ಬದುಕ ದಿಕ್ಕ ಬದಲಿಸಿದ ಆಸ್ಟಿಯೋ ಸರ್ಕೋಮಾ: ಲೇ ಶ್ರುತಿ ಬಿ ಎಸ್

ಪುಸ್ತಕ ಪರಿಚಯ

ProfileImg
05 May '24
2 min read


image

ಬದುಕ ದಿಕ್ಕ  ಬದಲಿಸಿದ ಆಸ್ಟಿಯೋ ಸರ್ಕೋಮಾ

ಕ್ ಾನ್ಸರ್  ನ್ನು  ಸಮರ್ ಕವಾಗಿ  ಎದುರಿಸಿ  ಮಣ ಪಾಲ ಆ ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಶ್ರುತಿ  ಬಿ ಎಸ್ ಅವರ ಆತ್ಮ ಕಥನವಿದು 

ಈ ಪುಸ್ತಕ  ಬದುಕ ದಿಕ್ಕ  ಬದಲಿಸಿದ ಆಸ್ಟಿಯೋ ಸರ್ಕೋಮಾ  

ಪುಸ್ತಕವನ್ನು   ಒಂದೇ ಸಲಕ್ಕ ಓದಿದೆ 

ಕ್ಯಾನ್ಸರ್ ಬಂದವರ ಆತಂಕ ತಲ್ಲಣಗಳನ್ನು,ಚಿಕಿತ್ಸೆಯ ಖರ್ಚು ವೆಚ್ಚ ಹಿಂಸೆಗಳ ಜೊತೆಯಲ್ಲಿ ವೈದ್ಯರುಗಳ ಕಾಳಜಿ ಆತ್ಮೀಯತೆಯನ್ನು ಸೂಕ್ತವಾಗಿ ಬಿಂಬಿಸಿದ್ದಾರೆ ಕ್ಯಾನ್ಸರ್ ಎಂದರೆ ಸಾವಲ್ಲ ಎಂಬುದನ್ನು ನಿರೂಪಿಸಿದ್ದಾರೆ,ಬದುಕನ್ನು ಬದಲಾಯಿಸಿದ ಬಗೆಗೂ ಬರೆದಿದ್ದಾರೆ ಕೃತಿ ಉತ್ಪ್ರೇಕ್ಷೆ ಅತ್ಯುಕ್ತಿಗಳಲಿಲ್ಲದೆ ಸಹಜವಾಗಿ ಬಂದಿದೆ,

ಕಾಲಿನ ್ಲಿ ಕಾಣಿಸಿಕೊಂಡ ಸಣ್ಣ ಹುಣ್ಣೊಂದು ನೋವು ಕೊಡಲಾರಂಭಿಸಿದ್ದು ಚಿಕಿತ್ಸೆ ಪಡೆಯಲು ಹೋದಾಗಲೇ ಅದು ಒಂದು ವಿಧದ ಕ್ಯಾನ್ಸರ್ ಆಸ್ಟಿಯೋ ಸರ್ಕೋಮ ಎಂದು ತಿಳಿದಾಗ ಹದಿನೇಳು ಸದಿನೆಂಟರ ಈಗಷ್ಟೇ ಬದುಕನ್ನು ಬೆರಗು ಕಣ್ಣುಗಳಿಂದ ನೋಡುವ ಎಳೆಯ ತರುಣಿ ಶ್ರುತಿ ದಿಟ್ಟವಾಗಿ ಎದುರಿಸಿ ಹಿಮ್ಮೆಟ್ಟಿಸಿದ ಛಾತಿ ಯಾರೇ ಆದರೂ ಮೆಚ್ಚುವದ್ದು 

 

ಆರಂಭದಲ್ಲಿ ಕ್ಯಾನ್ಸರ್ ಎಂದು ಗೊತ್ತಿಲ್ಲದೇ ಇದ್ದಾಗ ವೀಲ್ ಚೇರ್ ನಲ್ಲಿ ಹೋಗುವಾಗ ಒಂತರಾ ಥ್ರಿಲ್ ಅನಿಸಿದ್ದು ಮಜಾ ಎಂದೆನಿಸಿದ್ದನ್ನೂ ಬರೆದಿದ್ದಾರೆ.ಆಗಷ್ಟೇ ಪಿಯುಸಿ ಮುಗಿಸಿದ ಪುಟ್ಟ ಹುಡುಗಿಗೆ ಎಲ್ಲರ ಗಮನ ತನ್ನತ್ತ ಕೆಂದ್ರಿಕೃತವಾದಾಗ ಹಾಗನಿಸಿರುವುದು ಸಹಜ ಕೂಡ. ನಂತರ ಕ್ಯಾನ್ಸರ್ ಎಂದು ತಿಳಿದಾಗ ಕೂಡ ಧೈರ್ಯವಾಗಿ ಎದುರಿಸಿದ ಬಗ್ಗೆ ಬರೆದಿದ್ದಾರೆ  .

