ನಮ್ಮ ಬೆಂಗಳೂರು ನಮ್ಮ ಹೆಮ್ಮೆ

ನಾನು ಕಂಡ ನಮ್ಮ ಬೆಂಗಳೂರು



image

ಬೆಂಗಳೂರು ಎಂದಾಕ್ಷಣ ಅದೇನೊ ಒಂಥರಾ ಮುಖದಲ್ಲಿ ಮಂದಹಾಸ, ಸ್ವಲ್ಪ ಹೆಚ್ಚಿನ ಶಕ್ತಿ, ದೈರ್ಯ, ಉಸ್ತಾಹ, ಉಲ್ಲಾಸ ಹಾಗೂ ಛಲ. ನಮ್ಮ ಕರ್ನಾಟಕದಲ್ಲಿ ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಏಕೈಕ ನಗರ ನಮ್ಮ ಈ ಬೆಂಗಳೂರು ನಗರ.

  • ಬೆಂಗಳೂರು ಅಂದ್ರೆ ಎಲ್ಲರಿಗೂ ಗೊತ್ತಿರುವ ವಿಷಯ ಯಾಕಂದ್ರೆ ದಕ್ಷಿಣ ಭಾರತದಲ್ಲಿ ಹೆಸರಾಗಿರುವಂತಹ ಬಹುದೊಡ್ಡ ನಗರ ಇದಾಗಿದೆ, ಇಲ್ಲಿ ನೆಲೆಸಿರುವ ಬಹುಸಂಖ್ಯಾತ ಜನರು ವಲಸೆ ಬಂದಿರುವವರಾಗಿರುವುದರಿಂದ ಸಾಮಾನ್ಯವಾಗಿ ಮೂರ್ನಾಲ್ಕು ಭಾಷೆ ಮಾತಾಡುತ್ತಾರೆ.
  • ಬೆಂಗಳೂರು ಬರಿ ದುಡಿಯುವುದಕ್ಕಲ್ಲ ಬದಲಾಗಿ ಕಲಿಯುವುದಕ್ಕೆ ಜೊತೆಗೆ ಬೆಳೆಯುವುದಕ್ಕೆ ಅನುಕೂಲಕರವಾಗಿರುವಂತಹ ಅತ್ತ್ಯುತ್ತಮ ನಗರವಾಗಿದೆ, ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಙ್ನಾನಗಳನ್ನು ಬಳಸಿಕೊಂಡು ಬಹು ವೇಗವಾಗಿ ಮುನ್ನುಗ್ಗುತ್ತಿರುವ ನಗರ ಇದಾಗಿದೆ.
  • ಇಂಥಹ ನಗರ ನಮ್ಮ ಕರ್ನಾಟಕದಲ್ಲಿ ಇರುವುದು ನಿಜಕ್ಕೂ ಕನ್ನಡಿಗರು ಮಾಡಿರುವ ಪುಣ್ಯವೆ ಹೌದು. ಬೆಂಗಳೂರು ಎಂಬ ಹೆಸರು ಪ್ರಪಂಚದಗಲಕ್ಕೆ ಹರಡಿಕೊಂಡಿದೆ ಹಾಗೆ ಭಹುದೊಡ್ಡ ಕಂಪನಿಗಳಿಂದ ಹಿಡಿದು ಅತಿ ಚಿಕ್ಕ ಕಂಪನಿಗಳು ಈ ನಗರದಲ್ಲಿ ನೆಲೆಯೂರಿವೆ. 
  • ಈ ನಮ್ಮ ಬೆಂಗಳೂರು ನಗರ ಪರಿಸರ ಸ್ನೇಹಿಕೂಡ ಹೌದು ಇಲ್ಲಿಯ ವಾತಾವರಣ ಮಾನವ ಜೀವಿಗೆ ಹೇಳಿ ಮಾಡಿಸಿದಂತಿದೆ, ದೊಡ್ಡ   ದೊಡ್ಡ  ಶ್ರೀಮಂತ ವ್ಯಕ್ತಿಗಳು ಹೆಚ್ಚೆಚ್ಚು ಹಣ ಹೂಡಿಕೆ ಮಾಡಿ ದೊಡ್ಡ ದೊಡ್ಡ ಕಂಪನಿಗಳಿಗೆ ಸಾತ್‌ ನೀಡುತ್ತಾರೆ.
  • ಈ ನಮ್ಮ ಬೆಂಗಳೂರು ಅದೆಷ್ಟೊ ಬಡ ಜನರ ಹಸಿವು ನೀಗಿಸುವ ಅಕ್ಷಯ ಪಾತ್ರೆಯಾಗಿದೆ ಅಂದರೆ ತಪ್ಪಾಗಲಾರದು, ಈ ಊರಿಗೆ ಅಕ್ಷರಸ್ತ ಅನಕ್ಷರಸ್ತ ಅನ್ನುವ ಬೇದಬಾವ ಇಲ್ಲ ಇಲ್ಲಿಗೆ ಬಂದು ಬದುಕು ನೆಡೆಸಲು ಸಾವಿರಾರು ದಾರಿಗಳುಂಟು.
  • ಈ ನಮ್ಮ ಬೆಂಗಳೂರು ವಿಶೇಶವಾದ ವಾತಾವರಣ ಹೊಂದಿದೆ ಈಗಾಗಿ ಆರೋಗ್ಯಕರವಾಗಿರಲು ಅನುಕೂಲಕರವಾಗಿದೆ, ಅನ್ನಕ್ಕಾಗಿ ಬಂದವರನ್ನು ಎಂದಿಗೂ ಉಸಿಗೊಳಿಸುವುದಿಲ್ಲ, ಬೇಡಿಬಂದವರನ್ನು ಬರಿಗೈಯಲ್ಲಿ ಹಿಂದಿರಿಗಿಸುವುದಿಲ್ಲ, ಅದೆಷ್ಟೊ ಜನರಿಗೆ ದಾರಿದೀಪವಾಗಿ ಬೆಳೆದು ನಿಂತಿದೆ.
