ಓಯ್ ನಲ್ಲೆ,
ನಿಲ್ಲು ಅಲ್ಲೆ.…
ನಿನ್ನ ಹಿಂದೆ ನಾನು ಬರಲೇ ..
ಅಯ್ಯೋ ತರ್ಲೆ .…
ಹಿಂದೆ ಯಾಕೇ -ಮುಂದೆ ಓ ಕೆ..
ಮುಂದೆ ಬರಲು ಭಯವು ಯಾಕೇ,
ಬರಲು ಅಷ್ಟು ತಡವು ಏಕೆ…
ಬೇಗ ಬಂದು ಸೇರು ಒಲವೇ,
ಬರುವೆ-ಬರುವೆ ಅಷ್ಟು ಏಕೆ ಆತುರವೇ,
ತಾಳು ಮನವೇ ಸಿಹಿಯ ತರುವೆ,
ಅಯ್ಯೋ ಮಂಕೇ…
ಸವಿಯ ಮುತ್ತ ನಾನೆ ಕೊಡುವೆ,
ಬೇಗ ಬಂದ್ರೆ ಸಿಹಿಯ ಉಣಿಸುವೆ,
ನಿನ್ನ ಮುಂದೇ ಬಂದಿರುವೆ,
ಮಾತನಾಡು ನನ್ನ ಒಲವೇ…
ಓಯ್ ನಲ್ಲ,
ನಿನ್ನ ಹಿಂದೆ ನಾನು ಬರಲಾ,
ಹಿಂದೆ ಯಾಕೆ,
ಜೊತೆಯಾದ್ರೆ ಓ ಕೆ…
ನನ್ನ ಖುಷಿಗೆ ಪಾರವಿಲ್ಲ,
ಈಗ ನನಗೆ ನೀನೆ ಎಲ್ಲ,
ಸಾಗುತಿರುವ ಜೊತೆಯಾಗಿ,
ಪ್ರೀತಿ ತುಂಬಿ ಖುಷಿಯಾಗಿ…
ಶಾಂತಾರಾಮ ಹೊಸ್ಕೆರೆ,
ಶಿರಸಿ,ಉತ್ತರ ಕನ್ನಡ…
ಬರಹಗಾರ...