ಇದವರ ಮೊದಲ ಕೃತಿ.ಇದಾದ ನಂತರ ಅವರು ಅನೇಕ ಬರಹಗಳನ್ನು ಬರೆದಿದ್ದಾರೆ.ಪುಸ್ತಕವಾಗಿಯೂ ಪ್ರಕಟಗೊಂಡಿವೆ 

ಅವರಲ್ಲಿನ ಬರಹಗಾರ್ತಿ ಹೊರ ಬರಲು ಇದೊಂದು ಕಾರಣವಾಯಿತೆು ಎನಿಸುತ್ತದೆ 

ಕ್ಯಾನ್ಸರ್ ಬರಬಾರದಿತ್ತು.ಆದರೂ ಇದೇ ಕಾರಣವಾಗಿ ಬರೆಯಲು ಆರಂಭಿಸಿದ್ದು ಕನ್ನಡ ಸಾರಸ್ವತ ಲೋಕಕ್ಕೆ ಒಳ್ಳೆಯ ಲೇಖಕರು ಸಿಕ್ಕಂತೆ ಆಯಿತು 

ಒಂದೆಡೆ ಲೇಖಕಿ ನೇಮಿ ಚಂದ್ರ ಅವರು ಬರೆಯುವವರಿಗೆ ಸಾವಿಲ್ಲ ಎಂಬರ್ಥದಲ್ಲಿ ಬರೆದಿರುವದ್ದು ಓದಿದ ನೆನಪಾಗುತ್ತಿದೆ

ಭಾರತಿ ಬಿ ವಿ ಯವರು ಕ್ಯಾನ್ಸರ್ ಅನ್ನು ಹಿಮ್ಮೆಟ್ಟಿಸಿದ ತಮ್ಮ ಅನುಭವವನ್ನು ಬರೆದು  ಸಾಸಿವೆ ತಂದವಳು ಎಂಬ ಪುಸ್ತಕವಾಗಿ ಪ್ರಕಟಿಸಿದ್ದು ಅದನ್ನು ಓದಿದ್ದೆ.ಅಂತೆಯೇ ಶ್ರುತಿಮವರು ಬರೆದ ಪುಸ್ತಕ ವನ್ನು ಓದಬೇಕು ಎಂದುಕೊಳ್ಳುತ್ತಿದ್ದೆ.ಹಾಗೆ ಅವರನ್ನು ಸಂಪರ್ಕಿಸಿ ಪುಸ್ತಕ ತರಿಸಿಕೊಂಡು ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ್ದೆ 

ಅವರ ಆತ್ಮವಿಶ್ವಾಸಕ್ಕೆ ಅಭಿನಂದನೆಗಳು, ಅವರ ಮುಂದಿನ ಬದುಕಿಗೆ ಶುಭಾಶಯಗಳು

ಡಾ.ಲಕ್ಷ್ಮೀ ಜಿ ಪ್ರಸಾದ 

ಕನ್ನಡ ಉಪನ್ಯಾಸಕರು 

ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು 

ಬೆಂಗಳೂರು ದಕ್ಷಿಣ ಜಿಲ್ಲೆ 

ಬೆಂಗಳೂರು 

(ನಾಲ್ಕು ವರ್ಷಗಳ ಮೊದಲು ಕ್ಯಾನ್ಸರ್  ಅನ್ನು ಹಿಮ್ಮೆಟ್ಟಿಸಿದ ಧೀರೆ ಶ್ರ ತಿ ಬಿಶಎಸ್ ಅವರ ಬರೆದ ಆತ ಮ ಕಥನ ಬದುಕ ದಿಕ್ಕ ಬದಲಿಸಿದ ಆಸ್ಟಿಯೋ ಸರ್ಕೋಮಾ ಪುಸ್ತಕ ವನ್ನು ಓದಿದಾಗ ಬರೆದ ಬರಹವಿದು )

Category:Books



ProfileImg

Written by Dr Lakshmi G Prasad

Verified