ಸಾಗರ ನೀನು...

ಸಾಗರ ಮತ್ತು ದೋಣಿಯ ಸಂಬಂಧ...

ProfileImg
21 May '24
1 min read


image

ಸಣ್ಣ ಅಲೆಯಾಗಿ ನನ್ನ ನೀ ಸೆಳೆದೆ. ನಾ ನಿನ್ನೊಳಗೆ ಸೇರಿ ಪಯಣಿಗನಾದೆ..

ಸಾಗರದಲ್ಲಿ ಉಪ್ಪು ಹೇಗೋ ಹಾಗೆ ನಿನ್ನ ಮನದಲ್ಲಿನ ಪ್ರೀತಿಯೂ ಕೂಡ ಎಂದೂ ಖಾಲಿಯಾಗದು…

ಸಾಗರದ ಅಂಚಿನಲ್ಲಿ ಅಲೆಗಳು ಎಷ್ಟೋ.. ಆದರೆ, ಮದ್ಯ ಸಾಗರ ಪ್ರಶಾಂತ.. ಆ ಪ್ರಶಾಂತತೆಯ ಸುಖ ಸದಾ ನಮ್ಮದಾಗಲಿ ಗೆಳತಿ…

ಆ ಸಾಗರದಲ್ಲಿ ಸದಾ ಪಯಣಿಗನಾಗುವೆ ನಾನು…ಎಷ್ಟೇ ಅಲೆಗಳು ಬರಲಿ, ಎಂತಹ ಸುನಾಮಿಯೇ ಬಂದರೂ.. ಸಾಗರ ಮತ್ತು ದೋಣಿಯ ಸಂಬಂಧ ದೂರಾಗದು. ಹಾಗೆಯೇ ನಮ್ಮ ಸಂಬಂಧ ಯಾವಾಗಲೂ ಇರಲೆಂದು ಆಶಿಸುವ ದೋಣಿಯ ಪಯಣಿಗ ನಾನಾದರೆ, ವಿಶಾಲ ಸಾಗರ ನೀನು…

                              ಇಂತಿ
                           ಪಯಣಿಗ

Category:Poem



ProfileImg

Written by VEDAMURTHY N H

ಹವ್ಯಾಸಿ ಬರಹಗಾರನಾಗಿ ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಸಲ್ಲಿಸುವ ಆಶಯದೊಂದಿಗೆ.....

0 Followers

0 Following