ಸಿಂಧನೂರು ನಗರದ ಬಸ್ ನಿಲ್ದಾಣ ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕರು, ಅನಾಥರು ಅನಾರೋಗ್ಯದಿಂದ ತೊಂದರೆ ಅನುಭವಿಸುತ್ತಿದ್ದರೆ ಹಾಗೂ ಮೃತಪಟ್ಟರೆ ಅಂತಹವರ ನೆರವಿಗೆ ಆಗಮಿಸುವ ಆಟೋ ಚಾಲಕ ಉಸ್ಮಾನ್ ಪಾಷ ಮಕಂದರ್ ಅವರ ಮಾನವೀಯ ಸೇವೆ ಬಗ್ಗೆ ನೋಡೋಣ..
ಮಾನವೀಯತೆ ಗುಣ:
ನಗರದ ಮಹಿಬೂಬ ಕಾಲೋನಿ ನಿವಾಸಿ ಆಗಿರುವ ಷಾ ಮಕಂದರ್ ವೃತ್ತಿಯಲ್ಲಿ ಆಟೋ ಚಾಲಕರಾಗಿ, ಅಪಾರ ಮಾನವೀಯ ಮೌಲ್ಯಗಳು ಮತ್ತು ಉತ್ತಮ ಗುಣವುಳ್ಳ ವ್ಯಕ್ತಿತ್ವ ಇರುವವರು. ಇಂತಹ ಮಾನವೀಯ ಸೇವೆಯ ಮೂಲಕ ಸಮಾಜಸೇವೆಯಲ್ಲಿ ಗುರುತಿಸಿಕೊಂಡ ಉಸ್ಮಾನ್ ಪಾಷ, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರೋಗ ರುಜಿನಿಗಳಿಂದ ಬಳಲುತ್ತಾ, ಬಿಕ್ಷೆಬೇಡುವವವರನ್ನು ಸರಕಾರಿ ಆಸ್ಪತ್ರೆಗೆ ತನ್ನ ಆಟೋ ಮೂಲಕ ಕರೆತಂದು, ಚಿಕಿತ್ಸೆ ಕೊಡಿಸಿ ನೆರವಾಗುತ್ತಿದ್ದಾರೆ.
ದಾನಿಗಳಿಂದ ನೆರವು:
ಅಸಹಾಯಕರು, ವಿಕಲಚೇತನರಿಗೆ ದಾನಿಗಳ ನೆರವಿನಿಂದ ವೀಲ್ಚೇರ್,ವಾಕ್ ಸ್ಟಿಕ್, ದೇಣಿಗೆಯಾಗಿ ನೀಡಿದ್ದು, ಎಲ್ಲಾದರೂ ಅಸಹಾಯಕರು ಕಂಡರೆ ಅವರನ್ನು ಮಮತೆಯಿಂದ ಮಾತನಾಡಿಸಿ, ಅವರಿಗೆ ಆಟೋದಲ್ಲಿ ಅವರಿರುವ ಸ್ಥಳಕ್ಕೆ ಉಚಿತವಾಗಿ ತಲುಪಿಸಿರುವ ಉದಾಹರಣೆಗಳು ಇವೆ.
ಅನಾಥ ಶವಗಳ ಸಂಸ್ಕಾರ: ಅನಾಥರು ಮೃತಪಟ್ಟಾಗ ವೈದ್ಯರು ಹಾಗೂ ಪೋಲಿಸರು ಉಸ್ಮಾನ್ ಪಾಷ ಮಕಂದರ ಅವರನ್ನು ಕರೆಯುತ್ತಾರೆ, ಇಲ್ಲಿಯವರೆಗೂ ಹಲವಾರು ಅನಾಥ ಶವಗಳಿಗೆ ಧಾರ್ಮಿಕ ವಿಧಿ ವಿಧಾನದ ಮೂಲಕ ಅಂತ್ಯಸಂಸ್ಕಾರ ಮಾಡುವ ಮೂಲಕ ಶವಗಳಿಗೆ ಮುಕ್ತಿ ಕೊಡಿಸಿದ್ದಾರೆ.ಆರ್ಥಿಕವಾಗಿ ಸಂಕಷ್ಟದಲ್ಧಿದ್ದರು,ಕುಟುಂಬದ ಜವಾಬ್ದಾರಿ ಜೊತೆ ಇಂತಹ ಪ್ರಾಮಾಣಿಕ ಸೇವೆಯಲ್ಲಿರುವ ಇವರಿಗೆ ಸಹಾಯ ಮಾಡಲು ಇಚ್ಛಿಸುವವರು ಈ ದೂರವಾಣಿ ನಂಬರ್ ಗೆ ಸಂಪರ್ಕಿಸಬಹುದು : 9686647569, 8310423622
ಇವರ ಸೇವೆಗೆ ಕೈ ಜೋಡಿಸಲು ದಾನಿಗಳು ಮುಂದೆ ಬಂದರೆ ಇನ್ನೂ ಹೆಚ್ಚಿನ ಸೇವೆ ಮಾಡಲು ಸಿದ್ದನಿದ್ದೇನೆ ಎನ್ನುತ್ತಾರೆ ಉಸ್ಮಾನ್ ಪಾಷ. ಕೆಲವು ವರ್ಷಗಳ ಹಿಂದೆ ಷಾ ಮಕಂದರ್ ಸೇವಾ ಸಮಿತಿ ಎಂಬ ಸಂಸ್ಥೆಯ ಮೂಲಕ ಸೇವೆಯಲ್ಲಿರುವ ಇವರನ್ನು ಗುರುತಿಸಿ ಸಂಘ ಸಂಸ್ಥೆಗಳು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸನ್ಮಾನ ಮಾಡಿ ಪ್ರಶಸ್ತಿ ನೀಡಿರುತ್ತಾರೆ. ಇಂದಿನ ತಾಂತ್ರಿಕ ಯುಗದಲ್ಲಿ ಇನ್ನೊಬ್ಬರಿಗಾಗಿ ಸಮಯ ಕೊಡಲಾಗದಷ್ಟು ಅವಸರದಲ್ಲಿರುವ ನಮ್ಮಗಳ ನಡುವೆ ತಮ್ಮ ಆಟೋ ಚಾಲಕ ವೃತ್ತಿ ಜೊತೆ ಇಂತಹ ಸೇವೆಯಲ್ಲಿರುವ ಉಸ್ಮಾನ ಪಾಷರಿಗೆ ಒಂದ ಸಲಾಂ ಹೇಳಲೆಬೇಕು.
Article Writer, Self Employee