"ತಿಳಿಯೋಣ ಬನ್ನಿ"
ಓದಬೇಕು ಪುಸ್ತಕವ,
ಮಸ್ತಕದಲ್ಲಿ ಅಚ್ಚಾಗುವಂತೆ.
ಆಡಬೇಕು ಆಟವ,
ಚೈತನ್ಯ ಬರುವಂತೆ.
ಮಾಡಬೇಕು ಗೆಳೆತನವ,
ಮತ್ಸರ ಬರದಂತೆ.
ತೋರು ನೀ ಗೌರವವ,
ಗುರುಹಿರಿಯರು ಮೆಚ್ಚುವಂತೆ.
ಕೇಳಬೇಕು ಪಾಠವ,
ಜೀವನದುದ್ದಕ್ಕೂ ಮರೆಯದಂತೆ.
ಪರೀಕ್ಷೆ ನೀ ಬರೆಯುವವ,
ಸಿದ್ಧನಿರು ಯೋಧನಂತೆ.
ಕಲಿಯಬೇಕು ಶಿಕ್ಷಣವ,
ಜೀವನ ರೂಪಿಸುವಂತೆ.
ತೊರೆದುಬಿಡು ಆಲಸ್ಯವ,
ಹಗಲಿರುಳು ದಣಿಯದಂತೆ.
ಬದುಕಿಬಿಡು ಜೀವನವ,
ಪ್ರತಿಯೊಬ್ಬರೂ ನೆನಪಿಡುವಂತೆ.
ಹೆತ್ತವರಿಗೆ ನೀ ಜೀವ,
ಕಾಪಾಡಿಕೊ ಉಸಿರಂತೆ.
ಕೊಟ್ಟು ಬಿಡು ಪ್ರೀತಿಯ,
ದ್ವೇಷವು ಕರಗುವಂತೆ.
ಜನುಮದಲ್ಲಿ ನೀ ಮಾನವ,
ನಿನ್ನಲ್ಲಿರಲೆಂದೂ ಮಾನವೀಯತೆ.
ಪ್ರತಿಭಟಸು ಅನ್ಯಾಯವ,
ಶಿಸ್ತಿನ ಸಿಪಾಯಿಯಂತೆ.
ಮುನ್ನಡೆಸು ಸಮಾಜವ,
ಹೆತ್ತವರು ಮರುಗದಂತೆ.
ಸುಳ್ಳನ್ನಾಡದಿರು ಮಾನವ,
ಸತ್ಯ ಮೇವ ಜಯತೇ.
0 Followers
0 Following