟಿನಲ್ಲಿ ನನ್ನ ಪ್ರೀತಿಗೆ ಜಯ ಸಿಕ್ಕಿತ್ತು ನನ್ನ ಪ್ರೇಯಸಿಯೇ ನನ್ನ ಹೆಂಡತಿಯಾದಳು.
“ಐ ಲವ್ ಯು ಪರಂ,” ಎಂದಳು ನನ್ನ ಮಡದಿ...
“ಐ ಲವ್ ಯು ಟೂ ಆತ್ಮ…”
ಖುಷಿಯಾಗಿರಿ ಪರಮಾತ್ಮ
ಮುಗಿಯಿತು.…
Lost at the middle of this mythic world in searching of reality 💫 Reality is better than fake dreams... A desire to get lost in a dream world is special