ಮುದ್ದು ಮನಸ್ಸು

ಚಿಂತನೆ

ProfileImg
04 Jun '24
2 min read


image

ಮುದ್ದು ಮನಸ್ಸಿಗೊಂದು  ತಿಳಿ ಚಿಂತನೆಯ ಒಲವಿನ ಪತ್ರ.

ನೀನು ತುಂಬಾನೆ ಹಟಮಾರಿ, ಹೇಳಿದ್ದನು ಕೇಳಲು ಒಲ್ಲದ ಮೊಡುತನದಾಕಿ.ನಿನ್ನ ವಿಶ್ವಾಸಕ್ಕೆ ತಗೋಳೋದೆ ಕಷ್ಟ ಕಣೇ. ಅದ್ರು ನಿನಗೊಂದಷ್ಟು ಸತ್ಯ ಹೇಳುವೆ ಪ್ಲೀಸ್ ಅರ್ಥ ಮಾಡಿಕೋ ಈ ಪತ್ರನಾ ಸಾವಕಾಶ ಓದಿ ವಿಚಾರ ಮಾಡು.

   ಇದು ಮಾನಸಿಕ ಸಂಘರ್ಷದ ಕಾಲಘಟ್ಟ ಹತಾಶೆಯಾಗಬೇಡ. ಮನಸ್ಸು ಬೇಸರದ ಹೊಳೆಗೆ ಕರೆದೊಯ್ಯುತ್ತದೆ ಹಾಗಂತ ಮನಸಿಗೆ ನಿರ್ದಾರ ಮಾಡುವ ಕೆಲಸ ಕೊಡಬೇಡ. ಸಾಧನೆಗಳು ಮನೋಬಲದ ನಿರ್ಣಯ ಆಗುವುದೆ ಇಂಥ ಸಂದಿಗ್ಧ ಸ್ಥಿತಿಯಲ್ಲಿ. ನಾನು ಏನು? ಏಷ್ಟು ಗಟ್ಟಿ, ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರ ದೊರಕುವುದೆ ಈ ಪರಿಯ ಸಮಸ್ಯೆಗಳು ದತ್ತನೆ ಎದುರಾದಾಗ. ಅಂದುಕೊಂಡದ್ದು ಅಂದುಕೊಂಡಾಗಲೇ ಆಗುವುದು ನಮ್ಮ ಬಾಳಿನಲಿ ಯಾವತ್ತು ಇಲ್ಲ ಎಂಬುದು ಸತ್ಯವಾಗಿದೆ,ಹಾಗಿದ್ದು ಈಗಲೇ ಆಗಿದ್ದರೆ ಚೆನ್ನಾಗಿತ್ತು ಅಂತ ಬಯಸಿದರೆ ಅದು ಆಶಾವಾದವಲ್ಲ ಬರಿಯ ಅರ್ಥ ವಿರದ ಕೊರಗು ಅಷ್ಟೇ. 

    ಈ ತರಹದ ಕೊರಗುವಿಕೆಯಿಂದ ಅನಗತ್ಯ ಮನಸಿಕ ಕಿರಿಕಿರಿ ಹಾಗೂ ಮನೋಭಾರ, ಸಮಯ ನಷ್ಟವೇ ಹೊರತು ಬೇರೇನು ಸಿಗದು.ಎಚ್ಚರಗೊಳಿಸು ಕೊರತೆಯನ್ನೆ ಸಾಧನೆ ಮೆಟ್ಟಿಲಾಗಿಸು ದೊರೆತ ಸಮಯವನ್ನು ಕಾಯಕಕ್ಕೆ ವಿನಿಯೋಗಿಸು ಮುಂದಿನ ಗುರಿಗೆ ಮುನ್ನುಡಿಯಾಗಲಿ.  ಎಷ್ಟಿದರೂ ಮನದ ಕೊರಗು ನೀಗದು ಅದನ್ನು ನಾವೇ ಆದ್ಯತೆ ನೀಡಿ ಪೂರೈಸಬೇಕು. ಹೊಸ ಹುಟ್ಟಿನ ಬೇಡಿಕೆಗೆ ಸ್ಪೂರ್ತಿಯಾಗಬೇಕು. ಕೇಳು ಬಂಗಾರಕ್ಕೆ ಬೆಂಕಿ ತಗುಲಿದರೆ ಮಾತ್ರ ಹೊಳಪು ಅಂತೆಯೆ ಸಂಘರ್ಷಕ್ಕೆ ಮನಸ್ಸು, ಜೀವನ ಬಿದ್ದಾಗ ಹಷೋದ್ಗಾರದ ಸವಿ ದೊರೆವುದು. 