  • ನಮ್ಮ ಬೆಂಗಳೂರಿನ ಬಗ್ಗೆ ಹೇಳುತ್ತಾ ಹೊದರೆ ಪದಗಳಿಗೆ ಕೊನೆಯೆ ಇಲ್ಲ, ಈ ನಗರ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಹಲವಾರು ಬಗೆಯ ನಾನಾರೀತಿಯ ಕೆಲಸಗಳಿಗೆ ನಾಂದಿಯಾಡಿದೆ.
  • ಈ ನಗರ ಅದೆಷ್ಟೊ ಬಡ ಜನರ ಹಸಿವು ನೀಗಿಸಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಹಾಗೂ ಅದೆಷ್ಟೊ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಟ್ಟು ಅವರುಗಳ ಬದುಕಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ ನಮ್ಮ ಹೆಮ್ಮೆಯ ನಮ್ಮ ಬೆಂಗಳೂರು ನಗರ.
  • ಈ ನಮ್ಮ ಬೆಂಗಳೂರು ಇಷ್ಟೊಂದು ವಿಶಾಲವಾಗಿ ಬೆಳೆಯಲು ಬುನಾದಿ ಹಾಕಿದ ಹೆಗ್ಗಳಿಕೆಗೆ ಹೆಸರಾಗಿರುವ ನಮ್ಮ ನಾಡ ಪ್ರಭು ಕೆಂಪೇಗೌಡ ಅವರ ಕಾರ್ಯ ವೈಖರಿ ನಿಜಕ್ಕೂ ಅವಿಸ್ಮರಣೀಯವಾದದ್ದು.
  • ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದ ಯುವಕರು ವಿಧ್ಯಾಬ್ಯಾಸಕ್ಕಾಗಿ ಅವಲಂಬಿತವಾಗಿರುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರು ಮೊದಲ ಆಯ್ಕೆ ಆಗಿರುತ್ತದೆ. ಯಾಕೆಂದರೆ ಇಲ್ಲಿನ ವಾತಾವರಣ ಹಾಗೂ  ಇಲ್ಲಿನ ಕ್ವಾಲಿಟಿ ಆಫ್‌ ಎಜುಕೇಶನ್‌ ಸಿಸ್ಟಮ್‌ ಎಲ್ಲಾ ಓದುಗರ ಗಮನ ಸೆಳೆಯುವಲ್ಲಿ ಯಶಸ್ಸು ಗಳಿಸಿದೆ.
  • ಈ ನಮ್ಮ ಬೆಂಗಳೂರು ನಗರದಲ್ಲಿ ಓದು ಕಲಿಯಲು ನೆರಯ ರಾಷ್ಟ್ರಗಳ ವಿಧ್ಯಾರ್ಥಿಗಳು ಕೂಡ ಆಸಕ್ತಿ ಹೊಂದಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನೆಲೆಸುತ್ತಾರೆ.
  • ಅತ್ಯಂತ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವ ನಗರ ಹಾಗು ಹೆಚ್ಚಿನ ಕ್ರೀಡಾಭಿಮಾನಿಗಳನ್ನು  ಹೊಂದಿರುವ ಹೆಗ್ಗಳಿಕೆಗೆ ಪಾತ್ರ ಆಗಿದೆ, ಇಲ್ಲಿನ ಜನ ಹೆಚ್ಚಿನದಾಗಿ ಕ್ರಿಕೇಟ್‌ ಇಷ್ಟ ಪಡುತ್ತಾರೆ. ಸೋಲನ್ನು ಸರಾಗವಾಗಿ ಸ್ವೀಕರಿಸುವ ಹಾಗೂ ಗೆಲುವನ್ನು ಮಿತಿಯಾಗಿ ಸಂಭ್ರಮಿಸುವ, ನಮ್ಮವರು ನಿಮ್ಮವರು ಎನ್ನುವ ಒಡಕಿಲ್ಲದೆ ಎಲ್ಲಾ ಆಟಗಾರರಿಗೂ ಒಂದೆ ರೀತಿಯ ಪ್ರೀತಿ ತೋರಿಸುವ ಸಹೃದಯಿಗಳು ನಮ್ಮ ಕನ್ನಡಿಗರು
  • ಈ ನಗರದಲ್ಲಿ ನಾನ ಭಾಷೆ ಮಾತಾಡುವವರಿಗೆ ಹೊಂದಿಕೊಂಡು ಅವೆಲ್ಲಾ ಬಾಷೆಗಳನ್ನು ಕಲಿತು ಅರ್ಥೈಸಿಕೊಂಡು ಎಲ್ಲಾ ಬಾಷೆಗಳಿಗೆ ಬೆಲೆ ಕೊಟ್ಟು ಎಲ್ಲಾರನ್ನು ಸರಿಸಮನಾಗಿ ನೋಡುವ ವಿಶಾಲ ಹೃದಯದವರು ನಾವು.

