ಸಿಂಧನೂರು ನಗರದ ಪ್ರತಿಷ್ಠಿತ ಆರ್ ಜಿ ಎಂ ಅನುದಾನಿತ ಪ್ರೌಢ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪಾಂಡುರಂಗ ದೇಸಾಯಿ ಅವರನ್ನು ರವಿವಾರ ನಡೆದ ಅಭಿನಂದನ ಸಮಾರಂಭದಲ್ಲಿ, ವಸಿಷ್ಠಧಾಮದಿಂದ ಸನ್ಮಾನಿಸಲಾಯಿತು.
ಈ ಸಮಯದಲ್ಲಿ ವಸಿಷ್ಠ ಧಾಮದ ಸಂಚಾಲಕ ನವಲಿ ಭೀಮಸೇನಾಚಾರ್ಯರು ಮಾತನಾಡಿ ,ಆರ್ ಜಿ ಎಂ ಅನುದಾನಿತ ಪ್ರೌಢ ಶಾಲೆಯಲ್ಲಿ 35ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಅಪಾರ ಶಿಷ್ಯಬಳಗ ಹೊಂದಿರುವ ಪಾಂಡುರಂಗ ದೇಸಾಯಿ ಅವರು ಶಿಕ್ಷಕರಾಗಿ ಅಷ್ಟೇ ಅಲ್ಲದೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ಅವರ ಪ್ರಾಮಾಣಿಕ ಸೇವೆ ಮೂಲಕ ಗುರುತಿಸಿಕೊಂಡವರು ಆಗಿದ್ದಾರೆ ಎಂದರು.
ಸಮಾಜಮುಖಿ ಸೇವೆಯಲ್ಲಿ:
ನಗರದ ಆದಿತ್ಯ ನಾರಾಯಣ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರಿಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತಿದ್ದಾರೆ. ಬ್ರಾಹ್ಮಣ ಸಮಾಜದ ಹಿರಿಯರು ಆಗಿರುವ ಇವರು ಪ್ರತಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ಸಿಗೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಇವರ ನಿರಂತರ ಸೇವೆ ಮತ್ತು ಮಾರ್ಗದರ್ಶನ ಸಮಾಜಕ್ಕೆ ಅತ್ಯವಶ್ಯಕವಾಗಿದ್ದು, ಸಿಂಧನೂರಿನ ವಿಪ್ರ ನೌಕಕರ ಸಂಘದಲ್ಲೂ ಜವಾಬ್ದಾರಿಯಿಂತ ಸೇವೆ ಸಲ್ಲಿಸಿದ ಅನುಭವವಿರುವ ಇವರನ್ನು ಆತ್ಮೀಯವಾಗಿ ಬೀಳ್ಕೊಡುವ ಈ ಘಳಿಗೆಯಲ್ಲಿ ಶಿಕ್ಷಕ ವೃಂದ ಶಿಷ್ಯ ವೃಂದ ಆತ್ಮೀಯರು, ಬಂಧುಗಳು, ಸಹೊದ್ಯೋಗಿಗಳು ಅಭಿನಂದಿಸಿದರು.
ನಿವೃತ್ತಿ ಜೀವನ ಸುಖಕರವಾಗಿರಲಿ:
ತಾಯಿಯಿಂದ ಉಸಿರು ಬರುತ್ತೆ, ತಂದೆಯಿಂದ ಹೆಸರು ಬರುತ್ತೆ, ಆದರೆ, ಗುರುವಿಂದ ಉಸಿರಿರುವವರೆಗೂ ಹೆಸರು ಬರುವ ವಿದ್ಯೆ ಬರುತ್ತದೆ. ಜೀವಗಳಿಗೆ ಜೀವನ ನೀಡುವ ಏಕೈಕ ವೃತ್ತಿ ಅದು ಶಿಕ್ಷಕ ವೃತ್ತಿ, ಅದರಷ್ಟು ಪವಿತ್ರವಾದ ವೃತ್ತಿ ಇನ್ನೊಂದಿಲ್ಲ, ಇಂತಹ ಶಿಕ್ಷಕ ವೃತ್ತಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸರಳವ್ಯಕ್ತಿತ್ವದ ಸಹನಾಮೂರ್ತಿಯಾಗಿರುವ ಪಾಂಡುರಂಗ ದೇಸಾಯಿ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಮತ್ತು ಅಪಾರ ಶಿಷ್ಯ ವೃಂದ ಹೊಂದಿರುವ ಇವರು ತಮ್ಮ ಸೇವೆಯುದ್ದಕ್ಕೂ ಪಡೆದ ಅನುಭವನ್ನು ಸಮಾಜದಲ್ಲಿ ಹಂಚಿಕೊಂಡು ಸುಮಾಜದ ಅಭಿವೃದ್ಧಿಗೆ ಶ್ರಮಿಸಲು ಭಗವಂತ ಆಯುರ್ ಆರೋಗ್ಯ ನೀಡಲೆಂದು ಈ ಮೂಲಕ ಆಶಿಸುತ್ತೇವೆ.
ಈ ಸಮಯದಲ್ಲಿ , ಸತ್ಯನಾರಾಯಣಾಚಾರ್ಯ ನವಲಿ, ಮಠಾಧಿಕಾರಿಗಳಾದ ವೆಂಕಟಗಿರಿಯಾಚಾರ್ಯರು, ಬಂಧುಮಿತ್ರರು ಶಿಷ್ಯವೃಂದ ಸೇರಿದಂತೆ ಹಲವರಿದ್ದರು.
Article Writer, Self Employee
0 Followers
0 Following