ಪ್ರತೀ ವ್ಯೆದ್ಯರು ಪ್ರತಿನಿತ್ಯವೂ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಬಹುದು, ಆದರೆ ಚಿಕಿತ್ಸೆ ಪಡೆದು ಜೀವ ಉಳಿಸಿಕೊಂಡ ಜೀವದ ಪಾಲಿನ ದೇವರು ಮಾತ್ರ ಆ ಒಬ್ಬ ವ್ಯೆದ್ಯ"!
ಇಂದು ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನ!
ಮನುಷ್ಯರಿಗೆ ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಸತ್ಯ.ಇದಕ್ಕೆ ಸಾಕ್ಷಿ ಎಂಬಂತೆ ಬಹು ಹಿಂದಿನಿಂದಲೂ"ವೈದ್ಯೋ ನಾರಾಯಾಣ ಹರಿ "ಎಂದು ವೈದ್ಯರನ್ನು ದೇವರಿಗೆ ಹೊಲಿಸಲಾಗುತ್ತದೆ.ಇದು ನೂರಕ್ಕೆ ನೂರು ಸತ್ಯವೂ ಕೂಡ ಹೌದು.ಕಾರಣ ರೋಗಿಗಳ ಪಾಲಿಗೆ ನಿಜವಾಗಿಯೂ ಕಣ್ಣಿಗೆ ಕಾಣುವ ದೇವರಾಗಿ ರೋಗಿಗಳ ಪ್ರಾಣವನ್ನು ರಕ್ಷಿಸುತ್ತಾ ಪುನರ್ಜನ್ಮ ಕೊಡುತ್ತಾರೆ ಹಾಗಾಗಿ ವ್ಯೆದ್ಯ ವೃತ್ತಿ ಒಂದು ಶ್ರೇಷ್ಠ ವೃತ್ತಿಯು ಹೌದು!
ಪ್ರತಿ ವ್ಯಕ್ತಿಯ ಬದುಕಿನಲ್ಲೂ ಒಂದಲ್ಲಾ ಒಂದು ಹಂತದಲ್ಲಿ ವ್ಯೆದ್ಯರು ದೇವರ ಸ್ವರೂಪಿಯಾಗಿ ಕಾಣಿಸುತ್ತಾರೆ.ನಾವಾಗಲಿ ನಮ್ಮವರಾಗಲಿ ಅನಾರೋಗ್ಯಕ್ಕೆ ತುತ್ತಾಗಿ ನರಳುವಾಗ ಸಾವು ಬದುಕಿನ ನಡುವೆ ಹೋರಾಡುವಾಗ ಮರಳಿ ನಮಗೆ ಆರೋಗ್ಯವನ್ನು ಕೊಟ್ಟು ಬದುಕಿನಲ್ಲಿ ಭರವಸೆ ತುಂಬಿ ಮತ್ತೆ ನಮ್ಮಸಂತೋಷಕ್ಕೆ ಕಾರಣರಾಗಿ ಪುನರ್ಜನ್ಮ ಕೊಡುವ ಪ್ರತಿ ವೈದ್ಯರು ನಿಜವಾಗಿಯೂ ದೇವರಿಗೆ ಸಮನಾಗಿರುತ್ತಾರೆ ತಮ್ಮ ಜ್ಞಾನ ಮತ್ತು ಕೌಶಲ್ಯದಿಂದ ಸಮಾಜದಲ್ಲಿ ಗೌರವಿಸ ಲ್ಪಡುವ ವ್ಯೆದ್ಯ ವೃತ್ತಿ ಎಷ್ಟು ಶ್ರೇಷ್ಟವೂ ಅಷ್ಟೇ ಕಷ್ಟಕರವೂ ಹೌದು ಎನ್ನಬಹುದು.
ಎಷ್ಟೋ ವ್ಯೆದ್ಯರು ತಮ್ಮಕುಟುಂಬ ಮತ್ತು ವಯಕ್ತಿಕ ಬದುಕಿಗಿಂತಲೂ ಹೆಚ್ಚಾಗಿ ರೋಗಿಗಳಿಗೆ ಮತ್ತು ತಮ್ಮ ವೃತ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಒಂದೊಂದು ಸಲ ತುರ್ತುಸೇವೆ ಬಂದಾಗ ಮನೆ ಮಕ್ಕಳು ಕುಟುಂಬ, ಹಸಿವು, ಹಗಲು ರಾತ್ರಿ ಎನ್ನದೆ ಬಂದು ದಣಿವರಿಯದ ಚೇತನರಾಗಿ ರೋಗಿಗಳ ಸೇವೆ ಮಾಡಬೇಕು ಹತ್ತುಹಲವು ರೋಗಗಳಿಂದ ನರಳುವ ಪ್ರತೀ ರೋಗಿಯನ್ನು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ ರೋಗಿಗಳಿಗೆ ಪುನರ್ಜನ್ಮ ನೀಡುವ ಪ್ರತ್ಯಕ್ಷ ದೇವರಾಗಿ ಪ್ರತಿ ವೈದ್ಯರ ಕೊಡುಗೆ ನಿಜವಾಗಿಯೂ ಅತ್ಯಮೂಲ್ಯವಾದದ್ದು ಹಾಗಾಗಿ ಅವರ ಅಮೋಘ ಕಾಯಕಕ್ಕೆ ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ.
