ಕರ್ನಾಟಕದಲ್ಲಿ ಬೆಂಗಳೂರು ಜಿಲ್ಲೆ ಮಾತ್ರ ಅಭಿವೃದ್ಧಿ ಯಾಗಬೇಕ.

ProfileImg
21 Jun '24
1 min read


image

ಕರ್ನಟಕದಲ್ಲಿ ಬೆಂಗಳೂರು ಜಿಲ್ಲೆ ಮಾತ್ರ ಅಭಿವೃದ್ಧಿಯಾಗಬೇಕ

               ಕರ್ನಾಟಕ ಎಂದರೆ ಭಾರತದಲ್ಲಿ ಒಂದು ಒಳ್ಳೆ ಹೆಸರು ಇದೆ, ಆದರೆ ಇದು ಬೆಂಗಳೂರು ಜಿಲ್ಲೆ ಮಾತ್ರ ಅಭಿವೃದ್ಧಿ ಹೆಸರು ಬಂದರೆ ಸಾಲದು, ಉಳಿದ 27 ಜಿಲ್ಲೆಗಳು ಅಭಿವೃದ್ಧಿ ಹೆಸರು ವಾಸಿಯಾಗ ಬೇಕು.

ಬೆಂಗಳೂರಲ್ಲಿ ಜೀವನ ಸಾಗಿಸುವುದಕ್ಕೆ ಅಂತ ನೆರೆ ರಾಜ್ಯಗಳಿಂದ ಬಂದು ತಮ್ಮ ಜೀವನ ಸಾಗಿಸುತ್ತಿದ್ದಾರೆ, ಆದರೆ ಇಲ್ಲಿ ಎಷ್ಟು ಮನೆಗಳಿಗೆ, ಅಪಾರ್ಟ್ಮೆಮೆಂಟಗಳಿಗೆ, ಐಟಿ ಬಿಟಿ ಕಂಪನಿಗಳಿಗೆ ನೀರು ಹಾಗೂ ಇನ್ನು ಅನೇಕ ಸೌಕರ್ಯಗಳನ್ನ ಒದಗಿಸುವಲ್ಲಿ ನಮ್ಮ ನಿರ್ವಹಣ ಮಂಡಳಿಗಳಿಗೆ ಸಾಧ್ಯವಾಗುವುದಿಲ್ಲ, ಒಂದೇ ಒಂದು ಸ್ಟೇಡಿಯಂ ನಮ್ಮಲ್ಲಿರುವುದು, ಅದರ ಬದಲು ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದು ಸ್ಟೇಡಿಯಂ, ಹೊಸ ಹೊಸ ಕಾರ್ಕನೆಗಳು, ಸಿನಿಮಾ ಶೂಟಿಂಗ್ ಮಾಡಲು ಒಂದು ಸ್ಟುಡಿಯೋ ಹೀಗೆ ಹಲವಾರು ಅಭಿವೃದ್ಧಿಯಾಗುವಂತ ಕೆಲಸಗಳನ್ನು ಬೇರೆ ಜಿಲ್ಲೆಗಳಲ್ಲಿ ನಿರ್ಮಿಸಿದರೆ ಆ ಜಿಲ್ಲೆಯ ತಾಲ್ಲೂಕು, ಹಳ್ಳಿಗಳಲ್ಲಿ ವಾಸಿಸುವ ಜನಗಳಿಗೆ ಕೆಲಸವೂ ಸಿಗುತ್ತದೆ ಬೆಂಗಳೂರಿಗೆ ವಲಸೆ ಬರುವವರು ಕಮ್ಮಿಯಾಗುತ್ತಾರೆ.

             ಸಾದಾರಣವಾಗಿ ಒಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ತನ್ನ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರು ಅಂತ ದೊಡ್ಡ ಸಿಟಿಗೆ ಕೆಲಸಗಳನ್ನ ಅರಿಸಿ ಬರುವುದು ಸರ್ವೇ ಸಾದಾರಣ, ಅದರ ಬದಲು ತಾನು ಓದಿದ ತಾಲೂಕ್, ಜಿಲ್ಲೆಗಳಲ್ಲಿ ಒಂದು ಐಟಿ ಬಿಟಿ ಕಂಪನಿಗಳು ಇದ್ದರೆ ಎಷ್ಟು ಅನುಕೂಲವಾಗುತ್ತೆ ಅದರಲ್ಲೂ ಹೆಣ್ಣು ಮಕ್ಕಳಿಗೆ ತುಂಬಾ ಅನುಕೂಲವಾಗುತ್ತೆ. ಬೆಂಗಳೂರು ಅಂತ ದೊಡ್ಡ ರಾಜಧಾನಿಗೆ ಬಂದು ಕೆಲಸ ಮಾಡಿಕೊಂಡು ಬೇಡವಾದ ಚಟಗಳನ್ನ ಅಭ್ಯಾಸ ಮಾಡಿಕೊಂಡು ತಮ್ಮ ಜೀವಕ್ಕೆ ಅಪಾಯ ತಂದು ಕೊಳ್ಳುತ್ತಾರೆ, ಅದೇ ಅವರದೇ ಅದ ತಾಲ್ಲೂಕು, ಜಿಲ್ಲೆಗಳಲ್ಲಿ ಆದರೆ ಯಾರು ನೋಡುತ್ತಾರೋ ಏನೋ ಅಂತ ಮಾನ, ಮರ್ಯಾದೆಗೆ ಹೆದರಿಕೊಂಡು ಇರುತ್ತಾರೆ.

            ಆದ್ದರಿಂದ ನಮ್ಮ ಬೆಂಗಳೂರು ಅಭಿವೃದ್ಧಿಯ ಜೊತೆಗೆ ಇತರ ಜಿಲ್ಲೆಗಳನ್ನು ಅಭಿವೃದ್ಧಿ ಪಡಿಸಿ ವಿದ್ಯಾರ್ಥಿಗಳು, ವಾದ್ಯರ್ಥಿನಿಯರು, ಕೆಟ್ಟ ಚಟಗಳಿಂದ ದೂರವಿರಲು ತಮ್ಮ ತಮ್ಮ ತಾಲ್ಲೂಕ್, ಜಿಲ್ಲೆಗಳ ಅಭಿವೃದ್ಧಿ ಕಡೆ ಗಮನ ಹರಿಸಿ.

 

         

Category:Social Commentary



ProfileImg

Written by Vasudeva rao HN

0 Followers

0 Following