    ಸ್ವಲ್ಪ ಯೋಚಿಸಿ ನೋಡು ಪ್ರಯತ್ನವೇ ನಮ್ಮ ಪಾಲಿಗೆ ದೇವರು ಯಾವ ದೇವರು ಏನು ವರಕೊಟ್ಟಿದ್ದಾರೆ ನಮಗೆ.  ಕೊಟ್ಟಿದ್ದರೋ ಇಲ್ಲವೋ ಗೊತ್ತಿಲ್ಲ ಇದುವರೆಗೂ ಸಿಕ್ಕ ಫಲವೆಲ್ಲ ಪ್ರಯತ್ನದ್ದೆ ಅಲ್ವ. ಹಾಗಾಗಿ ಸಂಘರ್ಷವೆಂಬುದು ಮನಸ್ಸು ಮತ್ತು ಆಸೆಗಳದ್ದು ಅದನ್ನು ನಿರ್ದಾರ ಮಾಡುವ ನ್ಯಾಯಧೀಶ ಮಾತ್ರ ನಾವೇ ಆಗೋಣ. ಪ್ರತಿ ಪ್ರಾರಂಭವೂ ಕೊರತೆ ಮತ್ತು ಮಾನಸಿಕ ಹೊಯ್ದಾಟದಿಂದಲೆ ಆಗಲಿ ಬಿಡು. ಅದರ ಫಲಿತಾಂಶ ಈ ಕ್ಷಣಕ್ಕೆ ಹಿನ್ನಡೆಯಾದರೂ ಭವಿಷ್ಯಕ್ಕೆ ವರವಾಗಲಿ. ಮನಸ್ಸು ನಿಂದೆ ಕೊರತೆಯು ನಿನ್ನೊಳಗಿನ ಮನಸ್ಸಿನದು.  ಅವು ಸಂಘರ್ಷ ಮಾಡಲಿ ಬಿಡು.ಚಿಂತೆ ಚಿತೆಗೇರದೆ ಚಿಂತನೆಯ ಆಲೋಚನೆಯಿಂದ ಗುರಿಯ ತಲುಪು ಸಮಯ ನಿನ್ನೊಂದಿಗಿದೆ ಅ ಸಮಯದ ಜೊತೆಯಲ್ಲಿ ನೀ ಸಾಗು.  ಜಯದ ಸವಿಯ ಅದಷ್ಟು ಬೇಗ ನಿ ಸವಿಯುವೆ ವಿಶ್ವಾಸವಿದೆ ನನಗೆ. ಮನೋಬಲಕ್ಕೆ ಬಲ ತುಂಬು ಅಂತಹ ಬಲಕ್ಕೆ ಶಕ್ತಿಯ ಶಕ್ತತೆ ಸ್ನೇಹದಲಿ ನಾ ನಿನಗೆ ಧಾರೆ ಏರೆವೆ ನಿನ್ನ ಗೆಲುವಿನ ಮೊಗವ ನಾ ಕಾಣುವ ಉತ್ಸಾಹದಲಿ ನಿತ್ಯ ಕಾಯುತ್ತಿರುವೆ. ಕೊರಗಬೇಡ ಮರುಗಬೇಡ ಅವುಗಳಿಂದ ಹಿಂದೆ ಕೂಡ ಏನು ಆಗಿಲ್ಲ ಮುಂದೆ ಕೂಡ ಏನೂ ಆಗುವುದಿಲ್ಲ. ಏನೇ ಆಗಿದ್ದರು ಸೋಲು ಗೆಲುವೆಂಬ ಹಣೆ ಪಟ್ಟ ಹೊತ್ತ ಪ್ರಯತ್ನದದ್ದು ಎಂಬುದನ್ನ ನೀ ಮರಿಬೇಡ. ನಿನ್ನ ನಾನು ಮುದ್ದುಮರಿ ಅನ್ನುವುಕ್ಕೆ ಕಾರಣ ನಿ ನ್ನ ಮನಸ್ಸು. ಹಾಗಾಗಿ ಮಗುವೆ ಜಾಸ್ತಿ ಹಟಹಿಡಿದು ಕಾಡಿಸಬೇಡ ಒದೆಬೀಳುತ್ತೆ ಎಚ್ಚರ.

ಇಂತಿ ನಿನ್ನವನೇ ಆದ
ಮನೋಬಲದ ಬೆಂಬಲ

Category:Personal Development



ProfileImg

Written by Naveenkumar A G