ಅನಾಥ ವೃದ್ದರ ಆಶ್ರಯತಾಣ : ಕಾರುಣ್ಯಾಶ್ರಮಕ್ಕೆ ಬೇಕಿದೆ ನೆರವಿನ ಹಸ್ತ

ಅನಾಥ ವೃದ್ದರು ವಯಸ್ಕರ ಬುದ್ದಿಮಾಂದ್ಯರಿಗೆ ಆಸರೆಯಾದ ಡಾ.ಚನ್ನಬಸವಸ್ವಾಮಿ ಹಿರೇಮಠ

ProfileImg
09 May '24
1 min read


image

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ‌ ಸೇವಾ ಟ್ರಸ್ಟ್ (ರಿ) ಹರೇಟನೂರು ಇದರ ಅಡಿಯಲ್ಲಿ ಹಿರಿಯ ನಾಗರೀಕರು ಹಾಗೂ ವಯಸ್ಕರ ಬುದ್ದಿಮಾಂದ್ಯರಿಗೆ ನೆಲೆಯಾಗಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮವು ಸುಮಾರು 5ವರ್ಷಗಳಿಂದ ನೆಲೆ ಇಲ್ಲದ ಅನಾಥ ಜೀವಿಗಳಿಗೆ ಆಸರೆಯಾಗಿ ಉಚಿತ ಊಟ ವಸತಿ ಜೊತೆ ಮೂಲಸೌಕರ್ಯ ಮತ್ತು ಆರೋಗ್ಯ ಸೌಲಭ್ಯ ನೀಡುತ್ತಾ ರಾಜ್ಯದಾದ್ಯಂತ ಮನೆಮಾತಾಗಿದೆ.ಇಲ್ಲಿಯವರೆಗೂ ಯಾವುದೇ ಅನುದಾನ ಪಡೆಯದೇ ಕೇವಲ ದಾನಿಗಳ ನೆರವಿನಿಂದ ನಡೆಯುತ್ತಿರುವ ಈ ಕಾರುಣ್ಯ ನೆಲೆ ವೃದ್ದಾಶ್ರಮವು 55ಕ್ಕೂ ಹೆಚ್ಚು ಅನಾಥ ವೃದ್ದರು ಹಾಗೂ ವಯಸ್ಕರ ಬುದ್ದಿಮಾಂದ್ಯರಿಗೆ ಆಸರೆಯಾಗಿದೆ. 

ದೇಹದಾನ, ನೇತ್ರದಾನ: ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮ ಹಲವರಲ್ಲಿ ದೇಹದಾನ ನೇತ್ರದಾನದ  ಬಗ್ಗೆ ಜಾಗೃತಿ ಮೂಡಿಸುವ ಜೊತೆ 250ಕ್ಕೂ ಹೆಚ್ಚು ನೊಂದಣಿ ಮಾಡಿಸಿ, ಈಗಾಗಲೇ ಆಶ್ರಮದಲ್ಲಿ ಮೃತಪಟ್ಟವರನ್ನು ಅವರ ಇಚ್ಛೆಯಂತೆ ದೇಹದಾನ ನೇತ್ರದಾನ ಮಾಡಿಸುವ ಪರಿಪಾಠವನ್ನು ಪಾಲಿಸಿಕೊಂಡು ಬರುತ್ತಿರುವುದು ಮಾದರಿಯಾದ ಕಾರ್ಯವಾಗಿದೆ.

ಪ್ರಶಸ್ತಿ: 2023ನೇ ಸಾಲಿನಲ್ಲಿ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಕರ್ನಾಟಕ ರಾಜ್ಯದ ಏಕೈಕ ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಲವಾರು ಸಂಘ ಸಂಸ್ಥೆಗಳು ಇವರ ಸೇವೆ ಮೆಚ್ಚಿ ಗೌರವ ಸನ್ಮಾನ ಮತ್ತು ಪ್ರಶಸ್ತಿಗಳನ್ನು ನೀಡಿರುತ್ತವೆ. 

ಬೇಕಿದೆ ಸಹಾಯಹಸ್ತ: ಸಿಂಧನೂರಿನ ಕಾರುಣ್ಯ ವೃದ್ಧಾಶ್ರಮಕ್ಕೆ ತನು-ಮನ-ಧನದಿಂದ ಸಹಕಾರ ನೀಡುವ ಕೈಗಳು (ಸ್ವಯಂಸೇವಕರು) ಹಾಗೂ ಆಶ್ರಮದ ದಿನನಿತ್ಯದ ಖರ್ಚುಗಳನ್ನು ಸರಿದೂಗಿಸಲು ಅನುದಾನದ ಅಗತ್ಯವಿದೆ, ದಾನಿಗಳು ವಸ್ತುಗಳ ರೂಪದಲ್ಲಿ, ಆಹಾರಧಾನ್ಯಗಳ ರೂಪದಲ್ಲಿ, ಧನ ಸಹಾಯ ಮಾಡಬಹುದು. ನಮ್ಮ ಆಶ್ರಮಕ್ಕೆ ದೇಣಿಗೆಯಾಗಿ ನೀಡಿದರೆ, ತೆರಿಗೆ ವಿನಾಯಿತಿ ಅಡಿಯಲ್ಲಿ 80G &12A ಸೌಲಭ್ಯವಿದೆ ಎಂದು ಆಶ್ರಮದ ಆಡಳಿತಾಧಿಕಾರಿ ಡಾ ಚನ್ನಬಸವಸ್ವಾಮಿ ಹಿರೇಮಠ ಈ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು.

Category:Education



ProfileImg

Written by Avinash deshpande

Article Writer, Self Employee