ಕರ್ತವ್ಯವಾಗಿದೆ ಸಮಾಜದಲ್ಲಿ ವೈದ್ಯರ ವೃತ್ತಿ,ಜವಾಬ್ದಾರಿ ಹಾಗೂ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ವೈದ್ಯ ವೃತ್ತಿಯಲ್ಲಿ ಇರುವವರಿಗೆ ಗೌರವ ಸಲ್ಲಿಸಲು ಈ ದಿನವನ್ನು ಆಚರಿಸಲಾಗುವುದು. ಭಾರತವು ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ವೈದ್ಯರ ದಿನವನ್ನು ಬೇರೆ ಬೇರೆ ದಿನಾಂಕ, ಹಾಗೂ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ ಅಮೆರಿಕಾದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು 1933 ಮಾರ್ಚ್ ತಿಂಗಳಲ್ಲಿ ಆಚರಣೆ ಮಾಡಲಾಯಿತು. ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಹಾಗೂ ಪ್ರತಿನಿತ್ಯವೂ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರುಗಳನ್ನು ಆಹ್ವಾನಿಸುವ ಮೂಲಕ ಹಾಗೂ ನಿಧನಹೊಂದಿದ ವೈದ್ಯರುಗಳ ಸಮಾಧಿಗೆ ಪುಪ್ಪಾರ್ಪಣೆ ಮಾಡುವ ಮೂಲಕ ಮೊದಲ ಬಾರಿಗೆ ವೈದ್ಯರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಆದರೆ ಭಾರತದಲ್ಲಿ ವೈದ್ಯರ ದಿನವನ್ನು 1991ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಪಶ್ಚಿಮ ಬಂಗಾಳದ 2ನೇಮುಖ್ಯ ಮಂತ್ರಿ ಹಾಗೂ ಶ್ರೇಷ್ಠ ವೈದ್ಯರಾಗಿದ್ದ , "ಭಾರತರತ್ನ" ಪುರಸ್ಕೃತರೂ ಅದ ಡಾ.ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಗುರುತಿಸಿ ಅವರ ಜ್ಞಾಪಕಾರ್ಥವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಬೇಕೆಂದು ತೀರ್ಮಾನಿಸಲಾಯಿತು ಡಾ.ಬಿಧನ್ ಚಂದ್ರ ರಾಯ್ ವೈದ್ಯಕೀಯ ರಂಗ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು ಜೊತೆಗೆ ಭಾರತ ಸರ್ಕಾರ ನೀಡುವ ಅತ್ಯುನ್ನತ ಭಾರತ ರತ್ನ ಪ್ರಶಸ್ತಿಗೂ ಭಾಜನ ರಾಗಿದ್ದರು .
ಅಲ್ಲದೆ ಮೆಡಿಕಲ್ ಕೌನ್ಸಿಲ್ ಆಫ್‌ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರವನ್ನೂ ವಹಿಸಿದ್ದರು ಈ ಎಲ್ಲಾ ಸಾಧನೆ ಸೇವೆಯನ್ನು ಪರಿಗಣಿಸಿ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮ ಹಾಗೂ ಮರಣ ದಿನ ಎರಡೂ ಜುಲೈ 1 ಆದ್ದರಿಂದ ಈ ದಿನವನ್ನು, ಅವರ ಗೌರವಾರ್ಥವಾಗಿ ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ನಮ್ಮ ಜೀವನಕ್ಕೆ ವೈದ್ಯರು ನಿತ್ಯವೂ ನೀಡುತ್ತಿರುವ ಅವರ ಸೇವೆ ಹಾಗೂ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿ ಈ ವಿಶೇಷ ದಿನವನ್ನು ಜನರ ಸೇವೆಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟಿರುವ ವೈದ್ಯರು ಹಾಗೂ ಆರೋಗ್ಯಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ. ದಣಿವರಿಯದ ಅವರ ಸೇವೆ ಮತ್ತು , ಸಮರ್ಪಣೆಗಾಗಿ ಎಲ್ಲಾ ವ್ಯೆದ್ಯರಿಗೂ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸೋಣ.!
Author ✍️
0 Followers
0 Following