ರಾಮ.. ರಾಮ....ರಾಮ...ರಾಮ..
ನಿತ್ಯವೂ ಜಪಿಸಲು ನಿನ್ನ ನಾಮ
ಬದುಕಲ್ಲಿ ಸಿಗುವದು ಸುಖ,ಶಾಂತಿ ಸಂಭ್ರಮ
ದಣಿದು ನೊಂದ ಮನಕೆ ಸಿಗುವುದು ವಿಶ್ರಾಮ
ದೇಹವೆಂಬ ಮನೆಯಾಗುವುದು ನೆಮ್ಮದಿಯ ಧಾಮ..!!
ಮೌನದಲ್ಲೇ ನುಡಿದೆ ಎಲ್ಲಾ ಮಾತುಗಳನು
ಭಾವದಲ್ಲೇ ಹೇಳಿದೆ ಸಂಸ್ಕೃತಿ, ಸಂಸ್ಕಾರವನು
ಕಣ್ಣಿನಲ್ಲೇ ತೋರಿದೆ ಕುರುಣೆಯನು
ಅಪ್ಪುಗೆಯಲೇ ನೀಡಿದೆ ಅಭಯವನು ...!!
ನಡೆ ನುಡಿಗುಳ ಸಮನ್ವಯಕೆ ಪ್ರತ್ಯಕ್ಷ ಸಾಕ್ಷಿಯದೆ
ಮಾತಪಿತರ ವಾಕ್ಯ ಪರಿಪಾಲನೆಯ ದ್ಯೋತಕವಾದ
ಸಂಸ್ಕಾರ, ಸಂಸ್ಕೃತಿ ಅದರ್ಶಗಳಿಗೆ ರಾಯಭಾರಿಯಾದೆ
ಸಕಲರ ಮನಗೆದ್ದು ಮರ್ಯಾದಪುರುಷೋತ್ತಮನಾದೆ..!!
ಅಧಿಕಾರದ ಧಾಹದ ಕುರುಹು ಕಿಂಚಿತ್ತೂ ಇರಲಿಲ್ಲ
ಅಹಂಕಾರವಂತೂ ಹತ್ತಿರವೂ ಸುಳಿಯಲಿಲ್ಲ
ಸನ್ನಡೆತೆ,ಸನ್ಮಾರ್ಗ,ಸದ್ಬುದ್ಧಿಯನ್ನು ಮರೆಯಲಿಲ್ಲ
ಧರ್ಮ,ನ್ಯಾಯ ನೀತಿಯನ್ನು ಎಂದೂ ಬಿಡಲಿಲ್ಲ...!!
ಜನರಿಗಾಗಿಯೇ ಮಿಸಲಿಟ್ಟೆ ಜೀವನವನು
ಜನರಿಗಾಗಿಯೇ ತ್ಯಜಿಸಿದೆ ತನ್ನೆಲ್ಲಾ ಸುಖವನು
ಜನರಿಗಾಗಿಯೇ ಬದುಕಿದೆ ಪ್ರತಿಕ್ಷಣವನೂ..
ಜನರಿಗಾಗಿಯೇ ಅರ್ಪಿಸಿದೆ ತನು,ಮನ,ಧನವನು ..!!
ಕಷ್ಟಕ್ಕೆ ಹೆಗಲಾದೆ,
ನೋವಿಗೆ ಒಡಲಾದೆ,
ಅನಾಥರಿಗೆ ಆಸರೆಯಾದೆ
ಪ್ರೀತಿಗೆ ಮಾದರಿಯಾದೆ,
ನಂಬಿಕೆಗೆ ಒಡೆಯನಾದೆ
ಎಲ್ಲರ ಹೃದಯದಲ್ಲಿ ನೆಲೆಸಿದೆ
ಉಸಿರಲ್ಲಿ;ಉಸಿರಾಗಿ ಬೆರೆತು ಹೋದೆ
ನೆಮ್ಮದಿಯಾದೆ,ಶಾಶ್ವತ ಸತ್ಯಸಂದನಾದೆ
ಎಲ್ಲರ ನೆಚ್ಚಿನ ಶ್ರೀ ರಾಮನಾದೆ ..ದೇವನಾದೆ!
ಜೈ ಶ್ರೀ ರಾಮ ..!!
ಗೀತಾಂಜಲಿ ಎನ್, ಎಮ್
Author ✍️
0 Followers
0 Following