ತೆವಳಿ-ಎದ್ದು-ಬಿದ್ದು -ನಡಿಗೆ ಕಲಿತು,
ದಣಿವರಿಯದ ಪಯಣ ನಿರಂತರವಾಗಿತ್ತು,
ಏನಾದರೂ ಸಾಧಿಸುವ ಛಲವಿತ್ತು,
ಗೆಲ್ಲಲೇಬೇಕೆಂಬ ತುಡಿತವಿತ್ತು,
ಏಳು-ಬೀಳಿನ ಜೊತೆಗೆ ನಿತ್ಯ ಪಯಣ,
ಗುರಿಯ ತಲುಪುವ ಮುಂಚೆ ಎಲ್ಲವೂ ಕಪ್ಪು ಕಾಣ,
ಗೆಲುವೆಂಬ ಗುರಿಯ ತಲುಪಿದರೆ ಬಾಳು ರಂಗು-ರಂಗಿನ ಬಣ್ಣ,
ಸೋಲುಗಳು ಪ್ರತಿಕ್ಷಣ-ಪ್ರತಿದಿನ,
ಸೋಲನುಂಡು ಹೆಚ್ಚಾಗುವುದು ಗೆಲುವಿನ ಹುಚ್ಚುತನ,
ತುಂಬಾ-ಬೇಸರ ನೋವುಗಳಿಂದ ನೊಂದ ಮನ,
ಸೋಲುಗಳೇ ಮೆಟ್ಟಿಲುಗಳು ಎನ್ನುವ ಶ್ರೇಷ್ಠರ ವಚನ,
ಸೋಲಿಗೂ ಸೋಲಿಸಿ ಗೆಲ್ಲಬೇಕು ಒಳ್ಳೆತನ,
ಗೆದ್ದೇ ಗೆಲ್ಲುವೆ ಒಂದು ದಿನ...
ಶಾಂತಾರಾಮ ಹೊಸ್ಕೆರೆ, ಶಿರಸಿ
ಉತ್ತರ ಕನ್ನಡ..7676106237
ಬರಹಗಾರ...
0 Followers
0 Following