ಇಲ್ಲಿನ ಕನ್ನಡ ಜನರು ಪ್ರೀತಿ ಹಂಚುವ ಯಜಮಾನರು,

  • ಎಲ್ಲಾರನ್ನು ಸರಿಸಮನಾಗಿ ಕಾಣುವ ಸಹೃದಯಿಗಳು,
  • ಪರಭಾಷೆಯ ಜನರನ್ನು ಪ್ರೀತಿಸುವ ಪ್ರತಿಭಾವಂತರು,

 

 

                                                                                           -ನನ್ನ ಕಿರು ಪರಿಚಯ

                                                                               ಇಂತಿ ನಿಮ್ಮ ಪ್ರೀತಿಯ ಹುಡುಗ

                                                                                         ಸತೀಶ್‌  ಎನ್‌ ಕೃಷ್ಣಗಿರಿ                                                                                                     ಪಾವಗಡ ʼತಾʼ

                                                                                           “ಹೆಮ್ಮೆಯ  ಕನ್ನಡಿಗ”

                                                                                “ಕನ್ನಡವೆ ಸತ್ಯ ಕನ್ನಡವೆ ನಿತ್ಯ”

Category:Personal Experience



ProfileImg

Written by ಸತೀಶ್‌ ಎನ್‌ ಕೃಷ್ಣಗಿರಿ

ಕನ್ನಡ ಬರಹಗಾರ